ಜಿಲ್ಲಾ ಸುದ್ದಿ:
ರಸ್ತೆ ಸುರಕ್ಷತೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮುಖ್ಯ : ಪಿಎಸ್ಐ ರಾಜುರೆಡ್ಡಿ
ರಸ್ತೆ ಸುರಕ್ಷತೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮುಖ್ಯ : ಪಿಎಸ್ಐ ರಾಜುರೆಡ್ಡಿ ರಿಪ್ಪನ್ ಪೇಟೆ : ಪ್ರತಿಯೊಬ್ಬ ವಿದ್ಯಾರ್ಥಿ ಹಾಗೂ ಯುವ ಸಮೂಹ ರಸ್ತೆ ಸುರಕ್ಷತೆಯ ಬಗ್ಗೆ ಅರಿವನ್ನು ಹೊಂದಿರಬೇಕು ಆಗ ಮಾತ್ರ ಅಪಘಾತಗಳಿಂದ ಉಂಟಾಗುವ ಸಾವು ನೋವುಗಳಿಂದ ಮತ್ತು ಅಪಾಯದಿಂದ ಪಾರಾಗಬಹುದು ಎಂದು ರಿಪ್ಪನ್ ಪೇಟೆಯ ನೂತನ ಪಿಎಸ್ಐ ರಾಜುರೆಡ್ಡಿ ಹೇಳಿದರು. ಪಟ್ಟಣದ ರೋಟರಿ ಕ್ಲಬ್ ಹಾಗೂ ಪೊಲೀಸ್ ಇಲಾಖೆ ವತಿಯಿಂದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ರಸ್ತೆ…
ಲೈಂಗಿಕ ಕಿರುಕುಳದ ಆರೋಪ : ಮೆಗ್ಗಾನ್ ಭೋಧನಾ ಆಸ್ಪತ್ರೆಯ ಸಹ ಪ್ರಾಧ್ಯಾಪಕನನ್ನು ಬಂಧಿಸಿ, ಕ್ರಮ ಜರುಗಿಸಲು ಆಗ್ರಹ
ಲೈಂಗಿಕ ಕಿರುಕುಳದ ಆರೋಪ: ಸಹ ಪ್ರಾಧ್ಯಾಪಕನನ್ನು ಬಂಧಿಸಿ, ಕ್ರಮ ಜರುಗಿಸಲು ಆಗ್ರಹ ಶಿವಮೊಗ್ಗ: ನಗರದ ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ|| ಅಶ್ವಿನ್ ಹೆಬ್ಬಾರ್ ವೈದ್ಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಿ ಕ್ರಮ ಜರುಗಿಸಬೇಕೆಂದು ಪೀಪಲ್ ಲಾಯರ್ಸ್ ಗೀಲ್ಡ್‌ನ ಮುಖ್ಯಸ್ಥ ಕೆ.ಪಿ. ಶ್ರೀಪಾಲ್ ಆಗ್ರಹಿಸಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣ ದಾಖಲಾಗುತ್ತಿದ್ದಂತೆ ಡಾ|| ಅಶ್ವಿನ್ ಹೆಬ್ಬಾರ್ ನಾಪತ್ತೆಯಾಗಿದ್ದಾರೆ. ಆತನನ್ನು ಹುಡುಕಿ ಬಂಧಿಸಬೇಕು. ಪೊಲೀಸರು ಕೂಡ ಸುಮ್ಮನಿದ್ದಾರೆ. ಜಿಲ್ಲಾಧಿಕಾರಿ ಮತ್ತು…
ಭಾರಿ ಮಳೆಯ ಹಿನ್ನಲೆ – ಹೊಸನಗರ ತಾಲೂಕಿನಾದ್ಯಂತ ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಣೆ
ಭಾರಿ ಮಳೆಯ ಹಿನ್ನಲೆ – ಹೊಸನಗರ ತಾಲೂಕಿನಾದ್ಯಂತ ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಣೆ ಹೊಸನಗರ ತಾಲ್ಲೂಕಿನಾದ್ಯಂತ ಭಾರಿ ಮಳೆಯಾಗುತ್ತಿರುವ ಇಂದು (ಜೂ.25) ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ. ಹೊಸನಗರ ತಾಲ್ಲೂಕಿನಲ್ಲಿ ತೀವ್ರ ಮಳೆಯಾಗುತ್ತಿದೆ, ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆಯ ಕಾರಣ ಮುಂಜಾಗ್ರತಾ ಕ್ರಮವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹೊಸನಗರ ತಾಲೂಕಿನಾದ್ಯಂತ ಜೂ. 25 ರಂದು ಎಲ್ಲಾ ಅಂಗನವಾಡಿ ಕೇಂದ್ರಗಳು, ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಹಾಗೂ ಈ ದಿನದಂದು ರಜೆ ಘೋಷಿಸಲಾಗಿದೆ…
ಭಾರಿ ಮಳೆಗೆ ಹೆದ್ದಾರಿ ಮೇಲೆ ಬಿದ್ದ ಮರ | ಸಂಚಾರ ವ್ಯತ್ಯಯ , ತಪ್ಪಿದ್ ಭಾರಿ ಅನಾಹುತ್
ಭಾರಿ ಮಳೆಗೆ ಹೆದ್ದಾರಿ ಮೇಲೆ ಬಿದ್ದ ಮರ | ಸಂಚಾರ ವ್ಯತ್ಯಯ , ತಪ್ಪಿದ್ ಭಾರಿ ಅನಾಹುತ್ ರಿಪ್ಪನ್‌ಪೇಟೆ : ಪಟ್ಟಣದ ಸಾಗರ ರಸ್ತೆಯಲ್ಲಿ ರಸ್ತೆಗೆ ಅಡ್ಡಲಾಗಿ ಬೃಹತ್ ಮರವೊಂದು ಬಿದ್ದು ಸಂಚಾರ ವ್ಯತ್ಯಯವಾಗಿದೆ.ಮರ ಬಿದ್ದ ಪಕ್ಕದಲ್ಲಿಯೇ ಪಿಕಪ್ ವಾಹನವೊಂದು ನಿಂತಿದ್ದು ಕೂದಲೆಳೆ ಅಂತರದಲ್ಲಿ ಪಾರಾಗಿದ್ದು ಭಾರಿ ಅನಾಹುತವೊಂದು ತಪ್ಪಿದೆ. ಸಾಗರ ರಸ್ತೆಯ ಮುಸ್ಲಿಂ ಖಬರ್ ಸ್ಥಾನ್ ಮುಂಭಾಗದಲ್ಲಿ ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು ಸಂಚಾರ ವ್ಯತ್ಯಯವಾಗಿದೆ.ಈ ಸಂಧರ್ಭದಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಪಿಕಪ್ ವಾಹನದ…
RIPPONPETE | ಹಾರೋಹಿತ್ಲು ಗ್ರಾಮದಲ್ಲಿ ಕಾಣಿಸಿಕೊಂಡ ಅಳಿವಿನಂಚಿನಲ್ಲಿರುವ ಹಾರುವ ಓತಿ
RIPPONPETE | ಹಾರೋಹಿತ್ಲು ಗ್ರಾಮದಲ್ಲಿ ಕಾಣಿಸಿಕೊಂಡ ಅಳಿವಿನಂಚಿನಲ್ಲಿರುವ ಹಾರುವ ಓತಿ ರಿಪ್ಪನ್ ಪೇಟೆ : ಅಳಿವಿನಂಚಿನಲ್ಲಿರುವ ಅಪರೂಪದ ಜೀವಿ ಹಾರುವ ಓತಿ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಹಾರೋಹಿತ್ತಲು ಗ್ರಾಮದಲ್ಲಿ ಪ್ರತ್ಯಕ್ಷವಾಗಿರುವ ಘಟನೆ ನಡೆದಿದೆ. ಶಿಕ್ಷಕ ಮಾಲತೇಶ್ ಅವರ ಮನೆ ಸಮೀಪ ಕಾಣಿಸಿಕೊಂಡ ಓತಿ ಕೆಲಕಾಲ ಮಕ್ಕಳು ಮತ್ತು ಹಿರಿಯರಿಗೆ ಆಕರ್ಷಣೀಯವಾಗಿದ್ದು, ತನ್ನ ವಿಶಿಷ್ಟ ಸೌಂದರ್ಯದ ದರ್ಶನ ನೀಡಿತು. ಜನರ ಸದ್ದು ಗದ್ದಲ ಹೆಚ್ಚಾಗುತ್ತಿದ್ದಂತೆ ತನಗೆ ಪ್ರಾಶಸ್ಯವಾದ ಅಡವಿಯನ್ನು ಸೇರಿಕೊಂಡಿತು. ಸರಿಸೃಪಗಳ ಪ್ರಭೇದಕ್ಕೆ ಸೇರಿರುವ ಈ…
RIPPONPETE |ಗ್ರಾಮ ಒನ್ ಕೇಂದ್ರದಲ್ಲಿ ಸೇವೆಗಳಿಗೆ ಹೆಚ್ಚುವರಿ ಹಣ ವಸೂಲಿ – ಕಂದಾಯ ಇಲಾಖೆ ಅಧಿಕಾರಿಗಳ ಭೇಟಿ, ಸೂಕ್ತ ಕ್ರಮದ ಭರವಸೆ
ಗ್ರಾಮ ಒನ್ ಕೇಂದ್ರದಲ್ಲಿ ಸೇವೆಗಳಿಗೆ ಹೆಚ್ಚುವರಿ ಹಣ ವಸೂಲಿ – ಕಂದಾಯ ಇಲಾಖೆ ಅಧಿಕಾರಿಗಳ ಭೇಟಿ, ಸೂಕ್ತ ಕ್ರಮದ ಭರವಸೆ ರಿಪ್ಪನ್ ಪೇಟೆ : ಸಮಾಜದ ದುರ್ಬಲ ವರ್ಗದವರಿಗೆ ಸರ್ಕಾರಿ ಸೇವೆಗಳನ್ನು ಸುಲಭವಾಗಿ ತಲುಪಿಸುವ ಉದ್ದೇಶದಿಂದ ಸ್ಥಾಪಿಸಲಾಗಿರುವ ಗ್ರಾಮ ಒನ್ ಕೇಂದ್ರಗಳು ಕೆಲವೆಡೆ ಭ್ರಷ್ಟಾಚಾರದ ಕೂಪಗಳಾಗಿ ಮಾರ್ಪಡುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಇಂತಹ ಆಘಾತಕಾರಿ ಘಟನೆಯೊಂದು ರಿಪ್ಪನ್ ಪೇಟೆ ಪಟ್ಟಣದ ಸಾಗರ ರಸ್ತೆಯ ಗ್ರಾಮ ಒನ್ ಕೇಂದ್ರದಲ್ಲಿ ಬೆಳಕಿಗೆ ಬಂದಿದ್ದು ಈ ಬಗ್ಗೆ ಪತ್ರಕರ್ತ ರಫ಼ಿ ರಿಪ್ಪನ್ ಪೇಟೆ…
RIPPONPETE | ರಸಗೊಬ್ಬರ ದರ ಹೆಚ್ಚಳ ವಿರೋಧಿಸಿ ಯುವ ಕಾಂಗ್ರೆಸ್ ವತಿಯಿಂದ ರಸ್ತೆ ತಡೆ , ಪ್ರತಿಭಟನೆ
RIPPONPETE | ರಸಗೊಬ್ಬರ ದರ ಹೆಚ್ಚಳ ವಿರೋಧಿಸಿ ಯುವ ಕಾಂಗ್ರೆಸ್ ವತಿಯಿಂದ ರಸ್ತೆ ತಡೆ , ಪ್ರತಿಭಟನೆ ರಿಪ್ಪನ್ ಪೇಟೆ : ಕೇಂದ್ರದ ಬಿಜೆಪಿ ಸರ್ಕಾರ ರಸಗೊಬ್ಬರ ಬೆಲೆ ಏರಿಸಿರುವುದನ್ನು ವಿರೋಧಿಸಿ ಇಂದು ರಿಪ್ಪನ್‌ಪೇಟೆಯ ವಿನಾಯಕ ವೃತ್ತದಲ್ಲಿ ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ನೇತೃತ್ವದಲ್ಲಿ ರಸ್ತೆ ತಡೆ ನಡೆಸುವ ಮೂಲಕ ಬೃಹತ್ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯಲ್ಲಿ ಹೊಸನಗರ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ಚಂದ್ರಮೌಳಿ ಮಾತನಾಡಿ, ಕೇಂದ್ರದ ಜನವಿರೋಧಿ ನೀತಿಯಿಂದಾಗಿ ಗೊಬ್ಬರ, ಗ್ಯಾಸ್ ಇಂಧನ…
ಹೆಚ್ಚು ಮಕ್ಕಳ ಸಾಗಾಟ – 17 ಶಾಲಾ ಬಸ್‌ಗಳ ವಿರುದ್ದ ಕೇಸು
ಹೆಚ್ಚು ಮಕ್ಕಳ ಸಾಗಾಟ – 17 ಶಾಲಾ ಬಸ್‌ಗಳ ವಿರುದ್ದ ಕೇಸು ಶಿವಮೊಗ್ಗ: ಶಾಲಾ ಮಕ್ಕಳ ಸುರಕ್ಷತೆಯ ದೃಷ್ಠಿಯಿಂದ ಸೋಮವಾರ ಬೆಳಿಗ್ಗೆ ನಗರ ಸಂಚಾರಿ ಪೊಲೀಸರು ವಾಹನ ಸವಾರರಿಗೆ ಜಾಗೃತಿ ಮೂಡಿಸಿದ್ದಾರೆ. ಡ್ರಿಂಕ್ ಅಂಡ್ ಡ್ರೈವ್, ಹೆಚ್ಚಿನ ಮಕ್ಕಳನ್ನ ಕರೆದುಕೊಂಡು ಹೋಗುವ ಪ್ರಕರಣ, ಹಾಗೂ ಎಫ್ ಸಿ ಆಗದ ಪ್ರಕರಣಗಳು ಬೆಳಕಿಗೆ ಬಂದಿದೆ. ಪೂರ್ವ ಮತ್ತು ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಶಿವಮೊಗ್ಗ ನಗರದದಾದ್ಯಂತ ವಿವಿಧ ಸ್ಥಳಗಳಲ್ಲಿ ಹಾಗೂ ಪ್ರಮುಖ ವೃತ್ತಗಳಲ್ಲಿ…
ಜೇನಿ ಗ್ರಾಪಂ ವ್ಯಾಪ್ತಿಯಲ್ಲಿ ಮಳೆಗೆ ಮನೆ ಕುಸಿತ – ಸ್ಥಳಕ್ಕೆ ತಹಶೀಲ್ದಾರ್ , ಶಾಸಕರ ಆಪ್ತ ಕಾರ್ಯದರ್ಶಿ ಭೇಟಿ – ಆರ್ಥಿಕ ನೆರವು
ಜೇನಿ ಗ್ರಾಪಂ ವ್ಯಾಪ್ತಿಯಲ್ಲಿ ಮಳೆಗೆ ಮನೆ ಕುಸಿತ – ಸ್ಥಳಕ್ಕೆ ತಹಶೀಲ್ದಾರ್ , ಶಾಸಕರ ಆಪ್ತ ಕಾರ್ಯದರ್ಶಿ ಭೇಟಿ – ಆರ್ಥಿಕ ನೆರವು ಹೊಸನಗರ : ಜೇನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಳವಳ್ಳಿ ಗ್ರಾಮದಲ್ಲಿ ಬಾರಿ ಮಳೆಯಿಂದ ಮನೆಯೊಂದು ಕುಸಿತವಾಗಿದ್ದು ಈ ಹಿನ್ನಲೆಯಲ್ಲಿ ಸ್ಥಳಕ್ಕೆ ತಹಸಿಲ್ದಾರ್ ರಶ್ಮಿ ಹಾಲೇಶ್ ಹಾಗೂ ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜೇನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಳವಳ್ಳಿ ಗ್ರಾಮದ ಸೀತಮ್ಮ ಕೋಂ ಗಿರೀಶ್ ಎಂಬುವವರ…
ಶಾಲಾ ವಾಹನಗಳ ದಿಢೀರ್ ತಪಾಸಣೆ –ಸುರಕ್ಷತಾ ನಿಯಮ ಪಾಲನೆಗೆ ಖಡಕ್ ವಾರ್ನಿಂಗ್
ಶಾಲಾ ವಾಹನಗಳ ದಿಢೀರ್ ತಪಾಸಣೆ –ಸುರಕ್ಷತಾ ನಿಯಮ ಪಾಲನೆಗೆ ಖಡಕ್ ವಾರ್ನಿಂಗ್ ಶಿವಮೊಗ್ಗ ಜೂ. 21: ಶಿವಮೊಗ್ಗ ನಗರದಲ್ಲಿ ಜೂ. 21 ರಂದು ಪೂರ್ವ ಹಾಗೂ ಪಶ್ಚಿಮ ಟ್ರಾಫಿಕ್ ಠಾಣೆಗಳ ಪೊಲೀಸರು, ಖಾಸಗಿ ಶಾಲಾ ವಾಹನಗಳ ದಿಢೀರ್ ತಪಾಸಣೆ ನಡೆಸಿ, ಸುರಕ್ಷತಾ ನಿಯಮಗಳ ಪಾಲನೆ ಕುರಿತಂತೆ ಚಾಲಕರಿಗೆ ಖಡಕ್ ಎಚ್ಚರಿಕೆ ನೀಡಿದರು. ‘ಶಾಲಾ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಟ್ರಾಫಿಕ್ ಠಾಣೆಗಳ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು, ಶಾಲಾ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಿವಮೊಗ್ಗ ನಗರಾದ್ಯಂತ ಶಾಲಾ ವಾಹನಗಳ…