Headlines

SAGARA | ಪ್ರೇಮವಿವಾಹ ದುರಂತ ಅಂತ್ಯ | ವಿಷ ಸೇವಿಸಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ – ಪೊಲೀಸ್ ಸಿಬ್ಬಂದಿ ಸೇರಿ ನಾಲ್ವರ ವಿರುದ್ದ ಕೇಸ್

SAGARA | ಪ್ರೇಮವಿವಾಹ ದುರಂತ ಅಂತ್ಯ | ವಿಷ ಸೇವಿಸಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ – ಪೊಲೀಸ್ ಸಿಬ್ಬಂದಿ ಸೇರಿ ನಾಲ್ವರ ವಿರುದ್ದ ಕೇಸ್
ಮೂರು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಗೃಹಿಣಿ ವಿಷ ಸೇವಿಸಿ ಮೃತಪಟ್ಟಿರುವ ಘಟನೆ ನಡೆದಿದೆ.
ಘಟನೆಯ ಹಿನ್ನಲೆ :

ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ಕೆಳದಿ ರಸ್ತೆಯಲ್ಲಿರುವ ಮನೆಯೊಂದರಲ್ಲಿ ಮೃತ ಶಾಲಿನಿ (33) ಹಾಗೂ ಜಯರಾಮ್ ದಂಪತಿವಾಸಿಸುತ್ತಿದ್ದರು. 

ಈ ನಡುವೆ ಇಬ್ಬರ ನಡುವೆ ಮನಸ್ತಾಪ ಬಂದಿದ್ದು, ಇದೀಗ ಅನುಮಾನಸ್ಪದ ರೀತಿಯಲ್ಲಿ ವಿವಾಹಿತ ಮಹಿಳೆಯು ಮೃತಪಟ್ಟಿದ್ದಾಳೆ. ಇನ್ನು ಮೂರು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಇವರು, ಒಂದು ವರ್ಷದ ಹಿಂದೆ ಕಾನೂನು ಬದ್ಧವಾಗಿ ಸಬ್ ರಿಜಿಸ್ಟರ್ ಆಫೀಸ್​ನಲ್ಲಿ ಮದುವೆ ಆಗಿದ್ದರು. ಸಾಗರದಲ್ಲಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದ ಶಾಲನಿಗೆ ಇದು ಎರಡನೇ ಮದುವೆಯಾಗಿತ್ತು.ಪತಿ-ಪತ್ನಿ ಇಬ್ಬರು ಸಾಗರ ನಗರದಲ್ಲಿ ಮನೆ ಮಾಡಿಕೊಂಡಿದ್ದರು.

ಈ ನಡುವೆ ಡಿಸೆಂಬರ್​. 31 ರ ರಾತ್ರಿ ವಿಷಸೇವಿಸಿದ ಶಾಲಿನಿ, ನಂತರ ಕುಂದಾಪುರದಲ್ಲಿರುವ ಅಕ್ಕ ಅಂಬಿಕಾಗೆ ಕಾಲ್ ಮಾಡಿ ತಿಳಿಸಿದ್ದರು. ನನ್ನ ಜೊತೆ ಯಾರು ಇಲ್ಲ, ನನ್ನನ್ನು ಬದುಕಿಸು ಎಂದು ನೋವಿನಿಂದ ಹೇಳಿದ್ದಾರೆ. ಕೂಡಲೇ ಪರಿಚಯಸ್ಥರ ಸಹಾಯದಿಂದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆ ಚಿಕಿತ್ಸೆಗಾಗಿ ಉಡುಪಿಯ ಮಣಿಪಾಲ ಆಸ್ಪತ್ರೆಗೆ ಕುಟುಂಬಸ್ಥರು ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿ ಆಗದೇ ಸಾವನ್ನಪ್ಪಿದ್ದಾರೆ.

ಈ ಕುರಿತು ಮೃತ ಶಾಲಿನಿ ಅಕ್ಕ ಅಂಬಿಕಾ ಜ. 2 ರಂದು ಸಾಗರ ನಗರ ಠಾಣೆಗೆ ದೂರು ನೀಡಿದ್ದಾರೆ. ಶಾಲನಿ ಮೃತಪಟ್ಟ ಸ್ಥಳದಲ್ಲಿ ಡೆತ್ ನೋಟ್ ಸಿಕ್ಕಿತ್ತು. ಅದರಲ್ಲಿ ಅವಳ ಸಾವಿಗೆ ಗಂಡ ಜಯರಾಮ್ ಮತ್ತು ಆತನ ಅಕ್ಕ ವೀಣಾ, ತಂಗಿ ವಾಣಿ, ಸಂಬಂಧಿ ಹಾಗೂ ಸಾಗರ ಗ್ರಾಮಾಂತರ ಠಾಣೆಯ ಪೊಲೀಸ್ ಪೇದೆ ರವಿ ಎಂಬುವವರು ತನ್ನ ಸಾವಿಗೆ ಕಾರಣ ಎಂದು ಬರೆದಿದ್ದಳು. ಈ ಡೆತ್ ನೋಟ್ ಆಧರಿಸಿ ನಾಲ್ವರ ಮೇಲೆ ದೂರು ನೀಡಿದ ಅಕ್ಕ ಅಂಬಿಕಾ. ಸದ್ಯ ನಾಲ್ವರ ಮೇಲೆ ಎಫ್ ಐಆರ್ ದಾಖಲಾಗಿದೆ. ಆದರೆ, ಪ್ರಕರಣ ದಾಖಲು ಆಗಿ ಐದು ದಿನ ಕಳೆದ್ರೂ ಇನ್ನೂ ಯಾವುದೇ ಆರೋಪಿ ಬಂಧನವಾಗಿಲ್ಲ. ಪ್ರಕರಣದ ತನಿಖೆ ಸರಿಯಾಗಿ ನಡೆಸುತ್ತಿಲ್ಲ. ಇದೊಂದು ಅನುಮಾನಸ್ಪದ ಸಾವು ಆಗಿದೆ. ಮೇಲ್ನೋಟಕ್ಕೆ ಕೊಲೆ ರೀತಿಯಲ್ಲಿ ಕಂಡು ಬರುತ್ತಿದೆ. ಈ ಹಿನ್ನಲೆಯಲ್ಲಿ ಪೊಲೀಸರು ಸೂಕ್ತ ಕ್ರಮ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಹೊಸ ವರ್ಷದ ಸಂಭ್ರಮಾಚರಣೆಗೆ ಹೊಸ ಬಟ್ಟೆ, ಚಪ್ಪಲಿ ಖರೀದಿ ಮಾಡಿದ್ದ ಶಾಲಿನಿ. ಡಿ.31 ರ ಬೆಳಗ್ಗೆ 9 ಘಂಟೆಗೆ ಮನೆಯಿಂದ ಹೋಗಿದ್ದರು. ಬಳಿಕ ವರದಾ ನದಿ ದಂಡೆಯ ಮೇಲೆ ವಿಷಸೇವಿಸಿ ಬಿದ್ದಿದ್ದಾಳೆ ಎನ್ನುವ ಮಾಹಿತಿ ಬಂದಿದೆ. ಕೂಡಲೇ ಸ್ಥಳೀಯರು ಶಾಲಿನಿಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಡಿ. 29 ರಂದು ಪತಿಗೆ ತಾನು ಸಾಯುತ್ತೇನೆಂದು ವಿಷದ ಬಾಟಲ್ ಹೆಸರು ಸಮೇತ ಮೆಸೇಜ್ ಮಾಡಿದ್ದಳು. ಆದ್ರೆ, ಪತಿಯು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಈ ನಡುವೆ ಶಾಲನಿ ಬ್ಯಾಗ್​ನಲ್ಲಿ ಡೆತ್ ನೋಟ್ ಕೂಡಾ ಪತ್ತೆಯಾಗಿದೆ. ಅದರಲ್ಲಿ ತನ್ನ ನೋವಿನ ಕಥೆಯನ್ನು ಎಳೆ ಎಳೆಯಾಗಿ ಬಿಚ್ಚಿಯಿಟ್ಟಿದ್ದಾಳೆ. ಮಂದಾರ್ತಿ ದುರ್ಗಾಪರಮೇಶ್ವರಿಗೆ ಬುಕ್ ನಲ್ಲಿ ಪತ್ರ ಬರೆಯುತ್ತಿದ್ದಳು. ಆ ದೇವರಿಗೆ ಬರೆದ ಪತ್ರದಲ್ಲಿ ತನ್ನ ಪತಿ ಮತ್ತು ಆತನ ಕುಟುಂಬಸ್ಥ ಕೊಟ್ಟಿರುವ ಚಿತ್ರಹಿಂಸೆ ಕೊಟ್ಟಿರುವುದನ್ನು ಪ್ರಸ್ತಾಪ ಮಾಡಿದ್ದಾಳೆ.

ಇನ್ನು ಶಾಲಿನಿಯ ಎರಡು ಸ್ಮಾರ್ಟ್ ಫೋನ್ ಮಿಸ್ಸಿಂಗ್ ಆಗಿದೆ.  ಹೀಗಾಗಿ ಶಾಲನಿ ಕುಟುಂಬಸ್ಥರು ಇದೊಂದು ಕೊಲೆ ಎಂದಿದ್ದಾರೆ. ಪ್ರಕರಣದ ಮೇಲೆ ಪ್ರಭಾವ ಬೀರಿ ಗಂಡನ ಮನೆಯವರು ಪ್ರಕರಣವನ್ನು ಮುಚ್ಚಿ ಹಾಕುವುದಕ್ಕೆ ಯತ್ನಿಸುತ್ತಿದ್ದಾರೆ ಎನ್ನುವುದು ಮೃತಳ ಕುಟುಂಬಸ್ಥರ ಆರೋಪವಾಗಿದೆ. ವಿವಾಹಿತೆ ಮಹಿಳೆಯು ಮೃತಪಟ್ಟು ಆರು ದಿನಗಳು ಕಳೆದಿವೆ. ಪತಿ ಸೇರಿ ನಾಲ್ವರ ವಿರುದ್ದ ಎಫ್ ಐಆರ್ ದಾಖಲು ಆಗಿದೆ. ಆದ್ರೆ, ಪೊಲೀಸರು ಇಲ್ಲಿಯ ವರೆಗೂ ಯಾರನ್ನು ಬಂಧಿಸಿಲ್ಲ, ಸೂಕ್ತ ತನಿಖೆ ಮಾಡಿಲ್ಲ. ಶಾಲಿನಿ ಸಾವಿನ ಹಿಂದಿನ ರಹಸ್ಯವನ್ನು ಸಾಗರ ನಗರ ಪೊಲೀಸರು ತನಿಖೆಯಿಂದ ಬಯಲು ಮಾಡಬೇಕಿದೆ.

Leave a Reply

Your email address will not be published. Required fields are marked *