ಕ್ರೈಂ ಸುದ್ದಿ:
ಸಾಗರ : ಐಗಿನಬೈಲ್ ಬಳಿ ದ್ವಿಚಕ್ರ ಹಾಗೂ ಕಾರಿನ ನಡುವೆ ಡಿಕ್ಕಿ – ಯುವತಿ ಸ್ಥಳದಲ್ಲೇ ಸಾವು|accident
ಕಾರು ಮತ್ತು ಸ್ಕೂಟಿ ನಡುವೆ ಭೀಕರ ರಸ್ತೆ ಅಪಘಾತ ನಡೆದು ಸ್ಥಳದಲ್ಲೇ ಯುವತಿಯೊಬ್ಬಳು ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ನಡೆದಿದೆ. ಸಾಗರ ತಾಲೂಕಿನ ಉಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಗಿನಬೈಲ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ 24 ವರ್ಷದ ಯುವತಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಿವಾಸಿ ಶೃತಿ(24) ಮೃತಪಟ್ಟಿರುವ ಯುವತಿಯಾಗಿದ್ದು ಶಿವಮೊಗ್ಗದ ಸಿಟಿ ಸೆಂಟರ್ ನಲ್ಲಿ ಸೆಕ್ಯೂರಿಟಿ ಗಾರ್ಡಾಗಿ…
ರಿಪ್ಪನ್‌ಪೇಟೆ : KSRTC ಬಸ್ ಗೆ ಹಿಂಬದಿಯಿಂದ ಬೈಕ್ ಡಿಕ್ಕಿ – ಗಂಭಿರ ಗಾಯಗೊಂಡಿದ್ದ ಬೈಕ್ ಸವಾರ ಮೆಗ್ಗಾನ್ ಗೆ ರವಾನೆ
ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಗವಟೂರು ಬಳಿ ಚಲಿಸುತಿದ್ದ ಕೆ ಎಸ್ ಆರ್ ಟಿಸಿ ಬಸ್ ಗೆ ಬೈಕ್ ಹಿಂಬದಿಯಿಂದ ಡಿಕ್ಕಿ ಹೊಡೆದು ಓರ್ವ ವ್ಯಕ್ತಿಗೆ ಗಂಭೀರ ಪೆಟ್ಟಾಗಿರುವ ಘಟನೆ ನಡೆದಿದೆ. ಬೈಕ್ ಸವಾರ ದಾನಪ್ಪ(68) ಗಂಭೀರ ಗಾಯಗೊಂಡಿದ್ದಾರೆ. ಭಟ್ಕಳ – ಬೆಂಗಳೂರು ಮಾರ್ಗದ ಕೆ ಎಸ್ ಆರ್ ಟಿಸಿ ಬಸ್ ಚಾಲಕ ಗವಟೂರು ಬಳಿ ಎದುರುಗಡೆ ವಾಹನ ಬಂದ ಹಿನ್ನಲೆಯಲ್ಲಿ ಬ್ರೇಕ್ ಹಾಕಿದ್ದಾನೆ ಹಿಂಬದಿ ಟಿವಿಎಸ್ ಎಕ್ಸೆಲ್ ಬೈಕ್ ನಲ್ಲಿ ಬರುತಿದ್ದ ಚಾಲಕ ಬಸ್ ಗೆ…
ಶಿವಮೊಗ್ಗ-ಆಯನೂರು ಹೆದ್ದಾರಿಯಲ್ಲಿ ಹಾಡಹಗಲೇ ಕಾರು ಅಡ್ಡಗಟ್ಟಿ ಯುವಕನ ಕುತ್ತಿಗೆಗೆ ಮಚ್ಚು ಇಟ್ಟು ದರೋಡೆ|Robbery
ಮಾರಿ ಜಾತ್ರೆಗೆ ಕಾರಿನಲ್ಲಿ ತೆರಳುತ್ತಿದ್ದ ಯುವಕನ ಕುತ್ತಿಗೆಗೆ ಮಚ್ಚು ಇಟ್ಟು ಹಾಡಹಗಲೇ ನಗ – ನಗದು ಅಪಹರಿಸಿರುವ ಆಘಾತಕಾರಿ ಘಟನೆ ಶಿವಮೊಗ್ಗ ಸಮೀಪ ನಡೆದಿದೆ. ಶಿವವಮೊಗ್ಗ-ಸಾಗರ ಹೆದ್ದಾರಿಯಲ್ಲಿ ಬರುವ ಟ್ರೀಪಾರ್ಕ್ನ ಸಮೀಪ ದರೋಡೆಯೊಂದು (Dacoity) ನಡೆದಿರುವ ಬಗ್ಗೆ ವರದಿಯಾಗಿದೆ. ತರಿಕೆರೆಯ ವಸಂತ್ ಎಂಬವರು ಕಾರಿನಲ್ಲಿ ಮಾರಿಜಾತ್ರೆಗೆ ಹೋಗುತ್ತಿದ್ದ ವೇಳೆ ಅವರನ್ನು ಟ್ರೀಪಾರ್ಕ್ ಬಳಿ ಅಡ್ಡಗಟ್ಟಲಾಗಿದೆ. ಕಾರಿನಲ್ಲಿ ಹೋಗುತ್ತಿದ್ದವರನ್ನ ತಡೆದು ಕುತ್ತಿಗೆಗೆ ಮಚ್ಚು ಹಿಡಿದು ಕ್ಯಾಶ್ ಹಾಗೂ ಚಿನ್ನವನ್ನು ದೋಚಿ ಹೋಗಿದ್ದಾರೆ. ಮೂತ್ರ ವಿಸರ್ಜನೆಗೆ ಎಂದು ಕಾರು ನಿಲ್ಲಿಸಿದ್ದ…
ಟಿಪ್ಪರ್ ಲಾರಿ ಹಾಗೂ ಬೈಕ್ ನಡುವೆ ಭೀಕರ ಅಪಘಾತ – ಇಬ್ಬರು ಸ್ಥಳದಲ್ಲಿಯೇ ಸಾವು|accident
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಮಾವಲಿ ಮತ್ತು ಶಿವಪುರ ಗ್ರಾಮದ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಟಿಪ್ಪರ್ ಲಾರಿ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬೆದವಟ್ಟಿ ಗ್ರಾಮದ ಲೋಹೀತ್ ಫಕೀರಪ್ಪ( ಸುಮಾರು 25 ವರ್ಷ) ಹಾಗೂ ಶಿವಪುರ ಗ್ರಾಮದ ಶ್ರೀನಿವಾಸ ಮಾರುತಿ ( ಸುಮಾರು 25 ವರ್ಷ) ಮೃತ ದುರ್ಧೈವಿಗಳು. ಶಿರಾಳಕೊಪ್ಪದಿಂದ ಸೊರಬ ಮಾರ್ಗವಾಗಿ ಬರುತ್ತಿದ್ದ ಟಿಪ್ಪರ್ ಸೊರಬದಿಂದ ಶಿರಾಳಕೊಪ್ಪ ಮಾರ್ಗವಾಗಿ ತೆರಳುತಿದ್ದ…
ಆನಂದಪುರ ಸಮೀಪದ ತಾವರೆಹಳ್ಳಿಯ ತೋಟದ ಮನೆಯಲ್ಲಿ ಆತ್ಮಹತ್ಯೆಗೆ ಶರಣಾದ ಯುವಕ|death
ಆನಂದಪುರ : ಇಲ್ಲಿನ ಸಮೀಪದ ತಾವರೆಹಳ್ಳಿಯಲ್ಲಿರುವ ತೋಟದ ಮನೆಯಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆನಂದಪುರ ಬಸವನ ಬೀದಿ ನಿವಾಸಿ ಶರತ್ (28) ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ. ಆನಂದಪುರದ ಬಸವನ ಬೀದಿಯ ನಿವಾಸಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಗೋಪಾಲ್ ರವರ ಮಗ ಶರತ್ ಆನಂದಪುರ ಸಮೀಪದ ತಾವರೆಹಳ್ಳಿಯಲ್ಲಿರುವ ತೋಟದ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ . ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ಸ್ಥಿತಿಯಲ್ಲಿ ದೇಹ ದೊರಕಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದಿಲ್ಲ. ಸ್ಥಳಕ್ಕೆ ಗ್ರಾಮಾಂತರ ಪೊಲೀಸರು…
ರಿಪ್ಪನ್‌ಪೇಟೆ ಸಮೀಪ ಎರಡು ಕಾರುಗಳ ನಡುವೆ ಭೀಕರ ಅಪಘಾತ : ಸ್ಥಿತಿ ಗಂಭೀರ – ಮೆಗ್ಗಾನ್ ಗೆ ದಾಖಲು|accident
ರಿಪ್ಪನ್ ಪೇಟೆ : ಇಲ್ಲಿನ ಬಾಳೂರು ಸಮೀಪದಲ್ಲಿ ಬಳಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ. ರಿಪ್ಪನ್‌ಪೇಟೆ ಕಡೆಯಿಂದ ಆನಂದಪುರ ಕಡೆಗೆ ತೆರಳುತಿದ್ದ ಮಾರುತಿ ಓಮಿನಿ ಕಾರು ಹಾಗೂ ಆನಂದಪುರ ಕಡೆಯಿಂದ ರಿಪ್ಪನ್‌ಪೇಟೆ ಕಡೆಗೆ ಬರುತಿದ್ದ ಸ್ಯಾಂಟ್ರೋ ಕಾರು ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದಲ್ಲಿ ಮಾರುತಿ ಓಮಿನಿ ಕಾರಿನಲ್ಲಿದ್ದ ಪಟ್ಟಣದ ಗವಟೂರು ಗ್ರಾಮದ ಬೋಟಿ ವ್ಯಾಪಾರಿ ತವಾಮಣಿ (45) ಎಂಬುವವರಿಗೆ ಗಂಭೀರ ಗಾಯಗಳಾಗಿದೆ.ಸೆವಾಮಣಿ ಎಂಬಾತನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಯಾಂಟ್ರೋ ಕಾರಿನಲ್ಲಿದ್ದ ಶಿವಮೊಗ್ಗ…
ಮದುವೆಯಾಗು ಎಂದು ಒತ್ತಾಯಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಎಂಸಿಎ ಓದುತ್ತಿದ್ದ ಯುವತಿ|sucide
ಶಿವಮೊಗ್ಗ : ಮದುವೆ ವಿಚಾರಕ್ಕೆ ಶಿವಮೊಗ್ಗದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ಧಾಳೆ. ಮದುವೆಯಾಗುವ ಹುಡುಗನ ಕಡೆಯವರು ಹುಡುಗಿಯ ಮನೆಗೆ ಬಂದು ಶೀಘ್ರ ಮದುವೆ ಮಾಡಿಕೊಡಿ ಎಂದು ಒತ್ತಾಯಿಸಿದ್ದಲ್ಲದೆ, ಹುಡುಗಿಗೆ ಮದುವೆಗೆ ಮನಸ್ಸಿಲ್ಲ ಎಂದರೆ ಹೋಗಿ ಸಾಯಿ ಎಂದು ಬೈದಿದ್ದರಿಂದ ಶಿವಮೊಗ್ಗದ ಬೊಮ್ಮನಕಟ್ಟೆಯ ಯುವತಿ ಸುಮಾ ಎಂಬಾಕೆ ಆತ್ಮಹತ್ಯೆ ಮಾಡಿಕೊಂಡಿದ್ಧಾಳೆ ಎಂದು ಆರೋಪಿಸಲಾಗಿದೆ. ಸುಮಾ ಆತ್ಮಹತ್ಯೆ ಮಾಡಿಕೊಂಡವರು. ಈಕೆ ನಗರದ ಕಾಲೇಜೊಂದರಲ್ಲಿ ಎಂಸಿಎ ಎರಡನೆಯ ವರ್ಷ ಓದುತ್ತಿದ್ದರು. 2019ರಲ್ಲಿ ನ್ಯಾಮತಿ ಮೂಲದ ಯುವಕನೊಂದಿಗೆ ನಿಶ್ಚಿತಾರ್ಥವಾಗಿತ್ತು. ಓದು ಮುಗಿದ ಮೇಲೆ ವಿವಾಹವಾಗುವ…
ರಿಪ್ಪನ್‌ಪೇಟೆ : ತಾವರೆಕೆರೆ ಬಳಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ – ಓರ್ವನ ಸ್ಥಿತಿ ಗಂಭೀರ – ಐವರು ಗಾಯಾಳು ಮೆಗ್ಗಾನ್ ಗೆ|accident
ರಿಪ್ಪನ್ ಪೇಟೆ : ಇಲ್ಲಿನ ಹೊಸನಗರ ರಸ್ತೆಯ ತಾವರೆಕೆರೆ ಬಳಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ. ರಿಪ್ಪನ್‌ಪೇಟೆ ಕಡೆಯಿಂದ ಬಿಳಿಕಿ ಗ್ರಾಮಕ್ಕೆ ತೆರಳುತಿದ್ದ ಬೈಕ್ ಹಾಗೂ ಜೇನಿ ಕಡೆಯಿಂದ ರಿಪ್ಪನ್‌ಪೇಟೆ ಕಡೆಗೆ ಬರುತಿದ್ದ ಬೈಕ್ ನಡುವೆ ತಾವರೆಕೆರೆ ಸಮೀಪದಲ್ಲಿ ಮುಖಾಮುಖಿ ಡಿಕ್ಕಿಯಾಗಿದೆ. ಈ ರಸ್ತೆ ಅಪಘಾತದಲ್ಲಿ ಪಟ್ಟಣದ ಸಮೀಪದ ಬಿಳಿಕಿ ಗ್ರಾಮದ ರಾಕೇಶ್ ಎಂಬ ವ್ಯಕ್ತಿಯ ತಲೆಗೆ ತೀವ್ರವಾದ ಪೆಟ್ಟಾಗಿದ್ದು ಕಾಲು ಮುರಿದು ಸ್ಥಿತಿ ಗಂಭೀರವಾಗಿದೆ. ಅದೇ…
ಎರಡು ದಿನಗಳಿಂದ ನಾಪತ್ತೆಯಾಗಿದ್ದ ನಾಲ್ಕು ವರ್ಷದ ಮಗು ಕೆರೆಯಲ್ಲಿ ಶವವಾಗಿ ಪತ್ತೆ|death
ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ನಾಲ್ಕು ವರ್ಷದ ಮಗು ಇಂದು ಮನೆಯ ಸಮೀಪದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದಿದೆ. ಎರಡು ದಿನಗಳ ಹಿಂದೆ ಮನೆಯ ಬಳಿ ಆಟವಾಡುತಿದ್ದ ಮಗು ಕಾಣೆಯಾಗಿತ್ತು,ಎಲ್ಲಾ ಕಡೆ ವಿಚಾರಿಸಿ ಕೊನೆಗೆ ಪೊಲೀಸ್ ಠಾಣೆಯಲ್ಲಿ ಅವರ ತಂದೆ ದೂರು ಸಲ್ಲಿಸಿದ್ದರು. ಇಂದು ಮಗುವಿನ ಮೃತ ದೇಹ ಮನೆಯ ಸಮೀಪದ ಕೆರೆಯಲ್ಲಿ ತೇಲಿ ಬಂದಿದೆ. ರಾಗಿಗುಡ್ಡದ 7 ನೇ ತಿರುವಿನಲ್ಲಿ ಮಹ್ಮದ್ ಸೂಫಿಯನ್ ಖುರೇಷಿ ಎಂಬುವರು ತಮ್ಮ ಮೊದಲನೇ ಮಗು ಮೊಹ್ಮದ್ ಮನ್ನನ್…
ಅಪರೂಪದ ವನ್ಯಜೀವಿ ಮಚ್ಚೆ ಗೂಬೆಗಳ ಅಕ್ರಮ ಮಾರಾಟಕ್ಕೆ ಯತ್ನ – ಮಾಲು ಸಮೇತ ಇಬ್ಬರ ಬಂಧನ|athin blevin
ಅಪರೂಪದ ವನ್ಯಜೀವಿ ಮಚ್ಚೆ ಗೂಬೆಗಳ ಅಕ್ರಮ ಮಾರಾಟಕ್ಕೆ ಯತ್ನ – ಮಾಲು ಸಮೇತ ಇಬ್ಬರ ಬಂಧನ ಅಪರೂಪದದ ವನ್ಯಜೀವಿ ಮಚ್ಚೆ ಗೂಬೆಗಳ ಅಕ್ರಮ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮಾಲು ಸಮೇತ ಬಂಧಿಸಿರುವ ಘಟನೆ ಶಿವಮೊಗ್ಗ ತಾಲೂಕಿನ ಕಲ್ಲೂಪುರ ಗ್ರಾಮದಲ್ಲಿ ನಡೆದಿದೆ. ಮಚ್ಚೆ ಗೂಬೆ(ಅಥೀನ್ ಬ್ಲೆವಿನ್ )ಯನ್ನು ಅಕ್ರಮ ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನಲೆಯಲ್ಲಿ ಸಾಗರ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ವಿನಾಯಕ ನೇತ್ರತ್ವದಲ್ಲಿ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು…