ಕ್ರೈಂ ಸುದ್ದಿ:
ಹೊಸನಗರ – ಎಂ ಗುಡ್ಡೆಕೊಪ್ಪದಲ್ಲಿ ಮನೆ ಬಾಗಿಲು ಮುರಿದು ಕಳ್ಳತನ|theft
ಹೊಸನಗರ – ಎಂ ಗುಡ್ಡೆಕೊಪ್ಪದಲ್ಲಿ ಮನೆ ಬಾಗಿಲು ಮುರಿದು ಕಳ್ಳತನ ಹೊಸನಗರ: ಹೊಸನಗರ ತಾಲ್ಲೂಕು ಎಂ ಗುಡ್ಡೆಕೊಪ್ಪ ಗ್ರಾಮದ ಮುರುಳಿದರಭಟ್‌ರವರ ತೋಟದ ಮನೆ ರಾತ್ರಿ ಮುಂಭಾಗದ ಬಾಗಿಲಿನ ಬೀಗ ಮುರಿದು ಗೋಡ್ರೇಜ್ ಬಾಗಿಲು ಮುರಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಮಂಗಳವಾರ ರಾತ್ರಿ ಮುರುಳಿಧರ್ ಭಟ್‌ರವರು ಹೊಸನಗರದ ಮನೆಗೆ ರಾತ್ರಿ 7ಗಂಟೆಯ ನಂತರ ಬಂದಿದ್ದಾರೆ ಬರುವ ಸಂದರ್ಭದಲ್ಲಿ ಮನೆಯ ಮುಂಬಾಗಿನ ಬಾಗಿಲಿಗೆ ಬೀಗ ಹಾಗೂ ಗೋಡ್ರೇಜ್ ಬೀಗ ಹಾಕಿಕೊಂಡು ಬಂದಿದ್ದು ಅವರ ಕೆಲಸದವರು ಬುಧವಾರ ಬೆಳಿಗ್ಗೆ ಕೆಲಸಕ್ಕೆ…
ಕಾಡುಕೋಣ ಭೇಟೆ – ಮಾಂಸ ತೆಗೆದು ಕಳೇಬರ ರಸ್ತೆಗೆ ಎಸೆದು ಹೋದ ಖದೀಮರು|wild
ಕಾಡುಕೋಣ ಭೇಟೆ – ಮಾಂಸ ತೆಗೆದು ಕಳೇಬರ ರಸ್ತೆಗೆ ಎಸೆದು ಹೋದ ಖದೀಮರು ಹೊಸನಗರ ತಾಲ್ಲೂಕಿನ ಸಂಪೆಕಟ್ಟೆ- ಅಡಗೋಡಿ ಹತ್ತಿರದ ಬಂಡಿಗೆ ಎಂಬಲ್ಲಿ ಕಾಡುಕೋಣವೊಂದನ್ನು ಬೇಟೆಯಾಡಿರುವ ಬಗ್ಗೆ ವರದಿಯಾಗಿದೆ. ಎಲ್ಲಿಯೋ ಕಾಡುಕೋಣವನ್ನು ಶಿಕಾರಿ ಮಾಡಿ, ಅದರ ಮಾಂಸ ತೆಗೆದುಕೊಂಡುಹೋಗಿ ಕಳೆಬರವನ್ನು ಸಂಪೆಕಟ್ಟೆಯ ಸಮೀಪದ ಬಿಸಾಡಿ ಹೋಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕಾಡುಕೋಣದ ಎದೆ ಭಾಗ ಮತ್ತು ಮೂಳೆಯನ್ನ ರಸ್ತೆಯ ಪಕ್ಕ ಎಸೆದು ಹೋಗಲಾಗಿದ್ದು, ಸ್ಥಳಿಯರು ಇದನ್ನ ಗಮನಿಸಿ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಇನ್ನೂ ಸ್ಥಳೀಯರ…
ಸಮವಸ್ತ್ರದಲ್ಲೇ ಟ್ರಾಫಿಕ್ ಪೊಲೀಸ್ ಆತ್ಮಹತ್ಯೆ – ಪತ್ನಿ ಅಗಲಿದ ಮೂರೇ ದಿನಕ್ಕೆ ಪತಿ ಸಾವು|smg
ಸಮವಸ್ತ್ರದಲ್ಲೇ ಟ್ರಾಫಿಕ್ ಪೊಲೀಸ್ ಆತ್ಮಹತ್ಯೆ – ಪತ್ನಿ ಅಗಲಿದ ಮೂರೇ ದಿನಕ್ಕೆ ಪತಿ ಸಾವು ಶಿವಮೊಗ್ಗ : ಭಾನುವಾರ ಕರ್ತವ್ಯ ಮುಗಿಸಿಕೊಂಡು ಮನೆಗೆ ಹಿಂದಿರುಗಿದ್ದ ಸಂಚಾರಿ ಪಶ್ಚಿಮ ಪೊಲೀಸ್ ಠಾಣೆಯ ಹೆಡೆ ಕಾನ್ಸ್ಟೇಬಲ್ ಜಯಪ್ಪ ಉಪ್ಪಾರ್ (43) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿನೋಬ ನಗರದ ಮನೆಯಲ್ಲಿ ಜಯಪ್ಪನವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಾಣಾಗಿದ್ದಾರೆ. ಮೂರು ದಿನಗಳ ಹಿಂದೆ ಜಯಪ್ಪ ಅವರ ಪತ್ನಿ ಮೆದುಳು ಜ್ವರದಿಂದ ಸಾವನ್ನಪ್ಪಿದ್ದರು.ಪತ್ನಿಯ ಅಗಲಿಕೆಯಿಂದ ಜಯಪ್ಪ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಜಯಪ್ಪನವರಿಗೆ…
ಶಿವಮೊಗ್ಗದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ – 144 ಸೆಕ್ಷನ್ ಜಾರಿ
ಶಿವಮೊಗ್ಗದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ – 144 ಸೆಕ್ಷನ್ ಜಾರಿ ಶಿವಮೊಗ್ಗ ನಗರದಲ್ಲಿ ಸಂಭ್ರಮದ ಈದ್ ಮಿಲಾದ್ ಮೆರವಣಿಗೆ ನಡೆಯುತ್ತಿದ್ದು, ಇನ್ನೊಂದೆಡೆ ರಾಗಿಗುಡ್ಡದಲ್ಲಿ ಅಹಿತಕರ ಘಟನೆಯೊಂದು ಸಂಭವಿಸಿದೆ. ಸ್ಥಳದಲ್ಲೀಗ 144 ಸೆಕ್ಷನ್ ವಿಧಿಸಲಾಗಿದೆ. ನಡೆದಿದ್ದೇನು? ರಾಗಿಗುಡ್ಡದಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ಸಂಭವಿಸಿದೆ. ಇದರ ಬೆನ್ನಲ್ಲೆ ಪೊಲೀಸರು ಜನರನ್ನು ಚದುರಿಸಿ, ಕೆಲವರನ್ನ ವಶಕ್ಕೆ ಪಡೆದಿದ್ದರು. ಆನಂತರ ಕೆಲವರು ಪೊಲೀಸರ ಮೇಲೂ ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ…
ಎರಡು ಬೈಕ್‌ಗಳ ನಡುವೆ ಡಿಕ್ಕಿ – ಹಿಂಬದಿಯಿಂದ ಬಂದ ಲಾರಿ ಹರಿದು ಮೂವರು ಸ್ಥಳದಲ್ಲೇ ಸಾವು! ಇನ್ನೊಬ್ಬನ ಸ್ಥಿತಿ ಗಂಭೀರ!|accident
ಎರಡು ಬೈಕ್‌ಗಳ ನಡುವೆ ಡಿಕ್ಕಿ – ಹಿಂಬದಿಯಿಂದ ಬಂದ ಲಾರಿ ಹರಿದು ಮೂವರು ಸ್ಥಳದಲ್ಲೇ ಸಾವು! ಇನ್ನೊಬ್ಬನ ಸ್ಥಿತಿ ಗಂಭೀರ! ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರು ಸಮೀಪದ ಕಲ್ಲಿಹಾಳ್-ಅರಹತೊಳಲು ಬಳಿ ಶನಿವಾರ ರಾತ್ರಿ ಲಾರಿ ಹಾಗೂ ಎರಡು ಬೈಕ್‌ಗಳ ಮುಖಾಮುಖಿ ಡಿಕ್ಕಿಯಲ್ಲಿ ಮೂವರು ಯುವಕರು ದಾರುಣವಾಗಿ ಮೃತಪಟ್ಟಿದ್ದಾರೆ. ಲಾರಿ ಚಕ್ರದ ಕೆಳಗೆ ಸಿಲುಕಿಕೊಂಡ ಮೃತ ದೇಹಗಳು ಗುರುತು ಸಿಗದಷ್ಟು ಛಿದ್ರವಾಗಿವೆ. ಲಾರಿ ಚಾಲಕ ಪರಾರಿಯಾಗಿದ್ದಾನೆ ಒಂದೇ ಬೈಕ್‌ನಲ್ಲಿ ಪ್ರಯಾ ಣಿಸುತ್ತಿದ್ದ ವಿಕಾಸ್ (18), ಯಶ್ವಂತ(17) ಶಶಾಂಕ (17) ಸ್ಥಳದಲ್ಲೇ…
ರಿಪ್ಪನ್‌ಪೇಟೆ : ಪತ್ನಿಯ ಸಾವಿನಿಂದ ನೊಂದು ಬಾವಿಗೆ ಹಾರಿ ಆತ್ಮಹತ್ಯೆ|rpet
ರಿಪ್ಪನ್‌ಪೇಟೆ : ಪತ್ನಿಯ ಸಾವಿನಿಂದ ನೊಂದು ಬಾವಿಗೆ ಹಾರಿ ಆತ್ಮಹತ್ಯೆ ರಿಪ್ಪನ್‌ಪೇಟೆ;- ಮಂಡಲ ಪಂಚಾಯಿತಿ ಮಾಜಿ ಉಪ ಪ್ರಧಾನ ಹಾಗೂ ಬಸವೇಶ್ವರ ವೀರಶೈವ ಸಮಾಜದ ಸ್ಥಳ ದಾನಿ ಡಿ.ಸಿ ಈಶ್ವರಪ್ಪ (76) ಇಂದು ಬೆಳಗ್ಗೆ ಮನೆಯ ಬಳಿಯಲ್ಲಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಇವರ ಪತ್ನಿ ಮೃತಪಟ್ಟಿದ್ದು ಈ ಘಟನೆಯಿಂದ ಮಾನಸಿಕವಾಗಿ ನೊಂದಿದ್ದ ಈಶ್ವರಪ್ಪ ಇಂದು ಬೆಳಗ್ಗೆ ಈ ರೀತಿಯ ಸಾವಿಗೆ ಶರಣಾಗಿದ್ದಾರೆ. ಮೃತರಿಗೆ ಮೂರುಜನ ಗಂಡು ಮಕ್ಕಳು ಇದ್ದು ಮೃತರ ಅಂತ್ಯಕ್ರಿಯೆ ಬರುವೆ ಗ್ರಾಮದ…
ರಿಪ್ಪನ್‌ಪೇಟೆ – ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ|accident
ರಿಪ್ಪನ್‌ಪೇಟೆ – ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ಶಿವಮೊಗ್ಗ ಜಿಲ್ಲೆಯ ರಿಪ್ಪನ್‌ಪೇಟೆ ಸಮೀಪದ ಸೂಡೂರು ಗೇಟ್ ಬಳಿಯ ತಿರುವಿನಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಘಟನೆ ನಡೆದಿದೆ. ರಿಪ್ಪನ್ ಪೇಟೆಯಿಂದ ಶಿವಮೊಗ್ಗದ ಕಡೆ ಹೋಗುವಾಗ ಮಾರುತಿ ಸ್ವಿಫ್ಟ್ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಕಾರಲ್ಲಿದ್ದ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಗಳೂರು ಮೂಲದ ನಾಲ್ಕು ಜನ ಸಿಗಂದೂರು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಹಿಂದಿರುಗುತಿದ್ದಾಗ ಸೂಡೂರು ಗೇಟ್ ಬಳಿಯ ತಿರುವಿನಲ್ಲಿ…
ದೇವಸ್ಥಾನದಲ್ಲಿ ಕಳ್ಳತನ ಮಾಡಲು ಬಂದು ಸಿಕ್ಕಿಬಿದ್ದ ಕಳ್ಳರು|theft
ದೇವಸ್ಥಾನದಲ್ಲಿ ಕಳ್ಳತನ ಮಾಡಲು ಬಂದು ಸಿಕ್ಕಿಬಿದ್ದ ಕಳ್ಳರು ತೀರ್ಥಹಳ್ಳಿ : ಇಲ್ಲಿನ ವಾಟೆ ಮನೆ ದೇವಸ್ಥಾನದಲ್ಲಿ ಕಳ್ಳತನ ಮಾಡಲು ಯತ್ನಿಸಿದ್ದ ಮೂವರ ಕಳ್ಳರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ. ತಾಲೂಕಿನ ವಾಟೆಮನೆ ಬಸ್ ನಿಲ್ದಾಣದ ಸಮೀಪದ ಮುಳುಬಾಗಿಲು ವ್ಯಾಪ್ತಿಗೆ ಒಳಪಡುವ ವಾಟೆಮನೆ ದೇವಸ್ಥಾನದಲ್ಲಿ ಬೆಲೆಬಾಳುವ ಗಂಟೆ, ದೀಪ, ಕಾಣಿಕೆ ಹುಂಡಿ ಹಾಗೂ ಪೂಜಾ ಸಾಮಗ್ರಿಗಳನ್ನು ಕಳ್ಳತನ ಮಾಡಲು ಮೂವರು ಹೊಂಚು ಹಾಕಿದ್ದರು. ಸ್ಥಳೀಯರು ಅವರನ್ನು ಗಮನಿಸಿ ವಿಚಾರಿಸುವ ವೇಳೆ ಇಬ್ಬರು ಕಳ್ಳರು ಸಿಕ್ಕಿ ಹಾಕಿಕೊಂಡಿದ್ದರು….
ರಿಪ್ಪನ್‌ಪೇಟೆ : ಚರ್ಚ್ ಮುಂಭಾಗದಲ್ಲಿ ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿ – ಓರ್ವ ಗಂಭೀರ|accident
ರಿಪ್ಪನ್‌ಪೇಟೆ : ಚರ್ಚ್ ಮುಂಭಾಗದಲ್ಲಿ ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿ – ಓರ್ವ ಗಂಭೀರ ರಿಪ್ಪನ್‌ಪೇಟೆ : ಇಲ್ಲಿನ ತೀರ್ಥಹಳ್ಳಿ ರಸ್ತೆಯ ಗುಡ್ ಶೆಫರ್ಡ್ ಚರ್ಚ್ ಮುಂಭಾಗದಲ್ಲಿ ಬೈಕ್ ಗೆ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಬೈಕ್ ಸವಾರನಿಗೆ ಗಂಭೀರ ಗಾಯವಾಗಿರುವ ಘಟನೆ ನಡೆದಿದೆ. ಬರುವೆ ಗ್ರಾಮದ ನಿವಾಸಿ ಲೋಕೇಶ್ (48) ಗಂಭೀರ ಗಾಯಗೊಂಡಿದ್ದಾರೆ. ಚರ್ಚ್ ಮುಂಭಾಗದಲ್ಲಿ ಅಪರಿಚಿತ ವಾಹನವೊಂದು ಚಲಿಸುತಿದ್ದ ಬೈಕ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಪರಾರಿಯಾಗಿದೆ.ಈ ಅಪಘಾತದಲ್ಲಿ ಬೈಕ್ ಸವಾರನ ತಲೆಗೆ ಗಂಭೀರ…
ರಿಪ್ಪನ್‌ಪೇಟೆ : 3 ಜಾನುವಾರು ಸಾವು – 2 ಅಸ್ವಸ್ಥ ; ವಿಷ ಮಿಶ್ರಿತ ಮೇವು ಸೇವಿಸಿರುವ ಶಂಕೆ
ರಿಪ್ಪನ್‌ಪೇಟೆ : 3 ಜಾನುವಾರು ಸಾವು – 2 ಅಸ್ವಸ್ಥ,; ವಿಷ ಮಿಶ್ರಿತ ಮೇವು ಸೇವಿಸಿರುವ ಶಂಕೆ ರಿಪ್ಪನ್‌ಪೇಟೆ : ವಿಷ ಮಿಶ್ರಿತ ಮೇವನ್ನು ಸೇವಿಸಿ 03 ಜಾನುವಾರುಗಳು ಮೃತಪಟ್ಟು, 2ಕ್ಕೂ ಹೆಚ್ಚು ಜಾನುವಾರುಗಳು ಅಸ್ವಸ್ಥಗೊಂಡಿರುವ ಘಟನೆ ಕೆರೆಹಳ್ಳಿ ಗ್ರಾಮದಲ್ಲಿ ನಡೆದಿದೆ. ಕೆರೆಹಳ್ಳಿ ಗ್ರಾಮದ ಕೆ ಬಿ ಈಶ್ವರ್ ರಾವ್ ರವರಿಗೆ ಸೇರಿದ್ದ 2 ಎಮ್ಮೆ,ಅನುರಾಜ್ ಎಂಬುವವರಿಗೆ ಸೇರಿದ್ದ 1 ದನ ಮೃತಪಟ್ಟಿದ್ದರೆ,ಕಿರಣ್ ಎಂಬುವವರಿಗೆ ಸೇರಿದ್ದ 2 ದನಗಳು ಗಂಭೀರ ಸ್ಥಿತಿಯಲ್ಲಿದೆ. ಏನಿದು ಘಟನೆ: ಕೆರೆಹಳ್ಳಿ ಗ್ರಾಮದಲ್ಲಿ…