ಹೊಸನಗರ : ಬಾಲಕಿಯನ್ನು ಅಡ್ಡಗಟ್ಟಿ ನಂಬರ್ ಕೊಡುವಂತೆ ಕಿರುಕುಳ – ಇಬ್ಬರು ವಶಕ್ಕೆ|Crime News
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪೊಲೀಸ್ ಸ್ಟೇಷನ್ ಒಂದರಲ್ಲಿ ಅಪ್ತಾಪ್ತೆಯೊಬ್ಬಳನ್ನ ಅಡ್ಡಗಟ್ಟಿ ಫೋನ್ ನಂಬರ್ ಕೇಳಿ ಕಿರುಕುಳ ನೀಡಿದ ಆರೋಪ ಸಂಬಂಧ ಕೇಸ್ ದಾಖಲಾಗಿದ್ದು ಇಬ್ಬರು ಆರೋಪಿಗಳನ್ನ ವಶಕ್ಕೆ ಪಡೆಯಲಾಗಿದೆ. ಕೇರಳದಲ್ಲಿ ಓದುತ್ತಿರುವ ಅಪ್ರಾಪ್ತೆಯೊಬ್ಬರು ಹೊಸನಗರ ತಾಲ್ಲೂಕಿನ ಗ್ರಾಮವೊಂದರಲ್ಲಿರುವ ತಮ್ಮ ಅಜ್ಜಿ ಮನೆಗೆ ಬಂದಿದ್ದಾರೆ. ಕಳೆದ ಭಾನುವಾರ ಚರ್ಚ್ವೊಂದರಲ್ಲಿ ಪ್ರಾರ್ಥನೆ ಮುಗಿಸಿ ವಾಪಸ್ ಆಗುವಾಗ ಇಬ್ಬರು ಆಕೆಯನ್ನು ಎರಡು ಬಾರಿ ಅಡ್ಡಗಟ್ಟಿ ಮೊಬೈಲ್ ನಂಬರ್ ಕೇಳಿದ್ಧಾರೆ. ಅಲ್ಲದೆ ಬೈಕ್‌ನಲ್ಲಿ ಬಂದ ಆರೋಪಿಗಳು ಬಾಲಕಿಯನ್ನು ಹಿಂಬಾಲಿಸಿ ಕಿರುಕುಳ ನೀಡಿದ್ದಾರೆ…