ಜಿಲ್ಲಾ ಸುದ್ದಿ:
ವರುಣನ ಕೃಫೆಗಾಗಿ ಮೂಲೆಗದ್ದೆ ಶ್ರೀಗಳಿಂದ ಮೌನ ಶಿವಜಪಾನುಷ್ಠಾನ ಪೂಜೆ|moolegadde
`ವರುಣನ ಕೃಫೆಗಾಗಿ ಮೂಲೆಗದ್ದೆ ಶ್ರೀಗಳಿಂದ ಮೌನ ಶಿವಜಪಾನುಷ್ಠಾನ ಪೂಜೆ’’ ರಿಪ್ಪನ್‌ಪೇಟೆ;-ಶ್ರಾವಣ ಮಾಸದಲ್ಲಿ ಶಿವಪೂಜೆಯೊಂದಿಗೆ ಶಿವಮಂತ್ರ ಪಠಣ ಮಾಡುವುದರಿಂದ ಪಾಪ ದೂರವಾಗಿ ಪುಣ್ಯಪ್ರಾಪ್ತಿಯಾಗುವುದೆಂದು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮ ಮಠದ ಮ.ನಿ.ಪ್ರ.ಆಭಿನವ ಚನ್ನಬಸವ ಮಹಾಸ್ವಾಮಿಜಿ ಹೇಳಿದರು. ಅವರು ಸಮೀಪದ ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮ ಮಠದಲ್ಲಿ “ಶ್ರಾವಣ ಮಾಸದ ಅಂಗವಾಗಿ ಅಯೋಜಿಸಲಾದ ಶಿವಪೂಜೆ’’ ಕಾರ್ಯಕ್ರಮದೊಂದಿಗೆ ಮಳೆಯಿಲ್ಲದೇ ರೈತರು ಕಂಗಾಲಾಗಿದ್ದು ವರುಣನ ಕೃಫೆಗಾಗಿ ಶ್ರೀಗಳು ಮೌನಜಪಾನುಷ್ಟಾನ ಶಿವಪೂಜೆಯನ್ನು ನೆರವೇರಿಸಿದರು. ಈ ಪೂಜಾ ಕಾರ್ಯದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಭಾಗವಹಿಸಿ ದರ್ಶನಾಶೀರ್ವಾದ ಪಡೆದರು.
ಆಗುಂಬೆ ಘಾಟಿಯಲ್ಲಿ ಭಾರೀ ವಾಹನ ಸಂಚಾರ ನಿಷೇಧ ಹಿಂಪಡೆತ; ಸಂಚಾರಕ್ಕೆ ಅನುವು|agumbe
ಆಗುಂಬೆ ಘಾಟಿಯಲ್ಲಿ ಭಾರಿ ವಾಹನ ಸಂಚಾರ ನಿಷೇಧವನ್ನು ಹಿಂಪಡೆದು ಎಲ್ಲಾ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ 169 ಎ ತೀರ್ಥಹಳ್ಳಿ ಮಲ್ಪೆ ರಸ್ತೆ ಆಗುಂಬೆ ಘಾಟಿಯಲ್ಲಿ 6, 7 ಮತ್ತು 11 ನೇ ತಿರುವಿನಲ್ಲಿ ಭಾರಿ ಮಳೆಯಿಂದಾಗಿ ಮತ್ತು ಭಾರೀ ವಾಹನಗಳ ಓಡಾಟದಿಂದ ಸಣ್ಣ ಬಿರುಕುಗಳು ಹಾಗೂ ಅಲ್ಲಲ್ಲಿ ರಸ್ತೆ ಕುಸಿತ ಕಂಡು ಬಂದ ಹಿನ್ನೆಲೆ ದಿ: 15.09.2023 ರವರೆಗೆ ಅಧಿಸೂಚಿಸಲಾಗಿದ್ದ ಭಾರೀ ವಾಹನ ಸಂಚಾರ ನಿಷೇಧವನ್ನು ಹಿಂಪಡೆದು ಸಂಚಾರಕ್ಕೆ ಅನುವು ಮಾಡಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ…
ವಿದ್ಯಾರ್ಥಿಗಳಿಗೆ ಪಾಕಿಸ್ತಾನಕ್ಕೆ ಹೋಗಿ ಎಂದಿದ್ದ ಶಿಕ್ಷಕಿ ವರ್ಗಾವಣೆ|district news
ವಿದ್ಯಾರ್ಥಿಗಳಿಗೆ ಪಾಕಿಸ್ತಾನಕ್ಕೆ ಹೋಗಿ ಎಂದಿದ್ದ ಶಿಕ್ಷಕಿ ವರ್ಗಾವಣೆ ಶಿವಮೊಗ್ಗ : ವಿದ್ಯಾರ್ಥಿಗಳಿಗೆ ಪಾಕಿಸ್ತಾನಕ್ಕೆ ಹೋಗಿ ಎಂದು ಗದರಿದ್ದಾರೆಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಮೇಲೆ ಶಾಲೆಯ ಶಿಕ್ಷಕಿಯನ್ನು ಬೇರೆಡೆ ವರ್ಗಾವಣೆ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ನಗರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದೆ. ಇಲ್ಲಿನ ಶಿಕ್ಷಕಿಯೊಬ್ಬರು ಪಾಠ ಮಾಡುವಾಗ ಪಾಠ ಕೇಳದ ವಿದ್ಯಾರ್ಥಿಗಳಿಗೆ ಸರಿಯಾಗಿ ಪಾಠ ಕೇಳುವಂತೆ ತಿಳಿಸಿದ್ದಾರೆ. ಇದಕ್ಕೆ ವಿದ್ಯಾರ್ಥಿಗಳು ಸರಿಯಾಗಿ ಸ್ಪಂದಿಸದ ಕಾರಣ ಶಿಕ್ಷಕಿ ನೀವು ಇಲ್ಲಿ ಇರುವ…
ರಿಪ್ಪನ್‌ಪೇಟೆಯ ಶಿಕ್ಷಕ ತಿಮ್ಮಪ್ಪರವರಿಗೆ ಒಲಿದ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ |Rpet news
ರಿಪ್ಪನ್‌ಪೇಟೆಯ ಶಿಕ್ಷಕ ತಿಮ್ಮಪ್ಪರವರಿಗೆ ಒಲಿದ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ | ರಿಪ್ಪನ್‌ಪೇಟೆ : ಪಟ್ಟಣದ ವಿನಾಯಕನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ತಿಮ್ಮಪ್ಪ ಸಿ ರವರು ಸೇರಿದಂತೆ ಹೊಸನಗರ ತಾಲೂಕಿನ ಮೂವರು ಶಿಕ್ಷಕರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಒಲಿದಿದೆ. ಮೂಲತಃ ಆಯನೂರು ಸಮೀಪದ ಕುಂಸಿ ಗ್ರಾಮದ ನಿವಾಸಿ ತಿಮ್ಮಪ್ಪ ಸಿ ರವರು ಕಳೆದ 14 ವರ್ಷಗಳಿಂದ ಪಟ್ಟಣದ ವಿನಾಯಕ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತಿದ್ದಾರೆ. ತಿಮ್ಮಪ್ಪ ಸಿ ರವರಿಗೆ…
ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಪ್ರತಿಭೆ ಅರಳಲು ಪ್ರತಿಭಾ ಕಾರಂಜಿ ಪೂರಕ – ಶಿಕ್ಷಣಾಧಿಕಾರಿ ಹೆಚ್ ಆರ್ ಕೃಷ್ಣಮೂರ್ತಿ|Prathibha karanji
ಗ್ರಾಮೀಣ ಪ್ರದೇಶದ ಮಕ್ಕಳ ಪ್ರತಿಭೆ ಅರಳಲು ಪ್ರತಿಭಾ ಕಾರಂಜಿ ಪೂರಕ – ಶಿಕ್ಷಣಾಧಿಕಾರಿ ಹೆಚ್ ಆರ್ ಕೃಷ್ಣಮೂರ್ತಿ ರಿಪ್ಪನ್‌ಪೇಟೆ : ಗ್ರಾಮೀಣ ಪ್ರದೇಶದಲ್ಲಿ ಮಕ್ಕಳ ಪ್ರತಿಭೆ ಅರಳಲು ಇಂತಹ ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ಪೂರಕವಾಗಿವೆ ಎಂದು ಹೊಸನಗರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಹೆಚ್ ಆರ್ ಕೃಷ್ಣಮೂರ್ತಿ ಹೇಳಿದರು. ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ತಳಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮೂಗುಡ್ತಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿ ಪ್ರತಿಭಾ ಕಾರಂಜಿ…
ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾದ ಮಾದಾಪುರ ಶಾಲೆಯ ಫೌಜಿಯಾ ಸರವತ್|district news
ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾದ ಮಾದಾಪುರ ಶಾಲೆಯ ಫೌಜಿಯಾ ಸರವತ್| ರಿಪ್ಪನ್‌ಪೇಟೆ : ಕರ್ನಾಟಕ ಶಿಕ್ಷಣ ಇಲಾಖೆ 2023-24ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ರಾಜ್ಯ ಸರ್ಕಾರ ಶನಿವಾರ ಪ್ರಕಟಿಸಿದೆ. ಪಟ್ಟಣದ ಸಮೀಪದ ಕೆಂಚನಾಲ ಗ್ರಾಪಂ ವ್ಯಾಪ್ತಿಯ ಮಾದಾಪುರ ಸರ್ಕಾರಿ ಶಾಲೆಯ ಶಿಕ್ಷಕಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ದೊರೆತಿದೆ. ಓರ್ವ ವಿಶೇಷ ಶಿಕ್ಷಕ ಸೇರಿ 11 ಮಂದಿಗೆ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಈ ಭಾರಿ ನೀಡಲಾಗುತ್ತಿದೆ. ರಾಜ್ಯ…
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಅಂತೂ ಹಿಂದಿಯಿಂದ ಕನ್ನಡಕ್ಕೆ ಬದಲಾದ ಮಾಹಿತಿ ಫಲಕ|airport
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಹಿಂದಿಯಲ್ಲಿ ಇರುವ ಡಿಜಿಟಲ್ ಫಲಕಕ್ಕೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ಸರ್ಕಾರ ಕನ್ನಡ ಡಿಜಿಟಲ್ ಫಲಕ ಅಳವಡಿಸಿದೆ. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಹಿಂದಿ ಫಲಕ ಇರುವುದನ್ನು ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು ಸಚಿವ ಎಂಬಿ ಪಾಟೀಲ್ ಗಮನಕ್ಕೆ ತಂದಿದ್ದರು. “ಇದು ಯಾವುದೋ ಹಿಂದಿ ರಾಜ್ಯವಲ್ಲ ಇದು ಕರ್ನಾಟಕ.. ಇಲ್ಲಿ ಹಿಂದಿ ಅವಶ್ಯಕತೆ ಇಲ್ಲ. ಇದನ್ನು ತೆಗೆಸಿ ಕನ್ನಡದಲ್ಲಿ ಹಾಕಿಸಿ. ಕರ್ನಾಟಕ ಸರ್ಕಾರವೇ ನಿರ್ವಹಿಸಲಿರುವ ನಾಳೆಯಿಂದ ಶಿವಮೊಗ್ಗ-ಬೆಂಗಳೂರು ನಡುವೆ ವಿಮಾನ ಸೇವೆಗಳು ಪ್ರಾರಂಭವಾಗುವ ಶಿವಮೊಗ್ಗ ವಿಮಾನ…
ಆರು ವರ್ಷದ ಮಗು ಸೇರಿ ಐವರ ಮೇಲೆ ಹುಚ್ಚು ನಾಯಿ ದಾಳಿ|dog attack
ಆರು ವರ್ಷದ ಮಗು ಸೇರಿ ಐವರ ಮೇಲೆ ಹುಚ್ಚು ನಾಯಿ ದಾಳಿ ನಡೆಸಿರುವ ಘಟನೆ ಶಿವಮೊಗ್ಗ ತಾಲ್ಲೂಕಿನ ಬಿ.ಬೀರನಹಳ್ಳಿ ಗ್ರಾಪಂ ವ್ಯಾಪ್ತಿಯ ಹೊಳೆಬೆಳಗಲು ಗ್ರಾಮದಲ್ಲಿ ನಡೆದಿದೆ. ಮಗುವಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾಲಾ ವಾಹನ ಇಳಿದು ಮನೆಗೆ ಹೋಗುವಾಗ ಆರು ವರ್ಷದ ಬಾಲಕಿ ದಾಳಿ ನಡೆಸಿದ್ದು ಮುಖದ ಮೇಲೆ ಗಾಯಗಳಾಗಿವೆ. ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಂದು ಮಗುವಿನ ಮೇಲೆ ದಾಳಿಗೆ ಮುಂದಾದಾಗ ಪೋಷಕರು ರಕ್ಷಿಸಿದ್ದಾರೆ. ವಯಸ್ಕರು ಹಾಗೂ ಹಸುವಿನ ಮೇಲೆಯೂ ದಾಳಿ ನಡೆಸಿದೆ. ನಾಯಿಗೆ…
ರಿಪ್ಪನ್‌ಪೇಟೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಾಳೆ (03-09-2023) ವಿದ್ಯುತ್ ವ್ಯತ್ಯಯ : ಎಲ್ಲೆಲ್ಲಿ ಗೊತ್ತಾ ?? ಈ ಸುದ್ದಿ ನೋಡಿ…
ರಿಪ್ಪನ್ ಪೇಟೆ : ಪಟ್ಟಣದ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ನಾಳೆ 03/09/23 ರಂದು ಬೆಳಿಗ್ಗೆ 9-00 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಜ110/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರ ರಿಪ್ಪನ್‌ಪೇಟೆ ಇದರ ತುರ್ತು ನಿರ್ವಹಣಾ ಕಾರ್ಯದ ಪ್ರಯುಕ್ತ 03/09/23 ರಂದು ಬೆಳಿಗ್ಗೆ 9-00 ರಿಂದ ಸಂಜೆ 6 ಗಂಟೆಯ ಸಮಯದಲ್ಲಿ ತುರ್ತು 5 ಗಂಟೆ ವ್ಯತ್ಯಯವಾಗುವುದು. ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ ??? ರಿಪ್ಪನ್ ಪೇಟೆ,ಹೆದ್ದಾರಿಪುರ,ಕೆಂಚನಾಲ,ಗರ್ತಿಕೆರೆ, ಬೆಳ್ಳೂರು,ಅರಸಾಳು,ಕೋಡೂರು ಮತ್ತು ಚಿಕ್ಕಜೇನಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರದೇಶಗಳಲ್ಲಿ…
ರಿಪ್ಪನ್‌ಪೇಟೆ : ಶಾಲಾ ಬಾಲಕನ ಬ್ಯಾಗ್ ನಲ್ಲಿದ್ದ ನಾಗರಹಾವು|rpet news
ಶಾಲಾ ಬಾಲಕನ ಬ್ಯಾಗ್ ನಲ್ಲಿ ನಾಗರಾಜ….!! ರಿಪ್ಪನ್ ಪೇಟೆ : ಸಮೀಪದ ಬಾಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿ ಭುವನ್ ಬ್ಯಾಗಿನಲ್ಲಿ ಸದ್ದಿಲ್ಲದೆ ಮಲಗಿದ್ದ ನಾಗರಾಜ..! ಶುಕ್ರವಾರ ಬೆಳಗ್ಗೆ ಶಾಲೆಯ ಬೆಲ್ಲು ಹೊಡೆದು ತರಗತಿ ಪ್ರಾರಂಭವಾದಾಗ ನಲಿಕಲಿ ತರಗತಿಯ ಶಿಕ್ಷಕ ಪಾಠ ಓದಲು ಪುಸ್ತಕ ಬ್ಯಾಗಿನಿಂದ ಹೊರ ತೆಗೆಯುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿ, ಹಾಜರಾತಿ ಕರೆಯುತ್ತಿದ್ದರು.ವಿದ್ಯಾರ್ಥಿ ಭುವನ್ ಶಿಕ್ಷಕರ ಅಣತಿಯಂತೆ ಪುಸ್ತಕ ಹೊರತೆಗೆದಾಗ ಖಾಲಿ ಬ್ಯಾಗಿನಲ್ಲಿ ಮಲಗಿದ್ದ ಹಾವನ್ನು ಕಂಡಿದ್ದಾನೆ. ತನ್ನ ಪಕ್ಕದಲ್ಲಿ ಕುಳಿತಿದ್ದ…