ಕ್ರೈಂ ಸುದ್ದಿ:
ಡ್ರಾಪ್ ಕೇಳುವ ನೆಪದಲ್ಲಿ ಸಿನಿಮೀಯ ಶೈಲಿಯ ಬೈಕ್ ಕಳ್ಳತನ :
ಡ್ರಾಪ್ ನೆಪದಲ್ಲಿ ವ್ಯಕ್ತಿಯೊಬ್ಬರನ್ನು ವಂಚಿಸಿ ಬೈಕ್ ಕಳ್ಳತನ ಮಾಡಿರುವ ಘಟನೆ ಶಿವಮೊಗ್ಗದ ಸಾಗರ ರಸ್ತೆಯಲ್ಲಿ ಸಂಭವಿಸಿದೆ. ಬಸ್ ಚಾಲಕ ವೃತ್ತಿ ಮಾಡುವ ರಮೇಶ್ ಸ್ನೇಹಿತನ ಬಜಾಜ್ ಪಲ್ಸರ್ ಬೈಕ್ ಪಡೆದುಕೊಂಡು, ಚೋರಡಿಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದರು. ಈ ವೇಳೆ ಸುಮಾರು 25 ವರ್ಷದ ಯುವಕನೊಬ್ಬ ಡ್ರಾಪ್ ಕೇಳಿದ್ದಾನೆ. ಅದೇ ಯುವಕ ರಮೇಶ್ ಅವರು ಚಲಾಯಿಸುತ್ತಿದ್ದ ಪಲ್ಸರ್ ಬೈಕ್ ಕದ್ದು ಪರಾರಿಯಾಗಿದ್ದಾನೆ. ರಮೇಶ್ ಅವರು ಬಸ್ ಚಾಲಕ ವೃತ್ತಿ ಮಾಡುತ್ತಿದ್ದಾರೆ. ತುರ್ತು ಕೆಲಸ ಇದ್ದ ಕಾರಣ ಚೋರಡಿಯಿಂದ ತಮ್ಮ ಸಂಬಂಧಿಯೊಬ್ಬರ…
ಹಿಂದೂ ಕಾರ್ಯಕರ್ತನಿಗೆ ಕೊಲೆ ಬೆದರಿಕೆ : ಜೈಲ್ ನಿಂದ ಜಾಮೀನಿನ ಮೇಲೆ ಬಂದು ಮತ್ತೆ ಧಮ್ಕಿ ಹಾಕಿದ ಯುವಕರು :
ಶಿವಮೊಗ್ಗ : ನಗರದಲ್ಲಿ ಹಿಂದೂ ಮತ್ತು ಮುಸ್ಲಿಂ ನಡುವಿನ ಸಂಘರ್ಷ ಇನ್ನು ಮುಂದುವರೆಯುವ ರೀತಿ ಕಾಣುತ್ತಿದೆ. ಕಾರಣ ಭಜರಂಗದಳದ ಯುವಕರು ಎಂದು ಹಿಂಬಾಲಿಸಿ ಕೊಲೆಗೆ ಸಂಚು ಮಾಡಿ ಪೊಲೀಸರಿಂದ ಬಂಧನಕ್ಕೊಳಗಾಗಿ ಬಿಡುಗಡೆ ಹೊಂದಿದ್ದ ಮೂವರು ಹುಡುಗರಲ್ಲಿ ಇಬ್ಬರು ಹುಡುಗರು ಮತ್ತೆ ಪುಂಡಾಟಿಕೆ ಮೆರೆದಿದ್ದಾರೆ. ಈ ಪ್ರಕರಣವನ್ನು ನೋಡುತ್ತಿದ್ದರೆ ಯಾರೋ ಚಿವುಟಿ ಮಜಾ ತೆಗೆದುಕೊಳ್ಳುತ್ತಿದ್ದಾರಾ ಎಂಬ ಅನುಮಾನ ಸಹ ಹುಟ್ಟಲಾರಂಭಿಸಿದೆ. ಹಿಂದೂ ಕಾರ್ಯಕರ್ತ ಎಂದು ನ್ಯೂ ಮಂಡ್ಲಿಯಲ್ಲಿಯಲ್ಲಿ ಸುಮಂತ್ ನನ್ನ ಹುಡುಕಿಕೊಂಡು ಬಂದು ಆತನ ತಮ್ಮ ಭರತನಿಗೆ ಕೊಲೆ…
ಮಂಗನಕಾಯಿಲೆಗೆ ಗ್ರಾಮಪಂಚಾಯಿತಿ ಸದಸ್ಯ ಬಲಿ!!!
ಸಾಗರ : ತಾಲ್ಲೂಕಿನ ಅರಳಗೋಡಿನಲ್ಲಿ ಮಂಗನ ಕಾಯಿಲೆಗೆ ಅಲ್ಲಿನ ಗ್ರಾಮಪಂಚಾಯ್ತಿ ಸದಸ್ಯರೊಬ್ಬರು ಸಾವನ್ನಪ್ಪಿದ್ದಾರೆ. 55 ವರ್ಷದ ರಾಮಸ್ವಾಮಿ ಕರುಮನೆ ಎಂಬುವರು ಮೃತರು. ಕಳೆದ ಎಪ್ರಿಲ್ 24 ರಂದು ಇವರಿಗೆ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ಸಾಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜ್ವರ ಇನ್ನೂ ಹೆಚ್ಚಾದ ಕಾರಣ ಹೀಗಾಗಿ ಮಣಿಪಾಲದ ಕಸ್ತೂರಿಬಾ ಆಸ್ಪತ್ರೆಗೆ ರವಾನಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಮಸ್ವಾಮಿಯವರು ಇಂದು ಮಧ್ಯಾಹ್ನ ದ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ : ಅನೈತಿಕ ಸಂಬಂಧ ಬಯಲಾಗುವ ಭಯಕ್ಕೆ ಸ್ನೇಹಿತನನ್ನೆ ಕೊಲೆ ಮಾಡಿ ಹೊಳೆಗೆ ಬಿಸಾಡಿದ !!!!!!!!!
ಜಮೀನು ಕೆಲಸಕ್ಕೆಂದು ಹೋದ ವ್ಯಕ್ತಿ ನಾಪತ್ತೆಯಾಗಿದ್ದ ಪ್ರಕರಣ ಹೊಸ ತಿರುವು ಪಡೆದುಕೊಂಡು ಕೊಲೆ ಪ್ರಕರಣವಾಗಿರುವ ಘಟನೆ ಸೊರಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಯ ಹಿನ್ನಲೆ : ಏ.11 ರಂದು ಮನ್ಮನೆ ನಿವಾಸಿ ಲೇಖಪ್ಪ(36) ಜಮೀನು ಕೆಲಸಕ್ಕೆಂದು ಹೋದವನು ಮನೆಗೆ ವಾಪಾಸ್ ಬಾರದ ಹಿನ್ನಲೆಯಲ್ಲಿ ಏ.14ರಂದು ಸೊರಬ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವೊಂದು ದಾಖಲಾಗಿತ್ತು. ಇಂದು ಕಡಸೂರು ಗ್ರಾಮದ ಹೊಳೆಯ ಸಮೀಪ ಲೇಖಪ್ಪನ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಲೇಖಪ್ಪನ ಸಹೋದರ ಗ್ರಾಮದಲ್ಲಿ ರಾಜಕೀಯ ವಿಚಾರವಾಗಿ ದ್ವೇಷ…
ಸಾಲಬಾಧೆಗೆ ಹೆದರಿ ಬ್ಲೇಡ್ ನಿಂದ ಕೈ ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕ :
ಶಿವಮೊಗ್ಗ : ಬ್ಲೇಡ್ ನಿಂದ ಕೈಕೊಯ್ದುಕೊಂಡು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಗರದ ನೆಹರೂ ರಸ್ತೆಯ ಖಾಸಗಿ ಲಾಡ್ಜ್ ನಲ್ಲಿ ಈ ಘಟನೆ ನಡೆದಿದೆ. ಈ ಯುವಕನ ಸಾವಿನ ಆಯ್ಕೆ ಬಹುತೇಕ ಅಚ್ಚರಿ ಮೂಡಿಸಿದೆ. ಕೈಯ್ಯನ ಬ್ಲೇಡ್ ನಿಂದ ಕೊಯ್ದುಕೊಂಡ ಕಾರಣ ಟಾಯ್ಲೆಟ್ ಎಲ್ಲಾ ರಕ್ತಸಿಕ್ತವಾಗಿದೆ. ಸಾಲಬಾಧೆಯೇ ಆತನ ಆತ್ಮಹತ್ಯೆಗೆ ಕಾರಣ ಎನ್ನಲಾಗುತ್ತಿದೆ. ಮೃತ ವ್ಯಕ್ತಿಯು ಬೆಂಗಳೂರು ನಿವಾಸಿ ನಾಗೇಂದ್ರ ಎಂದು ತಿಳಿದುಬಂದಿದೆ. ಏ. 28 ರ ಬೆಳಿಗ್ಗೆ 5-30 ಕ್ಕೆ ಲಾಡ್ಜ್ ನಲ್ಲಿ ಚೆಕ್ ಇನ್ ಆದ ನಾಗೇಂದ್ರ…
ಮಹಿಳೆಯರು ನಮಾಝ್ ಮಾಡುವ ಕೊಠಡಿಗೆ ನುಗ್ಗಿ ಅಸಭ್ಯ ವರ್ತನೆ: ಯುವಕ ಸುಜಿತ್ ಶೆಟ್ಟಿ ಬಂಧನ
ಮಂಗಳೂರು: ತೊಕ್ಕೊಟ್ಟು ಮಸೀದಿಯಲ್ಲಿ ಮಹಿಳೆಯರು ನಮಾಝ್ ಮಾಡುವ ಕೊಠಡಿಗೆ ನುಗ್ಗಿ ಅಸಭ್ಯವಾಗಿ ವರ್ತಿಸಿದ ಆರೋಪದಲ್ಲಿ ಯುವಕನೋರ್ವನನ್ನು ಉಳ್ಳಾಲ ಠಾಣಾ ಪೊಲೀಸರು ಬಂಧಿಸಿದ್ದಾರೆ.. ಬಂಧಿತ ಆರೋಪಿಯನ್ನು ಕಾರ್ಕಳ ತಾಲೂಕಿನ ನಿಟ್ಟೆ ನಿವಾಸಿ ಸುಜಿತ್ ಶೆಟ್ಟಿ(26) ಎಂದು ಗುರುತಿಸಲಾಗಿದೆ. ತೊಕ್ಕೊಟ್ಟಿನ ಹುದಾ ಜುಮ್ಮಾ ಮಸೀದಿಯಲ್ಲಿ ಲೈಲಾತುಲ ಖದರ್ ನ ರಾತ್ರಿ ವಿಶೇಷ ಕಾರ್ಯಕ್ರಮವನ್ನು ಕಳೆದ 28 ರಂದು ಏರ್ಪಡಿಸಲಾಗಿದ್ದು, ಈ ವೇಳೆ ಆರೋಪಿ ಸುಜಿತ್ ಶೆಟ್ಟಿಯು ಮಸೀದಿಯಲ್ಲಿ ಮಹಿಳೆಯರು ನಮಾಜ್ ಮಾಡುವ ಕೊಠಡಿಗೆ ನುಗ್ಗಿ ಮಹಿಳೆಯರ ಕೈಹಿಡಿದು ಎಳೆದು, ಅಶ್ಲೀಲವಾಗಿ…
ವಿದ್ಯುತ್ ತಂತಿ ತಗುಲಿ ಮೂರು ವರ್ಷದ ಮಗು ಸಾವು :
ವಿದ್ಯುತ್ ತಂತಿ ಬೇಲಿಯ ಮೇಲೆ ಕೇಬಲ್ ಬಿದ್ದಿದ್ದು ಕೇಬಲ್ ನ್ನು ಮೂರು ವರ್ಷದ ಹೆಣ್ಣು ಮಗು ಮುಟ್ಟಿದ್ದರ ಪರಿಣಾಮ ಮಗು ಸಾವನ್ನಪ್ಪಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಭದ್ರಾವತಿ ತಾಲೂಕಿನ ಹಿರಿಯೂರು ಗ್ರಾಮದಲ್ಲಿ ಮನೆ ಬಳಿ ಹಾಕಿರುವ ವಿದ್ಯುತ್ ತಂತಿ ಬೇಲಿಯ ಮೇಲೆ ಟಿವಿ ಕೇಬಲ್ ಹರಿದು ಬಿದ್ದಿದೆ. ಈ ಕೇಬಲ್ ನ್ನ ಆಟಾಡುವ ವೇಳೆ ಮಗು ಮುಟ್ಟಿದ ಹಿನ್ನಲೆಯಲ್ಲಿ ವಿದ್ಯುತ್ ಶಾಕ್ ಹೊಡೆದು ಸ್ಥಳದಲ್ಲೇ ಸಾವುಕಂಡಿದೆ. ತಂತಿ ಬೇಲಿ ಮೇಲೆ ಕೇಬಲ್ ತುಂಡಾಗಿ ಬಿದ್ದಿದ್ದರಿಂದ ಕೇಬಲ್…
KSRTC ಬಸ್ ನಲ್ಲಿ ಶಿವಮೊಗ್ಗಕ್ಕೆ ಸಾಗಿಸುತಿದ್ದ ₹1.27000 ಮೌಲ್ಯದ ಗೋವಾ ಮದ್ಯ ವಶ : ಇಬ್ಬರ ಬಂಧನ
ಸಾಗರ-ಪಣಜಿ ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಅಕ್ರಮವಾಗಿ ಗೋವಾ ಮದ್ಯ ಸಾಗಿಸುತಿದ್ದ ಇಬ್ಬರನ್ನು ವಶಕ್ಕೆ ಪಡೆದು ₹ 1.27000 ಸಾವಿರ ಮೌಲ್ಯದ ವಿವಿಧ ಬ್ರಾಂಡ್ ನ ಗೋವಾ ಮದ್ಯ ವನ್ನು ಅಬಕಾರಿ ಇಲಾಖೆ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡ ಘಟನೆ ಕಾರವಾರ ತಾಲೂಕಿನ ಮಾಜಾಳಿಯ ಚಕ್ ಪೋಸ್ಟ್ ನಲ್ಲಿ ನಡೆದಿದೆ. ಶಿವಮೊಗ್ಗ ಮೂಲದ ನಾಗರಾಜ (35), ಸಾಗರ್ (25) ಬಂಧಿತರಾಗಿದ್ದು ,ಗೋವಾದಿಂದ ಶಿವಮೊಗ್ಗ ಕ್ಕೆ ಬ್ಯಾಗ್ ನಲ್ಲಿ ವಿವಿಧ ಬ್ರಾಂಡ್ ನ ಮದ್ಯವನ್ನು ತುಂಬಿಕೊಂಡು ಬಸ್…
ಆಯನೂರು ಬಳಿ ರಸ್ತೆ ಅಪಘಾತ : ಬೈಕ್ ಸವಾರ ಸ್ಥಳದಲ್ಲಿಯೇ ಸಾವು
ಆಯನೂರು ಬಳಿ ಬೈಕ್ ಹಾಗೂ ಪಿಕಪ್ ವಾಹನದ ನಡುವೆ ಭೀಕರ ಅಪಘಾತವಾಗಿದ್ದು, ಬೈಕ್ ಸವಾರ ಸ್ಥಳದಲ್ಲೇ ಧಾರುಣ ಸಾವುಕಂಡಿದ್ದಾನೆ. ಆಯನೂರು ಸಮೀಪದ ವಿಠಗೊಂಡನಕೊಪ್ಪ ಗ್ರಾಮದ ಆಕಾಶ್ (20) ಮೃತ ದುರ್ದೈವಿಯಾಗಿದ್ದಾನೆ. ಶಿವಮೊಗ್ಗದ ಆಯನೂರು ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಘಟನೆ ಇದಾಗಿದೆ. ಶಿವಮೊಗ್ಗದಿಂದ ಆಯನೂರಿನ ಕಡೆ ಬೈಕ್ ನಲ್ಲಿ ತೆರಳುತ್ತಿದ್ದ ಆಕಾಶ್ ಆಯನೂರು ಸಮೀಪದ ವೀರಗಾರನ ಬೈರನಕೊಪ್ಪದ ಬಳಿ ಕೋಳಿ ಸಾಗಿಸುತ್ತಿದ್ದ ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದ ಪರಿಣಾಮ ಆಕಾಶ್ ಸ್ಥಳದಲ್ಲಿಯೇ ಸಾವುಕಂಡಿದ್ದಾನೆ. ಅಪಘಾತದ ರಭಸಕ್ಕೆ ಆಕಾಶ್…
ಬೈಕ್ ಮತ್ತು ಟಿಪ್ಪರ್ ನಡುವೆ ಭೀಕರ ಅಪಘಾತ : ಬೈಕ್ ಸವಾರ ಸ್ಥಳದಲ್ಲೇ ಸಾವು
ಬೈಕ್ ಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸೊರಬ ತಾಲೂಕಿನ ಉಳವಿ ಮತ್ತು ಮಳಲಗದ್ದೆ ಗ್ರಾಮದ ನಡುವೆ ಗುರುವಾರ ರಾತ್ರಿ ಸಂಭವಿಸಿದೆ. ಅವಲಗೋಡು ಗ್ರಾಮದ ಯುವರಾಜ್ ಗಣಪತಿ (38) ಮೃತ ಬೈಕ್ ಸವಾರ. ಉಳುವಿಯಿಂದ ಅವಲಗೋಡು ಗ್ರಾಮಕ್ಕೆ ತೆರಳುತ್ತಿದ್ದ ಬೈಕ್ ಗೆ ಸೊರಬದಿಂದ ಸಾಗರ ಕಡೆಗೆ ತೆರಳುತ್ತಿದ್ದ ಟಿಪ್ಪರ್ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಟಿಪ್ಪರ್ ಚಾಲಕನ ಅಜಾಗರೂಕತೆಯಿಂದ ಈ ಅಪಘಾತ…