ಕ್ರೈಂ ಸುದ್ದಿ:
ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ದಿನಗೂಲಿ ನೌಕರ ಸಾವು : ಕುಟುಂಬಸ್ಥರಿಂದ ಪ್ರತಿಭಟನೆ|Mescom
ಮೆಸ್ಕಾಂ ಇಲಾಖೆಯ ನಿರ್ಲಕ್ಷ್ಯಕ್ಕೆ ದಿನಗೂಲಿ ನೌಕರನೊಬ್ಬ ಮೃತ ಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಆನವಟ್ಟಿಯಲ್ಲಿ ನಡೆದಿದೆ. ಇಲಾಖೆಯ ನಿರ್ಲಕ್ಷ್ಯಕ್ಕೆ ಆಕ್ರೋಶಗೊಂಡ ಆತನ ಕುಟುಂಬಸ್ಥರು ಮತ್ತು ಎಣ್ಣೆಕೊಪ್ಪ ಗ್ರಾಮಸ್ಥರು ಮೆಸ್ಕಾಂ ಇಲಾಖೆಯ ಉಪ ವಿಭಾಗ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ತಾಲೂಕಿನ ಆನವಟ್ಟಿಯಲ್ಲಿ ಸೋಮವಾರ ನಡೆಯಿತು. ಘಟನೆ ಹಿನ್ನೆಲೆ: ಎಣ್ಣೆಕೊಪ್ಪ ಗ್ರಾಮದ ರವಿ ದುರ್ಗಪ್ಪ ಎಂಬ 24 ವರ್ಷದ ಯುವಕ ವಿದ್ಯುತ್ ಗುತ್ತಿಗೆದಾರರ ಬಳಿ ದಿನಗೂಲಿ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದನು. ಕುಬಟೂರು ಗ್ರಾಮದಲ್ಲಿ ಡಿ.17 ರಂದು…
ರಿಪ್ಪನ್‌ಪೇಟೆ ಸಮೀಪದ ನೆವಟೂರಿನಲ್ಲಿ ಅಮಾಯಕನ ಮೇಲೆ ಮಾರಣಾಂತಿಕ ಹಲ್ಲೆ – ಪ್ರಕರಣ ದಾಖಲು|assault
ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ನೆವಟೂರು ಗ್ರಾಮದಲ್ಲಿ ಜಮೀನಿನ ವಿಚಾರದಲ್ಲಿ ಅಮಾಯಕನೊಬ್ಬನ ಮೇಲೆ ನೆರೆಮನೆಯ ವ್ಯಕ್ತಿಗಳು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ. ನೆವಟೂರು ಗ್ರಾಮದ ನವೀನ್ ಕುಮಾರ್ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು ಗಾಯಾಳು ಮೆಗ್ಗಾನ್ ಗೆ ದಾಖಲಾಗಿದ್ದಾನೆ. ತನ್ನ ಜಮೀನಿನಲ್ಲಿ ಜೆಸಿಬಿ ಯಲ್ಲಿ ಟ್ರಂಚ್ ಹೊಡೆಸುತಿದ್ದ ಪಕ್ಕದ ಮನೆಯ ಪದ್ಮನಾಭ ಎಂಬುವವರ ಬಳಿ ಯಾಕೆ ನನ್ನ ಜಾಗದಲ್ಲಿ ಟ್ರಂಚ್ ಮಾಡುತಿದ್ದೀರಿ ಎಂದು ಕೇಳಿದ್ದಕ್ಕೆ ಏಕಾಏಕಿ ಪಕ್ಕದ ಮನೆಯ ಪದ್ಮನಾಭ ಮತ್ತು ಆತನ ಮಗ…
ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಕಾಲೇಜು ವಿದ್ಯಾರ್ಥಿ|sucide
ಅಂತಿಮ ವರ್ಷದ ಪದವಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಇಲ್ಲಿಗೆ ಸಮೀಪದ ಆಚಾಪುರ ಗ್ರಾ.ಪಂ . ವ್ಯಾಪ್ತಿಯ ಕೆರೆಹಿತ್ತಲು ಗ್ರಾಮದ ನಿವಾಸಿ ಕಾಲೇಜು ವಿದ್ಯಾರ್ಥಿಯೋರ್ವ ಅಡಕೆ ತೋಟದಲ್ಲಿ ಮರಕ್ಕೆ ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದೆ. ಗ್ರಾಮದ ವೀರಭದ್ರಪ್ಪ ಗೌಡರ ಪುತ್ರ ಗೌತಮ್ (20) ಮೃತ ಯುವಕ ಈತ ಸಾಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ಬೆಳಿಗ್ಗೆ ಅಡಕೆ ತೋಟದ ಕೃಷಿ…
ಆಗುಂಬೆಯಲ್ಲಿ ಚಿತ್ರದುರ್ಗ ಮಹಿಳೆಯ ಕೊಲೆ -ಓರ್ವನ ಬಂಧನ|Murder
ಆಗುಂಬೆ ಹೊನ್ನೇತಾಳು ಗ್ರಾಮದ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಮಹಿಳೆ ಶವವಾಗಿ ಪತ್ತೆಯಾಗಿದ್ದಾಳೆ. ಚಿತ್ರದುರ್ಗದಿಂದ ಜಮೀನ್ದಾರ್ ರೊಬ್ಬರ ತೋಟಕ್ಕೆ ಕೆಲಸಕ್ಕೆ ಬಂದಿದ್ದ ಪಾರ್ವತಮ್ಮ ಎಂಬುವರು ಶವವಾಗಿ ಪತ್ತೆಯಾಗಿದ್ದಾರೆ. ಇದನ್ನು ಕೊಲೆ ಎಂದು ಬಣ್ಣಿಸಲಾಗುತ್ತಿದೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಪಾರ್ವತಿ (45) ಮೃತ ಮಹಿಳೆ. ಇವತ್ತು ಬೆಳಗ್ಗೆ ಘಟನೆ ಸಂಭವಿಸಿದೆ. ಪಾರ್ವತಿ ಹತ್ಯೆ ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆತನ ವಿಚಾರಣೆ ನಡೆಯುತ್ತಿದ್ದು, ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ…
ಹೊಸನಗರ ಸಮೀಪ ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ : ಚಾಲಕನಿಗೆ ಗಂಭೀರ ಗಾಯ|Accident
ಇನ್ನೊವಾ ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ನಡೆದು ಕಾರು ಚಾಲಕನಿಗೆ ಗಂಭೀರ ಗಾಯವಾಗಿರುವ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕು ನಗರ ಹೋಬಳಿ ಮತ್ತಿ ಮನೆ ಸಮೀಪ ಇನ್ನೋವಾ ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಇನ್ನೊವಾ ಕಾರಿನ ಚಾಲಕ ಸಿದ್ದರಾಜು ಎಂಬುವರ ಕಾಲಿಗೆ, ಹೊಟ್ಟೆಗೆ ಹಾಗೂ ಕಿವಿಗೆ ಗಂಭೀರವಾಗಿ ಪೆಟ್ಟು ಬಿದ್ದಿದೆ ಎಂದು ತಿಳಿದುಬಂದಿದೆ. ಕಾರು ಮೈಸೂರಿನಿಂದ ಸಿಗಂದೂರು ಕಡೆಗೆ ತೆರಳುತಿದ್ದು…
ಹಣದಾಸೆಗೆ ಭಿಕ್ಷೆ ಬೇಡುತಿದ್ದ ಅಜ್ಜಿಯನ್ನು ಕೊಲೆ ಮಾಡಿ ಚಿನ್ನ ಕದ್ದೊಯ್ದಿದ್ದ ಆರೋಪಿಯ ಬಂಧನ|Arrested
ದೇವಸ್ಥಾನದ ಮುಂದೆ ಭಿಕ್ಷೆ ಬೇಡುತಿದ್ದ ಅಜ್ಜಿಯನ್ನು ಹಣದಾಸೆಗೆ ಕೊಲೆ ಮಾಡಿದ್ದ ಆರೋಪಿಯನ್ನು ಹೆಡೆಮುರಿ ಕಟ್ಟುವಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದ ಪೇಪರ್ ಟೌನ್ ಪೊಲೀಸರು ಯಶಸ್ವಿಯಾಗಿದ್ದಾರೆ. ಡಿಸೆಂಬರ್ 3 ರಂದು ಭದ್ರಾವತಿಯ ಸುಣ್ಣದಹಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಕೊಲೆ ಮಾಡಿ ಆರೋಪಿ ಬಂಗಾರದ ಓಲೆ ಮತ್ತು ಮೂಗುತಿಯೊಂದಿಗೆ ಪರಾರಿಯಾಗಿದ್ದನು. ಸದರಿ ಜಟಿಲ ಪ್ರಕರಣವನ್ನು ಕೈಗೆತ್ತಿಕೊಂಡ ಪೇಪರ್ ಟೌನ್ ಪೊಲೀಸರು ಕುಂದಾಪುರದ ಕರುಣಾಕರ ದೇವಾಡಿಗ (24) ಎಂಬಾತನನ್ನು ಬಂಧಿಸಿ 14000 ರೂ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ….
ಹೊಳೆಯಲ್ಲಿ ದನಗಳ ಮೈ ತೊಳೆಸಲು ಹೋದ ಯುವಕ ಕಾಲು ಜಾರಿ ಬಿದ್ದು ಸಾವು|mutuguppe
ದನಗಳ ಮೈ ತೊಳೆಸಲು ಹೋದ ಯುವಕನೊಬ್ಬ ಆಕಸ್ಮಿಕವಾಗಿ ಕಾಲು ಜಾರಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಸೊರಬ ತಾಲೂಕಿನ ಮುಟುಗುಪ್ಪೆ ಸಮೀಪದ ಬಂದಿಗೆ ಗ್ರಾಮದ ಹೊಳೆಯಲ್ಲಿ ದನಗಳಿಗೆ ಮೈ ತೊಳೆಸಲು ಹೋಗಿ ಆಕಸ್ಮಿಕವಾಗಿ ಯುವಕ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ. ಬಂದಿಗೆ ಗ್ರಾಮದ ಪುನೀತ್ ಕುಮಾರ್ (23) ಮೃತ ದುರ್ಧೈವಿ. ಇಂದು ಬೆಳಗ್ಗೆ ದನಗಳಿಗೆ ಮೈ ತೊಳಿಸಲು ತಮ್ಮ ಜಮೀನಿನ ಹತ್ತಿರವಿರುವ ಜಮೀನಿನ ಹೊಳೆಗೆ ಹೋಗಿದ್ದಾರೆ.ಆದರೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ. ತಕ್ಷಣ ಅಗ್ನಿಶಾಮಕ ದಳದವರು ತಳಕ್ಕೆ…
ಚಾಲಕನ ನಿಯಂತ್ರಣ ತಪ್ಪಿ ಶಾಲಾ ಬಸ್ ಪಲ್ಟಿ – 18 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು|Accident
ಚಾಲಕನ ನಿಯಂತ್ರಣ ತಪ್ಪಿ ಶಾಲಾ ಬಸ್ ಪಲ್ಟಿಯಾಗಿ ವಿದ್ಯಾರ್ಥಿಗಳಿಗೆ ಗಾಯಗಳಾಗಿರುವ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕರೂರು ಹೋಬಳಿಯ ತುಮರಿ ಬಳಿ ಶಾಲಾ ಪ್ರವಾಸಿ ಬಸ್ಸು ಪಲ್ಟಿಯಾಗಿದ್ದೂ, ಕೆಲ ಶಾಲಾ ಮಕ್ಕಳಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಅಂದಾಜು 18 ಜನ ಮಕ್ಕಳು ಹಾಗೂ ಎಂಟು ಜನ ಶಿಕ್ಷಕರನ್ನು ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ಕರೆ ತರಲಾಗಿದೆ. ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಪ್ರೌಢ ಶಾಲಾ ಮಕ್ಕಳು ಪ್ರವಾಸಕ್ಕೆ ಬಂದ ಸಂಧರ್ಭದಲ್ಲಿ ಘಟನೆ…
ಹೆತ್ತ ತಾಯಿಯ ಮನೆಯಲ್ಲಿಯೇ ಕಳ್ಳತನ ಮಾಡಿದ ಮಗ – ಬಂಧನ|Theft
ಹೆತ್ತ ತಾಯಿಯ ಮನೆಗೆ ಕನ್ನ ಹಾಕಿದ ಮಗನನ್ನು ಶಿವಮೊಗ್ಗ ಜಿಲ್ಲೆಯ ತುಂಗಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಗೋಪಾಳದ ಶ್ರೀರಾಮನಗರದ ಗಿರೀಶ್ ಅಲಿಯಾಸ್ ಸುಣ್ಣ ಬಂಧಿತ ಮನೆ ಕಳ್ಳ. ಆರೋಪಿಯು ತನ್ನ ತಾಯಿ ಮನೆಯಲ್ಲಿಲ್ಲದ ವೇಳೆ ಕಳ್ಳತನ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮನೆಯಲ್ಲಿ ಕಳ್ಳತನವಾಗಿರುವ ಬಗ್ಗೆ ಗಿರೀಶ್ ತಾಯಿ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಗಿರೀಶ್ ಕದ್ದಿರುವ ಅನುಮಾನದಿಂದ ವಿಚಾರಣೆ ನಡೆಸಿದಾಗ ಕೃತ್ಯ ಒಪ್ಪಿಕೊಂಡಿದ್ದಾನೆ. ಈತ ಹಮಾಲಿ ಕೆಲಸ ಮಾಡುತ್ತಿದ್ದು,…
ಪತಿಗೆ ಕತ್ತಿಯಿಂದ ಬೆದರಿಸಿ ಪತ್ನಿಯ ಅಪಹರಣ ಪ್ರಕರಣಕ್ಕೆ ಟ್ವಿಸ್ಟ್ – ಭಗ್ನ ಪ್ರೇಮಿಯಿಂದಲೇ ಅಪಹರಣ|Kidnap
ವಿವಾಹಿತೆಯೊಬ್ಬಳು ಕಿಡ್‌ನ್ಯಾಪ್ ಆಗಿರುವ ಪ್ರಕರಣವನ್ನು ಭದ್ರಾವತಿ ನ್ಯೂಟೌನ್ ಪೊಲೀಸರು ಚುರುಕಾದ ಕಾರ್ಯಾಚರಣೆಯಿಂದ ಭೇದಿಸಿದ್ದು, ಪ್ರಿಯಕರನಿಂದಲೇ ಮಹಿಳೆಯ ಅಪಹರಣವಾಗಿರುವುದು ಪತ್ತೆಯಾಗಿದೆ. ಡಿ.4ರಂದು ಎನ್‌ಟಿಬಿ ಲೇಔಟ್‌ನಲ್ಲಿದ್ದ ಮನೆಯಿಂದ ಮಹಿಳೆಯ ಅಪಹರಣವಾಗಿತ್ತು. ಮಹಿಳೆಯ ಗಂಡನಿಗೆ ಮಚ್ಚು ತೋರಿಸಿ ಅಪಹರಣ ಮಾಡಲಾಗಿದ್ದಲ್ಲದೆ, ಆಕೆಯ ಗಂಡನ ಕಾರಲ್ಲೇ ಆರೋಪಿಗಳು ಎಸ್ಕೇಪ್ ಆಗಿದ್ದರು. ಈ ಪ್ರಕರಣದಲ್ಲಿ ಆಕೆಯ ಪ್ರಿಯಕರ ಸುರೇಶ್ ಸಹಿತ ನಾಲ್ವರನ್ನು ಬಂಧಿಸಲಾಗಿದೆ. ಅಬ್ದುಲ್ ಅಬ್ರಾರ್, ಮಹೇಶ್, ಮಂಜುನಾಥ್ ಇತರ ಮೂವರು ಆರೋಪಿಗಳು. ಬಾಲ್ಯದ ಸ್ನೇಹಿತ ಸುರೇಶ್ ಜತೆಗೆ ಈಕೆಗೆ ಮೊದಲಿನಿಂದಲೂ ಪ್ರೇಮವಿದ್ದು, ಆದರೂ…