ಜಿಲ್ಲಾ ಸುದ್ದಿ:
ಧರ್ಮಸ್ಥಳ ಅನನ್ಯ ಭಟ್ ಪ್ರಕರಣ – ರಿಪ್ಪನ್ ಪೇಟೆಗೆ ಎಸ್ಐಟಿ ತಂಡ ಭೇಟಿ..!!? ಸುಜಾತ ಭಟ್ ಜಾಡು ಪತ್ತೆಗೆ ಮುಂದಾಯ್ತಾ SIT!!???
ಧರ್ಮಸ್ಥಳ ಅನನ್ಯ ಪ್ರಕರಣ – ರಿಪ್ಪನ್ ಪೇಟೆಗೆ ಎಸ್ಐಟಿ ತಂಡ ಭೇಟಿ..!!? ಸುಜಾತ ಭಟ್ ಜಾಡು ಪತ್ತೆಗೆ ಮುಂದಾಯ್ತಾ SIT!!??? ರಿಪ್ಪನ್ ಪೇಟೆ : ಧರ್ಮಸ್ಥಳದ ಅನನ್ಯ ಭಟ್ ಪ್ರಕರಣ ರಾಜ್ಯದಾದ್ಯಂತ ದೊಡ್ಡ ಚರ್ಚೆಗೆ ಕಾರಣವಾಗಿದೆ. ಪ್ರಕರಣಕ್ಕೂ ರಿಪ್ಪನ್ ಪೇಟೆಗೂ ಲಿಂಕ್ ಇರುವ ಬಗ್ಗೆ ಪೋಸ್ಟ್ ಮ್ಯಾನ್ ನ್ಯೂಸ್ ಹಲವು ಸಂಚಲನಕಾರಿ ಸಂಗತಿಗಳು ಬೆಳಕಿಗೆ ತಂದಿತ್ತು,ಹಾಗೇಯೆ ತನಿಖಾ ಪ್ರಕ್ರಿಯೆಯೂ ತೀವ್ರಗತಿಯಲ್ಲಿ ಸಾಗುತ್ತಿದೆ. ಇದೀಗ ಈ ಪ್ರಕರಣದ ತನಿಖೆಗೆ ನಿಯೋಜಿಸಲ್ಪಟ್ಟ ವಿಶೇಷ ತನಿಖಾ ತಂಡ (SIT) ಶಿವಮೊಗ್ಗ ಜಿಲ್ಲೆಯ…
RIPPONPETE | ಸಂಸದ ಬಿ ವೈ ರಾಘವೇಂದ್ರ ಹುಟ್ಟುಹಬ್ಬದ ಅಂಗವಾಗಿ ವಿಶೇಷ ಪೂಜೆ
RIPPONPETE | ಸಂಸದ ಬಿ ವೈ ರಾಘವೇಂದ್ರ ಹುಟ್ಟುಹಬ್ಬದ ಅಂಗವಾಗಿ ವಿಶೇಷ ಪೂಜೆ ರಿಪ್ಪನ್ಪೇಟೆ : ಸಂಸದ ಬಿ ವೈ ರಾಘವೇಂದ್ರ ಹುಟ್ಟುಹಬ್ಬವನ್ನು ಪಟ್ಟಣದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಆಚರಿಸಿದರು. ಪಟ್ಟಣದ ಸಿದ್ದಿವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ಪಕ್ಷದ ಸ್ಥಳೀಯ ಸಂಸ್ಥೆ ಜನಪ್ರತಿನಿಧಿಗಳು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಕಾರ್ಯಕರ್ತರು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ರಾಘವೇಂದ್ರ ಅವರು ಅಭಿವೃದ್ಧಿ ಕಾರ್ಯದಲ್ಲಿ 543 ಸಂಸದರಲ್ಲಿ ಎರಡನೆಯ ಸ್ಥಾನವನ್ನು ಪಡೆದುಕೊಂಡಿದ್ದಾರೆ,…
RIPPONPETE | ಶಾಲಾ ಬಸ್ ಪಲ್ಟಿ : ತಪ್ಪಿದ ಭಾರಿ ಅನಾಹುತ
RIPPONPETE | ಶಾಲಾ ಬಸ್ ಪಲ್ಟಿ : ತಪ್ಪಿದ ಭಾರಿ ಅನಾಹುತ ರಿಪ್ಪನ್ ಪೇಟೆ : ಇಲ್ಲಿನ ಸಮೀಪದ ಕಾನುಗೋಡು ಗ್ರಾಮದ ಬಳಿ ಇಂದು ಬೆಳಿಗ್ಗೆ ನರ್ಸರಿ ಮಕ್ಕಳನ್ನು ಕರೆದೊಯ್ಯುತಿದ್ದ ಶಾಲಾ ಬಸ್ ಪಲ್ಟಿಯಾದ ಘಟನೆ ನಡೆದಿದೆ. ತಮ್ಮಡಿಕೊಪ್ಪ – ಮೂಗುಡ್ತಿ ಮಾರ್ಗದಲ್ಲಿ ಚಲಿಸುತ್ತಿದ್ದ ಶಾಲಾ ಬಸ್ ಕಾನುಗೋಡು ಬಳಿಯಲ್ಲಿ ಪಲ್ಟಿಯಾಗಿದೆ. ಗರ್ತಿಕೆರೆಯ ಖಾಸಗಿ ಶಾಲೆಯ ನರ್ಸರಿ ವಿಭಾಗದ 12 ಮಂದಿ ಮಕ್ಕಳು ಇದ್ದರು ಎನ್ನಲಾಗಿದೆ. ಅದೃಷ್ಟವಶಾತ್ ದೊಡ್ಡ ಅನಾಹುತ ತಪ್ಪಿದೆ. ಸ್ಥಳೀಯರ ಪ್ರಕಾರ ಬಸ್ ಚಾಲಕನ…
ಸ್ವಾತಂತ್ರ್ಯೋತ್ಸವದ ಪರೇಡ್ ವೇಳೆ ಅಸ್ವಸ್ಥರಾಗಿ ಬಿದ್ದ ಮಕ್ಕಳು : ನೆರವಿಗೆ ಧಾವಿಸಿದ ಡಾ. ಧನಂಜಯ ಸರ್ಜಿ
ಸ್ವಾತಂತ್ರ್ಯೋತ್ಸವದ ಪರೇಡ್ ವೇಳೆ ಅಸ್ವಸ್ಥರಾಗಿ ಬಿದ್ದ ಮಕ್ಕಳು : ನೆರವಿಗೆ ಧಾವಿಸಿದ ಡಾ. ಧನಂಜಯ ಸರ್ಜಿ ಶಿವಮೊಗ್ಗ : ಶಿವಮೊಗ್ಗ ನಗರದ ನೆಹರು ಕ್ರೀಡಾಂಗಣದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು, ತಾಲೂಕಿನ ಹಲವು ಶಾಲೆಯ ಮಕ್ಕಳು ಸ್ವಾತಂತ್ರ್ಯೋತ್ಸವದ ಪಥಸಂಚಲನಕ್ಕಾಗಿ ಆಗಮಿಸಿದ್ದರು. ಈ ವೇಳೆ ಪಥಸಂಚಲನದಲ್ಲಿ ಭಾಗಿಯಾಗಿದ್ದ 3 ಮಕ್ಕಳು ದಿಡೀರ್ ಕೆಳಗೆ ಬಿದ್ದಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿಧಾನ ಪರಿಷತ್ ಶಾಸಕ ಡಾ. ಧನಂಜಯ ಸರ್ಜಿ ಅವರು ತಕ್ಷಣ ಕಾರ್ಯಪ್ರವೃತ್ತರಾಗಿ, ಅಲ್ಲಿಯೇ ಇದ್ದ ಸರ್ಕಾರಿ…
ಹೊಸನಗರ ತಾಲೂಕಿನಾದ್ಯಂತ ಮಸೀದಿಗಳಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ಹೊಸನಗರ ತಾಲೂಕಿನಾದ್ಯಂತ ಮಸೀದಿಗಳಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ ಹೊಸನಗರ:- 79ನೇ ಸ್ವಾತಂತ್ರ್ಯೋತ್ಸವವನ್ನು ತಾಲೂಕಿನ ಹಲವು ಮಸೀದಿಗಳಲ್ಲಿ ಸಂಭ್ರಮ ಹಾಗೂ ಸಡಗರದಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದರು. ರಿಪ್ಪನ್ ಪೇಟೆ ರಿಪ್ಪನ್ ಪೇಟೆ ಮೊಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಅಧ್ಯಕ್ಷರಾದ ಹಸನಬ್ಬ ಬಾವ ಬ್ಯಾರಿ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿದರು. ಈ ಸಂಧರ್ಭದಲ್ಲಿ ಧರ್ಮಗುರುಗಳಾದ ಮುನೀರ್ ಸಖಾಫಿ ಗ್ರಾಪಂ ಸದಸ್ಯ ಆಸೀಫ್ ಹಾಗೂ ಇನ್ನಿತರರು ಇದ್ದರು ನಿಟ್ಟೂರು ನಿಟ್ಟೂರು ಜುಮ್ಮಾ ಮಸೀದಿಯ ಧರ್ಮಗುರುಗಳಾದ ಉಬೇದುಲ್ಲಾ ಸಖಾಫಿ ಮಸೀದಿಯ ಆವರಣದಲ್ಲಿ…
ಮಳೆ ನಡುವೆ ಹೊಸನಗರ ನೆಹರು ಮೈದಾನದಲ್ಲಿ 79ನೇ ಸ್ವಾತಂತ್ರ್ಯೋತ್ಸವ ಆಚರಣೆ
ಬೃಹತ್ ಪ್ರಮಾಣದ ಕೃಷಿ ಆಧಾರಿತ ಆರ್ಥಿಕತೆ ಇದ್ದು ಕೈಗಾರಿಕೆಗಳನ್ನು ಯೂರೋಪಿನ ಶಕ್ತಿಗಳು ನಿಯಂತ್ರಣ ಮಾಡುತ್ತಿದ್ದರು ಇವುಗಳ ಪರಿಣಾಮವಾಗಿ ದೇಶದ ಆರ್ಥಿಕತೆ ಹೆಚ್ಚು ಸೀಮಿತವಾಗಿದ್ದರೂ ಸ್ವಾತಂತ್ರ್ಯ ಪೂರ್ವದಲ್ಲಿ ಆರ್ಥಿಕ ಶಕ್ತಿಯಲ್ಲಿ ಬಲ ಹೊಂದಿದ್ದರೂ ಭಾರತದ ಜನತೆಗೆ ಮೂಲ ಸೌಕರ್ಯಗಳಿಲ್ಲದೇ ಆರ್ಥಿಕ ಸ್ಥಿತಿ ಶೋಚನೀಯ ಸ್ಥಿತಿಯಲ್ಲಿತ್ತು ಎಂದು ಹೊಸನಗರದ ತಹಸೀಲ್ದಾರ್ ರಶ್ಮಿ ಹಾಲೇಶ್ ಹೇಳಿದರು. ಇಲ್ಲಿನ ನೆಹರು ಮೈದಾನದ ಆವರಣದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಪೂರ್ವದಲ್ಲಿ ಭಾರತವು ಮತ್ತು ಭಾರತೀಯರು ಬ್ರಿಟಿಷ್ ಆಡಳಿತದ…
ರಿಪ್ಪನ್ಪೇಟೆಯ ವಿವಿಧೆಡೆ 79ನೇ ಸ್ವಾತಂತ್ಯ ಸಂಭ್ರಮ
ರಿಪ್ಪನ್ಪೇಟೆ ವಿವಿಧೆಡೆ 79ನೇ ಸ್ವಾತಂತ್ಯ ಸಂಭ್ರಮ ರಿಪ್ಪನ್ ಪೇಟೆ : ಪಟ್ಟಣದಲ್ಲಿ 79ನೇ ಸ್ವಾತಂತ್ಯ್ಯೋತ್ಸವ ಸಂಭ್ರಮ ಸಡಗರದೊಂದಿಗೆ ವಿವಿಧೆಡೆಯಲ್ಲಿ ಜರುಗಿತು. ಗ್ರಾಮ ಪಂಚಾಯ್ತಿಯಲ್ಲಿ ಗ್ರಾಮಾಧ್ಯಕ್ಷೆ ಧನಲಕ್ಷ್ಮಿ ಧ್ವಜಾರೋಹಣ ನೆರವೇರಿಸಿದರು. ಪೊಲೀಸ್ ಠಾಣೆಯಲ್ಲಿ ಪಿಎಸ್ಐ ರಾಜುರೆಡ್ಡಿ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷ ಮಂಜಪ್ಪ, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಾ.ಆಂಜನೇಯ , ನಾಡ ಕಛೇರಿಯಲ್ಲಿ ಉಪತಹಶೀಲ್ದಾರ್ ಗೌತಮ್, ಬಿ.ಸಿ.ಎಂ ವಸತಿ ನಿಲಯದಲ್ಲಿ ಮೇಲ್ವಿಚಾರಕಿ ಸುಮಿತ್ರಬಾಯಿ, ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿ ಸಂತೋಷ, ಬರುವೆ ಸರ್ಕಾರಿ…
RIPPONPETE | ಮಳೆಯಲ್ಲೂ ಯಶಸ್ವಿಯಾಗಿ ಸಾಗಿದ ತಿರಂಗ ಯಾತ್ರೆ
ಮಳೆಯಲ್ಲೂ ಯಶಸ್ವಿಯಾಗಿ ಸಾಗಿದ ತಿರಂಗ ಯಾತ್ರೆ ರಿಪ್ಪನ್ ಪೇಟೆ : ಪಟ್ಟಣದಲ್ಲಿ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಅಂಗವಾಗಿ 300 ಅಡಿ ಉದ್ದದ ಬೃಹತ್ ತಿರಂಗಾ ಯಾತ್ರೆ ನಡೆಸಲಾಯಿತು. ಯಾತ್ರೆಯಲ್ಲಿ ನೂರಾರು ವಿದ್ಯಾರ್ಥಿಗಳು ಭಾರತ್ ಮಾತಾ ಕೀ ಜೈ, ವಂದೇ ಮಾತರಂ, ದೇಶ ಮೊದಲು ಎನ್ನುವ ಘೋಷಣೆಗಳನ್ನು ಕೂಗುತ್ತಾ ತಿರಂಗಾವನ್ನು ಹಿಡಿದು ಗ್ರಾಮ ಪಂಚಾಯತ್ ಕಛೇರಿ ಮುಂಭಾಗದಿಂದ ವಿನಾಯಕ ವೃತ್ತದ ಮೂಲಕ ಸಾಗಿ ಪ್ರಮುಖ ರಸ್ತೆಗಳಲ್ಲಿ ತಿರಂಗಾ ಯಾತ್ರೆಯನ್ನು ನಡೆಸಿದರು. ತಿರಂಗ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಗ್ರಾಪಂ…
ಸುಜಾತಾ ಭಟ್ ಪ್ರಕರಣ – ರಿಪ್ಪನ್ ಪೇಟೆಯ ವ್ಯಕ್ತಿಯೊಂದಿಗೆ ಲಿವ್-ಇನ್ ರಿಲೇಷನ್ಶಿಪ್, ಇಲ್ಲದ ಮಗಳ ಗೂಢರಹಸ್ಯ.!!
ಸುಜಾತಾ ಭಟ್ ಪ್ರಕರಣ – ರಿಪ್ಪನ್ ಪೇಟೆಯ ವ್ಯಕ್ತಿಯೊಂದಿಗೆ ಲಿವ್-ಇನ್ ರಿಲೇಷನ್ಶಿಪ್, ಇಲ್ಲದ ಮಗಳ ಗೂಢರಹಸ್ಯ.!! ಧರ್ಮಸ್ಥಳದ ನೇತ್ರಾವತಿ ಸ್ನಾನ ಘಟ್ಟದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣದಲ್ಲಿ ಸುಜಾತ ಭಟ್ ಹಾಗೂ ಅವರ ಪುತ್ರಿ ಅನನ್ಯ ಭಟ್ ಬಗ್ಗೆ ದೇಶಾದ್ಯಂತ ಭಾರಿ ಸುದ್ದಿಯಲ್ಲಿದೆ. ಸುಜಾತ ಭಟ್ ಎಂಬ ಹೆಸರಿನ ಹಿಂದೆ ಹಲವು ಮರ್ಮಗಳಿವೆ.. 2003ರಲ್ಲಿ ಧರ್ಮಸ್ಥಳಕ್ಕೆ ಸ್ನೇಹಿತೆಯರೊಂದಿಗೆ ಬಂದಿದ್ದ ತನ್ನ ಮಗಳು ಅನನ್ಯ ಭಟ್ ನಾಪತ್ತೆಯಾಗಿದ್ದಾಳೆ ಹಾಗೂ ಆಕೆಯ ಮೇಲೆ ಅತ್ಯಾಚಾರವಾಗಿರಬಹುದು ಎಂದು ಸುಜಾತ ಭಟ್ ದೂರು…
ನಗ್ನ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ
ನಗ್ನ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಮಜ್ಜೆಗೆಹಳ್ಳಿಯಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ಮಜ್ಜಿಗೆಹಳ್ಳಿ ಗ್ರಾಮದ ಸಮೀಪದ ಚಾನೆಲ್ ಬಳಿ, ಸುಮಾರು 35 ರಿಂದ 45 ವರ್ಷದೊಳಗಿನ ಮಹಿಳೆಯೊಬ್ಬರ ನಗ್ನ ಸ್ಥಿತಿಯ ಶವ ಪತ್ತೆಯಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಮೃತದೇಹವು ಈಗಾಗಲೇ ಕೊಳೆತ ಸ್ಥಿತಿಯಲ್ಲಿ ಇರುವುದರಿಂದ ಗುರುತಿನ ಪತ್ತೆ ಇನ್ನೂ ಸಾಧ್ಯವಾಗಿಲ್ಲ. ಚಾನೆಲ್ನಿಂದ ಹೆಣ ತೇಲಿ ಬಂದಿರಬಹುದೆಂಬ ಶಂಕೆಯಿದ್ದು, ಸಾವಿನ ನಿಖರ ಕಾರಣ ತಿಳಿದುಬರಬೇಕಿದೆ. ಅನುಮಾನಾಸ್ಪದ ಸಾವಿನ ಪ್ರಕರಣವೆಂದು ಭದ್ರಾವತಿ ಗ್ರಾಮಾಂತರ ಪೊಲೀಸ್…