ಕ್ರೈಂ ಸುದ್ದಿ:
ಲೋಕಾಯುಕ್ತ ಅಧಿಕಾರಿ ಹೆಸರಿನಲ್ಲಿ ಮಹಿಳಾ ಅಧಿಕಾರಿಗೆ 1 ಲಕ್ಷ ರೂ ವಂಚನೆ – ಪ್ರಕರಣ ದಾಖಲು
ಲೋಕಾಯುಕ್ತ ಅಧಿಕಾರಿ ಹೆಸರಿನಲ್ಲಿ ಮಹಿಳಾ ಅಧಿಕಾರಿಗೆ 1 ಲಕ್ಷ ರೂ ವಂಚನೆ – ಪ್ರಕರಣ ದಾಖಲು ಶಿವಮೊಗ್ಗ(Shivamogga) : ಮಹಿಳಾ ಆಫೀಸರ್‌ಗೆ ಲೋಕಾಯುಕ್ತ ಅಧಿಕಾರಿ ಎಂದು ಹೇಳಿಕೊಂಡು ಕರೆ ಮಾಡಿ, ₹1 ಲಕ್ಷ ಹಣ ವಂಚನೆ ಮಾಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಆಹಾರ ಇಲಾಖೆಯಲ್ಲಿ ಶಿರಸ್ತೇದಾರ್ ಆಗಿರುವ ಮಹಿಳಾ ಅಧಿಕಾರಿಯೊಬ್ಬರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆಯಲ್ಲಿದ್ದರು. ಈ ಸಂದರ್ಭ ವಾಟ್ಸಪ್‌ನಲ್ಲಿ ಕರೆ ಮಾಡಿದ್ದ ವ್ಯಕ್ತಿಯೊಬ್ಬ, ತಾನು ಲೋಕಾಯುಕ್ತ ಕಚೇರಿಯಿಂದ ಕರೆ ಮಾಡುತ್ತಿರುವುದಾಗಿ ಪರಿಚಯಿಸಿಕೊಂಡಿದ್ದ. ‘ತಮ್ಮ ವಿರುದ್ಧ ದೂರು…
Sagara: ಪೊಲೀಸರ ಕ್ಷಿಪ್ರ ಕಾರ್ಯಾಚರಣೆ – ಇಬ್ಬರು ಅಂತರಾಜ್ಯ ಕಳ್ಳರ ಬಂಧನ
Sagara: ಪೊಲೀಸರಿಂದ ಇಬ್ಬರು ಅಂತರಾಜ್ಯ ಕಳ್ಳರ ಬಂಧನ ಸಾಗರ(sagara) ನಗರದ ಶಿಕ್ಷಕರ ಬಡಾವಣೆಯ ಮನೆಯೊಂದರ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಂತರರಾಜ್ಯ ಕಳ್ಳರನ್ನು ಬಂಧಿಸಿ, ಕಳುವಾಗಿದ್ದ ಮಾಲು, ಪ್ರಕರಣಕ್ಕೆ ಬಳಸಿದ್ದ ಕಾರು ಸಹಿತ 2.84 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಸಾಗರ ಟೌನ್ ಪೊಲೀಸರು(sagara town police) ವಶಕ್ಕೆ ಪಡೆದಿದ್ದಾರೆ. ಶಿಗ್ಗಾಂವ್(shiggav) ತಾಲೂಕಿನ ಸಾವದಗಾರ್ ಓಣಿಯಲ್ಲಿ ವಾಸವಿರುವ ಚಾಲಕ ಅಮೀರ್ ಖಾನ್ (42) ಹಾಗೂ ಬೆಳಗಾವಿಯ ಉಡಚಗಾವ್ ನಿವಾಸಿ ವಿಶಾಲ್ ನರಸಿಂಗ ಶೇರ್ಖಾನೆ (52)ನನ್ನು ಪೇಟೆ ಠಾಣೆ…
Accident | ಖಾಸಗಿ ಶಾಲಾ ಬಸ್ ಪಲ್ಟಿ – ವಿದ್ಯಾರ್ಥಿಗಳಿಗೆ ಗಂಭೀರ ಗಾಯ!
ಖಾಸಗಿ ಶಾಲಾ ಬಸ್ ಪಲ್ಟಿ – ವಿದ್ಯಾರ್ಥಿಗಳಿಗೆ ಗಂಭೀರ ಗಾಯ! ಓವರ್ ಟೇಕ್ ಮಾಡುವ ವೇಳೆ ಕಾರು ಅಡ್ಡಾದಿಡ್ಡಿ ಚಲಿಸಿದ ಪರಿಣಾಮ ಖಾಸಗಿ ಶಾಲೆ ಬಸ್ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿ ವಿದ್ಯಾರ್ಥಿಗಳು ಗಾಯಗೊಂಡಿರುವ ದುರ್ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಬೈಪಾಸ್ ರಸ್ತೆಯಲ್ಲಿ ನಡೆದಿದೆ. ಈ ವೇಳೆ ಕಾರಿನ ಚಾಲಕ ಓವರ್ ಟೇಕ್ ಮಾಡುವ ಭರದಲ್ಲಿ ಅಡ್ಡಾದಿಡ್ಡಿ ಚಲಿಸಿದ್ದಾನೆ. ಇದರಿಂದ ಗೊಂದಲಕ್ಕೀಡಾಗಿ ಖಾಸಗಿ ಶಾಲಾ ಬಸ್ ಚಾಲಕ ನಿಯಂತ್ರಣ ಕಳೆದುಕೊಂಡಿದ್ದಾನೆ. ಮುಗ್ಗರಿಸಿ ಬಿದ್ದ ಬಸ್‌ನೊಳಗೆ ಚಿಕ್ಕಮಕ್ಕಳು ತಲೆ ಕಾಲುಗಳಿಗೆ…
ಸ್ನೇಹ ಅಂತ ಒಳಗೊಳಗೆ ಸ್ಕೆಚ್ಚು ಹಾಕ್ತಾರೆ | ಸ್ನೇಹಿತರಿಂದಲೆ ಯುವಕನ ಕತ್ತು ಕೊಯ್ದು ಬರ್ಬರ ಹತ್ಯೆ
ಸ್ನೇಹ ಅಂತ ಒಳಗೊಳಗೆ ಸ್ಕೆಚ್ಚು ಹಾಕ್ತಾರೆ – ಸ್ನೇಹಿತರಿಂದಲೆ ಯುವಕನ ಕತ್ತು ಕೊಯ್ದು ಬರ್ಬರ ಹತ್ಯೆ ರಾತ್ರೋರಾತ್ರಿ ಕಾರಿನಲ್ಲಿ ಕರೆದೊಯ್ದ ಮೂವರು ಯುವಕರು ತಮ್ಮ ಸ್ನೇಹಿತನ ಕತ್ತು ಕೊಯ್ದು ಕೊಲೆ (Murder) ಮಾಡಿರುವ ಘಟನೆ ತಾಲೂಕಿನ ಹೊಸೂರು ಸಮೀಪ ನಡೆದಿದೆ. ಬೆಂಗಳೂರಿಂದ ಅಜ್ಜಿಯ ಮನೆಗೆ ಬಂದಿದ್ದ ಯುವಕನನ್ನು ಕರೆ ಮಾಡಿ ಕರೆಸಿಕೊಂಡ ಸ್ನೇಹಿತರು ಕತ್ತು ಕೊಯ್ದು ಮರ್ಡರ್ ಮಾಡಿರುವ ಘಟನೆ ಕಡೂರಿನ ಮಾಡಾಳು ಹೊಸೂರು ಸಮೀಪ ನಡೆದಿದೆ. ಡ್ರೈವರ್ ಕೆಲಸ ಮಾಡುತ್ತಿದ್ದ ದರ್ಶನ್ ಕೊಲೆಯಾದ ಯುವಕ. ಕಳೆದ…
Ripponpete | ಬೈಕ್ ಹಾಗೂ ಕಾರಿನ ನಡುವೆ ಅಪಘಾತ – ಬೈಕ್ ಗುದ್ದಿದ ರಭಸಕ್ಕೆ ಕಾರಿನ ಮುಂಭಾಗ ಜಖಂ..!!
Ripponpete | ಬೈಕ್ ಹಾಗೂ ಕಾರಿನ ನಡುವೆ ಅಪಘಾತ – ಬೈಕ್ ಗುದ್ದಿದ ರಭಸಕ್ಕೆ ಕಾರಿನ ಮುಂಭಾಗ ಜಖಂ..!! ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಕೋಡೂರಿನಲ್ಲಿ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿರುವ ಘಟನೆ ನಡೆದಿದೆ. ಕೋಡೂರು ಮೂಲದವರ ಕಿಯಾ ಕಾರು ಹಾಗೂ ಹೀರೋ ಹೋಂಡ ಡಿಲಕ್ಸ್ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ ಘಟನೆಯಲ್ಲಿ ಯಾರಿಗೂ ಗಂಭೀರ ಗಾಯವಾಗಿರುವುದಿಲ್ಲ… ಬೈಕ್ ಹಾಗೂ ಕಾರಿನ ನಡುವೆ ನಡೆದ ಅಪಘಾತದಲ್ಲಿ ಕಿಯಾ ಕಾರಿನ ಮುಂಭಾಗ…
ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ – ಸಾವಿನ ಬಗ್ಗೆ ಕುಟುಂಬಸ್ಥರ ಅನುಮಾನ | Crime News
ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ – ಸಾವಿನ ಬಗ್ಗೆ ಕುಟುಂಬಸ್ಥರ ಅನುಮಾನ ಶಿವಮೊಗ್ಗದ ಮಲವಗೊಪ್ಪದ ಮನೆಯೊಂದರಲ್ಲಿ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮನೆಯಲ್ಲಿ ಫ್ಯಾನ್ ಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದ್ದು ಈ ಸಾವಿನ ಬಗ್ಗೆ ಆತನ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಜಿತನ್ ಕುಮಾರ್(28) ಮೃತಪಟ್ಟ ದುರ್ಧೈವಿಯಾಗಿದ್ದಾರೆ. ಎರಡು ವರೆವರ್ಷದ ಹಿಂದೆ ಗಾಡಿಕೊಪ್ಪದ ಮಂಜುಳ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದ…
ಉದ್ಯೋಗ ಕೊಡಿಸುವುದಾಗಿ ನಂಬಿಸಿ 89 ಲಕ್ಷ ರೂ. ವಂಚನೆ: ಪ್ರಕರಣ ದಾಖಲು
ಉದ್ಯೋಗ ಕೊಡಿಸುವುದಾಗಿ ನಂಬಿಸಿ 89 ಲಕ್ಷ ರೂ. ವಂಚನೆ: ಪ್ರಕರಣ ದಾಖಲು ಪ್ರತಿಷ್ಠಿತ ಮಲ್ಟಿನ್ಯಾಷನಲ್ ಕಂಪನಿಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಶಿವಮೊಗ್ಗದ ಹರಿಗೆಯ ಯುವಕ ಮತ್ತು ಆತನ ಸ್ನೇಹಿತರಿಗೆ 89 ಲಕ್ಷ ರೂ. ಹಣ ವಂಚಿಸಿರುವ ಘಟನೆ ನಡೆದಿದೆ. ಹರಿಗೆಯ ಯುವಕನೊಬ್ಬನಿಗೆ ಬೆಂಗಳೂರಿನಲ್ಲಿರುವ ಸ್ನೇಹಿತರೊಬ್ಬರ ಮೂಲಕ ಒರಿಸ್ಸಾ ಮೂಲದ ಸೂರ್ಯಂಶ್ ಅಲಿಯಾಸ್ ಕಾಲಿರಾತ್ ಎಂಬಾತನ ಪರಿಚಯವಾಗಿತ್ತು. ಆತ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ತಿಳಿಸಿದ್ದ. ರಾಕೇಶ್ ಶಿವಮೊಗ್ಗದಲ್ಲಿರುವ ತನ್ನ ಸ್ನೇಹಿತರಿಗೆ ಈ ವಿಚಾರ ತಿಳಿಸಿದ್ದ ಎಂದು ದೂರಿನಲ್ಲಿ…
Accident | ಚಲಿಸುತ್ತಿದ್ದ ಬೈಕ್ ಸವಾರರ ಮೇಲೆ ಬಿದ್ದ ಬೃಹತ್ ಮರದ ಕೊಂಬೆ; ಮೂವರಿಗೆ ಗಾಯ
ಚಲಿಸುತ್ತಿದ್ದ ಬೈಕ್ ಸವಾರರ ಮೇಲೆ ಬಿದ್ದ ಬೃಹತ್ ಮರದ ಕೊಂಬೆ; ಮೂವರಿಗೆ ಗಾಯ ಚಲಿಸುತ್ತಿದ್ದ ಬೈಕ್ ಸವಾರರ ಮೇಲೆ ಹೆದ್ದಾರಿ ಪಕ್ಕದ ಬೃಹತ್ ಮರದ ಕೊಂಬೆ ಬಿದ್ದ ಘಟನೆ ಶಿವಮೊಗ್ಗ ಜಿಲ್ಲೆಯ ಗೊಂದಿ ಚಟ್ನಹಳ್ಳಿ ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ಬೈಕ್ ಓಡಿಸುತ್ತಿದ್ದ ಮಾವ ಮಹಮ್ಮದ್ ಶಫಿ, ಬೈಕ್ ಹಿಂಬದಿಯಲ್ಲಿದ್ದ ಸೊಸೆ ಮತ್ತು ಮೊಮ್ಮಗಳಿಗೆ ಗಾಯವಾಗಿದ್ದು, ಕೂಡಲೇ ಗಾಯಾಳುಗಳನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಬೃಹತ್ ಮರದ…
Shikaripura | ಹೋರಿ ಹಬ್ಬ ನೋಡುತ್ತಿದ್ದ ವೇಳೆ ಗೂಳಿ ತಿವಿದು ವಿದ್ಯಾರ್ಥಿ ಸಾವು!
Shikaripura | ಹೋರಿಹಬ್ಬ ನೋಡುತ್ತಿದ್ದ ವೇಳೆ ಗೂಳಿ ತಿವಿದು ವಿದ್ಯಾರ್ಥಿ ಸಾವು! ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿ ತಿವಿದ ಪರಿಣಾಮ ಯುವಕನೊಬ್ಬ ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಕಲ್ಮನೆ ಗ್ರಾಮದಲ್ಲಿ ಸೋಮವಾರ ನಡೆದಿದೆ. ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಹೊಸಮಳಲಿ ಗ್ರಾಮದ ನಿವಾಸಿ ಪುನೀತ್ ಆಚಾರ್ (19) ಮೃತಪಟ್ಟ ಯುವಕ. ಪುನೀತ್ ಆಚಾರ್ ಶಿಕಾರಿಪುರ ಪಟ್ಟಣದ ವಿದ್ಯಾರ್ಥಿ ನಿಲಯದಲ್ಲಿ ನೆಲೆಸಿದ್ದ. ಐಟಿಐ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ. ಸಮೀಪದ ಕಲ್ಮನೆ ಗ್ರಾಮದಲ್ಲಿ ನಡೆದ ಹೋರಿಹಬ್ಬವನ್ನು…
Hosanagara | ರೀಲ್ಸ್ ರಾಣಿ ಸನ್ನಿಧಿಯ ಲವ್ , ಮ್ಯಾರೇಜ್ ದೋಖಾ – ಮಲೆನಾಡಿನ ಯುವಕರು ನೋಡಲೇಬೇಕಾದ ಸ್ಟೋರಿ ಇದು
Hosanagara | ರೀಲ್ಸ್ ರಾಣಿ ಸನ್ನಿಧಿಯ ಲವ್ , ಮ್ಯಾರೇಜ್ ದೋಖಾ – ಮಲೆನಾಡಿನ ಯುವಕರು ನೋಡಲೇಬೇಕಾದ ಸ್ಟೋರಿ ಇದು ಮಲೆನಾಡಿನಲ್ಲೊಂದು ಲವ್, ಮ್ಯಾರೇಜ್ ಮೋಸ ಪ್ರಕರಣವೊಂದು ಮತ್ತೆ ಮುನ್ನೆಲೆಗೆ ಬಂದಿದೆ. ಆದರೆ ವಿಚಿತ್ರವೇನೆಂದರೇ ಹಲವಾರು ಪ್ರಕರಣಗಳಲ್ಲಿ ಯುವಕ ಯುವತಿಗೆ ಮೋಸ ಲವ್ ,ಮ್ಯಾರೇಜ್ ದೋಖಾ ಮಾಮೂಲಿ ಆದರೆ ಈ ಪ್ರಕರಣ ಸ್ವಲ್ಪ ತದ್ವಿರುದ್ದವಾಗಿದೆ. ಘಟನೆಯ ಹಿನ್ನಲೆ : ಶಿವಮೊಗ್ಗದ ಬೊಮ್ಮನ್ ಕಟ್ಟೆಯ ನಿವಾಸಿ ಸಂಕೇತ್ ಎಂಬ ಯುವಕನಿಗೆ ಹೊಸನಗರ ತಾಲೂಕಿನ ಹೆಂಡೆಗದ್ದೆ ಗ್ರಾಮದ ನಿವಾಸಿ ಸನ್ನಿಧಿ…