ಕ್ರೈಂ ಸುದ್ದಿ:
ಮೋದಿ ಕಾರ್ಯಕ್ರಮಕ್ಕೆ ಬಂದಿದ್ದ ಬಿಜೆಪಿ ಕಾರ್ಯಕರ್ತ ಕುಸಿದು ಬಿದ್ದು ಸಾವು|airport
ಶಿವಮೊಗ್ಗ : ಇಂದು ಅದ್ಧೂರಿಯಾಗಿ ನಡೆದ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಸೊರಬ ತಾಲೂಕಿನ ಚಿಮ್ಮನೂರು ಗ್ರಾಮದ ಮಲ್ಲಿಕಾರ್ಜುನಪ್ಪ (50) ಎಂಬವರೇ ಮೃತಪಟ್ಟವರು. ಸೊರಬದ ಕಡೆಯಿಂದ ಭಾರಿ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಇತರರು ಕಾರ್ಯಕ್ರಮಕ್ಕೆ ಬಂದಿದ್ದರು. ಮಲ್ಲಿಕಾರ್ಜುನ ಅವರು ಬೆಳಗ್ಗೆ ಗ್ರಾಮಸ್ಥರೊಂದಿಗೆ ಬಸ್ಸಿನಲ್ಲಿ ಬಂದಿದ್ದರು. ಕಾರ್ಯಕ್ರಮ ಮುಗಿಸಿ ವಾಪಸಾಗುವಾಗ ಸೋಗಾನೆ ಗ್ರಾಮದ ಕೆಇಬಿ ಕಚೇರಿ ಹತ್ತಿರ ಮಲ್ಲಿಕಾರ್ಜುನ ಅವರು ಅಸ್ವಸ್ಥರಾದರು. ಬಾಯಾರಿಕೆಯಿಂದ ನೀರು ಕೇಳಿದ್ದ ಮಲ್ಲಿಕಾರ್ಜುನ ಅವರು…
ರಿಪ್ಪನ್‌ಪೇಟೆ : ದೇವಸ್ಥಾನದ ಬೀಗ ಮುರಿದು ಸಾವಿರಾರು ರೂ ಕಳ್ಳತನ|theft
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ನಿವುಣೆ ಗ್ರಾಮದ ಶ್ರೀ ಕಲಾನಾಥೇಶ್ವರ ದೇವಸ್ಥಾನ ಬೀಗ ಮುರಿದು ಕಳ್ಳತನ ನಡೆಸಿರುವ ಘಟನೆ ಗುರುವಾರ ರಾತ್ರಿ ನಡೆದಿದೆ. ಕಳ್ಳರು ರಾತ್ರಿಯ ವೇಳೆಯಲ್ಲಿ ದೇವಸ್ಥಾನದ ಮುಂಭಾಗಿಲಿನ ಬೀಗ ಮುರಿದು ದೇವಸ್ಥಾನದ ಒಳಭಾಗಕ್ಕೆ ಪ್ರವೇಶಿಸಿ ದೇವರ ಮುಂಭಾಗದಲಿದ್ದ ಒಂದು ಕಬ್ಬಿಣದ ಮತ್ತು ಸ್ಟೀಲ್ ನ ಕಾಣಿಕೆ ಡಬ್ಬಿಗಳನ್ನು ದೇವಸ್ಥಾನದ ಹೊರಭಾಗ ಎತ್ತಿಕೊಂಡು ಹೋಗಿ ಅಲ್ಲಿ ಅವುಗಳ ಬೀಗವನ್ನು ಮುರಿದು ಅದರ ಒಳಭಾಗದಲ್ಲಿದ್ದ ಹಣವನ್ನು ಕಳ್ಳತನ ಮಾಡಿಕೊಂಡು ಕಾಣಿಕೆ ಡಬ್ಬಿಗಳು…
ಆನಂದಪುರ ಸಮೀಪದ ಕೆಂಜಿಗಾಪುರದಲ್ಲಿ ಒಂಟಿ ಮನೆ ದರೋಡೆ – ಒಂದೇ ವಾರದಲ್ಲಿ ಎರಡು ಬಾರಿ ದರೋಡೆಗೊಳಗಾದ ಭಟ್ಟರ ಮನೆ|Robbery
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆತಂಕ ಮೂಡಿಸುವಂತಹ ದರೋಡೆ ಪ್ರಕರಣವೊಂದು ಸಾಗರ ಗ್ರಾಮಾಂತರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದಿದೆ. ಆನಂದಪುರ ಸಮೀಪದ ಕೆಂಜಿಗಾಪುರ ಭಟ್ಟರೊಬ್ಬರ ಮನೆಯಲ್ಲಿ ರಾಬರಿ ನಡೆದಿದೆ. ಎಫ್ಐಆರ್ನಲ್ಲಿ ದಾಖಲಾಗಿರುವ ಪ್ರಕಾರ ಎರಡು ಸಲ ರಾಬರಿ ನಡೆದಿದೆ. ಸ್ಥಳೀಯರು ಹೇಳುವ ಪ್ರಕಾರ ಮೂರು ಸಲ ನಡೆದಿರಬಹುದು ಎನ್ನಲಾಗುತ್ತದೆ. ಒಂದೇ ಮನೆಯನ್ನು ಟಾರ್ಗೆಟ್ ಮಾಡಿ ಕೇವಲ ಒಂದು ವಾರದಲ್ಲಿ ಎರಡು ಸಲ ರಾಬರಿ ಮಾಡಲಾಗಿದೆ. ಹಿರಿಯ ವೃದ್ಧರನ್ನ ಕೈ ಕಾಲು ಕಟ್ಟಿ ರಾಬರಿ ಮಾಡಿ ಹೋಗುತ್ತಿರುವವರು ಯಾರು?…
ರಿಪ್ಪನ್‌ಪೇಟೆ : ಅಕ್ರಮ ಮದ್ಯ ಮಾರಾಟ ಮಾಡುತಿದ್ದ ಅಂಗಡಿಗಳ ಮೇಲೆ ಪೊಲೀಸರ ದಾಳಿ – ಇಬ್ಬರು ವಶಕ್ಕೆ|excise
ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಬೆಳ್ಳೂರು ಗ್ರಾಪಂ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತಿದ್ದ ಎರಡು ಅಂಗಡಿಗಳ ಮೇಲೆ ಪಟ್ಟಣದ ಪೊಲೀಸರು ದಾಳಿ ನಡೆಸಿದ ಘಟನೆ ನಡೆದಿದೆ. ಬೆಳ್ಳೂರು ಗ್ರಾಮದ ಬಂಗ್ಲಿದಿಬ್ಬ ಸರ್ಕಲ್ ನಲ್ಲಿರುವ ದಿನಸಿ ಅಂಗಡಿ ಮುಂಭಾಗದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತಿದ್ದ ಮಾಹಿತಿ ಹಿನ್ನಲೆಯಲ್ಲಿ ಪೊಲೀಸರು ದಾಳಿ ನಡೆಸಿ ಚಂದ್ರಪ್ಪ ಎಂಬಾತನನ್ನು ವಶಕ್ಕೆ ಪಡೆದು ಅಕ್ರಮ ಮದ್ಯವನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ. ಬೆಳ್ಳೂರು ಗ್ರಾಮದ ಕೋಳಿ ಅಂಗಡಿ ಮುಂಭಾಗದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತಿದ್ದ ಮಾಹಿತಿ…
ರಿಪ್ಪನ್‌ಪೇಟೆ : ನುಗ್ಗೆಕಾಯಿ ಕಿತ್ತ ವಿಚಾರದಲ್ಲಿ ಗಲಾಟೆ – ಒಬ್ಬನಿಗೆ ಮೂವರಿಂದ ಹಲ್ಲೆ,ಜೀವಬೆದರಿಕೆ|Assault
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಕೆಂಚನಾಲ ಗ್ರಾಮದಲ್ಲಿ ನುಗ್ಗೆಕಾಯಿ ವಿಚಾರಕ್ಕೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ಘಟನೆಯೊಂದು ನಡೆದಿದೆ. ಸೋಮವಾರ ಸಂಜೆ ಕೆಂಚನಾಲ ಗ್ರಾಮದ ರಾಮ್ ಕುಮಾರ್ ರಿಪ್ಪನ್ಪೇಟೆಗೆ ಹೋಗಿ ವಾಪಸ್ ಮನೆಗೆ ಬರುವಾಗ, ಅದೇ ಗ್ರಾಮದ ನಿವಾಸಿ ನಾಗೇಶ್ ತನ್ನ ಮನೆ ಹಿತ್ತಲಿನಲ್ಲಿ ಬೆಳೆದಿದ್ದ ನುಗ್ಗೆಕಾಯಿಯನ್ನು ಕೀಳುತ್ತಿರುವುದು ಕಾಣಿಸಿದೆ. ಸಹಜವಾಗಿಯೇ ನಮ್ಮನೆಯ ಹಿತ್ಲಿಂದ ಯಾಕೆ ನುಗ್ಗೆಕಾಯಿ ಕಿತ್ಕೊಂಡು ಹೋಗ್ತಿದ್ದಿಯಾ, ಹೇಳೋದು ಕೇಳೋದು ಏನು ಇಲ್ವಾ ಎಂದು ಪ್ರಶ್ನಿಸಿದ್ದಾರೆ. ಇಷ್ಟಕ್ಕೆ ಸಿಟ್ಟಾದ ವ್ಯಕ್ತಿ ಅದು ನಿನ್ನ…
ಮಾರಕಾಸ್ತ್ರಗಳೊಂದಿಗೆ ದರೋಡೆಗೆ ಹೊಂಚು ಹಾಕಿದ್ದ ನಾಲ್ವರ ಹೆಡೆಮುರಿ ಕಟ್ಟಿದ ಪೊಲೀಸರು|robbery
ದರೋಡೆಗೆ ಹೊಂಚು ಹಾಕುತ್ತಿದ್ದ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಶಿವಮೊಗ್ಗ ನಗರದ ವಿನೋಬನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಮಾರಕಾಸ್ತ್ರಗಳೊಂದಿಗೆ ಒಬ್ಬಂಟಿಯಾಗಿ ಬರುವ ವ್ಯಕ್ತಿಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಖತರ್ ನಾಕ್ ತಂಡವನ್ನು ಪೊಲೀಸರು ಬಂಧಿಸಿದ್ದಾರೆ. ಬಸವನ ಗಂಗೂರು ಚಾನೆಲ್ ಮೇಲೆ ಬೊಮ್ಮನ್ ಕಟ್ಟೆಯ ಅನಿಲ್ ಕುಮಾರ್(42), ಕೋಹಳ್ಳಿಯ ಶಿವನಾಯ್ಕ (34), ಆಯನೂರಿನ ಶಿವಕುಮಾರ್ (45) ಮತ್ತು ಸಿರಿಗೆರೆಯ ಖಲೀಂ ಬಂಧಿತ ಆರೋಪಿಗಳು. ಈ ದರೋಡೆ ಸಂಚಿನ ಬಗ್ಗೆ ಮಾಹಿತಿ ತಿಳಿದ ವಿನೋಬನಗರ ಪಿಎಸ್ಐ ಸಾಗರ್ಕರ್ ನೇತೃತ್ವದಲ್ಲಿ ಪೊಲೀಸರ ತಂಡ…
ತುಂಗಾ ನದಿಯಲ್ಲಿ ಯುವಕನ ಶವ ಪತ್ತೆ – ಆತ್ಮಹತ್ಯೆ ಶಂಕೆ|TUNGA
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೊನ್ನಾನಿ ಬಳಿಯ ಹಿಂಭಾಗದ ತುಂಗಾ ನದಿಯಲ್ಲಿ ಭಾನುವಾರ ತೆಂಗಿನ ಕೊಪ್ಪದ ಯುವಕನ ಶವ ಪತ್ತೆಯಾಗಿದೆ. ತೀರ್ಥಹಳ್ಳಿಯ ಸೊಪ್ಪುಗುಡ್ಡೆಯಲ್ಲಿ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಪ್ರಜತ್(26) ಮೃತಪಟ್ಟ ಯುವಕ. ಸಾಲೂರು ಹೊಸಮನೆ ತೆಂಗಿನಕೊಪ್ಪದ ಪ್ರಜತ್ 4 ವರ್ಷದ ಹಿಂದೆ ಹಾವು ಕಚ್ಚಿದ ಕಾರಣ ತಾಯಿಯನ್ನು ಕಳೆದುಕೊಂಡಿದ್ದರು ಹಾಗೂ ತಂದೆ ಕೂಡ ಕ್ಯಾನ್ಸರ್ ರೋಗಕ್ಕೆ ಇತ್ತೀಚಿಗೆ ಬಲಿಯಾಗಿದ್ದರು. ಪ್ರಜತ್ ಸಾಲದ ಕಾರಣ ಹಾಗೂ ಒಳ್ಳೆಯ ಉದ್ಯೋಗ ಇಲ್ಲದ ಕಾರಣ ಮಾನಸಿಕವಾಗಿ ಕುಗ್ಗಿ ಹೋಗಿದ್ದರು ಎನ್ನಲಾಗುತ್ತಿದೆ….
ಈಜಲು ಹೋದ ಎಂಬಿಬಿಎಸ್ ವಿದ್ಯಾರ್ಥಿ ಶವವಾಗಿ ಪತ್ತೆ|death
ಶಿವರಾತ್ರಿಯ ನಿಮಿತ್ತ ಜಾಲಿ ಮೂಡ್ ನಲ್ಲಿದ್ದ ವಿದ್ಯಾರ್ಥಿಗಳ ಗುಂಪೊಂದಕ್ಕೆ ಆಘಾತವಾಗಿದೆ ಶಿವಮೊಗ್ಗ ಜಿಲ್ಲೆಯ ಭದ್ರಾ ಚೆಕ್ ಡ್ಯಾಂ ನ ನೀರಿನಲ್ಲಿ ಈಜಲು ಹೋಗಿದ್ದ ಸಿಮ್ಸ್ ನ ವಿದ್ಯಾರ್ಥಿ ನೀರುಪಾಲಾಗಿ ಶವವಾಗಿ ಪತ್ತೆಯಾಗಿರುವ ಘಟನೆ ಇಂದು ನಡೆದಿದೆ. ಭದ್ರಾ ನದಿಯ ಗೋಂದಿ ಚೆಕ್ ಡ್ಯಾಂಗೆ ಶಿವಮೊಗ್ಗದ ಸಿಮ್ಸ್ ನ ವಿದ್ಯಾರ್ಥಿ ಜಗತ್ ಮತ್ತು ಇತರೆ ಐವರು ಸ್ನೇಹಿತರು ಈಜಲು ತೆರಳಿದ್ದಾರೆ. ಜಗತ್(21) ಜೊತೆಗೆ ಓರ್ವ ನೀರಿಗೆ ಇಳಿದಿದ್ದಾನೆ. ಜಗತ್ ನೀರಿನಲ್ಲಿ ಮುಂದೆ ಹೋಗಿದ್ದು ಆಳವಿದ್ದುದ್ದರಿಂದ ನೀರಿನಲ್ಲಿ ಮುಳುಗಿದವನು ಮೇಲೆ…
ಚಲಿಸುತಿದ್ದ ರೈಲಿನಿಂದ ಕೆಳಗೆ ಬಿದ್ದು ರಿಪ್ಪನ್‌ಪೇಟೆಯ ಸರ್ಕಾರಿ ವೈದ್ಯ ಸಾವು|accident
ರಿಪ್ಪನ್‌ಪೇಟೆ : ತುಮಕೂರು ಜಿಲ್ಲೆಯ ಕ್ಯಾತಸಂದ್ರ ಬಳಿ ಚಲಿಸುತಿದ್ದ ರೈಲಿನಿಂದ ಬಿದ್ದು ಪಟ್ಟಣದ ಶಬರೀಶನಗರದ ವೈದ್ಯರೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಶಬರೀಶನಗರದ ಡಾ. ಗುರುರಾಜ್ ((46) ಮೃತಪಟ್ಟ ದುರ್ಧೈವಿಯಾಗಿದ್ದಾರೆ. ಶುಕ್ರವಾರ ಬೆಂಗಳೂರಿನಿಂದ – ಶಿವಮೊಗ್ಗಕ್ಕೆ ರೈಲಿನಲ್ಲಿ ಸಂಚರಿಸುತಿದ್ದಾಗ ಕ್ಯಾತಸಂದ್ರದ ಬಳಿ ರೈಲಿನ ಬಾಗಿಲು ತಾಗಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಹೇಳಲಾಗುತಿದೆ. ಡಾ. ಗುರುರಾಜ್ ರಿಪ್ಪನ್‌ಪೇಟೆ,ಹೊಸನಗರ ಮತ್ತು ಗೌತಮಪುರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ್ದರು.ಪ್ರಸ್ತುತ ಸಂಪೆಕಟ್ಟೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯ ನಿರ್ವಹಿಸುತಿದ್ದರು.ಇತ್ತೀಚಿಗೆ ಕೊಡಗು ಜಿಲ್ಲೆಯಲ್ಲಿ…
ಶಿವಮೊಗ್ಗ ಜೈಲಿನಲ್ಲಿ ಮಾರಾಮಾರಿ : ಒಬ್ಬನಿಗೆ ಆರು ಜನರಿಂದ ಥಳಿತ|jail
ಶಿವಮೊಗ್ಗ : ಸೋಗಾನೆಯ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ಮೇಲೆ ಹಳೇ ದ್ವೇಷದಿಂದ ಇತರ ಆರು ಕೈದಿಗಳು ಹಲ್ಲೆ ನಡೆಸಿದ್ದಾರೆ. ನಾಗರಾಜ್ ಎಂಬ ವಿಚಾರಣಾಧೀನ ಕೈದಿ ಮೇಲೆ ಸಚಿನ್ ಅಲಿಯಾಸ್ ಸ್ಯಾಡೋ, ದರ್ಶನ್, ಪರಶುರಾಮ, ಅನಿಲ್‌ಕುಮಾರ್, ವಿಶ್ವನಾಥ, ವಿಶಾಲ್ ಎಂಬುವರು ಹಲ್ಲೆ ಮಾಡಿದ್ದಾರೆ. ನಾಗರಾಜ್ ಭದ್ರಾವತಿಯ ಎರಡನೇ ಅಪರ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರಾಗಲು ಜೈಲಿನಲ್ಲಿರುವ ವಿಡಿಯೋ ಕಾನ್ಫರೆನ್ಸ್ ಕೊಠಡಿಗೆ ತೆರಳುವಾಗ ಆರು ಕೈದಿಗಳು ಹಲ್ಲೆ ನಡೆಸಿದ್ದಾರೆ. ಸ್ಥಳದಲ್ಲಿದ್ದ ಜೈಲು ನಿರೀಕ್ಷಕ ಆತ್ಮಾನಂದ ಕುದರಿ ಮತ್ತು…