ರಿಪ್ಪನ್‌ಪೇಟೆ : ಕೆಲವೇ ದಿನಗಳಲ್ಲಿ ವಿಧಾನ ಪರಿಷತ್ ಚುನಾವಣೆ ಘೋಷಣೆಯಾಗೋ ಸಾಧ್ಯತೆ ಇದೆ. ಇದಕ್ಕೂ ಮುನ್ನಾ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಮತದಾರರ ಪಟ್ಟಿ ತಯಾರಿಕೆ ಕೂಡ ಆರಂಭಗೊಂಡಿದೆ.
ಮುಂಬರುವ ವಿಧಾನ ಪರಿಷತ್ ಚುನಾವಣೆಗಾಗಿ ಮತದಾರರ ಪಟ್ಟಿ ತಯಾರಿಕೆಗೆ ಸಿದ್ಧತೆಯನ್ನು ಚುನಾವಣಾ ಆಯೋಗ ಆರಂಭಿಸಿದೆ. ಇಂತಹ ಮತದಾರರ ಪಟ್ಟಿಗೆ ಪದವೀಧರರಾದಂತ ನೀವು ಅರ್ಜಿಯನ್ನು ಸಲ್ಲಿಸೋದು ಹೇಗೆ.? ಅರ್ಹತೆಗಳು ಏನು ಅನ್ನೋ ಬಗ್ಗೆ ಕೂಡ ಮಾಹಿತಿ ನೀಡಿದೆ.
ಈ ಹಿನ್ನಲೆಯಲ್ಲಿ ಪೋಸ್ಟ್ ಮ್ಯಾನ್ ನ್ಯೂಸ್ ಬಳಗದ ವತಿಯಿಂದ ರಿಪ್ಪನ್‌ಪೇಟೆಯ ಪೋಸ್ಟ್ ಮ್ಯಾನ್ ನ್ಯೂಸ್ ಕಛೇರಿಯಲ್ಲಿ ನೋಂದಣಿಗೆ ಅವಕಾಶ ಮಾಡಿಕೊಡಲಾಗಿದೆ.ಇದರ ಸದುಪಯೋಗವನ್ನು ಎಲ್ಲಾ ಪದವೀಧರರು ಹಾಗೂ ಶಿಕ್ಷಕರು ಪಡೆದುಕೊಳ್ಳುವಂತೆ ಪೋಸ್ಟ್ ಮ್ಯಾನ್ ನ್ಯೂಸ್ ನ ಮುಖ್ಯಸ್ಥರಾದ ರಫ಼ಿ ರಿಪ್ಪನ್‌ಪೇಟೆ ತಿಳಿಸಿದ್ದಾರೆ.
ಅರ್ಹತೆ
ಪದವೀಧರ ಕ್ಷೇತ್ರದ ಚುನಾವಣೆಗೆ PUC ಮುಕ್ತಾಯದ ನಂತರ ಮೂರು ವರ್ಷದ ಸ್ನಾತಕ ಪದವಿ ಪಡೆದು ಮೂರು ವರ್ಷ ಕಳೆದಿರಬೇಕು. ಅಂದರೆ 2020ರ ಮೊದಲು ಪದವಿಯನ್ನು ಪಡೆದವರು ಅರ್ಜಿಯನ್ನು ಸಲ್ಲಿಸಬಹುದು.
ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಮತದಾರರ ಪಟ್ಟಿಗೆ ಅರ್ಜಿಯನ್ನು ಸಲ್ಲಿಸೋರು ಬಿಎ, ಬಿಇಡಿ ಪದವಿಯನ್ನು ಪಡೆದು ಒಂದು ಸಂಸ್ಥೆಯಲ್ಲಿ 3 ವರ್ಷದಿಂದ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿರಬೇಕು.
ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಹೇಗೆ.?
ನೀವು ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಅರ್ಜಿಯನ್ನು ಸಲ್ಲಿಸಬೇಕಾದ್ರೇ ಕೆಲವು ಸೂಕ್ತ ಅರ್ಜಿ ನಮೂನೆಯಲ್ಲಿ ಸಲ್ಲಿಸಬೇಕಾಗಿದೆ.
ಅರ್ಜಿ ನಮೂನೆ-18ರಲ್ಲಿ ಪದವೀಧರ ಕ್ಷೇತ್ರದ ಮತದಾರರ ಪಟ್ಟಿಗೆ ಸೇರ್ಪಡೆ ಮಾಡೋದಕ್ಕೆ ನೀವು ಅರ್ಜಿ ಸಲ್ಲಿಸಬೇಕು. ಅರ್ಜಿ ನಮೂನೆ-19ರಲ್ಲಿ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ನೋಂದಾಯಿಸಿಕೊಳ್ಳೋದಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಸಲ್ಲಿಸಬೇಕಾದ ದಾಖಲೆಗಳು ಏನು.?
ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ನಿಮ್ಮ ಹೆಸರು ನೋಂದಾಯಿಸಿಕೊಳ್ಳೋದಕ್ಕೆ ಕೆಲವು ದಾಖಲೆಗಳನ್ನು ಅರ್ಜಿಯ ಜೊತೆಗೆ ಸಲ್ಲಿಸೋದು ಕಡ್ಡಾಯವಾಗಿದೆ. ಅವುಗಳು ಈ ಕೆಳಗಿನಂತಿವೆ
-ಪದವಿ ಪ್ರಮಾಣಪತ್ರದ ನಕಲು ಪ್ರತಿ
-ಆಧಾರ್ ಕಾರ್ಡ್
-ವೋಟರ್ ಐಡಿ
-ಪಾಸ್ ಪೋರ್ಟ್ ಅಳತೆಯ ಪೋಟೋ.
ಈ ಎಲ್ಲಾ ದಾಖಲೆಗಳನ್ನು ಅರ್ಜಿಯ ಜೊತೆಗೆ ಸಲ್ಲಿಸಬೇಕು. ಈ ನಕಲು ಪ್ರತಿಗಳಿಗೆ ಗೆಜೆಟೆಡ್ ಅಧಿಕಾರಿ ಅಥವಾ ನೋಟರಿ ಮಾಡಿಸಿ ದೃಢೀಕರಣದೊಂದಿಗೆ ನೀವು ಅರ್ಜಿಯನ್ನು ಸಲ್ಲಿಸಬೇಕಾಗಿದೆ.
ಕೊನೆಯ ದಿನಾಂಕ ಎಂದು?
ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ನೀವು ಮತದಾರರ ಪಟ್ಟಿಗೆ ನೋಂದಾಯಿಸಿಕೊಳ್ಳೋದಕ್ಕೆ ಕೊನೆಯ ದಿನಾಂಕ 06-11-2023 ಆಗಿದೆ. ಈ ದಿನಾಂಕದ ಒಳಗಾಗಿ ನೀವು ಮತದಾರರ ಪಟ್ಟಿಗೆ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳೋದು ಮರೆಯಬೇಡಿ.
ಅರ್ಜಿ ಪಡೆದುಕೊಳ್ಳಬೇಕಾದ ಕಛೇರಿಯ ವಿಳಾಸ ;
ಪೋಸ್ಟ್ ಮ್ಯಾನ್ ನ್ಯೂಸ್ ಕಛೇರಿ
ರಿಪ್ಪನ್‌ಪೇಟೆ ಆಪ್ಟಿಕಲ್ಸ್
RBS ಕಾಂಪ್ಲೆಕ್ಸ್ ,ಆಟೋ ನಿಲ್ದಾಣದ ಎದುರು
ವಿನಾಯಕ ವೃತ್ತ ,ರಿಪ್ಪನ್‌ಪೇಟೆ
ಹೊಸನಗರ (ತಾ)
ಮೊ; 9663420169