ಕ್ರೈಂ ಸುದ್ದಿ:
ಉಡುಪಿ ಮೂಲದ ವ್ಯಕ್ತಿ ಖಾಸಗಿ ಲಾಡ್ಜ್ ನಲ್ಲಿ ನೇಣಿಗೆ ಶರಣು
ಉಡುಪಿ ಮೂಲದ ವ್ಯಕ್ತಿ ಖಾಸಗಿ ಲಾಡ್ಜ್ ನಲ್ಲಿ ನೇಣಿಗೆ ಶರಣು ತೀರ್ಥಹಳ್ಳಿ : ವ್ಯವಹಾರದಲ್ಲಿ ನಷ್ಟ ಸಂಭವಿಸಿದ ಕಾರಣದಿಂದ ಮನನೊಂದು ವ್ಯಕ್ತಿಯೋರ್ವ ನೇಣಿಗೆ ಶರಣಾದ ಘಟನೆ ತೀರ್ಥಹಳ್ಳಿಯ ಖಾಸಗಿ ಹೋಟೆಲ್ ವೊಂದರಲ್ಲಿ ಶುಕ್ರವಾರ(ಅ.11) ರಂದು ನಡೆದಿದೆ. ಪಟ್ಟಣದ ಬಾಳೆಬೈಲಿನಲ್ಲಿರುವ ಖಾಸಗಿ ಹೋಟೆಲ್ (ಲಾಡ್ಜ್ ) ವೊಂದರಲ್ಲಿ ಎರಡು ದಿನದಿಂದ ರೂಮ್ ಬಾಡಿಗೆ ಪಡೆದಿದ್ದ ಉಡುಪಿ ಮೂಲದ ಪ್ರಸನ್ನ ಶೆಟ್ಟಿ ( 45) ಎಂಬ ವ್ಯಕ್ತಿ ವ್ಯವಹಾರದಲ್ಲಿ ನಷ್ಟ ಅನುಭವಿಸಿದ ಕಾರಣ ರೂಮ್ ನಲ್ಲೆ ಆತ್ಮಹತ್ಯೆಗೆ ಶರಣಾಗಿರಬಹುದು ಎಂಬ…
ನಕಲಿ ಸಹಿ ಬಳಸಿ ಪೋಡಿ ದುರಸ್ಥಿಗೊಳಿಸಿ ವಂಚನೆ – ಸರ್ಕಾರಿ ಭೂಮಾಪಕ ಸೇರಿದಂತೆ ನಾಲ್ವರ ವಿರುದ್ದ ಪ್ರಕರಣ ದಾಖಲು
ನಕಲಿ ಸಹಿ ಬಳಸಿ ಪೋಡಿ ದುರಸ್ಥಿಗೊಳಿಸಿ ವಂಚನೆ – ಸರ್ಕಾರಿ ಭೂಮಾಪಕ ಸೇರಿದಂತೆ ನಾಲ್ವರ ವಿರುದ್ದ ಪ್ರಕರಣ ದಾಖಲು ಜಮೀನು ಮಾಲೀಕರ ನಕಲಿ ಸಹಿ ಬಳಸಿ ಪೋಡಿ ದುರಸ್ತಿ ಮಾಡಿರುವ ಆರೋಪದಲ್ಲಿ ಹೊಸನಗರ ತಾಲೂಕ್ ಕಛೇರಿಯ ಭೂ ಮಾಪಕ ಸೇರಿದಂತೆ ನಾಲ್ವರ ಮೇಲೆ ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಳೂರು ಗ್ರಾಮದ ಸರ್ವೆ ನಂ 99/3 ರಲ್ಲಿ 4.13 ಎಕರೆ ಜಮೀನು ದೂರುದಾರ ಹಾಲುಗುಡ್ಡೆ ಗ್ರಾಮ ಸತ್ಯನಾರಾಯಣ ಹಾಗೂ ಸಹೋದರಿಯ ಜಂಟಿ ಖಾತೆಯಲ್ಲಿರುತ್ತದೆ.ಆದರೆ ಗೋಮೇದ ಬಿನ್…
ಸಾಲಬಾಧೆಗೆ ಬೇಸತ್ತು ವಿಷ ಸೇವಿಸಿ ರೈತ ಆತ್ಮ*ಹತ್ಯೆ
ಸಾಲಬಾಧೆಗೆ ಬೇಸತ್ತು ವಿಷ ಸೇವಿಸಿ ರೈತ ಆತ್ಮಹತ್ಯೆ ತೀರ್ಥಹಳ್ಳಿ : ಸಂಘ ಸಂಸ್ಥೆಯಲ್ಲಿ 2 ಲಕ್ಷ ಹಾಗೂ ಇತರೆ ಕೈ ಸಾಲ ಮಾಡಿಕೊಂಡಿದ್ದ ರೈತನೋರ್ವ ಇತ್ತ ಬೆಳೆಯಲ್ಲೂ ನಷ್ಟ ಅನುಭವಿಸಿ ಸಾಲ ತೀರಿಸಲಾಗದೆ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಅ. 9ರ ಬುಧವಾರ ರಾತ್ರಿ ನಡೆದಿದೆ. ತಾಲೂಕಿನ ಹೊಸಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಸುಣ್ಣದ ಮನೆಯ ನೇಮ ನಾಯ್ಕ (60) ಮೃಪಟ್ಟವರು. ರೈತ ನೇಮ ನಾಯ್ಕ ಅವರು ಅಡಿಕೆಗೆ ಎಲೆಚುಕ್ಕಿ ರೋಗ ಹಾಗೂ ಕೊಳೆ ರೋಗದಿಂದ ಬೇಸತ್ತು…
ಸ್ನೇಹಿತನೊಂದಿಗೆ ಸೇರಿಕೊಂಡು ತನ್ನದೇ ಮನೆಯ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಕಳ್ಳತನಗೈದ ಯುವತಿ ಅರೆಸ್ಟ್
ಸ್ನೇಹಿತನೊಂದಿಗೆ ಸೇರಿಕೊಂಡು ತನ್ನದೇ ಮನೆಯ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಕಳ್ಳತನಗೈದ ಯುವತಿ ಅರೆಸ್ಟ್ ತನ್ನದೇ ಮನೆಯಲ್ಲಿ ಕಳ್ಳತನವೆಸಗಿ ಪೊಲೀಸರ ಬಳಿ ಸುಳ್ಳು ಕಂಪ್ಲೆಂಟ್ ನೀಡಿದ್ದ ಚಾಲಾಕಿ ಯುವತಿಯೊಬ್ಬಳು ಈಗ ಪೊಲೀಸರ ಅತಿಥಿಯಾಗಿರುವ ಘಟನೆ ಚನ್ನಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಶಿವಮೊಗ್ಗದ ಮೂಲದ ವ್ಯಕ್ತಿಯೊಬ್ಬನ ಜೊತೆಗೆ ಸೇರಿಕೊಂಡು ತನ್ನ ಮನೆಯಲ್ಲಿ ತಾನೆ ಕಳ್ಳತನ ಮಾಡಿದ ಚನ್ನಗಿರಿ ತಾಲೂಕಿನ ಯುವತಿ ಚನ್ನಗಿರಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಹೋಗಿ ಅರೆಸ್ಟ್ ಆಗಿದ್ದಾಳೆ. ಶಿವಮೊಗ್ಗದ ವ್ಯಕ್ತಿಯೊಬ್ಬನ ಜೊತೆ ಸಂಬಂಧ ಹೊಂದಿದ್ದ…
ಹಳ್ಳ ದಾಟುವಾಗ ಬೈಕ್ ಸಮೇತ ನೀರುಪಾಲಾದ ವ್ಯಕ್ತಿ
ಹಳ್ಳ ದಾಟುವಾಗ ಬೈಕ್ ಸಮೇತ ನೀರುಪಾಲಾದ ವ್ಯಕ್ತಿ ಶಿವಮೊಗ್ಗ ಜಿಲ್ಲಾದ್ಯಂತ ಮಳೆಯ ಆರ್ಭಟದಲ್ಲಿ ಹಳ್ಳ ಕೊಳ್ಳಗಳು ತುಂಬಿ ಹರಿಯುತಿದ್ದು ಮಳೆಯ ಆರ್ಭಟದ ನಡುವೆ ತುಂಬಿ ಹರಿಯುತ್ತಿದ್ದ ಹಳ್ಳವನ್ನ ದಾಟಲು ಹೋದ ವ್ಯಕ್ತಿಯೊಬ್ಬರ ಬೈಕ್ ಸಮೇತ ನೀರು ಪಾಲಾಗಿದ್ದಾರೆ. ಶಿವಮೊಗ್ಗ ತಾಲ್ಲೂಕಿನ ಮುದುವಾಲ ಗ್ರಾಮದ ಬಳಿ ಇರುವ ಕೊಂಡಜ್ಜಿ ಹಳ್ಳದಲ್ಲಿ ಈ ಘಟನೆ ನಡೆದಿದೆ.ನೀರು ಪಾಲಾಗಿರುವ ಯುವಕನ ಹುಡುಕಾಟ ನಡೆಯುತ್ತಿದೆ. ನಿನ್ನೆ ಸುರಿದ ಭಾರಿ ಮಳೆಗೆ ಕೊಂಡಜ್ಜಿ ಹಳ್ಳ ತುಂಬಿ ಹರಿಯುತ್ತಿತ್ತು. ಹಾಗಾಗಿ ಹಳ್ಳ ದಾಟದಂತೆ ಸ್ಥಳೀಯ ಪೊಲೀಸರು…
ಕುಖ್ಯಾತ ದ್ವಿಚಕ್ರ ವಾಹನ ಕಳ್ಳರ ಹೆಡೆಮುರಿ ಕಟ್ಟಿದ ಬಂಕಾಪುರ ಪೊಲೀಸರು – 14 ಬೈಕ್ ಸಮೇತ ಆರು ಜನ ಆರೋಪಿಗಳ ಬಂಧನ
ಕುಖ್ಯಾತ ದ್ವಿಚಕ್ರ ವಾಹನ ಕಳ್ಳರ ಹೆಡೆಮುರಿ ಕಟ್ಟಿದ ಬಂಕಾಪುರ ಪೊಲೀಸರು ಬಂಕಾಪುರ : ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಕುಖ್ಯಾತ ಕಳ್ಳರನ್ನು ಬಂಕಾಪುರ ಪೊಲೀಸ್ ಠಾಣೆ ಪಿಎಸ್ಐ ನಿಂಗರಾಜ್ ಕೆ ವೈ ನೇತ್ರತ್ವದ ಸಿಬ್ಬಂದಿಗಳು ಬಂಧಿಸಿ ಹೆಡೆಮುರಿ ಕಟ್ಟಿ 14 ಬೈಕ್ ಸಮೇತ ಆರು ಜನ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಕಾಪೂರ, ಶಿಗ್ಗಾಂವ, ರಾಣೆಬೆನ್ನೂರು ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ದ್ವಿ ಚಕ್ರ, ವಾಹನಗಳು ಕಳ್ಳತನ ಪ್ರಕರಣಗಳು ನಡೆಯುತಿದ್ದ ಹಿನ್ನಲೆ ಮೇಲಾಧಿಕಾರಿಗಳ ಮಾರ್ಗದರ್ಶನದ ಮೇರೆಗೆ ಬಂಕಾಪುರ ಪಿಎಸ್ಐ ನಿಂಗರಾಜ್…
ಚಿಕ್ಕ ಜೇನಿ ಗ್ರಾಪಂ ವ್ಯಾಪ್ತಿಯಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ಅಕ್ರಮ ಮರಳು ಧಂಧೆ – ಕಣ್ಮುಚ್ಚಿ ಕುಳಿತಿರುವ ಅಧಿಕಾರಿಗಳು
ಚಿಕ್ಕ ಜೇನಿ ವ್ಯಾಪ್ತಿಯಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ಅಕ್ರಮ ಮರಳು ಧಂಧೆ – ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಚಿಕ್ಕಜೇನಿ ಗ್ರಾಪಂ ವ್ಯಾಪ್ತಿಯ ಮುತ್ತಲ, ಜನ್ನಂಗಿ , ಗ್ರಾಮದ ನದಿ ಪಾತ್ರದಲ್ಲಿ ಎಗ್ಗಿಲ್ಲದೇ ಅಕ್ರಮ ಮರಳು ದಂಧೆ ನಡೆಯುತ್ತಿದ್ದು ನೂರಾರು ಲೋಡ್ ಅಕ್ರಮ ಮರಳು ಶೇಖರಿಸಿದ್ದರೂ ಅಕ್ರಮ ವ್ಯವಹಾರದಲ್ಲಿ ಮೌನ ಸಮ್ಮತಿ ನೀಡಿರುವ ಆಡಳಿತ ವ್ಯವಸ್ಥೆಯಿಂದ ಅಪಾರ ಪ್ರಮಾಣದ ಸಂಪತ್ತು ನಾಶವಾಗುತ್ತಿದೆ. ಶಾಂತಪುರ ಸೇತುವೆಯಿಂದ ಪ್ರಾರಂಭವಾಗಿ ಹತ್ತಾರು ಸ್ಥಳಗಳಲ್ಲಿ ಮರಳೆತ್ತುವ ಕಾರ್ಯದಲ್ಲಿ ಹೊರರಾಜ್ಯ ಬಿಹಾರದ ಹತ್ತಾರು ಕೂಲಿ ಕಾರ್ಮಿಕರನ್ನು…
HOSANAGARA | ಹಸುವಿನ ಕುತ್ತಿಗೆಗೆ ಹಗ್ಗ ಬಿಗಿದು ಬಾವಿಗೆ ಎಸೆದು ಸಾಯಿಸಿದ ಕಿಡಿಗೇಡಿಗಳು
HOSANAGARA | ಹಸುವಿನ ಕುತ್ತಿಗೆಗೆ ಹಗ್ಗ ಬಿಗಿದು ಬಾವಿಗೆ ಎಸೆದು ಸಾಯಿಸಿದ ಕಿಡಿಗೇಡಿಗಳು ಹೊಸನಗರ ಪಟ್ಟಣದ ಹೊರ ವಲಯದ ಕುವೆಂಪು ಶಾಲೆಯ ಹತ್ತಿರ ನೇಣು ಬಿಗಿದ ಸ್ಥಿತಿಯಲ್ಲಿ ಹಸುವಿನ ಶವವೊಂದು ಪತ್ತೆಯಾದ ಘಟನೆ ನಡೆದಿದೆ. ಪಟ್ಟಣದಲ್ಲಿರುವ ಗೋಶಾಲೆಯಲ್ಲಿ 10-20 ಬೀದಿ ಹಸುಗಳು ಇದರ ಜೊತೆಗೆ ಅಪಘಾತದಲ್ಲಿ ಕಾಲು ಮುರಿದುಕೊಂಡ ಹಸು, ಕರುಗಳನ್ನು ಬಿಡಾಡಿ ದನಗಳನ್ನು ಸಾಕುತ್ತಿದ್ದರು. ಭಾನುವಾರ ರಾತ್ರಿ 12 ಗಂಟೆಯವರೆಗೆ ಗೋ ಶಾಲೆಯ ಗೋ ಸೇವಕರು ದನ-ಕರುಗಳಿಗೆ ಆಹಾರ ಹಾಕಿ ಮನೆಗೆ ಹೋದ ಸಂದರ್ಭದಲ್ಲಿ ಕಿಡಿಗೇಡಿಗಳು…
ರೌಡಿಶೀಟರ್ ಅಮ್ಮು ಕಾಲಿಗೆ ಪೊಲೀಸರ ಗುಂಡೇಟು
ರೌಡಿಶೀಟರ್ ಅಮ್ಮು ಕಾಲಿಗೆ ಪೊಲೀಸರ ಗುಂಡೇಟು ಶಿವಮೊಗ್ಗ : ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ರೌಡಿ ಶೀಟರ್ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಗಾಯಾಳು ರೌಡಿ ಶೀಟರ್ ಹಬೀಬುಲ್ಲಾ ಅಲಿಯಾಸ್ ಅಮ್ಮುನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬೈಪಾಸ್ ರಸ್ತೆ ಸಮೀಪದ ಗರುಡ ಲೇಔಟ್ನಲ್ಲಿ ಇಂದು ಬೆಳಗ್ಗೆ ಹಬೀಬುಲ್ಲಾನ ಬಂಧನಕ್ಕೆ ಪೊಲೀಸರು ತೆರಳಿದ್ದರು. ಈ ಸಂದರ್ಭ ಹಬೀಬುಲ್ಲಾ ಪೊಲೀಸ್ ಸಿಬ್ಬಂದಿ ಜಯಪ್ಪ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾನೆ. ಆಗ ಇನ್ಸ್ಪೆಕ್ಟರ್ ಕೆ.ಟಿ.ಗುರುರಾಜ್…
SAGARA | ಬಾಣಂತಿಗೆ ಕಪಾಳಮೋಕ್ಷ ಆರೋಪ ಡಾ. ನಾಗೇಂದ್ರಪ್ಪ ಮೇಲೆ ಪ್ರಕರಣ ದಾಖಲು | ಆಸ್ಪತ್ರೆಗೆ DHO ದಿಡೀರ್ ಭೇಟಿ
SAGARA | ಬಾಣಂತಿಗೆ ಕಪಾಳಮೋಕ್ಷ ಆರೋಪ ಡಾ. ನಾಗೇಂದ್ರಪ್ಪ ಮೇಲೆ ಪ್ರಕರಣ ದಾಖಲು | ಆಸ್ಪತ್ರೆಗೆ DHO ದಿಡೀರ್ ಭೇಟಿ ಸಾಗರ : ಶಸ್ತ್ರ ಚಿಕಿತ್ಸೆಗೆ ದಾಖಲಾಗಿದ್ದ ಬಾಣಂತಿಯೊಬ್ಬರಿಗೆ ಕಪಾಳಮೋಕ್ಷ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಾಯಿ-ಮಗು ಆಸ್ಪತ್ರೆಯ ಪ್ರಸೂತಿ ವೈದ್ಯ ಡಾ. ನಾಗೇಂದ್ರಪ್ಪ ಎಂಬವರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅ. 1 ರಂದು ಲೋಕೇಶ್ ಎಂಬುವವರ ಪತ್ನಿಯನ್ನು ತಾಯಿ-ಮಗು ಆಸ್ಪತ್ರೆಗೆ ಸಂತಾನಹರಣ ಚಿಕಿತ್ಸೆಗೆ ದಾಖಲು ಮಾಡಲಾಗಿತ್ತು.ಬೆಳಿಗ್ಗೆ 9.45 ಕ್ಕೆ ಡಾ. ನಾಗೇಂದ್ರಪ್ಪ ಶಸ್ತ್ರಚಿಕಿತ್ಸೆ ಮಾಡಿದ್ದರು….