ಜಿಲ್ಲಾ ಸುದ್ದಿ:
ಪತ್ರಿಕಾ ದಿನಾಚರಣೆ ಅಂಗವಾಗಿ ರಿಪ್ಪನ್‌ಪೇಟೆಯಲ್ಲಿ ವಾಹನ ಚಾಲನೆ ಕಲಿಕಾ ಪರವಾನಗಿ ನೋಂದಣಿ ಶಿಬಿರ (LLR)
ಪತ್ರಿಕಾ ದಿನಾಚರಣೆ ಅಂಗವಾಗಿ ರಿಪ್ಪನ್‌ಪೇಟೆಯಲ್ಲಿ ವಾಹನ ಚಾಲನೆ ಕಲಿಕಾ ಪರವಾನಗಿ ನೋಂದಣಿ ಶಿಬಿರ (LLR) ರಿಪ್ಪನ್‌ಪೇಟೆ : ಪತ್ರಿಕಾ ದಿನಾಚರಣೆ ಅಂಗವಾಗಿ ರಿಪ್ಪನ್‌ಪೇಟೆ ಪತ್ರಕರ್ತರ ಬಳಗ , ಪೊಲೀಸ್ ಇಲಾಖೆ ,ಪ್ರಾದೇಶಿಕ ಸಾರಿಗೆ ಇಲಾಖೆ ಸಾಗರ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಂಯುಕ್ತಾಶ್ರಯದಲ್ಲಿ ಜುಲೈ 06 ರ ಶನಿವಾರ ವಾಹನ ಪೂರ್ವ ಚಾಲನ ಪರವಾನಗಿ(LLR) ಶಿಬಿರವನ್ನು ಆಯೋಜಿಸಲಾಗಿದೆ. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಬೆಳಿಗ್ಗೆ 10.30ಕ್ಕೆ ಆಯೋಜಿಸಿರುವ ವಾಹನ ಪೂರ್ವ ಚಾಲನ ಪರವಾನಗಿ…
ಆಗುಂಬೆ ಘಾಟಿಯಲ್ಲಿ ಓಮಿನಿ ಕಾರ್ ಮೇಲೆ ಉರುಳಿದ ಬೃಹತ್ ಮರ. – ಸಂಚಾರ ಅಸ್ತವ್ಯಸ್ತ | Agumbe
ಆಗುಂಬೆ ಘಾಟಿಯಲ್ಲಿ ಓಮಿನಿ ಕಾರ್ ಮೇಲೆ ಉರುಳಿದ ಬೃಹತ್ ಮರ. – ಸಂಚಾರ ಅಸ್ತವ್ಯಸ್ತ ತೀರ್ಥಹಳ್ಳಿ : ಆಗುಂಬೆ ಘಾಟಿಯಲ್ಲಿ ಓಮಿನಿ ಕಾರ್ ಮೇಲೆ ಬೃಹತ್ ಮರವೊಂದು ಉರುಳಿ ಬಿದ್ದು ಸಂಚಾರ ಅಸ್ತವ್ಯಸ್ತವಾಗಿರುವ ಘಟನೆ ನಡೆದಿದೆ. ಆಗುಂಬೆಯ ನಾಲ್ಕನೆ ತಿರುವಿನಲ್ಲಿ ಈ ಘಟನೆ ಜರುಗಿದ್ದು ಮರ ಬಿದ್ದ ಪರಿಣಾಮ ಓಮಿನಿ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದೆ. ಕಾರಿನಲ್ಲಿ ಇದ್ದ ಸವಾರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ನಾಲ್ಕನೇ ತಿರುವಿನಲ್ಲಿ ಮರ ಬಿದ್ದ ಪರಿಣಾಮ ಸಂಚಾರ ಬಂದ್ ಆಗಿದ್ದು …
ಜಿಲ್ಲೆಯ ಯಾವ್ಯಾವ ತಾಲೂಕಿನಲ್ಲಿ ಎಷ್ಟೆಷ್ಟು ಮಳೆ..!? ಇಲ್ಲಿದೆ ಮಾಹಿತಿ | Rain
ಜಿಲ್ಲೆಯ ಯಾವ್ಯಾವ ತಾಲೂಕಿನಲ್ಲಿ ಎಷ್ಟೆಷ್ಟು ಮಳೆ..!? ಇಲ್ಲಿದೆ ಮಾಹಿತಿ ಶಿವಮೊಗ್ಗ ಜಿಲ್ಲಾದ್ಯಂತ ಬುಧವಾರ ಧಾರಾಕಾರ ಮಳೆಯಾಗಿದ್ದು ಜಿಲ್ಲೆಯಲ್ಲಿ 24 ಗಂಟೆಗಳ ಅವಧಿಯಲ್ಲಿ 55 ಮಿಲಿಮೀಟರ್ ಮಳೆಯಾಗಿದೆ. ತಾಲ್ಲೂಕುವಾರು ಮಳೆಯ ಪ್ರಮಾಣ : ಸಾಗರದಲ್ಲಿ ಅತಿಹೆಚ್ಚು 111.20 MM ಮಳೆಯಾಗಿದೆ. ಹೊಸನಗರ ತಾಲ್ಲೂಕುನಲ್ಲಿ 100.90 MM ಮಳೆಯಾಗಿದೆ. ಭದ್ರಾವತಿಯಲ್ಲಿ ಅತಿ ಕಡಿಮೆ 9.10 MM ಮಳೆಯಾಗಿದೆ. ತೀರ್ಥಹಳ್ಳಿಯಲ್ಲಿಯು 100.80 MM ಮಳೆಯಾಗಿದೆ. ಶಿಕಾರಿಪುರದಲ್ಲಿ 18.80 MM ಮಳೆಯಾಗಿದ್ದು ಸೊರಬ ತಾಲ್ಲೂಕಿನಲ್ಲಿ 34.60 MM ಮಳೆಯಾಗಿದೆ. ಶಿವಮೊಗ್ಗದಲ್ಲಿ 15.30 MM…
ಭಾರಿ ಮಳೆಗೆ ಮನೆ ಮೇಲೆ ಉರುಳಿದ ಬೃಹತ್ ಮರ – ಶಾಸಕ ಬೇಳೂರು ಗೋಪಾಲಕೃಷ್ಣ ಭೇಟಿ | GKB
ಭಾರಿ ಮಳೆಗೆ ಮನೆ ಮೇಲೆ ಉರುಳಿದ ಬೃಹತ್ ಮರ – ಶಾಸಕ ಬೇಳೂರು ಗೋಪಾಲಕೃಷ್ಣ ಭೇಟಿ | GKB ಸಾಗರ : ತಾಲೂಕಿನಾದ್ಯಂತ ಭಾರಿ ಮಳೆ ಸುರಿಯುತಿದ್ದು ಕೆಲವೆಡೆ ಅನಾಹುತಗಳು ಸಂಭವಿಸಿವೆ.ಆವಿನಹಳ್ಳಿ ಸಮೀಪದ ಚಿಪ್ಪಳ್ಳಿಕೊಪ್ಪದಲ್ಲಿ ಎರಡು ಮನೆಗಳ ಮೇಲೆ ಬೃಹತ್ ಮರ ಬಿದ್ದು ಭಾರಿ ಹಾನಿಯಾಗಿತ್ತು.ಈ ಹಿನ್ನಲೆಯಲ್ಲಿ ಸ್ಥಳಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಅವಿನಹಳ್ಳಿ ಹೋಬಳಿಯ ಕೋಳೂರು ಗ್ರಾಮ ಪಂಚಾಯಿತಿ ಚಿಪ್ಪಳಿಕೊಪ್ಪದ ಸುಬ್ಬ ನಾಯಕ್ ಮತ್ತು ಪುರುಷೋತ್ತಮ್ ರವರ ಮನೆಯ…
ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿ ನಾಪತ್ತೆ | Missing
ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿ ನಾಪತ್ತೆ ತೀರ್ಥಹಳ್ಳಿ : ಜೂನ್ 30ರಂದು ಮನೆಯಿಂದ ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿ ಕೆಲಸಕ್ಕೆಂದು ಹೊರಗೆ ಹೋದ 24 ವರ್ಷದ ಪೂಜಾ ಎ.ಕೆ ಈವರೆಗೂ ವಾಪಾಸ್ಸಾಗಿರುವುದಿಲ್ಲ. ಪೂಜಾ ಎ ಕೆ ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯ ಕುಶಾಲ್ ಎಂಬುವವರ ಮಗಳಾಗಿದ್ದಾಳೆ. ಈಕೆಯ ಚಹರೆ 4.06 ಅಡಿ ಎತ್ತರ, ತೆಳುವಾದ ಮೈಕಟ್ಟು, ಕೋಲು ಮುಖ, ಎಣ್ಣೆಕಪ್ಪು ಮೈಬಣ್ಣ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೊರಗೆ ಹೋಗುವಾಗ ನೀಲಿ ಬಣ್ಣದ ಚೂಡಿ ಟಾಪ್…
ಆರ್ ಎಂ ಮಂಜುನಾಥ್ ಗೌಡರಿಗೆ ಒಕ್ಕಲಿಗರ ಸಂಘದಿಂದ ಸನ್ಮಾನ |RMM
ಆರ್ ಎಂ ಮಂಜುನಾಥ್ ಗೌಡರಿಗೆ ಒಕ್ಕಲಿಗರ ಸಂಘದಿಂದ ಸನ್ಮಾನ |RMM ಶಿವಮೊಗ್ಗ ಡಿಸಿಸಿ ಬ್ಯಾಂಕ್ ನ ನಿರ್ದೇಶಕರಾಗಿ ಸತತ 07 ನೇ ಬಾರಿಗೆ ಆಯ್ಕೆಯಾಗಿ 12 ಬಾರಿ ಅಧ್ಯಕ್ಷರಾಗಿರುವ ಸಹಕಾರಿ ಧುರೀಣ, ಮಲೆನಾಡು ಪ್ರದೇಶಾಭಿವೃದ್ಧಿ ಅಧ್ಯಕ್ಷರು ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಆರ್ ಎಂ ಮಂಜುನಾಥ್ ಗೌಡ ರವರಿಗೆ ರಿಪ್ಪನಪೇಟೆ ಒಕ್ಕಲಿಗರ ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಕರಗುಚ್ಚಿಯಲ್ಲಿರುವ ಆರ್ ಎಂ ಮಂಜುನಾಥ್ ಗೌಡರವರ ಮನೆಗೆ ತೆರಳಿದ ರಿಪ್ಪನ್‌ಪೇಟೆ ಒಕ್ಕಲಿಗ ಸಂಘದ ಅಧ್ಯಕ್ಷ ಎಂ ಬಿ…
ರಿಪ್ಪನ್‌ಪೇಟೆ – ಒತ್ತುವರಿಯಾಗಿದ್ದ ಸ್ಮಶಾನದ ಜಾಗ ತೆರವುಗೊಳಿಸಿದ ತಹಶೀಲ್ದಾರ್ ರಶ್ಮಿ ಹಾಲೇಶ್ | Ripponpet
ರಿಪ್ಪನ್‌ಪೇಟೆ – ಒತ್ತುವರಿಯಾಗಿದ್ದ ಸ್ಮಶಾನದ ಜಾಗ ತೆರವುಗೊಳಿಸಿದ ತಹಶೀಲ್ದಾರ್ ರಶ್ಮಿ ಹಾಲೇಶ್ | Ripponpet ರಿಪ್ಪನ್‌ಪೇಟೆ : ಬಾಳೂರು ಗ್ರಾಪಂ ಪಂಚಾಯತಿಗೆ ಒಳಪಡುವ ಮಾವಿನಸರ ಗ್ರಾಮದ ಸರ್ವೆ ನಂ 13 ರಲ್ಲಿ ಹಲವಾರು ವರ್ಷಗಳಿಂದ ಒತ್ತುವರಿಯಾಗಿದ್ದ ಸ್ಮಶಾನದ ಜಾಗವನ್ನು ಹೈಡ್ರಾಮಗಳ ನಡುವೆ ಹೊಸನಗರ ತಹಶೀಲ್ದಾರ್ ರಶ್ಮಿ ಒಳಗೊಂಡ ಅಧಿಕಾರಿಗಳ ತಂಡ ತೆರವುಗೊಳಿಸುವಲ್ಲಿ ಯಶಸ್ವಿಯಾಗಿದೆ. ತಾಲ್ಲೂಕು ಆಡಳಿತ ಈ ಹಿಂದೆಯೇ ಒತ್ತುವರಿಯಾಗಿದ್ದ ಜಾಗವನ್ನು ಗ್ರಾಮಸ್ಥರ ಮನವಿ ಮೇರೆಗೆ ಜಾಗದ ಅಳತೆ ಮಾಡಿಸಿ ಒತ್ತುವರಿ ಮಾಡಿದ್ದ ಜಮೀನುಗಳ ಮಾಲೀಕರಿಗೆ ನೋಟೀಸ್…
Ripponpet | ನಿವೃತ್ತಿ ಎನ್ನುವುದು ವಿಶ್ರಾಂತ ಜೀವನವಾಗಬಾರದು : ಬಿ ಕೃಷ್ಣಪ್ಪ
ನಿವೃತ್ತಿ ಎನ್ನುವುದು ವಿಶ್ರಾಂತ ಜೀವನವಾಗಬಾರದು : ಬಿ ಕೃಷ್ಣಪ್ಪ ರಿಪ್ಪನ್‌ಪೇಟೆ : ಪ್ರತಿಯೊಬ್ಬ ಸರಕಾರಿ ನೌಕರನೂ ಕಡ್ಡಾಯವಾಗಿ ನಿವೃತ್ತಿಯಾಗಲೇ ಬೇಕು ಆದರೆ ನಿವೃತ್ತಿ ಕೇವಲ ವೃತ್ತಿಗೆ ಹೊರತು ದೇಹ ಮತ್ತು ಮನಸ್ಸಿಗಲ್ಲ ಎಂದು ಶಿವಮೊಗ್ಗ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ ಕೃಷ್ಣಪ್ಪ ಹೇಳಿದರು. ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಎ ಮಂಜುನಾಥ್ ಅವರಿಗೆ ಬೀಳ್ಕೊಡುವ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿ…
Ripponpete | ಹೆಚ್ಚಿದ ಡೆಂಗ್ಯೂ ಭೀತಿ – ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್
Ripponpete | ಹೆಚ್ಚಿದ ಡೆಂಗ್ಯೂ ಭೀತಿ – ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ರಿಪ್ಪನ್‌ಪೇಟೆ : ಪಟ್ಟಣದ ಬಡಾವಣೆಯಲ್ಲಿ ಸಾಂಕ್ರಾಮಿಕ ರೋಗಗಳ ಭೀತಿಯ ಹಿನ್ನೆಲೆಯಲ್ಲಿ ಸೊಳ್ಳೆ ಗಳ ಹಾವಳಿ ನಿಯಂತ್ರಿಸಲು ಗ್ರಾಮಾಡಳಿತ ಹಾಗೂ ಆರೋಗ್ಯ ಇಲಾಖೆ ಭಾನುವಾರ ಫಾಗಿಂಗ್ ಸಿಂಪರಣೆ ಕೈಗೊಂಡಿದೆ. ಪಟ್ಟಣದ ನಾಲ್ಕು ರಸ್ತೆಗಳಲ್ಲಿ ಫಾಗಿಂಗ್ ಯಂತ್ರ ಬಳಸಿ ಗ್ರಾಮ ಪಂಚಾಯತ್, ಆರೋಗ್ಯ ಇಲಾಖೆ ಮತ್ತು ಕಾರ್ಮಿಕರು ಬಡಾವಣೆಯ ಪ್ರತಿಯೊಂದು ಮನೆಗೆ ಭೇಟಿ ನೀಡಿ ಮನೆಯ ಒಳಗೆ ಮತ್ತು ಹೊರಗೆ ಫಾಗಿಂಗ್ ಕಾರ್ಯ ನಡೆಸಿದರು. ಹೆಚ್ಚು ಸೊಳ್ಳೆ…
ಭಾರಿ ಮಳೆಗೆ ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದ ಮರ – ಸಂಚಾರ ವ್ಯತ್ಯಯ | Hosanagara
ಭಾರಿ ಮಳೆಗೆ ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದ ಮರ – ಸಂಚಾರ ವ್ಯತ್ಯಯ ಹೊಸನಗರ ಸಾಗರ ರಸ್ತೆಯ ಅರಳಿಕೊಪ್ಪ ಗ್ರಾಮದ ಬಳಿಯಲ್ಲಿ ಭಾರಿ ಗಾತ್ರದ ಮರವೊಂದು ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ಬಿದ್ದು ರಸ್ತೆ ಸಂಚಾರ ವ್ಯತ್ಯವಾದ ಘಟನೆ ನಡೆದಿದೆ. ಭಾನುವಾರ ಸಂಜೆ ಅರಳಿಕೊಪ್ಪ ಗ್ರಾಮದಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದು ಗಂಟೆಗೂ ಹೆಚ್ಚು ಕಾಲ ಸಂಚಾರ ವ್ಯತ್ಯಯವಾಗಿತ್ತು. ತಾಲೂಕ ಆಡಳಿತ ರಕ್ಷಣಾ ಇಲಾಖೆ ಮೆಸ್ಕಾಂ ಅರಣ್ಯ ಇಲಾಖೆ ಕಂದಾಯ ಇಲಾಖೆ ಇವರು ಸ್ಥಳಕ್ಕೆ ಧಾವಿಸಿ, ಗ್ರಾಮಸ್ಥರ ನೆರವಿನಿಂದ…