ಜಿಲ್ಲಾ ಸುದ್ದಿ:
ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ನವರಿಗೆ ಹೊಂಬುಜ ಮಠದಿಂದ “ಸಮಾಜಭೂಷಣ” ಗೌರವ – 75 ನೇ ಜನ್ಮದಿನಾಚರಣೆಗೆ ಶುಭ ಹಾರೈಕೆ
ಹೊಂಬುಜ : ಹಿರಿಯ ರಾಜಕಾರಣಿ, ಶಿವಮೊಗ್ಗ ನಗರದ ಜನಪ್ರೀಯ ಮಾಜಿ ಶಾಸಕರು ಹಾಗೂ ಕರ್ನಾಟಕ ಘನ ಸರ್ಕಾರದ ಮಾಜಿ ಉಪ ಮುಖ್ಯಮಂತ್ರಿಗಳಾದ ಕೆ.ಎಸ್. ಈಶ್ವರಪ್ಪರವರಿಗೆ 75ನೇ ಜನ್ಮ ದಿನಾಚರಣೆಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಹೊಂಬುಜ ಜೈನ ಮಠದ ಪೀಠಾಧಿಕಾರಿಗಳಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಇವರ ಸೇವೆಗಾಗಿ ಅಭಿನಂದಿಸಿ, “ಸಮಾಜಭೂಷಣ” ಉಪಾಧಿಯನ್ನು ನೀಡಿ ಗೌರವಿಸಿ, ಶ್ರೀಕ್ಷೇತ್ರ ಹೊಂಬುಜದ ಭಗವಾನ ಶ್ರೀ 1008 ಪಾರ್ಶ್ವನಾಥ ಸ್ವಾಮಿ, ಜಗನ್ಮಾತೆ ಶ್ರೀ ಪದ್ಮಾವತಿ ಅಮ್ಮನವರ ಅನುಗ್ರಹ ಸದಾ…
ನಿರ್ಮಲ ಗ್ರಾಮ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ರಿಪ್ಪನ್‌ಪೇಟೆ ಗ್ರಾಮ ಪಂಚಾಯತಿ ಅನೈರ್ಮಲ್ಯದತ್ತ…??? ಎಲ್ಲೆಂದರಲ್ಲಿ ಕಸ ಹರಡಿಕೊಂಡು ದುರ್ನಾತ ಬೀರುತ್ತಿರುವ ತ್ಯಾಜ್ಯ ವಿಲೇವಾರಿ ಘಟಕ……!
ಕಸ ವಿಲೇವಾರಿ, ಸ್ವಚ್ಛತೆ ಹಾಗೂ ನೈರ್ಮಲ್ಯ ವಿಷಯದಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಗ್ರಾಮ ಪಂಚಾಯತಿಗೆ ಅನೈರ್ಮಲ್ಯದ ಸೋಂಕು ಮೆತ್ತಿಕೊಂಡಿದೆ. ಹೌದು ಪಟ್ಟಣದ ತೀರ್ಥಹಳ್ಳಿ ರಸ್ತೆಯಲ್ಲಿರುವ ಹಳೆಯ ಕಸ ವಿಲೇವಾರಿ ಘಟಕದಲ್ಲಿರುವ ತ್ಯಾಜ್ಯಗಳನ್ನು ನೋಡಿದರೆ ಹಾಗನಿಸದೇ ಇರದು. 2022 ರಲ್ಲಿ ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗಾಗಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಹೊಸನಗರ ರಸ್ತೆಯ ಗವಟೂರು ಹೊಳೆಯ ಸಮೀಪದಲ್ಲಿ ರಾಜ್ಯಕ್ಕೆ ಮಾದರಿಯಾಗುವ ಘನತ್ಯಾಜ್ಯ ಸಂಪನ್ಮೂಲ ಸಂಸ್ಕರಣ ಮತ್ತು ನಿರ್ವಹಣಾ ಘಟಕ ಸ್ಥಾಪನೆ ಮಾಡಲಾಯಿತು.ಪ್ರಸ್ತುತ ಅಲ್ಲಿಯೇ…
ರಿಪ್ಪನ್‌ಪೇಟೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಎರಡು ದಿನ ( ಜೂ.08 ಮತ್ತು 09 ರಂದು) ವಿದ್ಯುತ್ ವ್ಯತ್ಯಯ : ಎಲ್ಲೆಲ್ಲಿ ಗೊತ್ತಾ ?? ಈ ಸುದ್ದಿ ನೋಡಿ..|mescom
ರಿಪ್ಪನ್ ಪೇಟೆ : ಪಟ್ಟಣದ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ನಾಳೆ 08/06/23 ಮತ್ತು 09/06/2023 ರಂದು ಬೆಳಿಗ್ಗೆ 9-00 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಜ. 23 ಮತ್ತು 24 ರಂದು ಬೃಹತ್ ಕಾಮಗಾರಿ ವಿಭಾಗ ಕವಿಪ್ರನಿನಿ ಶಿವಮೊಗ್ಗ ಇವರು 110 ಕೆವಿ ಎಸ್ಎಸ್ 2 ಮಾರ್ಗವನ್ನು ಕುಂಸಿ ವಿವಿ ಕೇಂದ್ರದ ಹತ್ತಿರ ಕಾಮಗಾರಿ ನಡೆಸಲು 110 ಕೆವಿ ಎಸ್ಎಸ್ 1 ಮತ್ತು 110 ಕೆವಿ ಎಸ್ಎಸ್ 2 ಮಾರ್ಗದ ಮಾರ್ಗ ಮುಕ್ತತೆ…
ಹೊಸನಗರ – ತೀರ್ಥಹಳ್ಳಿ ತಾಲ್ಲೂಕಿನ ಮಹಿಳೆಯರಿಗಿಲ್ಲ ಕಾಂಗ್ರೆಸ್ ಪಕ್ಷದ ಒಂದು ಗ್ಯಾರೆಂಟಿ| ಉಚಿತವಾಗಿ ಓಡಾಡಲು ಇಲ್ಲಿ ಸರ್ಕಾರಿ ಬಸ್ಸುಗಳೇ ಇಲ್ಲಾ|congress guaranty
ಹೊಸನಗರ – ತೀರ್ಥಹಳ್ಳಿ ತಾಲ್ಲೂಕಿನ ಮಹಿಳೆಯರಿಗಿಲ್ಲ ಕಾಂಗ್ರೆಸ್ ಪಕ್ಷದ ಒಂದು ಗ್ಯಾರೆಂಟಿ ರಿಪ್ಪನಪೇಟೆ : ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ ಗ್ಯಾರಂಟಿ ಯೋಜನೆಯಡಿ ಅಧಿಕಾರ ಹಿಡಿದಿರುವ ಕಾಂಗ್ರೆಸ್ ಪಕ್ಷ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಹೊಸನಗರ ತಾಲ್ಲೂಕಿನ ಮಹಿಳೆಯರಿಗೆ ಪ್ರೀ ಭಾಗ್ಯ ಯೋಜನೆಯ ಸೌಲಭ್ಯದಿಂದ ವಂಚಿತರನ್ನಾಗಿಸಿದೆ…………! ಶಿವಮೊಗ್ಗ-ತೀರ್ಥಹಳ್ಳಿ-ಹೊಸನಗರ- ಕುಂದಾಪುರ ಮಂಗಳೂರು-ಉಡುಪಿ ರಾಜ್ಯ ಹೆದ್ದಾರಿ ಸಂಪರ್ಕದ ಹಲವು ತಾಲ್ಲೂಕಿನ ಖಾಸಗಿ ಬಸ್‌ಗಳಿಂದಾಗಿ ಸರ್ಕಾರದ ಕೆಂಪು ಬಸ್ ಇಲ್ಲದೆ ರೈತ ಮಹಿಳೆಯರ ಮೂಗಿಗೆ ತುಪ್ಪಾ ಸವರಿದಂತಾಗಿ ಮಹಿಳೆಯರು…
ಗತ್ತು ಗೈರತ್ತು ತೋರದೆ ಸದಾ ಮತದಾರರ ಸಮಸ್ಯೆಗೆ ಸ್ಪಂದಿಸಿರುವುದೇ ನನ್ನ ಗೆಲುವಿಗೆ ಪೂರಕ – ಆರಗ ಜ್ಞಾನೇಂದ್ರ|araga
ಗತ್ತು ಗೈರತ್ತು ತೋರದೆ ಸದಾ ಮತದಾರರ ಸಮಸ್ಯೆಗೆ ಸ್ಪಂದಿಸಿರುವುದೇ ನನ್ನ ಗೆಲುವಿಗೆ ಪೂರಕ – ಆರಗ ಜ್ಞಾನೇಂದ್ರ ರಿಪ್ಪನ್‌ಪೇಟೆ;-ಗೃಹ ಸಚಿವನಾಗಿ ಕ್ಷೇತ್ರದ ರಾಜ್ಯ ಸುತ್ತಿದರೂ ಕೂಡಾ ಕ್ಷೇತ್ರದ ಮತದಾರರ ಮತ್ತು ಕಾರ್ಯಕರ್ತರ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸಿ ಗತ್ತು ಗೈರತು ಜನರೊಂದಿಗೆ ಬೆರತು ಪ್ರೀತಿ ವಿಶ್ವಾಸದಿಂದಿರುವುದಕ್ಕೆ ಮರು ಅಯ್ಕೆ ಮಾಡಿದ್ದಾರೆಂದು ಮಾಜಿ ಸಚಿವ ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ರಿಪ್ಪನ್‌ಪೇಟೆ ಸಮೀಪದ ಹೆದ್ದಾರಿಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೆದ್ದಾರಿಪುರದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹಲವು…
ಕಾರು ಡಿಕ್ಕಿಯಾಗಿ ಜಿಂಕೆ ಸಾವು|deer
ಶಿವಮೊಗ್ಗ ಜಿಲ್ಲೆಯ ಚೋರಡಿ ಸಮೀಪ ಭಾನುವಾರ ಸಂಜೆ ವಾಹನಕ್ಕೆ ಡಿಕ್ಕಿಯಾಗಿ ಜಿಂಕೆಯೊಂದು ಸಾವಿಗೀಡಾದ ಘಟನೆ ನಡೆದಿದೆ. ಬಿ.ಹೆಚ್.ರಸ್ತೆಯ ಕುಮದ್ವತಿ ಸೇತುವೆಗೆ ಅನತಿ ದೂರದಲ್ಲಿಯೇ ಈ ಘಟನೆ ನಡೆದಿದೆ. ಸಾಗರದಿಂದ ಶಿವಮೊಗ್ಗ ಕಡೆ ಬರುತಿದ್ದ ಇನ್ನೋವಾ ಕಾರಿಗೆ ವೇಗವಾಗಿ ರಸ್ತೆ ದಾಟುತಿದ್ದ ಗಂಡು ಜಿಂಕೆಯೊಂದು ಡಿಕ್ಕಿ ಹೊಡೆದಿದೆ. ಚಾಲಕನ ಗಮನಕ್ಕೆ ಬಾರದೆ ಏಕಾಏಕಿ ರಸ್ತೆ ದಾಟಿದ ಜಿಂಕೆ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದೆ. ತಲೆಗೆ ತೀವ್ರ ಪೆಟ್ಟು ಬಿದ್ದ ಜಿಂಕೆ ಸ್ಥಳದಲ್ಲಿಯೇ ಸಾವಿಗೀಡಾಗಿದೆ. …
ಹೊಸನಗರ : ರೈತನ ಬೆಳೆ ನಾಶಪಡಿಸಿದ ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ದ ಆರಗ ಮತ್ತು ಹಾಲಪ್ಪ ನೇತ್ರತ್ವದಲ್ಲಿ ಅಹೋರಾತ್ರಿ ಧರಣಿ|hosanagar
ಹೊಸನಗರ : ರೈತನ ಸಾಗುವಳಿ ಜಮೀನಿನಲ್ಲಿ ಬೆಳೆದಿದ್ದ ಬೆಳೆಯನ್ನು ನಾಶಪಡಿಸಿದ ಅಧಿಕಾರಿಗಳು ಹಾಗೂ ರೈತ ವಿರೋಧಿ ಸರ್ಕಾರದ ವಿರುದ್ದ ಮಾಜಿ ಗೃಹ ಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ ಮತ್ತು ಮಾಜಿ ಸಚಿವ ಹರತಾಳು ಹಾಲಪ್ಪ ನೇತ್ರತ್ವದಲ್ಲಿ ತಾಲೂಕ್ ಕಛೇರಿ ಮುಂಭಾಗದಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುತ್ತಿದೆ. ಹೊಸನಗರ ತಾಲೂಕಿನ ಕಚ್ಚಿಗೆಬೈಲು ಗ್ರಾಮದಲ್ಲಿ ರೈತರು ಸಾಗುವಳಿ ಮಾಡಿಕೊಂಡ ಜಮೀನಿನಲ್ಲಿ ಬೆಳೆದಿದ್ದ ಬೆಳೆಯನ್ನು JCB ಯಂತ್ರದ ಮೂಲಕ ತೆರವುಗೊಳಿದ ಅಧಿಕಾರಿಗಳ ದೌರ್ಜನ್ಯ ಹಾಗೂ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ…
ಸಂಸದರಿಗೆ ಸಹಕರಿಸುವ ಅಧಿಕಾರಿಗಳ ವರ್ಗಾವಣೆ – ಬಿಜೆಪಿ ಪರವಿರುವ ಅಧಿಕಾರಿಗಳೇ ನಮ್ಮ ಟಾರ್ಗೆಟ್ : ಶಾಸಕ ಬೇಳೂರು|smg
ಶಿವಮೊಗ್ಗ ನಗರದಲ್ಲಿ ನಡೆದ ನೂತನ ಸಚಿವ ಮಧು ಬಂಗಾರಪ್ಪರಿಗೆ ಸ್ವಾಗತ ಹಾಗೂ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ರವರು ಜಿಲ್ಲೆಯಲ್ಲಿನ ಅಧಿಕಾರಿಗಳ ಪೈಕಿ ಕೆಲವರು ಬಿಜೆಪಿ ಮನಸ್ಥಿತಿಯವರು ಇದ್ದಾರೆ, ಅಂತವರನ್ನ ಕಿತ್ತುಹಾಕಬೇಕಿದೆ ಎಂದರು. ಅಲ್ಲದೆ, ಜಿಲ್ಲೆಯಲ್ಲಿ ಸಂಸದರು ಹೇಳಿದ ಹಾಗೆ ಕೇಳುವ ಅವರಿಗೆ ಸಹಕಾರ ನೀಡುವ ಅಧಿಕಾರಿಗಳಿದ್ದು, ಈ ಹಿಂದೆ ಹಲವರು ಅವರ ಚೇಲಾಗಳ ರೀತಿಯಲ್ಲಿ ಕೆಲಸ ಮಾಡಿದ ಉದಾಹರಣೆಯಿದೆ, ಅಂತಹವರನ್ನ ವರ್ಗಾವಣೆ ಮಾಡಬೇಕಿದೆ ಎಂದರು. ದರಿದ್ರ ಬಿಜೆಪಿ ಸರ್ಕಾರವನ್ನು ಕಿತ್ತು…
SSLC ಪಾಸಾದವರ ಗಮನಕ್ಕೆ : ಸರ್ಕಾರಿ ಕೈಗಾರಿಕಾ ಸಂಸ್ಥೆಯಲ್ಲಿ ತರಬೇತಿಗೆ ಅರ್ಜಿ ಆಹ್ವಾನ
ಶಿವಮೊಗ್ಗ : ಕೈಗಾರಿಕೆ ತರಬೇತಿ ಮತ್ತು ಉದ್ಯೋಗ ಇಲಾಖೆಯ ಶಿವಮೊಗ್ಗ ತಾಲೂಕು ಗಾಜನೂರು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯು ವಿವಿಧ ವೃತ್ತಿಗಳ ಪ್ರವೇಶಕ್ಕಾಗಿ ಮೆರಿಟ್ ಕಂ ರಿಸರ್ವೇಷನ್ ಆಧಾರಿತ ಸರ್ಕಾರಿ ಸೀಟುಗಳಿಗೆ ಎಸ್.ಎಸ್.ಎಲ್.ಸಿ.ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಂದ ಆನ್ಲೈನ್ /ಆಫ್ಲೈನ್ ಅರ್ಜಿ ಆಹ್ವಾನಿಸಿದೆ. 2 ವರ್ಷಗಳ ವೃತ್ತಿ ತರಬೇತಿಗಳಾದ ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟೆಂಟ್, ಎಲೆಕ್ಟ್ರೀಷಿಯನ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಇನ್ಸ್ಟ್ರುಮೆಂಟ್ ಮೆಕ್ಯಾನಿಕ್, ಮೆಕ್ಯಾನಿಕ್ ಎಲೆಕ್ಟ್ರಿಕ್ ವೆಹಿಕಲ್. ಫಿಟ್ಟರ್, ಅಡ್ವಾನ್ಸ್ ಸಿ.ಎನ್.ಸಿ., ಬೇಸಿಕ್ ಡಿಸೈನರ್ ಮತ್ತು ವರ್ಚುಯಲ್ ವೆರಿಫೈಯರ್…
ಸಾಗರದ ಮಾಜಿ ಶಾಸಕರಾದ ಬಿ ಧರ್ಮಪ್ಪ ನಿಧನ|ex mla
ಸಾಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ವಕೀಲರಾದ ಬಿ ಧರ್ಮಪ್ಪ ರವರು ವಯೋಸಹಜ ನಿಧನರಾಗಿದ್ದಾರೆ. ಬೆಂಗಳೂರಿನ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಅವರು ಇಂದು ಸಂಜೆ 3.40 ರ ಸಮಯದಲ್ಲಿ ಕೊನೆಯುಸಿರೆಳೆದರು. ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಬಿ ಧರ್ಮಪ್ಪ ರವರು 1985 ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ಎಲ್ ಟಿ ತಿಮ್ಮಪ್ಪ ರವರ ವಿರುದ್ದ 1500 ಮತಗಳ ಅಂತರದಿಂದ ಜಯಗಳಿಸಿದ್ದರು. ಮೂಲತಃ ಸಾಗರ ತಾಲೂಕಿನ ತಂಗಳವಾಡಿಯವರಾದ ಇವರು ಪ್ರಸ್ತುತ ಬೆಂಗಳೂರಿನಲ್ಲಿ ಕುಟುಂಬದೊಂದಿಗೆ ನೆಲೆಸಿದ್ದರು. ಕೆಲವು ದಿನಗಳ…