Headlines

ಶಿವಮೊಗ್ಗದಲ್ಲಿ ರೌಡಿಗಳಿಂದ ಟ್ರಾಫಿಕ್ ಪೊಲೀಸರಿಗೇ ಕೊಲೆ ಬೆದರಿಕೆ – ಇಬ್ಬರ ಬಂಧನ | ವೀಡಿಯೋ ವೈರಲ್ SMG

ಸಾರ್ವಜನಿಕವಾಗಿ ರೌಡಿ ಪಟಾಲಂಗಳು ಶಿವಮೊಗ್ಗದಲ್ಲಿ ಮತ್ತೆ ಗರಿಬಿಚ್ಚಿದ್ದು, ಹಾಡಹಗಲೇ, ಅದರಲ್ಲೂ ಪೊಲೀಸ್ ಸಿಬ್ಭಂದಿ ಮೇಲೆ ಮರ್ಡರ್ ಬೆದರಿಕೆ, ಅವಾಚ್ಯವಾಗಿ ಬೈದು ಧಮ್ಕಿ ಹಾಕಿರುವ ಘಟನೆ ಸದ್ಯ ಮಲೆನಾಡಿನಲ್ಲಿ ಸಂಚಲನ ಮೂಡಿಸಿದೆ. ಶಿವಮೊಗ್ಗದಲ್ಲಿ ಟ್ರಾಫಿಕ್ ಪೊಲೀಸರಿಗೇ ಅವಾಜ್ ಹಾಕಲಾಗಿದೆ. ನಟೋರಿಯಸ್ ಹಿನ್ನೆಲೆಯುಳ್ಳ ಪುಡಾರಿಗಳು, ಟ್ರಾಫಿಕ್ ಪೊಲೀಸರು ಹಿಡಿಯುತ್ತಾರೆ ಅಂತಾ ತಾವೇ ಬೈಕಿನಲ್ಲಿ ಬಿದ್ದು, ತಾವೇ ವಿಡಿಯೋ ಮಾಡಿ ತಗಲಾಕಿಕೊಂಡಿದ್ದಾರೆ. ಟ್ರಾಫಿಕ್ ಪೊಲೀಸ್ ಸಿಬ್ಭಂಧಿಗೆ ಪ್ರಾಣ ಬೆದರಿಕೆ ಒಡ್ಡಿರುವ ರೌಡಿ ಶೀಟರ್ ಗಳು, ತಮ್ಮ ಹುಡುಗರನ್ನು ಕರೆಸಿ, ಹಲ್ಲೆ ಮಾಡಲು…

Read More

ವಿವಾಹಿತ ಮಹಿಳೆಗೆ ಪದೇ ಪದೇ ಕಿರುಕುಳ ನೀಡುತಿದ್ದ ಆರೋಪಿಗೆ 2 ವರ್ಷ ಜೈಲು ಶಿಕ್ಷೆ

ವಿವಾಹಿತ ಮಹಿಳೆಗೆ ಪದೇ ಪದೇ ಕಿರುಕುಳ ನೀಡುತಿದ್ದ ಆರೋಪಿಗೆ 2 ವರ್ಷ ಜೈಲು ಶಿಕ್ಷೆ ಸಾಗರ – ವಿವಾಹಿತ ಮಹಿಳೆಗೆ ಕಿರುಕುಳ ನೀಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಆರೋಪಿಗೆ ಜೆಎಂಎಫ್‌ಸಿ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದ ಘಟನೆ ನಡೆದಿದೆ. ಸಮೀಪದ ಶಿರವಾಳ ಗ್ರಾಮದ ರತನ್ ಕುಮಾರ್ ಎಂಬಾತ ಮಹಿಳೆಗೆ 2013ರಿಂದ ನಿರಂತರ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದನು. 2021ರಲ್ಲಿ ಸಾಗರದಲ್ಲಿ ಅಡ್ಡಗಟ್ಟಿ ಹಲ್ಲೆ ಸಹ ನಡೆಸಿದ್ದನು. ಈ ಸಂಬಂಧ ಮಹಿಳೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಸಾಗರ ನಗರ ಠಾಣೆಯಲ್ಲಿ…

Read More

ಮನೆಗೆ ನುಗ್ಗಿ ಚಿನ್ನಾಭರಣ ದೋಚಿದ್ದ ಕಳ್ಳರು – 24 ಗಂಟೆಯಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದ ನಗರ ಪೊಲೀಸರು

ಮನೆಗೆ ನುಗ್ಗಿ ಚಿನ್ನಾಭರಣ ದೋಚಿದ್ದ ಕಳ್ಳರು –  24 ಗಂಟೆಯಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದ ನಗರ ಪೊಲೀಸರು ಹೊಸನಗರ ತಾಲೂಕಿನ ಬಿದನೂರು ನಗರದಲ್ಲಿ ಮನೆಗೆ ನುಗ್ಗಿ ರೂ.4.65 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಆರೋಪಿಗಳನ್ನು 24 ಗಂಟೆಯೊಳಗೆ ಆಭರಣ ಸಹಿತ ನಗರ ಠಾಣೆ ಪಿಎಸ್‌ಐ ರಮೇಶ್ ಪಿ ಎಸ್ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ ನೂಲಿಗ್ಗೇರಿ ನಿವಾಸಿಗಳಾದ ಸುಹಾನ್ 21, ಅಶೋಕ 24, ಗಣೇಶ 30 ಬಂಧಿತ ಆರೋಪಿಗಳು. ನಡೆದಿದ್ದೇನು..?? ಬಿದನೂರಿನ ನೂಲಿಗ್ಗೇರಿ ನಿವಾಸಿ ರಾಜಮ್ಮ ಮನೆಯಲ್ಲಿರದ ವೇಳೆಯನ್ಬು…

Read More

Ripponpete | ಪೊಲೀಸರ ಭರ್ಜರಿ ಕಾರ್ಯಾಚರಣೆ – ಅಕ್ರಮ ಮರಳು ಸಾಗಿಸುತಿದ್ದ ಮೂರು ಟಿಪ್ಪರ್ ಲಾರಿ ವಶಕ್ಕೆ..!

Ripponpete | ಪೊಲೀಸರ ಭರ್ಜರಿ ಕಾರ್ಯಾಚರಣೆ – ಅಕ್ರಮ ಮರಳು ಸಾಗಿಸುತಿದ್ದ ಮೂರು ಟಿಪ್ಪರ್ ಲಾರಿ ವಶಕ್ಕೆ..! ರಿಪ್ಪನ್‌ಪೇಟೆ : ಮಲೆನಾಡು ಭಾಗದಲ್ಲಿ ಅಕ್ರಮ ಮರಳು ಮಾಫ಼ಿಯಾದ ಹೆಡೆಮುರಿ ಕಟ್ಟುವಲ್ಲಿ ಪಟ್ಟಣದ ಪೊಲೀಸ್ ಪಿಎಸ್ ಐ ಪ್ರವೀಣ್ ಎಸ್ ಪಿ ನೇತ್ರತ್ವದ ತಂಡ ಯಶಸ್ವಿಯಾಗಿದ್ದಾರೆ. ಖಚಿತ ಮಾಹಿತಿ ದೊರೆತ ಹಿನ್ನಲೆಯಲ್ಲಿ ಬುಧವಾರ ರಾತ್ರಿ ಪಟ್ಟಣದ ಪಿಎಸ್ ಪ್ರವೀಣ್ ಎಸ್ ಪಿ ನೇತ್ರತ್ವದ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಅಕ್ರಮ ಮರಳು ಸಾಗಿಸುತಿದ್ದ ಮೂರು ಟಿಪ್ಪರ್ ಲಾರಿಯನ್ನು ವಶಕ್ಕೆ…

Read More

Thirthahalli | ಕಾಡಿನಲ್ಲಿ 9ನೇ ತರಗತಿ ವಿದ್ಯಾರ್ಥಿನಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ !!!

ನೇಣಿಗೆ ಶರಣಾದ 9ನೇ ತರಗತಿ ವಿದ್ಯಾರ್ಥಿನಿ ! ತೀರ್ಥಹಳ್ಳಿ: 9ನೇ ತರಗತಿ ವಿದ್ಯಾರ್ಥಿನಿಯೊಬ್ಬಳ  ಶವ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಸೋಮವಾರ ಬಸವಾನಿ ಸಮೀಪದ ಕಾಡೊಂದರಲ್ಲಿ ಪತ್ತೆಯಾಗಿದೆ. ತಾಲೂಕಿನ ಬಸವಾನಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಶುಂಠಿಕಟ್ಟೆ ಪ್ರೌಢ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ಪ್ರೀತಿ ಎಂಬಾಕೆ ಶಾಲೆಗೆ ಕಳೆದ 15 ದಿನಗಳಿಂದ ಹೋಗಿರಲಿಲ್ಲ. ಶಾಲೆಗೆ ಬರುವಂತೆ ತಿಳಿಸಲಾಗಿತ್ತು. ಮನೆಯಲ್ಲಿ ಕಾರಣ ಕೇಳಿದ್ದಕ್ಕೆ ಸೋಮವಾರ ಬಸವಾನಿ ಬಳಿಯ ಪ್ಲಾಂಟೇಷನ್ ನಲ್ಲಿ  ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತೀರ್ಥಹಳ್ಳಿ ಪೊಲೀಸ್ ಠಾಣಾ…

Read More

Shivamogga | ಪಾರ್ಕ್‌ನಲ್ಲಿ ಸಿಮೆಂಟ್ ಜಿಂಕೆ ಮುರಿದು ಬಿದ್ದು ಮಗು ಸಾವು

ಪಾರ್ಕ್‌ನಲ್ಲಿ ಸಿಮೆಂಟ್ ಜಿಂಕೆ ಮುರಿದು ಬಿದ್ದು ಮಗು ಸಾವು ಶಿವಮೊಗ್ಗ: ಪಾರ್ಕ್‌ನಲ್ಲಿ ಸಿಮೆಂಟ್ ಜಿಂಕೆ ಮುರಿದು ಬಿದ್ದು ಮಗು ಮೃತಪಟ್ಟಿರುವ ಘಟನೆ ಶಿವಮೊಗ್ಗದ ಮುದ್ದಿನಕೊಪ್ಪದಲ್ಲಿರುವ ಟ್ರೀ ಪಾರ್ಕ್‌ನಲ್ಲಿ ನಡೆದಿದೆ. ಸಮೀಕ್ಷಾ (6) ಮೃತ ದುರ್ದೈವಿ. ಭಾನುವಾರವಾಗಿದ್ದರಿಂದ ಆಟವಾಡಲು ಪಾರ್ಕ್‌ಗೆ ಪೋಷಕರ ಜತೆ ಮಗು ತೆರಳಿತ್ತು. ಸಿಮೆಂಟ್‌ ಜಿಂಕೆ ಮೇಲೆ ಕುಳಿತಿದ್ದಾಗ, ಅದು ಮುರಿದು ಬಿದ್ದ ಹಿನ್ನೆಲೆಯಲ್ಲಿ ಗಂಭೀರವಾಗಿ ಗಾಯಗೊಂಡು ಮಗು ಮೃತಪಟ್ಟಿದೆ.  ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

Shivamogga | ಚರಂಡಿಯ ಸ್ಲ್ಯಾಬ್ ಕುಸಿದು ವ್ಯಕ್ತಿ ಸಾವು – ಅವೈಜ್ಞಾನಿಕ ಕಾಮಗಾರಿಗೆ ಅಮಾಯಕ ಬಲಿ

Shivamogga | ಚರಂಡಿಯ ಸ್ಲ್ಯಾಬ್ ಕುಸಿದು ವ್ಯಕ್ತಿ ಸಾವು – ಅವೈಜ್ಞಾನಿಕ ಕಾಮಗಾರಿಗೆ ಅಮಾಯಕ ಬಲಿ ಶಿವಮೊಗ್ಗದಲ್ಲಿ ಚರಂಡಿಗೆ ಮುಚ್ಚಿದ್ದ ಸ್ಲ್ಯಾಬ್ ಕುಸಿದು ವ್ಯಕ್ತಿಯೊಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಶಿವಮೊಗ್ಗ ನಗರದ ವಿನೋಬನಗರದ ರಸ್ತೆಯೊಂದರಲ್ಲಿ ಚರಂಡಿಗೆ ಹಾಕಲಾಗಿದ್ದ ಸ್ಲ್ಯಾಬ್​ ಕುಸಿದು ಮುತ್ತಪ್ಪ (45)  ಎಂಬ ವ್ಯಕ್ತಿ ಸಾವನ್ನಪ್ಪಿದ್ದಾರೆ.  ಮೃತ ವ್ಯಕ್ತಿ ಶಿವಮೊಗ್ಗ ನಗರದ ಬೊಮ್ಮನಕಟ್ಟೆ ನಿವಾಸಿಯಾಗಿದ್ದಾರೆ. ಗುಜರಿ ವ್ಯಾಪಾರ ಮಾಡುತ್ತಿದ್ದ ಮುತ್ತಪ್ಪ ಮೂತ್ರ ವಿಸರ್ಜಿಸುತ್ತಿದ್ದ ವೇಳೆಯಲ್ಲಿ ದಿಡೀರ್ ಸ್ಲ್ಯಾಬ್​ ಕುಸಿದಿದೆ. ಪರಿಣಾಮ ಅವರು ಚರಂಡಿಗೆ ಬಿದ್ದಿದ್ದಾರೆ.ಸುಮಾರು ಹತ್ತು ಅಡಿ…

Read More

Accident | ಚಾಲಕನ ನಿಯಂತ್ರಣ ತಪ್ಪಿ ಕಬ್ಬಿನ ಲಾರಿ ಪಲ್ಟಿ – ಓರ್ವನ ಸ್ಥಿತಿ ಗಂಭೀರ

Accident | ಚಾಲಕನ ನಿಯಂತ್ರಣ ತಪ್ಪಿ ಕಬ್ಬಿನ ಲಾರಿ ಪಲ್ಟಿ – ಓರ್ವನ ಸ್ಥಿತಿ ಗಂಭೀರ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹುಂಚ ಸಮೀಪದ ಆನೆಗದ್ದೆ ಗ್ರಾಮದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿರುವ ಘಟನೆ ನಡೆದಿದೆ. ಆನೆಗದ್ದೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಕಬ್ಬು ತುಂಬಿಕೊಂಡು ಹೋಗುತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿ ಉರುಳಿ ಬಿದ್ದಿದೆ.ಈ ಘಟನೆಯಲ್ಲಿ ಓರ್ವನಿಗೆ ಗಂಭೀರ ಗಾಯವಾಗಿದ್ದು ಹೊಸನಗರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಲಾರಿಯಲ್ಲಿ ಒಟ್ಟು ಆರು ಜನ ಪ್ರಯಾಣಿಸುತ್ತಿದ್ದು ಇವರಿಗೆ…

Read More

Hosanagara | ಬೈಕ್ ಮತ್ತು ನೀರಿನ ಟ್ಯಾಂಕರ್ ನಡುವೆ ಡಿಕ್ಕಿ – ಬೈಕ್ ಸವಾರ ಸಾವು

Hosanagara | ಬೈಕ್ ಮತ್ತು ನೀರಿನ ಟ್ಯಾಂಕರ್ ನಡುವೆ ಡಿಕ್ಕಿ – ಬೈಕ್ ಸವಾರ ಸಾವು ಬೈಕ್ ಸವಾರನ ಮೇಲೆ ಹರಿದ ಟ್ರ್ಯಾಕ್ಟರ್ ಹರಿದ ಪರಿಣಾಮ ಸವಾರ ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ. ನಗರದ ಬಳಿ ರಾಷ್ಟ್ರೀಯ ಹೆದ್ದಾರಿ 766 ಸಿ ಚಾಲುಕ್ಯ ಹೋಟೆಲ್ ಮುಂಭಾಗದಲ್ಲಿ ಮತ್ತಿಮನೆ ಬ್ರಾಹ್ಮಣ ತರುವೆಯಿಂದ ಹೊಸನಗರಕ್ಕೆ ಬರುತ್ತಿದ್ದ ಹರೀಶ್ (24) ಸಾವನ್ನಪ್ಪಿದ ಸವಾರ. ಹೆದ್ದಾರಿ ಕಾಮಗಾರಿ ನಡೆಸುತ್ತಿದ್ದ ನೀರಿನ ಟ್ಯಾಂಕ್‌ನ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದಿದ್ದ ಆತನ ಮೇಲೆ…

Read More

Accident | ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಎರಡು ಪ್ರತ್ಯೇಕ ಅಪಘಾತ ಪ್ರಕರಣ – ಮೂವರು ಸಾವು

ತೀರ್ಥಹಳ್ಳಿ : ಖಾಸಗಿ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ 16ನೇ ಮೈಲಿಕಲ್ಲಿನ ಮಂಡಗದ್ದೆ ಫಿಶ್ ಹೋಟೆಲ್ ಸಮೀಪ ಈ ಘಟನೆ ನಡೆದಿದೆ. ಬೈಕ್‌ನಲ್ಲಿದ್ದವರು ತೀರ್ಥಹಳ್ಳಿ ಕಡೆಯಿಂದ ಶಿವಮೊಗ್ಗ ಕಡೆಗೆ ಹೋಗುತ್ತಿದ್ದರು. ಶಿವಮೊಗ್ಗ ಕಡೆಯಿಂದ ತೀರ್ಥಹಳ್ಳಿಗೆ ಕಡೆಗೆ ಬರುತ್ತಿದ್ದ ಖಾಸಗಿ ಬಸ್‌ಗೆ (ಸಹ್ಯಾದ್ರಿ) ಮುಖಾಮುಖಿ ಡಿಕ್ಕಿಯಾದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ. ಇನ್ನೂ ಅಪಘಾತಕ್ಕೊಳಗಾದ ಬೈಕ್ ನಂಬರ್ ದಾವಣಗೆರೆ ರಿಜಿಸ್ಟ್ರೇಷನ್ ತೋರಿಸುತ್ತಿದ್ದು (KA 17 EC 2519) ಗಾಡಿಯ…

Read More