ಜಿಲ್ಲಾ ಸುದ್ದಿ:
ವಿಜೃಂಭಣೆಯೊಂದಿಗೆ ಸಂಪನ್ನಗೊಂಡ ಜೇನುಕಲ್ಲಮ್ಮ ಜಾತ್ರಾ ಮಹೋತ್ಸವ
ರಿಪ್ಪನ್ ಪೇಟೆ;-ಪುರಾಣ ಪ್ರಸಿದ್ದ ಹೆಬ್ಬಂಡೆಯಲ್ಲಿ ನೆಲೆಸಿರುವ ಜಗನ್ಮಾತೆ ಜೇನುಕಲ್ಲಮ್ಮ ದೇವಿಯ ಜಾತ್ರಾಮಹೋತ್ಸವವು ವಿಜೃಂಭಣೆಯೊಂದಿಗೆ ಸಂಪನ್ನ ಗೊಂಡಿತು. ಭಾದ್ರಪದ ಮಾಸದ ಹುಣ್ಣಿಮೆಯಿಂದ ಮಹಾಲಯ ಅಮಾವಾಸ್ಯೆಯವರೆಗೆ ಎರಡು ಮಂಗಳವಾರ ಶುಕ್ರವಾರದ ಪಿತೃ ಪಕ್ಷದಲ್ಲಿ ಅಮ್ಮನಘಟ್ಟದ ಜೇನುಕಲ್ಲಮ್ಮ ದೇವಿಯ ಜಾತ್ರಾಮಹೋತ್ಸವವು ಶ್ರದ್ದಾಭಕ್ತಿಯಿಂದ ಅದ್ದೂರಿಯಾಗಿ ನೆರವೇರಿತು. ದೇವಸ್ಥಾನದ ಪ್ರಧಾನ ಅರ್ಚಕ ಭಾಸ್ಕರ್ ಜೋಯ್ಸ್ ನೇತೃತ್ವದಲ್ಲಿ ಹಳೆಯ ಅಮ್ಮನಘಟ್ಟದಲ್ಲಿ ತಾಯಿ ಮಹಾಮಾತೆ ಜೇನುಕಲ್ಲಮ್ಮ ತಾಯಿಗೆ ಕಂಕಣ ಧಾರಣೆ ಮಾಡಿ ಎರಡು ಮಂಗಳವಾರ ಮತ್ತು ಎರಡು ಶುಕ್ರವಾರದೊಂದು ದೇವಿಗೆ ವಿಶೆಷ ಅಲಂಕಾರಿಕಾ ಪೂಜೆಯೊಂದಿಗೆ ವಿವಿಧ ಧಾರ್ಮಿಕ…
ರಿಪ್ಪನ್‌ಪೇಟೆ : ಕಾಮಗಾರಿ ಹಂತದಲ್ಲಿ ಕಿತ್ತು ಹೋದ ಬರುವೆ ಬಡಾವಣೆಯಲ್ಲಿನ ಕಾಂಕ್ರೀಟ್ ಸಂಪರ್ಕ ರಸ್ತೆ | ಇದು 40% ಅಲ್ಲಾ..!!! 60% ಕಮಿಷನ್ ನ ಕಾಮಗಾರಿಯೇ…??????
ರಿಪ್ಪನ್‌ಪೇಟೆ : ವಿಧಾನ ಪರಿಷತ್ ಸದಸ್ಯರಾಗಿದ್ದ ಆರ್ ಪ್ರಸನ್ನ ಕುಮಾರ್ ಅವಧಿಯಲ್ಲಿ ರಿಪ್ಪನ್‌ಪೇಟೆ ಗ್ರಾಮ ಪಂಚಾಯತಿ ಹೊಸಬಡಾವಣೆಯಲ್ಲಿ ರಸ್ತೆ ಕಾಮಗಾರಿಗೆ ಸರ್ಕಾರದಿಂದ ಕರ್ನಾಟಕ ನೀರಾವರಿ ನಿಗಮದಿಂದ ಅನುದಾನ ಬಿಡುಗಡೆ ಮಾಡಲಾಗಿದ್ದು ಕಾಮಗಾರಿ ಹಂತದಲ್ಲಿ ಸಂಪೂರ್ಣ ಕಿತ್ತು ಹೋಗಿ ಸಾರ್ವಜನಿಕರಲ್ಲಿ ಹಾಸ್ಯದ ವಿಷಯವಾಗಿ ಸುದ್ದಿಗೆ ಗ್ರಾಸವಾಗಿದೆ. ಶೇಕಡಾ 40% ಪರ್ಸೆಂಟ್‌ನ ರಾಜ್ಯ ಬಿಜೆಪಿ ಸರ್ಕಾರ ಎಂದು ಬೀಗುತ್ತಿರುವ ವಿರೋಧಪಕ್ಷದವರು ತಮ್ಮ ಪಕ್ಷದ ಅಗಿನ ಎಂ.ಎಲ್.ಸಿ, ಅನುದಾನದಡಿ ಬಿಡುಗಡೆ ಮಾಡಲಾದ ಹೊಸಬಡಾವಣೆಯ ಕಾಂಕ್ರೇಟ್ ರಸ್ತೆ ಕಾಮಗಾರಿ ಅಪೂರ್ಣ ಮತ್ತು ಕಳಪೆ…
ಅಧ್ಯಕ್ಷರ ರಾಜಿನಾಮೆ ಪ್ರಹಸನದಿಂದ ಹುಂಚಾ ಸೊಸೈಟಿಗೆ ಬಿತ್ತು ಎರಡು ಲಕ್ಷ ಬಡ್ಡಿ…..!!! ಕಟ್ಟೋದ್ಯಾರು ಆಡಳಿತ ಮಂಡಳಿನಾ ?? ರೈತರಿಗೆ ಗುನ್ನಾನಾ???ಹುಂಚಾ ಸೊಸೈಟಿಯಲ್ಲಿ ಬಗೆಹರಿಯದ ಗೊಂದಲ!!!!!!
ಹುಂಚ : ಇತ್ತೀಚೆಗೆ ಹುಂಚಾ ವ್ಯವಸಾಯ ಸಹಕಾರ ಸಂಘದ ಅಧ್ಯಕ್ಷರು ಸೇರಿದಂತೆ ಐವರು ನಿರ್ದೇಶಕರು ರಾಜಿನಾಮೆ ಪ್ರಹಸನ ಸುಖಾಂತ್ಯವಾಯಿತು ಎನ್ನುವ ಮೊದಲು ಡಿಸಿಸಿ ಬ್ಯಾಂಕ್ ಈಗ ಸುಸ್ತಿದಾರ ಸೊಸೈಟಿ ಎಂದು ಘೋಷಿಸಿ ಎರಡು ಲಕ್ಷಕ್ಕೂ ಹೆಚ್ಚು ಬಡ್ಡಿ ವಿಧಿಸಿದ್ದಾರೆಂದು ತಿಳಿದು ಬಂದಿದೆ. ಹುಂಚಾ ವ್ಯವಸಾಯ ಸಹಕಾರಿಯ ಆಡಿಟ್ ವರದಿಯಲ್ಲಿ ಐವತ್ತು ಲಕ್ಷಕ್ಕೂ ಹೆಚ್ಚೂ ವ್ಯತ್ಯಾಸವಾಗಿದೆ ಎಂಬ ಸುದ್ದಿಗೆ ಬೆದರಿ ಅಧ್ಯಕ್ಷರು ಸೇರಿದಂತೆ ಐವರು ನಿರ್ದೇಶಕರು ರಾಜಿನಾಮೆ ನೀಡಿದ್ದರು . ಉಳಿದ ನಿರ್ದೇಶಕರು ಎದ್ದು ಬಿದ್ದು ಆಡಿಟರ್ ರಿಂದ…
ತಾತ್ಕಾಲಿಕ ಮಿನಿ ಅಂಗನವಾಡಿ ಶೆಡ್ ತೆರವಿಗೆ ಮುಂದಾದ ಅರಣ್ಯಾಧಿಕಾರಿಗಳು : ಗ್ರಾಮಸ್ಥರಿಂದ ಪ್ರತಿಭಟನೆ
ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಹೊಟ್ಯಾಳಪುರ ಗ್ರಾಮದ ಮಿನಿ ಅಂಗನವಾಡಿ ನಿರ್ಮಾಣಕ್ಕೆ ಅರಣ್ಯಾಧಿಕಾರಿಗಳು ಅಡ್ಡಗಾಲು ಹಾಕುತ್ತಿರುವ ಹಿನ್ನಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ನಡೆಯಿತು. ಸುಮಾರು ಐದಾರು ವರ್ಷಗಳ ಹಿಂದೆ ಅರಸಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಮ್ಮಡಿಕೊಪ್ಪ ಮಜರೆ ಹೊಟ್ಯಾಳಪುರ ಮಿನಿ ಅಂಗನವಾಡಿಯಲ್ಲಿ ಮಗುವೊಂದಕ್ಕೆ ಹಾವು ಕಡಿದು ಸಾವನ್ನಪ್ಪಿರುವ ಘಟನೆ ನಡೆದಿತ್ತು. ಈ ಘಟನೆ ಜನಮಾನಸದಿಂದ ಮಾಸುವ ಮುನ್ನವೇ ಸರ್ಕಾರದಿಂದ ಸುಸಜ್ಜಿತ ಮಿನಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿತ್ತು ಆದರೆ ಜಾಗ ಇಲ್ಲದೆ ಕಟ್ಟಡ…
ದೇಶಾದ್ಯಂತ 100ಕ್ಕೂ ಹೆಚ್ಚು ಕಡೆ ಎನ್ ಐಎ(NIA) ದಾಳಿ : ಶಿವಮೊಗ್ಗದಲ್ಲಿಯೂ ಕೆಲ ಸಂಘಟನೆಯ ಮುಖಂಡರ ಮನೆ ಮೇಲೆ ದಾಳಿ
ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಇವತ್ತು ಬೆಂಗಳೂರು, ಮಂಗಳೂರು ಮತ್ತು ಶಿವಮೊಗ್ಗ ಸೇರಿದಂತೆ ದೇಶಾದ್ಯಂತ 100ಕ್ಕೂ ಹೆಚ್ಚು ಕಡೆ ದಾಳಿ ನಡೆಸಿದ್ದಾರೆ. ವಿವಿಧ ಸಂಘಟನೆಗೆ ಸೇರಿದ ಹಲವರನ್ನು ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗದಲ್ಲಿ ಬೆಳಗಿನ ಜಾವ ಎನ್ ಐಎ(NIA) ದಾಳಿ ನಡೆದಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಲಷ್ಕರ್ ಮೊಹಲ್ಲಾದ ಮನೆಯೊಂದರ ಮೇಲೆ ಬೆಳಗಿನ ಜಾವ ದಾಳಿಯಾಗಿದೆ. ಸಂಘಟನೆಯೊಂದರ ಮುಖಂಡನ್ನು ವಶಕ್ಕೆ ಪಡೆದು, ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ. ಎರಡು ತಂಡವಾಗಿ ದಾಳಿ ನಡೆಸಿದ ಎನ್ಐಎ…
ನಾರಾಯಣ ಗುರು ವಿಚಾರ ವೇದಿಕೆ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಪುನೀತ್ ಬೆಳ್ಳೂರು ನೇಮಕ :
ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ಶಿವಮೊಗ್ಗ ಜಿಲ್ಲಾ ಸಂಘಟನ ಕಾರ್ಯದರ್ಶಿಯಾಗಿ ಪತ್ರಕರ್ತ ಪುನೀತ್ ಬೆಳ್ಳೂರು ಅವರನ್ನ ಆಯ್ಕೆ ಮಾಡಿ ರಾಜ್ಯ ಅಧ್ಯಕ್ಷರಾದ ಸತ್ಯಜಿತ್ ಸುರತ್ಕಲ್ ಅದೇಶ ಹೊರಡಿಸಿದ್ದಾರೆ. ನೂತನ ಹುದ್ದೆ ಅಲಂಕರಿಸಿದ ಪುನೀತ್ ಬೆಳ್ಳೂರು ಪೋಸ್ಟ್ ಮ್ಯಾನ್ ಸುದ್ದಿ ಬಳಗದೊಂದಿಗೆ ಮಾತನಾಡಿ ಸಂಘಟನೆಯು ನನಗೆ ಅತ್ಯಂತ ಜವಾಬ್ದಾರಿ ಹುದ್ದೆಯನ್ನ ನೀಡಿದೆ,ಹಾಗೂ ನನ್ನನ್ನು ಗುರುತಿಸಿದ ಶಿವಮೊಗ್ಗ ಜಿಲ್ಲಾ ಸಮಿತಿಗೆ ನಾನು ಧನ್ಯವಾದ ತಿಳಿಸುತ್ತೇನೆ,ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಈಗಾಗಲೇ ಹಲವು ಸಮಾಜ ಮುಖಿ ಕೆಲಸ ಮಾಡುತ್ತ…
ಹೊಸನಗರ ತಾಲೂಕಿನಲ್ಲಿ ಮಕ್ಕಳ ಅಪಹರಣಕ್ಕೆ ಪ್ರಯತ್ನ ಸುಳ್ಳು ಸುದ್ದಿ | ತಪ್ಪು ಸಂದೇಶ ರವಾನಿಸುವವರ ಮೇಲೆ ಕಠಿಣ ಕ್ರಮ : ಸಿಪಿಐ ಗಿರೀಶ್ ಖಡಕ್ ಎಚ್ಚರಿಕೆ
ಹೊಸನಗರ: ಹೊಸನಗರ ಗ್ರಾಮದಲ್ಲಿ ಮಕ್ಕಳ ಕಳ್ಳ ಸಿಕ್ಕಿಬಿದ್ದು ಓಡಿ ಹೋಗಿದ್ದಾನೆ ಈತ ಸಿಕ್ಕಿದರೆ ಪೊಲೀಸರಿಗೆ ತಿಳಿಸಿ ಎಂಬ ಮಾಹಿತಿ ಸಹಿತ ವ್ಯಕ್ತಿಯೊಬ್ಬನ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಜನರ ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಹೊಸನಗರ ಸರ್ಕಲ್ ಇನ್ಸಪೆಕ್ಟರ್ ಗಿರೀಶ್ ಬಿ ಸಿ ಸ್ಪಷ್ಟನೆ ನೀಡಿದ್ದು ಇಂತಹ ಯಾವುದೇ ಪ್ರಕರಣ ತಾಲೂಕಿನಲ್ಲಿ ನಡೆದಿಲ್ಲ ಎಂದು ತಿಳಿಸಿದ್ದಾರೆ. ಇಂತಹ ಮಾಹಿತಿಗಳ ಸತ್ಯಾಸತ್ಯತೆ ಅರಿಯಬೇಕು. ಮಾಹಿತಿ ಅರಿಯದೆ ಬೇರೆ ವ್ಯಕ್ತಿಗಳಿಗೆ, ಜಾಲತಾಣದ ಗ್ರೂಪ್ ಗಳಿಗೆ ಫಾರ್ ವರ್ಡ್ (FORWORD) ಮಾಡುವುದು…
ಜೆಸಿಐ ಹೊಸನಗರ ಕೊಡಚಾದ್ರಿ ವಲಯ ವತಿಯಿಂದ “ನಮಸ್ತೆ” ಸಪ್ತಾಹದಡಿ ವಿಭಿನ್ನ ಸಾಮಾಜಿಕ ಕಾರ್ಯಕ್ರಮ :. ನ್ಯಾಷನಲ್ ಬ್ಯೂಟಿ ಪೆಜೆನ್ಟ್ ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲು ದೆಹಲಿಯತ್ತ ಪಯಣಿಸಿರುವ ಸೀಮಾಕಿರಣ್
ಜೆಸಿಐ ಹೊಸನಗರ ಕೊಡಚಾದ್ರಿ ವಲಯದ ವತಿಯಿಂದ “ನಮಸ್ತೆ”ಎಂಬ ಶೀರ್ಷಿಕೆಯಡಿ ಜೆಸಿಐ ಸಪ್ತಾಹದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಸೆ. 9 ರಿಂದ 15 ರವರೆವಿಗೆ ಪ್ರತಿ ದಿನವೂ ವಿಭಿನ್ನ ಕಾರ್ಯಕ್ರಮ ಗಳನ್ನು ರೂಪಿಸಿಕೊಳ್ಳಲಾಗಿತ್ತು.ಸಪ್ತಾಹದ ಅಂಗವಾಗಿ ಅನಾಥಾಶ್ರಮದ ಬೇಟಿ, ಆಹಾರಧಾನ್ಯಗಳ ವಿತರಣೆ, ಆರೋಗ್ಯ ತಪಾಸಣೆ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕಾರಣಗಿರಿ ಸರ್ಕಾರಿ ಶಾಲೆಯಲ್ಲಿ ಅಣುಕು ಪಾರ್ಲಿಮೆಂಟ್ ಮತ್ತು ಪ್ರಾಮಾಣಿಕ ಅಂಗಡಿ, ಬೇರೆ ಬೇರೆ ಶಾಲೆಗಳಲ್ಲಿ ವಿವಿಧ ವಿಚಾರಗಳ ಪ್ರಬಂಧ ಸ್ಪರ್ಧೆ ಗಳು,ಭಾವಗೀತೆ, ಜನಪದಗೀತೆ, ನೃತ್ಯ, ರಂಗೋಲಿ,ಹೊಸ ರುಚಿ, ಒಂದು ನಿಮಿಷದಲ್ಲಿ…
ಹೆಬ್ಬಂಡೆಯ ಆಲಯ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವಕ್ಕೆ ಭಕ್ತಸಾಗರ :
ರಿಪ್ಪನ್‌ಪೇಟೆ;-ಇತಿಹಾಸ ಪ್ರಸಿದ್ದ ಹೆಬ್ಬಂಡೆಯ ಅಲಯ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವಕ್ಕೆ ಭಕ್ತಜನಸಾಗರವೇ ಶ್ರದ್ದಾಭಕ್ತಿಯಿಂದಾ ಹರಿದು ಬಂದಿತು. ಅಮ್ಮನಘಟ್ಟ ಜಾತ್ರೆ ನಾಡಿನ ಪ್ರಮುಖ ಜಾತ್ರೆಗಳಲ್ಲಿ ಒಂದಾಗಿದ್ದು ಮಲೆನಾಡಿನ ಸಹ್ಯಾದ್ರಿಯ ಪರ್ವತ ತಪ್ಪಲಿನಲ್ಲಿ ವಿಶಿಷ್ಟ ಪ್ರಾಕೃತ್ತಿಕ ಸೌಂದರ್ಯದಲ್ಲಿ ಕಂಗೊಳಿಸುವ ಧಾರ್ಮಿಕ ಶ್ರದ್ದಾಕೇಂದ್ರವಾದ ಜೇನುಕಲ್ಲಮ್ಮ ಹಲವು ಜನಾಂಗಗಳ ಕುಲದೇವತೆಯಾಗಿ ನೆಲೆ ನಿಂತಿರುವ ದೇವಿಗೆ ಪ್ರಧಾನ ಅರ್ಚಕ ಭಾಸ್ಕರ್ ಜೋಯ್ಸ್ ನೇತೃತ್ವದಲ್ಲಿ ಪುರೋಹಿತ ಬಳಗ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಪಿತೃ ಪಕ್ಷದಲ್ಲಿ ಹುಣ್ಣಿಮೆಯಿಂದ ಅಮಾವಾಸ್ಯೆಯ ವರೆಗೆ ಎರಡು ಮಂಗಳವಾರ ಶುಕ್ರವಾರದೊಂದು…
ಅಕಾಲಿಕ ಮಳೆಗೆ ರಸ್ತೆ ಕುಸಿದು ಸಂಪರ್ಕ ಕಡಿತ : ದುರಸ್ತಿಗಾಗಿ ಗ್ರಾಮಸ್ಥರ ಒತ್ತಾಯ
ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಹಾರಂಬಳ್ಳಿ ಮಳವಳ್ಳಿ ಗಾಜಿನಗೋಡು ಗ್ರಾಮದ ಸಂಪರ್ಕ ರಸ್ತೆಯು ಇತ್ತೀಚೆಗೆ ಬಂದ ಅಕಾಲಿಕ ಭಾರಿ ಮಳೆಯಿಂದಾಗಿ ರಸ್ತೆ ಮಧ್ಯದಲ್ಲಿ ಅಳದ ಬೃಹತ್ ಹೊಂಡ ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿದೆ. ಈ ರಸ್ತೆಯ ಮಾರ್ಗದಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಮತ್ತು ಕೃಷಿ ಚಟುವಟಿಕೆಗಾಗಿ ಓಡಾಡುವ ಸಂಪರ್ಕ ರಸ್ತೆಯಾಗಿದ್ದು ಭಾರಿ ಮಳೆಯಿಂದಾಗಿ ಗುಡ್ಡದ ನೀರು ಏಕಾಏಕಿ ನುಗ್ಗಿ ಚರಂಡಿ ತುಂಬಿ ಉಕ್ಕಿ ಹರಿದ ಪರಿಣಾಮ ಸಂಪರ್ಕ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿ ಓಡಾಡಕ್ಕೆ ತುಂಬಾ…