Headlines

ಚಾಲಕನ ಜೊತೆ ಮಕ್ಕಳನ್ನು ಕರೆದುಕೊಂಡು ಮಹಿಳೆ ಪರಾರಿ : ಮಕ್ಕಳನ್ನು ಹುಡುಕಿಕೊಡುವಂತೆ ಪತಿಯಿಂದ ಕಣ್ಣೀರು|missing

ಪತಿಯನ್ನು ಬಿಟ್ಟು ತಾನು ಕೆಲಸ ನಿರ್ವಹಿಸುತಿದ್ದ ಸಂಸ್ಥೆಯ ಚಾಲಕನೊಂದಿಗೆ ಗೃಹಿಣಿಯೊಬ್ಬರು ನಾಪತ್ತೆಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನಲ್ಲಿ ನಡೆದಿದೆ. ಈ ಸಂಬಂಧ ದೂರು ದಾಖಲಾಗಿದ್ದು, ಘಟನೆಯಿಂದ ನೊಂದು ಪತಿ ಕಣ್ಣೀರು ಹಾಕುತ್ತಿದ್ದಾರೆ.  ಶಿಕಾರಿಪುರ ತಾಲೂಕಿನ ಪುಣೇದಹಳ್ಳೀ ಗ್ರಾಮದಲ್ಲಿ ಪರಶುರಾಮ್ ಮತ್ತು ಶಾರದಾ ದಂಪತಿ ವಾಸವಾಗಿದ್ದರು. ಕಳೆದ 13 ವರ್ಷದ ಹಿಂದೆ  ಮದುವೆಯಾಗಿದ್ದ ಇವರಿಗೆ ಇಬ್ಬರು ಮಕ್ಕಳಿದ್ದು ಪತ್ನಿ ಖಾಸಗಿ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ಮಧ್ಯೆ ಮಕ್ಕಳ ದಾಖಲಾತಿಗಳನ್ನು ತೆಗೆದುಕೊಂಡು ಶಾಲೆಗೆ ಹೋಗಿದ್ದ ಮಹಿಳೆ ಅಲ್ಲಿಂದ…

Read More

ಖಾಸಗಿ ಆಸ್ಪತ್ರೆಯ ವೈದ್ಯ ನೇಣು ಬಿಗಿದುಕೊಂಡು ಆತ್ಮಹತ್ಯೆ|sucide

ಶಿವಮೊಗ್ಗ ನಗರದ ಪ್ರಸಿದ್ಧ ಖಾಸಗಿ ಆಸ್ಪತ್ರೆಯಲ್ಲಿ ಮೂಳೆ ತಜ್ಞರಾಗಿ ಕೆಲಸ ನಿರ್ವಹಿಸುತ್ತಿದ್ದ ಡಾ.ಲೋಲಿತ್ (40) ನೇಣು ಬಿಗಿದ ಸ್ಥಿತಿಯಲ್ಲಿ ತಮ್ಮ ಕೊಠಡಿಯಲ್ಲಿ ಪತ್ತೆಯಾಗಿದ್ದಾರೆ. ಗೋಪಾಳದಲ್ಲಿರುವ ಅವರ ನಿವಾಸದಲ್ಲಿ ಲೋಲಿತ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂಲಗಳ ಪ್ರಕಾರ ಅವರ ಸಾವಿಗೆ ಅನಾರೋಗ್ಯದ ಕಾರಣ ತಿಳಿದು ಬಂದಿದೆ. ಹೃದಯ ಸಂಬಂಧಿ ಖಾಯಿಲೆಯಿಂದ ವೈದ್ಯರು ಬಳಲುತ್ತಿದ್ದರು ಎನ್ನಲಾಗುತಿದ್ದು ಪೊಲೀಸರ ತನಿಖೆಯ ನಂತರ ಕಾರಣ ತಿಳಿದುಬರಬೇಕಾಗಿದೆ. ತುಂಗನಗರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

Read More

ಬೀದಿನಾಯಿಗಳ ದಾಳಿಗೆ ಬಲಿಯಾದ 4 ವರ್ಷದ ಬಾಲಕ – ಮನೆಯಂಗಳದಲ್ಲಿ ಆಟವಾಡುತಿದ್ದಾಗ ಬಾಲಕನ ತಲೆ ಸೀಳಿ ಮೆದುಳು ತಿಂದ ನಾಯಿಗಳು|attack

  ಬೀದಿ ನಾಯಿಗಳ ದಾಳಿಯಿಂದ ನಾಲ್ಕು ವರ್ಷದ ಬಾಲಕನೊಬ್ಬ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ದಡಮಘಟ್ಟ ಗ್ರಾಮದಲ್ಲಿ ನಡೆದಿದೆ.  ಸೈಯದ್ ಮದನಿ(4) ನಾಯಿಗಳ ದಾಳಿಗೆ ಬಲಿಯಾದ ಬಾಲಕ. ಬಾಲಕ ಸೈಯದ್ ಮದನಿಯು ಸಂಜೆ ನಾಲ್ಕು ಗಂಟೆಗೆ ಮನೆಯಿಂದ ಹೊರಗೆ ಆಟವಾಡಲು ಬಂದಾಗ ಏಕಾಏಕಿ ಹತ್ತಾರು ನಾಯಿಗಳು ಒಂದೇ ಸಮನೆ ದಾಳಿ ನಡೆಸಿವೆ. ದಾಳಿಗೆ ಬೆದರಿದ ಮದನಿ ನೆಲಕ್ಕೆ ಬಿದ್ದಿದ್ದಾನೆ. ಈ ವೇಳೆ ಎಲ್ಲ ನಾಯಿಗಳು ಆತನನ್ನು ಕಚ್ಚಿ ಹಾಕಿದೆ. ಅಲ್ಲದೇ, ರಸ್ತೆ ತುಂಬೆಲ್ಲಾ…

Read More

ಕೆಂಚನಾಲ : ಬಸ್ ಅಡ್ಡಗಟ್ಟಿ ವಿದ್ಯಾರ್ಥಿಯ ಮೇಲೆ ನಾಲ್ವರು ಯುವಕರಿಂದ ಹಲ್ಲೆ – ದೂರು ದಾಖಲು|assault

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಕೆಂಚನಾಲ ಗ್ರಾಪಂ ವ್ಯಾಪ್ತಿಯ ಕೆದಲುಗುಡ್ಡೆ ಗ್ರಾಮದಲ್ಲಿ ಚಲುಸುತಿದ್ದ ಬಸ್ ನ್ನು ಅಡ್ಡ ಹಾಕಿ ನಾಲ್ವರು ಯುವಕರು ವಿದ್ಯಾರ್ಥಿಯೊಬ್ಬನ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಪಟ್ಟಣದ ಸರ್ಕಾರಿ ಪ್ರೌಡ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿ ಗಾಳಿಬೈಲ್ ಗ್ರಾಮದ ನಿವಾಸಿ ರಿಫಾಯತ್(17) ಇಂದು ಸಂಜೆ ವಿಶೇಷ ತರಗತಿ ಮುಗಿಸಿಕೊಂಡು‌ ತನ್ನ ಊರಾದ ಕೆಂಚನಾಲಕ್ಕೆ ಬಸ್ ನಲ್ಲಿ ಹಿಂದಿರುತಿದ್ದಾಗ ನಾಲ್ಕು ಜನ ಯುವಕರು ಬೈಕ್ ನಲ್ಲಿ ಹಿಂಬಾಲಿಸಿ ಕೆದಲುಗುಡ್ಡೆ ಗ್ರಾಮದ ಬಳಿ ಬಸ್…

Read More

ಹೊಸನಗರದಲ್ಲಿ ಭೀಕರ ಅಪಘಾತ : ಮಗಳನ್ನು ಕಾಲೇಜಿಗೆ ಅಡ್ಮಿಶನ್ ಮಾಡಿ ಹಿಂದಿರುಗುತಿದ್ದ ವ್ಯಕ್ತಿಯ ದಾರುಣ ಸಾವು|Accident

ಹೊಸನಗರ : ಇಲ್ಲಿನ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮುಂಭಾಗದಲ್ಲಿ ಮಧ್ಯಾಹ್ನ ಟಿಪ್ಪರ್ ಲಾರಿ ಹಾಗೂ ಟಿವಿಎಸ್ ಎಕ್ಸೆಲ್ ನಡುವೆ ಭೀಕರ ಅಪಘಾತ ನಡೆದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಮುಂಬಾರು ಸಮೀಪದ ಸಾವಂತೂರು ನಿವಾಸಿ ಅಣ್ಣಪ್ಪ (43) ಮೃತಪಟ್ಟ ದುರ್ಧೈವಿಯಾಗಿದ್ದಾರೆ. ಕೊಡಚಾದ್ರಿ ಕಾಲೇಜಿನ ಮುಂಭಾಗದಲ್ಲಿ ಅಣ್ಣಪ್ಪ ತಮ್ಮ ಟಿವಿಎಸ್ ಎಕ್ಸೆಲ್ ಬೈಕ್ ನಲ್ಲಿ ಸಾಗುತಿದ್ದಾಗ ಹಿಂಬದಿಯಿಂದ ಬಂದ ಟಿಪ್ಪರ್ ಡಿಕ್ಕಿ ಹೊಡೆದಿದೆ.ಅಪಘಾತದ ರಭಸಕ್ಕೆ ವ್ಯಕ್ತಿ ಮೃತಪಟ್ಟಿದ್ದಾರೆ. ಮೃತ ಅಣ್ಣಪ್ಪ ರವರು ಕೊಡಚಾದ್ರಿ ಸರ್ಕಾರಿ ಪ್ರಥಮ…

Read More

ಗಡಿಪಾರು ಆದೇಶಕ್ಕೆ ಹೆದರಿ ವಿಷ ಸೇವಿಸಿದ ತೀರ್ಥಹಳ್ಳಿಯ ರೌಡಿ ಶೀಟರ್ ಕೋಬ್ರಾ ಸುಹೈಲ್ – ಸ್ಥಿತಿ ಗಂಭೀರ|Thirthahalli

ತೀರ್ಥಹಳ್ಳಿ : ಗಡಿಪಾರು ಆದೇಶದ ಕಾರಣ ಕೇಳಿ ನೋಟೀಸ್ ನೀಡುತ್ತಿದ್ದಂತೆ ರೌಡಿ ಶೀಟರ್ ಕೋಬ್ರಾ ಸುಹೇಲ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಒಂದು ವಾರದ ಹಿಂದೆ ತೀರ್ಥಹಳ್ಳಿ  ಪೊಲೀಸರು  ರೌಡಿಶೀಟರ್ ಕೋಬ್ರಾ ಸುಹೇಲ್ ನಿಗೆ ಗೆರಡು ವರ್ಷ ಗಳ ಕಾಲ ಗಡಿಫಾರು ಯಾಕೆ ಮಾಡಬಾರದು ಎಂದು ಕಾರಣಕೇಳಿ ನೋಟೀಸ್ ಜಾರಿ ಮಾಡಿದ್ದರು. ಪೊಲೀಸ್ ನೋಟೀಸ್ ತಲುಪಿ ಎರಡು ದಿನಕ್ಕೆ ಆತ ಆತ್ಮಹತ್ಯೆಗೆ ಯತ್ನಿಸಿ ಈಗ ಮಂಗಳೂರಿನ ಎನಪೋಯ ಆಸ್ಪತ್ರೆಗೆ ದಾಖಾಗಿದ್ದಾನೆ. ಇಂದಿರಾ ನಗರ ನಿವಾಸಿ…

Read More

ಚಾಲಕನ ನಿಯಂತ್ರಣ ತಪ್ಪಿ ಶರಾವತಿ ಹಿನ್ನೀರಿಗೆ ಇಳಿದ ಬಸ್ – ತಪ್ಪಿದ ಭಾರಿ ಅನಾಹುತ|sigandur

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ  ಹೊಳೆಬಾಗಿಲು ಸಮೀಪ ಶರಾವತಿ  ಹಿನ್ನೀರಿನಲ್ಲಿ ಹಿಂದಕ್ಕೆ ತೆಗೆದುಕೊಳ್ಳುವ ವೇಳೆ ನಿಯಂತ್ರಣ ತಪ್ಪಿದ ಬಸ್ ನೀರಿಗೆ ಜಾರಿದ್ದು, ಸ್ವಲ್ಪದಲ್ಲಿ ಭಾರೀ ಅನಾಹುತವೊಂದು ತಪ್ಪಿದೆ. ಹೊಳಬಾಗಿಲಿನಲ್ಲಿ ಇಂದು ಘಟನೆ ನಡೆದಿದ್ದು, ಗಜಾನನ ಬಸ್ ರಿವರ್ಸ್ ಸಾಗರದಿಂದ ಕಟ್ಟಿನಕಾರುಗೆ ತೆರಳುತ್ತಿತ್ತು. ಲಾಂಚ್ ನಿಲ್ಲಿಸುವ ಸ್ಥಳದಲ್ಲಿ ರಿವರ್ಸ್ ತೆಗೆದುಕೊಳ್ಳುವ ವೇಳೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ನೀರಿಗೆ ಇಳಿದಿದೆ. ಇದರಿಂದ ಬಸ್’ನಲ್ಲಿದ್ದ ಜನರು ಕೂಗಿಕೊಂಡಿದ್ದರಿಂದ ಎಚ್ಚೆತ್ತ ಚಾಲಕ ಮೇಲಕ್ಕೆ ಚಲಿಸಲು ಯತ್ನಿಸಿದ್ದಾನೆ. ತತಕ್ಷಣವೇ ಎಚ್ಚೆತ್ತ ಸ್ಥಳೀಯರೂ ಸೇತುವೆ ಕಾಮಗಾರಿಗಾಗಿ…

Read More

ರೈಲು ಹರಿದು ವ್ಯಕ್ತಿಯ ಕಾಲು ಮುರಿತ – ಗಾಯಾಳು ಮೆಗ್ಗಾನ್ ಗೆ ದಾಖಲು|TRAIN

ಶಿವಮೊಗ್ಗ : ನಗರದ ಉಷಾ ನರ್ಸಿಂಗ್ ಹೋಂ ಬಳಿಯ ಸವಳಂಗ ರಸ್ತೆ ರೈಲ್ವೆಗೇಟ್ ಬಳಿ ವ್ಯಕ್ತಿಯೋರ್ವನ ಮೇಲೆ ರೈಲು ಹರಿದು ಕಾಲು ತುಂಡಾಗಿರುವ ಘಟನೆ ರಾತ್ರಿ ನಡೆದಿದೆ. ರೈಲ್ವೆ ಓವರ್ ಬ್ರಿಡ್ಜ್ ಕಾಮಗಾರಿ ನಡೆಸುತ್ತಿದ್ದ ಸದ್ಪತಿ ಪಂಜಿ ಎಂಬ ಸುಮಾರು 30 ವರ್ಷದ ವ್ಯಕ್ತಿಯ ಮೇಲೆ ತಾಳಗುಪ್ಪ-ಬೆಂಗಳೂರು(1628) ರೈಲು ಹರಿದುಹೋಗಿದೆ. ಸ್ಥಳೀಯರ ಪ್ರಕಾರ ಆತ ಕುಡಿದು ರೈಲ್ವೆ ಟ್ರ್ಯಾಕ್ ಬಳಿ ಮಲಗಿದ್ದ ಕಾರಣ ವ್ಯಕ್ತಿಯ ಕಾಲಿನ ಮೇಲೆ ರೈಲು ಹರಿದಿದೆ ಎಂದು ತಿಳಿಸಿದ್ದಾರೆ. ರೈಲ್ವೆ ಪೊಲೀಸ್ ಮಾಹಿತಿ…

Read More

ರಿಪ್ಪನ್‌ಪೇಟೆ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ – ಅಕ್ರಮ ಮರಳು ಸಾಗಿಸುತಿದ್ದ ಟಿಪ್ಪರ್ ವಶಕ್ಕೆ|Sand mafia

ರಿಪ್ಪನ್‌ಪೇಟೆ : ಖಚಿತ ಮಾಹಿತಿ ದೊರೆತ ಹಿನ್ನಲೆಯಲ್ಲಿ ಗುರುವಾರ ರಾತ್ರಿ ಪಟ್ಟಣದ ಪಿಎಸ್ ಐ ಶಿವಾನಂದ ಕೆ ನೇತ್ರತ್ವದ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಅಕ್ರಮ ಮರಳು ಸಾಗಿಸುತಿದ್ದ ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಗುರುವಾರ ರಾತ್ರಿ ಖಚಿತ ಮಾಹಿತಿ ದೊರೆತ ಹಿನ್ನಲೆಯಲ್ಲಿ ತಳಲೆ ಬಸ್ ನಿಲ್ದಾಣದ ಬಳಿ ಅಕ್ರಮವಾಗಿ ಮರಳು ಸಾಗಿಸುತಿದ್ದ  ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಅಕ್ರಮ ಮರಳು ತುಂಬಿಕೊಂಡು ಹೊಸನಗರದಿಂದ ಜಂಬಳ್ಳಿ ಮೂಗೂಡ್ತಿ ಮಾರ್ಗವಾಗಿ ಸಾಗಿಸುತ್ತಿರುವ ಖಚಿತ ಮಾಹಿತಿ ದೊರೆತ ಹಿನ್ನಲೆಯಲ್ಲಿ ತಳಲೆ…

Read More

ಹೆದ್ದಾರಿಪುರ : ಅರಣ್ಯ ಇಲಾಖೆಯ ದಾಳಿ – ಲಕ್ಷಾಂತರ ರೂ ಮೌಲ್ಯದ ತೇಗದ ತುಂಡುಗಳು ವಶಕ್ಕೆ….!! ಮರ ಕಡಿಸುವುದು ಅವರೇ ಹಿಡಿಯುವುದು ಅವರ ಕಡೆಯವರೇ!!!!..?????|FOREST

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಹೊಸನಗರ ತಾಲೂಕಿನ ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ಕೊಳವಳ್ಳಿ ಗ್ರಾಮದ ಸುಗಂಧರಾಜ್ ಎಂಬುವವರಿಗೆ ಸೇರಿದ ಮನೆಯ ಸಮೀಪದಲ್ಲಿ ಅಕ್ರಮ ಕಡಿತಲೆ ಮಾಡಿ ಸಂಗ್ರಹಿಸಿಟ್ಟಿದ್ದ ಸುಮಾರು ರೂ. 2ಲಕ್ಷ ಮೌಲ್ಯದ ತೇಗದ ಮರದ ನಾಟ ಹಾಗೂ ಸೈಜ್‌ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಗ್ರಾಮಠಾಣೆ ವ್ಯಾಪ್ತಿಯಲ್ಲಿ ಬೆಳೆದಿದ್ದ ತೇಗದ ಮರಗಳನ್ನು ಅಕ್ರಮವಾಗಿ ಕಡಿದು, ಸ್ಶೆಜ್‌ಗಳಾಗಿ ಪರಿವರ್ತಿಸಿದ್ದು, ವಿಷಯ ತಿಳಿದು ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ದಾಳಿ ಮಾಡಿದಾಗ ಪ್ರಕರಣ…

Read More