ಕ್ರೈಂ ಸುದ್ದಿ:
ಎರಡು ಬೈಕ್ ಗಳ ನಡುವೆ ಡಿಕ್ಕಿ : ಒಬ್ಬ ವ್ಯಕ್ತಿ ಸ್ಥಳದಲ್ಲೇ ಸಾವು, ಇಬ್ಬರು ಗಂಭೀರ
ಸಾಗರ ತಾಲೂಕಿನ ಸುರುಗುಪ್ಪೆ ಕೆರೆ ಏರಿ ಮೇಲೆ ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿ ಸ್ಥಳದಲ್ಲೇ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು ಇಬ್ಬರ ಸ್ಥಿತಿ ಗಂಭೀರವಾಗಿದೆ . ಸೊರಬ ತಾಲೂಕಿನ ಬಂದಿಗೆ ನಿವಾಸಿಗಳಾದ ನಾಗಪ್ಪ (42)ಹಾಗೂ ಅವರ ಪುತ್ರ ಲೋಹಿತ್(16) ಸಣ್ಣ ಮನೆ ಗ್ರಾಮದೇವತೆಯ ಜಾತ್ರೆಗೆ ಆಗಮಿಸುತ್ತಿರುವ ಸಂದರ್ಭದಲ್ಲಿ ಯಲಕುಂದ್ಲಿ ನಿವಾಸಿ ಕಿರಣ್(20) ಮನೆಗೆ ಹೋಗುವ ಸಂದರ್ಭದಲ್ಲಿ ಇಬ್ಬರ ದ್ವಿಚಕ್ರವಾಹನ ಮುಖಾಮುಖಿಯಾಗಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ನಾಗಪ್ಪ (42) ಸ್ಥಳದಲ್ಲೇ ಮೃತಪಟ್ಟಿದ್ದು ಲೋಹಿತ್(16) ಹಾಗೂ ಕಿರಣ್(20) ರವರ ಸ್ಥಿತಿ…
ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಲಾರಿ : ಲಾರಿ ಕ್ಲೀನರ್ ಸ್ಥಳದಲ್ಲೇ ಸಾವು…!!!
ಆನಂದಪುರ ಸಮೀಪದ ಹೊಸಗುಂದ ಬಳಿ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಭೀಕರ ಅಪಘಾತವಾಗಿದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಹೊಸಗುಂದ ಬಳಿ ಶಿವಮೊಗ್ಗದಿಂದ ಸಾಗರಕ್ಕೆ ಹೊರಟಿದ್ದ ಲಾರಿ (KA 05 AA 5068 ) ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಕಂದಕಕ್ಕೆ ಗುದ್ದಿದ ಪರಿಣಾಮ ಲಾರಿ ಕ್ಲೀನರ್ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ.ಮೃತರ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ. ಈ ಅಪಘಾತದಲ್ಲಿ ಲಾರಿ ಡ್ರೈವರ್ ಸ್ಥಿತಿ ಚಿಂತಾಜನಕವಾಗಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ….
ಕಾಡು ಹಂದಿ ಭೇಟೆ : ಮಾಂಸ ಸಹಿತ ಐವರ ಬಂಧನ
ಕಾಡುಹಂದಿ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಐವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಹೆಡದಾಳು ಗ್ರಾಮದಲ್ಲಿ ನಡೆದಿದೆ. ಹೆಡದಾಳು ಗ್ರಾಮದ ಮಧುಕುಮಾರ್, ಈರೇಶ ಜಯಪ್ಪ, ಕೃಷ್ಣ, ವಿಜಯ ಕುಮಾರ್ ಬಂಧಿತ ಆರೋಪಿಗಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲಕ್ಷ್ಮೀಪುರ ಸಮೀಪದ ಲಕ್ಯಾ ಕ್ರಾಸ್ ಬಳಿ ಆಲ್ಟೋ ಕಾರನ್ನು ತಡೆದು ಶೋಧಿಸಿದಾಗ ಕಾಡು ಹಂದಿ ಮಾಂಸ ಪತ್ತೆಯಾಗಿದ್ದು, ಬಂಧಿತರಿಂದ 23 ಕೆಜಿ ಮಾಂಸ, ಬಂದೂಕು, ಸಜೀವ ಗುಂಡುಗಳು, ಕತ್ತಿ ಇತರೆ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ.
ರಿಪ್ಪನ್ ಪೇಟೆ ಸಮೀಪ ಕ್ಯಾಂಟರ್ ಲಾರಿ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಯುವಕ ಸಾವು
ರಿಪ್ಪನ್ಪೇಟೆ :ಇಲ್ಲಿನ ಸಮೀಪದ ಮೂಗುಡ್ತಿ ಗ್ರಾಮದ ಕಣಬಂದೂರು ತಿರುವಿನಲ್ಲಿ ನಡೆದ ಕ್ಯಾಂಟರ್ ಲಾರಿ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಹೆದ್ದಾರಿಪುರದ ಪುನೀತ್ (25) ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನಡೆದಿದೆ. ರಿಪ್ಪನ್ಪೇಟೆಯ ದೇವಿ ಕೋಳಿ ಫಾರಂನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪುನೀತ್ ರಾತ್ರಿ 9.30 ರ ವೇಳೆಗೆ ಹೆದ್ದಾರಿಪುರದ ಮನೆಗೆ ಹೋಗುವಾಗ ಮೂಗುಡ್ತಿಯ ಕಣಬಂದೂರು ತಿರುವಿನಲ್ಲಿ ಈ ಅವಘಡ ಸಂಭವಿಸಿದ್ದು ಸ್ಥಳದಲ್ಲೇ ಬೈಕ್ ಸವಾರ ಪುನೀತ್ ತಲೆ ಮೇಲೆ ಕ್ಯಾಂಟರ್ ಲಾರಿ ಹರಿದ ಪರಿಣಾಮ ಮೃತಪಟ್ಟಿದ್ದಾನೆ….
ಕರ್ತವ್ಯ ವೇಳೆ ಕುಸಿದು ಬಿದ್ದ ಶಿವಮೊಗ್ಗದ ಸ್ಟಾಫ್ ನರ್ಸ್ ಸಾವು : ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ
ಶಿವಮೊಗ್ಗ : ಮೆದುಳು ನಿಷ್ಕ್ರಿಯಗೊಂಡಿದ್ದ ಶಿವಮೊಗ್ಗದ ಸ್ಟಾಫ್ ನರ್ಸ್ ಟಿ.ಕೆ. ಗಾನವಿ (22) ಅವರ ಅಂಗಾಂಗಗಳನ್ನು ಪೋಷಕರು ದಾನ ಮಾಡಿದ್ದಾರೆ. ಗಾನವಿ ಅವರು ಕರ್ತವ್ಯದ ವೇಳೆ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಬೆಂಗಳೂರಿನ ಗ್ಯಾಸ್ಟೊ್ರೕ ಎಂಟರಾಲಜಿ ಸೈನ್ಸಸ್ ಆ್ಯಂಡ್ ಆರ್ಗನ್ ಟ್ರಾನ್ಸ್ಪ್ಲಾಂಟ್ ಸಂಸ್ಥೆಗೆ ಕರೆತರಲಾಯಿತು. ಈ ವೇಳೆ ವೈದ್ಯರು ಮಿದುಳು ನಿಷ್ಕ್ರಿಯವಾಗಿರುವುದಾಗಿ ತಿಳಿಸಿದರು. ಇದರಿಂದ ಪೋಷಕರು ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ತಾಯಿ ಮತ್ತು ಅಕ್ಕ ಅಂಗಾಂಗ ದಾನಕ್ಕೆ ಸಹಿ ಮಾಡುವ ಮೂಲಕ ಹಲವರಿಗೆ…
ಊಟ ಮಾಡುತಿದ್ದ ಮಗನಿಗೆ ಚೂರಿ ಇರಿದ ತಂದೆ : ಹೊಸನಗರದಲ್ಲೊಂದು ವಿಚಿತ್ರ ಘಟನೆ
ಹೊಸನಗರ: ಪಟ್ಟಣದ ಬಸ್ ನಿಲ್ದಾಣದಲ್ಲಿರುವ ಹೆಸರಾಂತ ಖಾಸಗಿ ಹೋಟೆಲ್ನಲ್ಲಿ ಇಂದು ಮಧ್ಯಾಹ್ನ ಊಟ ಮಾಡುತಿದ್ದ ಮಗನಿಗೆ ಸ್ವತಃ ತಂದೆಯೇ ಏಕಾಏಕಿ ಬಂದು ಚೂರಿ ಇರಿದಿರುವ ಘಟನೆ ನಡೆದಿದೆ ಮಾರುತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಬ್ಬಿಗಾದಲ್ಲಿ ವಾಸ್ತವ್ಯ ಹೊಂದಿರುವ ಗೊರಗೋಡಿನ ಜಿ.ಆರ್ ತೀರ್ಥೇಶ್ ರವರು ಊಟ ಮಾಡುವ ವೇಳೆ ಏಕಾಏಕಿ ಹೋಟೆಲ್ಗೆ ಬಂದ ಅವರ ತಂದೆ ಸಂಕ್ಲಾಪುರ ರಾಜಪ್ಪ ಗೌಡ ಎಂಬುವವರು ಊಟ ಮಾಡುತ್ತಿದ್ದ ತೀರ್ಥೇಶ್ ಎಂಬುವವರಿಗೆ ಚಾಕುವಿನಿಂದ ಇರಿದಿದ್ದು ತೀರ್ಥೇಶ್ ರವರ ಬೆನ್ನು ಕೈ ಹಾಗೂ ಕಿಬ್ಬೊಟ್ಟೆಗೆ…
ಚಿನ್ಮನೆ ಬಳಿ ಭೀಕರ ಅಪಘಾತ : ಒಬ್ಬ ಸಾವು,ಇಬ್ಬರ ಸ್ಥಿತಿ ಗಂಭೀರ
ಚಿನ್ನಮನೆ ಗ್ರಾಮದ ಬಳಿ ಬೊಲೆರೊ ಪಿಕಪ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ನಡೆದ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ.ಅಪಘಾತವಾಗಿ ನಿಲ್ಲಿಸಿದ್ದ ಬೊಲೆರೊ ಪಿಕಪ್ ಗೆ ಮತ್ತೊಂದು ಬೈಕ್ ಬಂದು ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ. ಆಯನೂರು ಕಡೆಯಿಂದ ಬರುತ್ತಿದ್ದ ಬೊಲೆರೊ ಪಿಕಪ್ ವಾಹನಕ್ಕೆ ಸೂಡೂರು ಕಡೆಯಿಂದ ಆಯನೂರು ಕಡೆ ಬರುತಿದ್ದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಚಿಕ್ಕಮಚಲಿ ಗ್ರಾಮದ ನಿವಾಸಿ ಶ್ಯಾಮು (40) ಎಂಬುವವನು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ನಂತರ ಹಿಂಬದಿಯಿಂದ ಬಂದು…
ಹನಿಟ್ರ್ಯಾಪ್ : ನಗ್ನ ವೀಡಿಯೋ ಮಾಡಿ ಹಣಕ್ಕಾಗಿ ಬೆದರಿಸುತ್ತಿದ್ದ ಶಿವಮೊಗ್ಗ ಮೂಲದ ಮಹಿಳೆ ಸೇರಿ ಇಬ್ಬರು ಬಂಧನ
ಹನಿ ಟ್ರಾಪ್ ಮಾಡುತ್ತಿದ್ದ ಓರ್ವ ಮಹಿಳೆ ಸೇರಿ ಮೂವರನ್ನು ಶಿರಸಿಯ ಹೊಸ ಮಾರುಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸರು ಬಂಧಿಸಿದ್ದಾರೆ. ಯುವಕನೊಬ್ಬನ ನಗ್ನ ಫೋಟೋ ಹಾಗೂ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುತ್ತೇವೆ ಎಂದು ಯುವಕನಿಗೆ ಹೆದರಿಸಿದ್ದಾರೆ. ಶಿರಸಿ ಉಂಚಳ್ಳಿಯ ಅಜಿತ್ ಶ್ರೀಕಾಂತ್ ನಾಡಿಗ್ (25), ಬನವಾಸಿ ರಸ್ತೆಯ ಗೊಲಕೇರಿ ಓಣಿಯ ಧನುಷ್ಯ ಕುಮಾರ್ ಯಾನೆ ದಿಲೀಪ್ ಕುಮಾರ್ ಶೆಟ್ಟಿ (25) ಹಾಗೂ ಶಿವಮೊಗ್ಗದ ಗೋಪಾಳ ರಂಗನಾಥ್ ಬಡಾವಣೆಯ ಪದ್ಮಜಾ ಡಿ.ಎನ್. ಬಂಧಿತ ಆರೋಪಿಗಳು. ಆರೋಪಿ ಅಜಿತ್ ಜತೆ…
ವಿವಾಹಿತ ಮಹಿಳೆ ನಾಪತ್ತೆ : ಸುಳಿವು ಪತ್ತೆಗೆ ಮನವಿ
2021 ರ ಏಪ್ರಿಲ್ 13 ರಂದು ಅನುಷಾ ಕೋಂ ಆನಂದ, 26 ವರ್ಷ, ಗೃಹಿಣಿ ಈಕೆ ನಗರದ ಹೊಸಮನೆ 06 ನೇ ಕ್ರಾಸ್ನಲ್ಲಿರುವ ತನ್ನ ನಿವಾಸದಿಂದ ಕಾಣೆಯಾಗಿರುತ್ತಾರೆ. ಅಂದು ರಾತ್ರಿ 8 ಗಂಟೆ ಹೊತ್ತಿಗೆ ಮನೆಯಿಂದ ಹೊರಗೆ ಹೋದವಳು ಹಿಂತಿರುಗಿ ಬಂದಿರುವುದಿಲ್ಲ. ಅಕ್ಕ ಪಕ್ಕ, ನೆಂಟರ ಮನೆ ಹೀಗೆ ಎಲ್ಲೆಡೆ ಹುಡುಕಿದರೂ ಪತ್ತೆಯಾಗಿರುದಿಲ್ಲ. ಕಾಣೆಯಾದ ಮಹಿಳೆ ಅನುಷಾ 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕೋಲು ಮುಖ, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದು, ಕಾಣೆಯಾದ…
ರಿಪ್ಪನ್ ಪೇಟೆ ಸಮೀಪದ ಬಿದರಹಳ್ಳಿಯಲ್ಲಿ ಮಗುವಿನೊಂದಿಗೆ ತಾಯಿ ಆತ್ಮಹತ್ಯೆ :
ರಿಪ್ಪನ್ ಪೇಟೆ : ತಾಯಿ ತನ್ನ ಮಗುವಿನ ಜತೆ ಬಿದರಹಳ್ಳಿಯ ತನ್ನ ಮನೆಯ ಎದುರಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಹೊಸನಗರ ತಾಲೂಕಿನ ಬಿದರಹಳ್ಳಿಯ ನಿವಾಸಿ ವಿದ್ಯಾ(32) ಮಗಳು ತನ್ವಿ(4) ಜೊತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಗುರುವಾರ ಬೆಳಗಿನ ಜಾವ ವಿದ್ಯಾ ಮಗುವಿನೊಂದಿಗೆ ಬಾವಿಗೆ ಹಾರಿದ್ದಾರೆ.ಇಂದು ಬೆಳಿಗ್ಗೆ ಮೃತ ದೇಹ ಪತ್ತೆಯಾಗಿದೆ. ಹೊಸನಗರದ ಅಗ್ನಿಶಾಮಕ ಸಿಬ್ಬಂದಿ ಭೀಷ್ಮಚಾರಿ 50 ಅಡಿ ಆಳದ ಬಾವಿಗೆ ಇಳಿದು ಎರಡು ಮೃತದೇಹಗಳನ್ನು ಹೊರತೆಗೆದಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ. ರಿಪ್ಪನ್…