Headlines

ಶಿಕಾರಿಪುರ : ಮೂರು ವರ್ಷದ ಮಗುವಿನ ಮೇಲೆ ಅಮಾನವೀಯ ಅತ್ಯಾಚಾರ :ಆರೋಪಿ ಪದವಿ ವಿದ್ಯಾರ್ಥಿ ಪೊಲೀಸ್ ವಶಕ್ಕೆ

ಶಿಕಾರಿಪುರ : ನಗರದ ಬಡಾವಣೆಯೊಂದರಲ್ಲಿ ಕಾಮುಕನ ಅಟ್ಟಹಾಸಕ್ಕೆ ಏನು ಅರಿಯದ ಪುಟ್ಟ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಪೈಶಾಚಿಕ ಕೃತ್ಯ ಎಸಗಿದ ಘಟನೆ ನಗರದಲ್ಲಿ ನಡೆದಿದೆ. ಮೂರು ವರ್ಷದ ಮಗುವಿನ ಮೇಲೆ ಪಕ್ಕದ ಮನೆಯಲ್ಲಿ ಪದವಿ ಓದುತ್ತಿರುವ ಯುವಕನೇ ಅತ್ಯಚಾರ ಮಾಡಿರುವ ಘಟನೆ ಇಂದು ಶಿಕಾರಿಪುರದಲ್ಲಿ ನಡೆದಿದೆ.ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಶಿಕಾರಿಪುರ ತಾಲ್ಲೂಕಿನ ವಾಸಿ ಮೂರು ವರ್ಷದ ಅಪ್ರಾಪ್ತ ಬಾಲಕಿಯು ತನ್ನ ಮನೆಯ ಅಂಗಳದಲ್ಲಿ ಆಟವಾಡುತ್ತಾ ಪಕ್ಕದ ಮನೆಗೆ ಹೋಗಿದ್ದಾಗ, ಆ ಮನೆಯ ಪದವಿ ಓದುತ್ತಿರುವ…

Read More

ಡಿ ಕೆ ಶಿವಕುಮಾರ್ ಆಪ್ತ ಸಹಾಯಕ ಎಂದು 15 ಲಕ್ಷ ವಂಚಿಸಿದ ಭೂಪ !!

ಶಿವಮೊಗ್ಗ : ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಆಪ್ತ ಕಾರ್ಯದರ್ಶಿ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಕೆಎಸ್ಆರ್‌ಟಿಸಿ ಚಾಲಕರೊಬ್ಬರಿಗೆ 15 ಲಕ್ಷ ರೂ. ವಂಚಿಸಿದ್ದಾನೆ. ಈ ಸಂಬಂಧ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಎಸ್ಆರ್‌ಟಿಸಿ ನಿವೃತ್ತ ಚಾಲಕ ಕೆಂಚಪ್ಪ ಮೋಸ ಹೋದವರು. ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಕೆಂಚಪ್ಪ ಅವರಿಂದ 15 ಲಕ್ಷ ರೂ. ಪಡೆದಿದ್ದ ಆರೋಪಿಗಳು, ಕೆಲಸವನ್ನೂ ಕೊಡಿಸದೆ, ಹಣವನ್ನೂ ಹಿಂತಿರುಗಿಸದೆ ಸತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ. 2106ರಲ್ಲಿ ಕೆಎಸ್ಆರ್‌ಟಿಸಿ ಬಸ್ಸಿನಲ್ಲಿ…

Read More

ಶಿವಮೊಗ್ಗ ಜಿಲ್ಲೆಯಲ್ಲಿ ಲಾಕ್​ಡೌನ್​ ಬಳಿಕ ಹೆಚ್ಚಿದ ಪೋಕ್ಸೋ ಪ್ರಕರಣಗಳು :

ಶಿವಮೊಗ್ಗ: ಜಿಲ್ಲೆಯಲ್ಲಿ ಪೋಕ್ಸೋ ಕಾಯಿದೆ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಗಳು‌ ಹೆಚ್ಚಳವಾಗುತ್ತಿದೆ ಎಂದು ಶಿವಮೊಗ್ಗ ಎಸ್​ಪಿ ಬಿ.ಎಂ.ಲಕ್ಷ್ಮೀಪ್ರಸಾದ್ ಹೇಳಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಕೊರೊನಾ ಬಳಿಕ ಪೋಕ್ಸೋ ಕಾಯಿದೆ  ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುತ್ತಿದೆ. ಕಳೆದ 4 ವರ್ಷದಿಂದ ಪ್ರತಿವರ್ಷ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. 2017ರಲ್ಲಿ 87 ಪ್ರಕರಣಗಳು, 2018ರಲ್ಲಿ 99 ಪ್ರಕರಣಗಳು, 2019ರಲ್ಲಿ 117 ಪ್ರಕರಣಗಳು ಪೋಕ್ಸೋ ಕಾಯಿದೆ ಅಡಿ ಪ್ರಕರಣ ದಾಖಲಾಗಿತ್ತು. ಆದರೆ ಕಳೆದ ವರ್ಷ 2020ರಲ್ಲಿ ಜಿಲ್ಲೆಯಲ್ಲಿ…

Read More

ಸಾಗರ : ಅಬಕಾರಿ ಅಧಿಕಾರಿಗಳ ಭರ್ಜರಿ ಕಾರ್ಯಚರಣೆ , 150 ಲೀ ಬೆಲ್ಲದ ಕೊಳೆ ವಶ

ಸಾಗರ : ಅಕ್ರಮವಾಗಿ ಕಳ್ಳ ಭಟ್ಟಿ ಸಾರಾಯಿ ತಯಾರಿಕೆಗೆ ಬಳಸುವ ಬೆಲ್ಲ ಕೊಳೆಯನ್ನು ಸಂಗ್ರಹಿಸಿಟ್ಟಿದ್ದ ಮನೆಯ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ಮಾಡಿರುವ ಘಟನೆ ಸಾಗರ ತಾಲೂಕಿನ ಸುಳ್ಳೂರು ಗ್ರಾಮದಲ್ಲಿ ನಡೆದಿದೆ. ಈ ವೇಳೆ ಹೊಲದಲ್ಲಿ ಸಂಗ್ರಹಿಸಿದ್ದ 150 ಲೀಟರ್ ಬೆಲ್ಲದ ಕೊಳೆಯನ್ನು ವಶಕ್ಕೆ ಪಡೆಯಲಾಗಿದ್ದು, ಓರ್ವನನ್ನು ಬಂಧಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸುಳ್ಳೂರು ಗ್ರಾಮದ ಕಾಳಿ ಕಟ್ಟೆ ಎಂಬಲ್ಲಿ ಕಳ್ಳಭಟ್ಟಿ ಸಾರಾಯಿ ತಯಾರಿಕೆಗೆ ಸಂಗ್ರಹಿಸಿದ್ದ ಬೆಲ್ಲದ ಕೊಳೆಯನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ಲಕ್ಷಣ ಬಿನ್ ಬಸಪ್ಪ…

Read More

ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿ ತಿವಿದು ಯುವಕ ಸಾವು

ಶಿಕಾರಿಪುರ : ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಯುವಕನೋರ್ವನಿಗೆ ಹೋರಿ ತಿವಿದು ಮೃತಪಟ್ಟಿರುವ  ಶಿಕಾರಿಪುರ ಪಟ್ಟಣದಲ್ಲಿ ನಡೆದಿದೆ. ಮೃತಪಟ್ಟ ಯುವಕನನ್ನು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಹೆಚ್.ಕಡದಕಟ್ಟೆ ನಿವಾಸಿ ರಾಕೇಶ್ (25) ಎಂದು ಗುರುತಿಸಲಾಗಿದೆ. ಜಿಲ್ಲೆಯ ಹಲವೆಡೆಗಳಲ್ಲಿ ದೀಪಾವಳಿ ಹಬ್ಬದ ನಂತರ ಹೋರಿ ಬೆದರಿಸುವ ಸ್ಪರ್ಧೆ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಆದರೆ ಕೋವಿಡ್-19 ಭೀತಿ ಹಾಗೂ ಕಳೆದ ಎರಡು ವರ್ಷದ ಹಿಂದೆ ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಜಿಲ್ಲೆಯಲ್ಲಿ ಮೂರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಈಗಾಗಿಯೇ ಜಿಲ್ಲಾಡಳಿತ…

Read More

ಶಿವಮೊಗ್ಗ : ಹಬ್ಬದ ದಿನ ದರೋಡೆ ಮಾಡಿದ್ದ ಆರೋಪಿಗಳನ್ನು ಬಂಧಿಸಿ ಹೆಡೆಮುರಿ ಕಟ್ಟಿದ ಪೊಲೀಸರು :

  ಶಿವಮೊಗ್ಗ : ಹಬ್ಬದ ದಿನದಂದು ಮದ್ಯರಾತ್ರಿಯಿಂದ ಬೆಳಗ್ಗೆ ವರೆಗೆ ಶಿವಮೊಗ್ಗ ಮತ್ತು ಭದ್ರಾವತಿ ನಗರದಲ್ಲಿ ಜನರನ್ನ ಸುಲಿಗೆ ಮಾಡುತ್ತಿದ್ದ ಮೂವರು ಆರೋಪಿಗಳನ್ನ ಕೋಟೆ ಪೊಲೀಸರು ಬಂಧಿಸಿ ಹೆಡೆಮುರಿ ಕಟ್ಟಿದ್ದಾರೆ. 02-11-2021 ರಂದು 03 ಜನ ಆರೋಪಿಗಳು ದಾವಣಗೆರೆ ಜಿಲ್ಲೆಯ ಸವಳಂಗದಲ್ಲಿ  ಬಜಾಜ್ ಪಲ್ಸರ್ ಬೈಕ್ ಅನ್ನು ಕಳ್ಳತನ  ಮಾಡಿ, ಸದರಿ ಬೈಕ್ ಅನ್ನು ಉಪಯೋಗಿಸಿ 04-11-2021  ರಂದು ಬೆಳಗಿನ ಜಾವ ಶಿವಮೊಗ್ಗ ನಗರದ 04 ಕಡೆಗಳಲ್ಲಿ ಹಾಗೂ ಭದ್ರಾವತಿ ನಗರದ 03 ಕಡೆಗಳಲ್ಲಿ ವಿಳಾಸ ಕೇಳುವ…

Read More

ಸ್ಕೂಟಿ ಹಾಗೂ ಬಸ್ ನಡುವೆ ಭೀಕರ ಅಪಘಾತ : ಇಬ್ಬರ ಸಾವು

  ಶಿವಮೊಗ್ಗ : ಮಾಚೇನಹಳ್ಳಿಯ ಶಿಮುಲ್ ಡೈರಿ ಎದುರುಗಡೆ ಕೆಎಸ್ ಆರ್ ಟಿ ಸಿ ಬಸ್  ಸ್ಕೂಟಿಗೆ  ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಸಾವು ಕಂಡಿರುವ ಘಟನೆ ಇಂದು ನಡೆದಿದೆ. ದ್ವಿಚಕ್ರ ವಾಹನ ಭದ್ರಾವತಿ ಕಡೆಯಿಂದ ಡೈರಿ ಹಿಂಭಾಗದ ಜಯಂತಿ ಗ್ರಾಮಕ್ಕೆ ತಿರುಗುವ ವೇಳೆ ದ್ವಿಚಕ್ರ ವಾಹನಕ್ಕೆ ಶಿವಮೊಗ್ಗದಿಂದ ಬೆಂಗಳೂರಿಗೆ ಹೋಗುವ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದಿದೆ. ದ್ವಿಚಕ್ರ ವಾಹನ ಸವಾರಾದ ಮಂಜುನಾಥ್ (25) ಹಾಗೂ ಆಂಥೋಣಿ ಎಂಬುವರು ಸ್ಥಳದಲ್ಲಿಯೇ…

Read More

ಗಾಂಜಾ ಸೇವನೆ ಮಾಡಿದ್ದ ಅಪ್ರಾಪ್ತ ಸೇರಿ ಇಬ್ಬರ ಬಂಧನ :

ಶಿವಮೊಗ್ಗ : ಗಾಂಜಾ ಸೇವನೆ ಮಾಡಿದ್ದ ಅಪ್ರಾಪ್ತ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಪಾರ್ಕ್ ಬಳಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು ಆರೋಗ್ಯ ತಪಾಸಣೆ ಮಾಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ಬೆಳಕಿಗೆ ಬಂದಿದೆ. ಆರ್ ಎಂಎಲ್ ನಗರ ಪಾರ್ಕ್ ಬಳಿ ಇಬ್ಬರು ಯುವಕರು ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದರು. ಗಸ್ತು ತಿರುಗುತ್ತಿದ್ದ ಪೊಲೀಸರು ಇವರ ವಿಚಾರಣೆ ನಡೆಸಿದಾಗ ಗಾಂಜಾ ಸೇವನೆ ಬಗ್ಗೆ ಅನುಮಾನ ಮೂಡಿದೆ. ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ನಡೆಸಿದಾಗ ಗಾಂಜಾ ಸೇವನೆ ಮಾಡಿರುವುದು ಬೆಳಕಿಗೆ ಬಂದಿದೆ….

Read More

ಶಿವಮೊಗ್ಗ : ಪತ್ನಿಗೆ ವೀಡಿಯೋ ಕರೆ ಮಾಡಿ ನೇಣು ಬಿಗಿದುಕೊಂಡ ಜೈಲು ವಾರ್ಡನ್ : ಪತಿಯ ಸಾವಿನ ದೃಶ್ಯ ಕಂಡು ಕಂಗಲಾದ ಪತ್ನಿ

ಶಿವಮೊಗ್ಗ : ಇಲ್ಲಿನ ಜಿಲ್ಲಾ ಕಾರಾಗೃಹದ ಸಿಬ್ಬಂದಿಯೊಬ್ಬ ತಾನು ಸಾಯುವ ದೃಶ್ಯ ತನ್ನ ಮನೆಯವರು ನೋಡಬೇಕೆಂದು ವಿಡಿಯೋ ಕಾಲ್ ಮಾಡಿ, ಅವರ ಸಮ್ಮುಖದಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಶಿವಮೊಗ್ಗ ಸೆಂಟ್ರಲ್ ಜೈಲಿನಲ್ಲಿ ನಡೆದಿದೆ. ಕೇಂದ್ರ ಕಾರಾಗೃಹ ವಸತಿ ಗೃಹದಲ್ಲಿ ಅಸ್ಪಾಕ್ ತಗಡಿ (24) ಪತ್ನಿ ಎದುರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಒಂದು ವರ್ಷದ ಹಿಂದಷ್ಟೆ ಮದುವೆಯಾಗಿದ್ದ ಅಸ್ಪಾಕ್​ಗೆ ಒಂದು ಮಗು ಕೂಡ ಇದೆ….

Read More

ಶಿವಮೊಗ್ಗ : ಪಾದಚಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಕಾರು, ಮಹಿಳೆ ಸಾವು

ಶಿವಮೊಗ್ಗ : ಕೆಲಸ ಮುಗಿಸಿ ಮನೆಗೆ ವಾಪಾಸ್ ತೆರಳುತಿದ್ದ ಪಾದಚಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸಾವನ್ನಪ್ಪಿದ್ದಾಳೆ. ಗಾರೆ ಕೆಲಸ ಮುಗಿಸಿಕೊಂಡು ಶ್ರೀರಾಂಪುರದಲ್ಲಿರುವ ಮನೆಗೆ ಹಿಂದಿರುಗುತ್ತಿದ್ದ 40 ವರ್ಷದ ಮಹಿಳೆಗೆ ಹಿಂಬದಿಯಿಂದ ಬಂದ  ಕೆಎ-15-ಎನ್-7444 ಕಾರು ಡಿಕ್ಕಿ ಹೊಡೆದ ಪರಿಣಾಮ ತಲೆಗೆ ಹಾಗೂ ಕುತ್ತಿಗೆಗೆ ಪೆಟ್ಟು ಬಿದ್ದ ಕಾರಣ ಆಕೆಯನ್ನ ತಕ್ಷಣ ನಂಜಪ್ಪ ಆಸ್ಪತ್ರೆಗೆ ದಾಖಲಿಸಲಾಯಿತು. ತಪಾಸಣೆ ನಡೆಸಿದ ವೈದ್ಯರು ಮಹಿಳೆ ಸಾವನ್ನಪ್ಪಿರುವುದಾಗಿ ಹೇಳಿದ್ದಾರೆ. ಕಾರು ಅತಿ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು…

Read More