ಸ್ಮಶಾನದಲ್ಲಿ ಕುಡುಕ ಸ್ನೇಹಿತರಿಬ್ಬರ ನಡುವೆ ಕಿರಿಕ್ – ಓರ್ವನ ಕೊಲೆಯಲ್ಲಿ ಅಂತ್ಯ | Crime News
ಸ್ಮಶಾನದಲ್ಲಿ ಮದ್ಯ ಸೇವಿಸುತ್ತಿದ್ದಾಗ ಇಬ್ಬರು ಸ್ನೇಹಿತರ ನಡುವೆ ಗಲಾಟೆಯಾಗಿ ಕೊಲೆಯಿಂದ ಅಂತ್ಯವಾದ ಘಟನೆ ಶಿವಮೊಗ್ಗ ಜಿಲ್ಲೆಯ ಆಯನೂರು ಗೇಟ್ ಸಮೀಪದ ಸ್ಮಶಾನದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಜೆ.ಪಿ.ನಗರದ ನಿವಾಸಿ ರಾಜುನಾಯ್ಕ ಎನ್ನಲಾಗಿದೆ.
ರಾಜುನಾಯ್ಕ ತನ್ನ ಸ್ನೇಹಿತ ವಿಕ್ರಮ್ ಜೊತೆಗೆ ಕಳೆದ ರಾತ್ರಿ ಸ್ಮಶಾನದಲ್ಲಿ ಮದ್ಯ ಸೇವಿಸುತ್ತಿದ್ದ. ಈ ಸಂದರ್ಭ ಯಾವುದೋ ವಿಚಾರವಾಗಿ ಇಬ್ಬರ ನಡುವೆ ಚಿಕ್ಕ ಗಲಾಟೆಯಾಗಿದೆ.
ನಂತರ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತೆರಳಿದೆ. ಈ ವೇಳೆ ರಾಜು ಅವರನ್ನು ಚಾಕುವಿನಿಂದ ಚುಚ್ಚಿ, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಹೇಳಿದ್ದಾರೆ.
ವೈಯಕ್ತಿಕ ಕಾರಣಕ್ಕೆ ಇಬ್ಬರ ಮಧ್ಯೆ ವೈಮನಸು ಉಂಟಾಗಿ ಕೊಲೆಯಾಗಿದೆ. ಸದ್ಯ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ವಿಕ್ರಮ್‌ನನ್ನು ವಶಕ್ಕೆ ಪಡೆಯಲಾಗಿದೆ.