POSTMANNEWS

ನೈಜ ಸುದ್ದಿ ನೇರ ಬಿತ್ತರ..

ANANDAPURA | ಚಾಲಕನ ನಿಯಂತ್ರಣ ತಪ್ಪಿ ಮೂವರಿಗೆ ಡಿಕ್ಕಿಯಾಗಿ ಲೈಟ್ ಕಂಬಕ್ಕೆ ಡಿಕ್ಕಿಯಾದ ಕಾರು – ತಪ್ಪಿದ ಭಾರಿ ಅನಾಹುತ

ANANDAPURA | ಚಾಲಕನ ನಿಯಂತ್ರಣ ತಪ್ಪಿ ಮೂವರಿಗೆ ಡಿಕ್ಕಿಯಾಗಿ ಲೈಟ್ ಕಂಬಕ್ಕೆ ಡಿಕ್ಕಿಯಾದ ಕಾರು – ತಪ್ಪಿದ ಭಾರಿ ಅನಾಹುತ
ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಮೂವರಿಗೆ ಡಿಕ್ಕಿಯಾಗಿ ಲೈಟ್​ ಕಂಬಕ್ಕೆ ಡಿಕ್ಕಿಯಾಗಿದೆ. ಪರಿಣಾಮ ತುಂಡಾದ ಲೈಟ್ ಕಂಬ ಕಾರಿನ ಮೇಲೇಯೆ ಬಿದ್ದಿದೆ. 

ಸಾಗರ ತಾಲ್ಲೂಕಿನ ಆನಂದಪುರದ ಹೊಸೂರು ಸಮೀಪ ಈ ಘಟನೆ ಸಂಭವಿಸಿದೆ. ಶಿರಸಿ ಕಡೆಗೆ ಹೋಗುವವರು ಕಾರಿನಲ್ಲಿ ಶಿವಮೊಗ್ಗದಿಂದ ಸಾಗರಕ್ಕೆ ತೆರಳುತ್ತಿದ್ದರು. ಈ ವೇಳೆ ಹೊಸೂರು ಸಮೀಪ ಕಾರು ಅಪ್​ಸೆಟ್ ಆಗಿದೆ. ಘಟನೆಯಲ್ಲಿ ಕಾರಿನಲ್ಲಿದ್ದವರು ಬಚಾವ್ ಆಗಿದ್ದಾರೆ. ಆದರೆ ಅದೇ ವೇಳೆ ರಸ್ತೆ ಬದಿಯಲ್ಲಿ ನಿಂತಿದ್ದ ಮೂವರಿಗೆ ಗಂಭೀರ ಗಾಯಗಳಾಗಿವೆ. 

ಶಿವಮೊಗ್ಗದ ಕಡೆಯಿಂದ ಸ್ಪೀಡಾಗಿ ಬರುತ್ತಿದ್ದ ಬರುತ್ತಿದ್ದ ಕಾರು ರಸ್ತೆಯ ಬದಿಯಲ್ಲಿದ್ದ ಹೊಸೂರು ಗ್ರಾಮದ ನಿವಾಸಿಗಳ ಮೇಲೆರಿಗಿದೆ. ಪರಿಣಾಮ ಮೂವರ ಕಾಲಿಗೆ ತೀವ್ರ ಪೆಟ್ಟಾಗಿದ್ದು ಆ ಪೈಕಿ ಇಬ್ಬರನ್ನ ಮಣಿಪಾಲ್ ಆಸ್ಪತ್ರೆಗೆ ಹಾಗೂ ಓರ್ವರನ್ನ ಶಿವಮೊಗ್ಗ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. 

ಇನ್ನೂ ಮೂವರಿಗೆ ಡಿಕ್ಕಿಯಾದ ಕಾರು ನೇರವಾಗಿ ಲೈಟ್ ಕಂಬಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಲೈಂಟ್ ಕಂಬವೇ ಮುರಿದಿದ್ದು, ಕಾರಿನಮೇಲೆಯೇ ಬಿದ್ದಿದ್ದು, ಅದೃಷ್ಟಕ್ಕೆ ಕರೆಂಟ್​ ಸಂಪರ್ಕ ಕಟ್ ಆಗಿದೆ. ಹಾಗಾಗಿ ಇನ್ಯಾರಿಗೂ ಅಪಾಯ ಉಂಟಾಗಿಲ್ಲ. 

ವಿಷಯ ತಿಳಿದು ಸ್ಥಳಕ್ಕೆ ಬಂದ  ಸ್ಥಳೀಯರು ಗಾಯಾಳುಗಳನ್ನ ಆಸ್ಪತ್ರೆಗೆ ರವಾನಿಸುವ ಕೆಲಸ ಮಾಡಿದ್ದಾರೆ. 

ಆನಂದಪುರ ಠಾಣೆಯ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ..

About The Author

Leave a Reply

Your email address will not be published. Required fields are marked *