Ripponpete | ನಾಗರಹಳ್ಳಿಯಲ್ಲಿ ಕಾಡುಕೋಣಗಳ ಮಾರಣಹೋಮ – ಮಲೆನಾಡಿನಲ್ಲಿ ಶಬ್ದ ಮಾಡುತ್ತಿರುವ ಕಳ್ಳ ಬಂದೂಕುಗಳು

Ripponpete | ನಾಗರಹಳ್ಳಿಯಲ್ಲಿ ಕಾಡುಕೋಣಗಳ ಮಾರಣಹೋಮ – ಮಲೆನಾಡಿನಲ್ಲಿ ಶಬ್ದ ಮಾಡುತ್ತಿರುವ ಕಳ್ಳ ಬಂದೂಕುಗಳು 

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ವ್ಯಾಪ್ತಿಯ ನಾಗರಹಳ್ಳಿ ಗ್ರಾಮದಲ್ಲಿ ಕಾಡು ಕೋಣಗಳ ಮಾರಣಹೋಮ ನಡೆದಿರುವ ಬಗ್ಗೆ ವರದಿಯಾಗಿದೆ.


ಹುಂ‍ಅ ವ್ಯಾಪ್ತಿಯ ನಾಗರಹಳ್ಳಿ ವ್ಯಾಪ್ತಿಯಲ್ಲಿ ಕೆಲವು ಕಿಡಿಗೇಡಿಗಳು ನಾಲ್ಕಕ್ಕೂ ಹೆಚ್ಚು ಕಾಡುಕೋಣಗಳನ್ನು ಅಕ್ರಮ ಬಂದೂಕು ಬಳಸಿ ಹತ್ಯೆಗೈದಿದ್ದಾರೆ,ಈ ಭಾಗದಲ್ಲಿ ಹತ್ತಕ್ಕೂ ಹೆಚ್ಚು ಕಾಡುಕೋಣಗಳು ಕೆಲವೊಮ್ಮೆ ಪ್ರತ್ಯಕ್ಷಗೊಳ್ಳುತಿದ್ದವು ಆದರೆ ಈಗ ಗುಂಪಿನಲ್ಲಿ ನಾಲ್ಕೈದು ಮಾತ್ರ ಇದೆ ಕಾಡುಕೋಣಗಳ ಮಾರಣಹೋಮವೇ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು.

ಈ ಬಗ್ಗೆ ಮಾಹಿತಿ ತಿಳಿದ ಪೋಸ್ಟ್ ಮ್ಯಾನ್ ನ್ಯೂಸ್ ತಂಡ ಹಾಗೂ ಮಾದ್ಯಮ ತಂಡ ಸ್ಥಳಕ್ಕೆ ತೆರಳಿ ಕಾಡು ಪ್ರದೇಶಗಳಲ್ಲಿ ಹುಡುಕಾಟ ನಡೆಸಿದಾಗ ಕಾಡುಕೋಣದ ಕಳೇಬರಗಳು ದೊರಕಿದ್ದು ಕಾಡುಕೋಣಗಳ ಮಾರಣಹೋಮ ನಡೆದಿರುವುದು ಖಚಿತವಾದ ಹಿನ್ನಲೆಯಲ್ಲಿ ಈ ಬಗ್ಗೆ ಅರಣ್ಯ ಇಲಾಖೆಯ ಡಿಸಿಎಫ಼್ ಸಂತೋಷ್ ಕೆಂಚಪ್ಪಣ್ಣನವರ್ , RFO ರಾಘವೇಂದ್ರ ರವರಿಗೆ ಮಾಹಿತಿ ತಿಳಿಸಲಾಯಿತು.


ಕೂಡಲೇ ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿ ಸಂತೋಷ್ ಕೆಂಚಣ್ಣನವರ್ ಹಾಗೂ Rfo ರಾಘವೇಂದ್ರ ಸ್ಥಳ ಪರಿಶೀಲನೆ ನಡೆಸಿ ಕಾಡುಕೋಣದ ಕಳೇಬರಗಳನ್ನು ಪರೀಕ್ಷೆಗಾಗಿ ಲ್ಯಾಬ್ ಗೆ ಕಳುಹಿಸಿಕೊಟ್ಟಿದ್ದಾರೆ. ನಂತರದಲ್ಲಿ ಇನ್ನೂ ಹಲವು ಕಾಡುಕೋಣಗಳ ಕಳೇಬರಕ್ಕೆ ಹುಡುಕಾಟ ನಡೆಸಲಾಗಿದ್ದು ನಾಳೆಯೂ ಹುಡುಕಾಟ ಮುಂದುವರೆಯಲಿದೆ.

ಆರೋಪಿಗಳು ಕಾಡುಕೋಣಗಳನ್ನು ಮಾಂಸಕ್ಕಾಗಿಯೋ ಅಥವಾ ಬೆಳೆ ನಾಶ ಪಡಿಸಿದ್ದಕ್ಕಾಗಿ ಹತ್ಯೆ ಮಾಡಿದ್ದಾರಾ ಎನ್ನುವುದು ತನಿಖೆಯಲ್ಲಿ ತಿಳಿದುಬರಬೇಕಾಗಿದೆ. ಕಾಡು ಕೋಣಗಳ ಹತ್ಯೆಗೆ ಕಳ್ಳಕೋವಿಗಳನ್ನು ಬಳಸಿದ್ದಾರೆ ಎನ್ನಲಾಗುತ್ತಿದೆ.

ಸಂರಕ್ಷಿತ ಅಭಯಾರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಬೇಟೆಗಾರರು ಈಗಲೂ ಸಕ್ರಿಯವಾಗಿದ್ದಾರೆ ಎಂಬುದು ಪದೇ ಪದೇ ಸ್ವಷ್ಟವಾಗುತ್ತಿದೆ. ಆದರೆ, ಇದರ ಬಗ್ಗೆ ಕಠಿಣ ನಿಲುವು ತೋರಲು ಅರಣ್ಯ ಇಲಾಖೆಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.

ಪ್ರಭಾವಿ ವ್ಯಕ್ತಿಗಳು ಭಾಗಿಯಾಗಿದ್ದಾರೆ ಎನ್ನಲಾಗುತ್ತಿರುವ ಈ ಪ್ರಕರಣ ಲೋಕಸಭಾ ಚುನಾವಣೆಯ ಪ್ರಾರಂಭವಾದಗಿನಿಂದ ನಡೆಯುತಿದ್ದು ತಮ್ಮ ಪ್ರಭಾವದ ಮೂಲಕ ಮುಚ್ಚಿಹಾಕುವ ಯತ್ನ ನಡೆಸಿದ್ದಾರೆ ಎನ್ನಲಾಗುತ್ತಿದೆ.ಸುಮಾರು ನಾಲ್ಕಕ್ಕೂ ಹೆಚ್ಚು ಕಾಡುಕೋಣಗಳನ್ನು ಹತ್ಯೆಗೈಯಲಾಗಿದೆ.

Leave a Reply

Your email address will not be published. Required fields are marked *