ಕ್ರೈಂ ಸುದ್ದಿ:
Hosanagara | ಶಾಲೆಯ ಎಸ್ ಡಿಎಂಸಿ ಸಭೆಯಲ್ಲಿ ಅಧ್ಯಕ್ಷ ಹಾಗೂ ಸದಸ್ಯನ ನಡುವೆ ಗಲಾಟೆ – ದೂರು ಪ್ರತಿದೂರು ದಾಖಲು | ರಾಜಕೀಯ ತಿರುವು ಪಡೆದುಕೊಳ್ಳುತ್ತಾ ಪ್ರಕರಣ..!!??
Hosanagara | ಶಾಲೆಯ ಎಸ್ ಡಿಎಂಸಿ ಸಭೆಯಲ್ಲಿ ಅಧ್ಯಕ್ಷ ಹಾಗೂ ಸದಸ್ಯನ ನಡುವೆ ಗಲಾಟೆ – ದೂರು ಪ್ರತಿದೂರು ದಾಖಲು | ರಾಜಕೀಯ ತಿರುವು ಪಡೆದುಕೊಳ್ಳುತ್ತಾ ಪ್ರಕರಣ..!!?? ಹೊಸನಗರ : ಶಾಲಾ ಶತಮಾನೋತ್ಸವ ಆಚರಣೆ ಕುರಿತು ನಡೆದ ಪೂರ್ವಭಾವಿ ಸಭೆಯ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಸದಸ್ಯನೋರ್ವನ ಮೇಲೆ ಹಲ್ಲೆ ನಡೆಸಿದ ಘಟನೆ ಇಲ್ಲಿನ ಶಾಸಕರ ಮಾದರಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದಿದೆ. ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಳ್ಳುವ ಸಾಧ್ಯತೆಗಳಿದ್ದು ಸೋಮವಾರ ಮಾಜಿ ಸಚಿವರ ನೇತ್ರತ್ವದಲ್ಲಿ…
ಅಕ್ರಮ ಗೋ ಸಾಗಾಟ – ವಾಹನ ಸಮೇತ ಹಸುಗಳನ್ನು ಪೊಲೀಸ್ ವಶಕ್ಕೆ ನೀಡಿದ ಸ್ಥಳೀಯರು | crime news
ಅಕ್ರಮ ಗೋ ಸಾಗಾಟ – ವಾಹನ ಸಮೇತ ಪೊಲೀಸ್ ವಶಕ್ಕೆ! ತೀರ್ಥಹಳ್ಳಿ : ಯಾವುದೇ ದಾಖಲೆ ಇಲ್ಲದೆ ಟಾಟಾ ಲೈಲ್ಯಾಂಡ್ ವಾಹನದಲ್ಲಿ 3 ಹಸುಗಳನ್ನು ತುಂಬಿಕೊಂಡು ಹೋಗುತ್ತಿದ್ದಾಗ ಕುರುವಳ್ಳಿಯಲ್ಲಿ ಸ್ಥಳೀಯರು ಹಿಡಿದು ವಾಹನ ಸಮೇತ ಹಸುಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಶುಂಠಿಕಟ್ಟೆಯಿಂದ – ಭದ್ರಾವತಿಗೆ ಹಸುವನ್ನು ಸಾಗಿಸಲಾಗುತ್ತಿತ್ತು ಎನ್ನಲಾಗಿದ್ದು ಯಾವುದೇ ದಾಖಲಾತಿ ಇರದ ಕಾರಣ ವಶಕ್ಕೆ ಪಡೆಯಲಾಗಿದೆ. ಯಾವ ಕಾರಣಕ್ಕೆ ಹಸು ಸಾಗಿಸಲಾಗುತ್ತಿತ್ತು ಎಂಬುದು ತಿಳಿದು ಬಂದಿಲ್ಲ. ದಾಖಲೆ ಇಲ್ಲದ ಕಾರಣ ಪ್ರಕರಣ ದಾಖಲಾಗುವ ಸಾಧ್ಯತೆ ಇದ್ದು ತೀರ್ಥಹಳ್ಳಿ…
ಹೊಸನಗರದ 15 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ 25 ವರ್ಷದ ಯುವಕನಿಗೆ 20 ವರ್ಷ ಕಠಿಣ ಸಜೆ
ಹೊಸನಗರದ 15 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ 25 ವರ್ಷದ ಯುವಕನಿಗೆ 20 ವರ್ಷ ಕಠಿಣ ಸಜೆ ಹೊಸನಗರ(Hosanagara) ತಾಲೂಕಿನ 15 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ 25 ವರ್ಷದ ಯುವಕನಿಗೆ ಶಿವಮೊಗ್ಗ(shivamogga)ದ ಫಾಸ್ಟ್‌ಟ್ರ್ಯಾಕ್ ಸ್ಪೆಷಲ್ ಕೋರ್ಟ್ 20 ವರ್ಷಗಳ ಕಠಿಣ ಸಜೆ ವಿಧಿಸಿದೆ. ಹೊಸನಗರ ತಾಲೂಕು ಗ್ರಾಮ ಒಂದರಲ್ಲಿ 2022ರಲ್ಲಿ ಆರೋಪಿ ಯುವಕ ಶಾಲೆಗೆ ಹೋಗುತ್ತಿದ್ದ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ.ಇದರಿಂದ ಬೇಸತ್ತ ಬಾಲಕಿ ಮನೆಯವರಿಗೆ ತಿಳಿಸಿದ್ದಳು. ಇದಾದ ಬಳಿಕ ಬಾಲಕಿ ಹೊಸನಗರ…
ಪ್ರೀತಿಗೆ ಪೋಷಕರ ನಿರಾಕರಣೆ – ಅಣ್ಣ ತಂಗಿ ವರಸೆಯ ಪ್ರೇಮಿಗಳಿಬ್ಬರು ನೇಣಿಗೆ ಶರಣು | Crime News
ಪ್ರೀತಿಗೆ ಪೋಷಕರ ನಿರಾಕರಣೆ – ಅಣ್ಣ ತಂಗಿ ವರಸೆಯ ಪ್ರೇಮಿಗಳಿಬ್ಬರು ನೇಣಿಗೆ ಶರಣು ಅಣ್ಣ-ತಂಗಿ ವರಸೆಯ ಪ್ರೀತಿಗೆ ಪೋಷಕರು ನಿರಾಕರಿಸಿದ ಹಿನ್ನೆಲೆ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಮಾಗಣಗೇರೆ ಗ್ರಾಮದಲ್ಲಿ ನಡೆದಿದೆ. ಶಶಿಕಲಾ (20) ಗೊಲ್ಲಾಳಪ್ಪ (24) ನೇಣಿಗೆ ಶರಣಾದ ಪ್ರೇಮಿಗಳು. ಶಶಿಕಲಾ ಮತ್ತು ಗೊಲ್ಲಾಳಪ್ಪ ಇಬ್ಬರು ಕೂಡ ವರಸೆಯಲ್ಲಿ ಅಣ್ಣ ತಂಗಿ ಆಗಿದ್ದರು.ಅದರಿಂದ ಎರಡೂ ಮನೆಯವರು ಅಣ್ಣ-ತಂಗಿ ಪ್ರೀತಿಗೆ ನಿರಾಕರಿಸಿದ್ದಾರೆ. ಗೊಲ್ಲಾಳಪ್ಪ ಪ್ರೀತಿಯನ್ನು ನಿರಾಕರಿಸಿ ಶಶಿಕಲಾಗೆ ಬೇರೆ ಮದುವೆ ಮಾಡಲು…
ಶಿವಮೊಗ್ಗದಲ್ಲಿ ರೌಡಿಗಳಿಂದ ಟ್ರಾಫಿಕ್ ಪೊಲೀಸರಿಗೇ ಕೊಲೆ ಬೆದರಿಕೆ – ಇಬ್ಬರ ಬಂಧನ | ವೀಡಿಯೋ ವೈರಲ್ SMG
ಸಾರ್ವಜನಿಕವಾಗಿ ರೌಡಿ ಪಟಾಲಂಗಳು ಶಿವಮೊಗ್ಗದಲ್ಲಿ ಮತ್ತೆ ಗರಿಬಿಚ್ಚಿದ್ದು, ಹಾಡಹಗಲೇ, ಅದರಲ್ಲೂ ಪೊಲೀಸ್ ಸಿಬ್ಭಂದಿ ಮೇಲೆ ಮರ್ಡರ್ ಬೆದರಿಕೆ, ಅವಾಚ್ಯವಾಗಿ ಬೈದು ಧಮ್ಕಿ ಹಾಕಿರುವ ಘಟನೆ ಸದ್ಯ ಮಲೆನಾಡಿನಲ್ಲಿ ಸಂಚಲನ ಮೂಡಿಸಿದೆ. ಶಿವಮೊಗ್ಗದಲ್ಲಿ ಟ್ರಾಫಿಕ್ ಪೊಲೀಸರಿಗೇ ಅವಾಜ್ ಹಾಕಲಾಗಿದೆ. ನಟೋರಿಯಸ್ ಹಿನ್ನೆಲೆಯುಳ್ಳ ಪುಡಾರಿಗಳು, ಟ್ರಾಫಿಕ್ ಪೊಲೀಸರು ಹಿಡಿಯುತ್ತಾರೆ ಅಂತಾ ತಾವೇ ಬೈಕಿನಲ್ಲಿ ಬಿದ್ದು, ತಾವೇ ವಿಡಿಯೋ ಮಾಡಿ ತಗಲಾಕಿಕೊಂಡಿದ್ದಾರೆ. ಟ್ರಾಫಿಕ್ ಪೊಲೀಸ್ ಸಿಬ್ಭಂಧಿಗೆ ಪ್ರಾಣ ಬೆದರಿಕೆ ಒಡ್ಡಿರುವ ರೌಡಿ ಶೀಟರ್ ಗಳು, ತಮ್ಮ ಹುಡುಗರನ್ನು ಕರೆಸಿ, ಹಲ್ಲೆ ಮಾಡಲು…
ವಿವಾಹಿತ ಮಹಿಳೆಗೆ ಪದೇ ಪದೇ ಕಿರುಕುಳ ನೀಡುತಿದ್ದ ಆರೋಪಿಗೆ 2 ವರ್ಷ ಜೈಲು ಶಿಕ್ಷೆ
ವಿವಾಹಿತ ಮಹಿಳೆಗೆ ಪದೇ ಪದೇ ಕಿರುಕುಳ ನೀಡುತಿದ್ದ ಆರೋಪಿಗೆ 2 ವರ್ಷ ಜೈಲು ಶಿಕ್ಷೆ ಸಾಗರ – ವಿವಾಹಿತ ಮಹಿಳೆಗೆ ಕಿರುಕುಳ ನೀಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಆರೋಪಿಗೆ ಜೆಎಂಎಫ್‌ಸಿ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದ ಘಟನೆ ನಡೆದಿದೆ. ಸಮೀಪದ ಶಿರವಾಳ ಗ್ರಾಮದ ರತನ್ ಕುಮಾರ್ ಎಂಬಾತ ಮಹಿಳೆಗೆ 2013ರಿಂದ ನಿರಂತರ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದನು. 2021ರಲ್ಲಿ ಸಾಗರದಲ್ಲಿ ಅಡ್ಡಗಟ್ಟಿ ಹಲ್ಲೆ ಸಹ ನಡೆಸಿದ್ದನು. ಈ ಸಂಬಂಧ ಮಹಿಳೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಸಾಗರ ನಗರ ಠಾಣೆಯಲ್ಲಿ…
ಮನೆಗೆ ನುಗ್ಗಿ ಚಿನ್ನಾಭರಣ ದೋಚಿದ್ದ ಕಳ್ಳರು – 24 ಗಂಟೆಯಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದ ನಗರ ಪೊಲೀಸರು
ಮನೆಗೆ ನುಗ್ಗಿ ಚಿನ್ನಾಭರಣ ದೋಚಿದ್ದ ಕಳ್ಳರು – 24 ಗಂಟೆಯಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದ ನಗರ ಪೊಲೀಸರು ಹೊಸನಗರ ತಾಲೂಕಿನ ಬಿದನೂರು ನಗರದಲ್ಲಿ ಮನೆಗೆ ನುಗ್ಗಿ ರೂ.4.65 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಆರೋಪಿಗಳನ್ನು 24 ಗಂಟೆಯೊಳಗೆ ಆಭರಣ ಸಹಿತ ನಗರ ಠಾಣೆ ಪಿಎಸ್‌ಐ ರಮೇಶ್ ಪಿ ಎಸ್ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ ನೂಲಿಗ್ಗೇರಿ ನಿವಾಸಿಗಳಾದ ಸುಹಾನ್ 21, ಅಶೋಕ 24, ಗಣೇಶ 30 ಬಂಧಿತ ಆರೋಪಿಗಳು. ನಡೆದಿದ್ದೇನು..?? ಬಿದನೂರಿನ ನೂಲಿಗ್ಗೇರಿ ನಿವಾಸಿ ರಾಜಮ್ಮ ಮನೆಯಲ್ಲಿರದ ವೇಳೆಯನ್ಬು…
Ripponpete | ಪೊಲೀಸರ ಭರ್ಜರಿ ಕಾರ್ಯಾಚರಣೆ – ಅಕ್ರಮ ಮರಳು ಸಾಗಿಸುತಿದ್ದ ಮೂರು ಟಿಪ್ಪರ್ ಲಾರಿ ವಶಕ್ಕೆ..!
Ripponpete | ಪೊಲೀಸರ ಭರ್ಜರಿ ಕಾರ್ಯಾಚರಣೆ – ಅಕ್ರಮ ಮರಳು ಸಾಗಿಸುತಿದ್ದ ಮೂರು ಟಿಪ್ಪರ್ ಲಾರಿ ವಶಕ್ಕೆ..! ರಿಪ್ಪನ್‌ಪೇಟೆ : ಮಲೆನಾಡು ಭಾಗದಲ್ಲಿ ಅಕ್ರಮ ಮರಳು ಮಾಫ಼ಿಯಾದ ಹೆಡೆಮುರಿ ಕಟ್ಟುವಲ್ಲಿ ಪಟ್ಟಣದ ಪೊಲೀಸ್ ಪಿಎಸ್ ಐ ಪ್ರವೀಣ್ ಎಸ್ ಪಿ ನೇತ್ರತ್ವದ ತಂಡ ಯಶಸ್ವಿಯಾಗಿದ್ದಾರೆ. ಖಚಿತ ಮಾಹಿತಿ ದೊರೆತ ಹಿನ್ನಲೆಯಲ್ಲಿ ಬುಧವಾರ ರಾತ್ರಿ ಪಟ್ಟಣದ ಪಿಎಸ್ ಪ್ರವೀಣ್ ಎಸ್ ಪಿ ನೇತ್ರತ್ವದ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಅಕ್ರಮ ಮರಳು ಸಾಗಿಸುತಿದ್ದ ಮೂರು ಟಿಪ್ಪರ್ ಲಾರಿಯನ್ನು ವಶಕ್ಕೆ…
Thirthahalli | ಕಾಡಿನಲ್ಲಿ 9ನೇ ತರಗತಿ ವಿದ್ಯಾರ್ಥಿನಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ !!!
ನೇಣಿಗೆ ಶರಣಾದ 9ನೇ ತರಗತಿ ವಿದ್ಯಾರ್ಥಿನಿ ! ತೀರ್ಥಹಳ್ಳಿ: 9ನೇ ತರಗತಿ ವಿದ್ಯಾರ್ಥಿನಿಯೊಬ್ಬಳ ಶವ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಸೋಮವಾರ ಬಸವಾನಿ ಸಮೀಪದ ಕಾಡೊಂದರಲ್ಲಿ ಪತ್ತೆಯಾಗಿದೆ. ತಾಲೂಕಿನ ಬಸವಾನಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಶುಂಠಿಕಟ್ಟೆ ಪ್ರೌಢ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ಪ್ರೀತಿ ಎಂಬಾಕೆ ಶಾಲೆಗೆ ಕಳೆದ 15 ದಿನಗಳಿಂದ ಹೋಗಿರಲಿಲ್ಲ. ಶಾಲೆಗೆ ಬರುವಂತೆ ತಿಳಿಸಲಾಗಿತ್ತು. ಮನೆಯಲ್ಲಿ ಕಾರಣ ಕೇಳಿದ್ದಕ್ಕೆ ಸೋಮವಾರ ಬಸವಾನಿ ಬಳಿಯ ಪ್ಲಾಂಟೇಷನ್ ನಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತೀರ್ಥಹಳ್ಳಿ ಪೊಲೀಸ್ ಠಾಣಾ…
Shivamogga | ಪಾರ್ಕ್‌ನಲ್ಲಿ ಸಿಮೆಂಟ್ ಜಿಂಕೆ ಮುರಿದು ಬಿದ್ದು ಮಗು ಸಾವು
ಪಾರ್ಕ್‌ನಲ್ಲಿ ಸಿಮೆಂಟ್ ಜಿಂಕೆ ಮುರಿದು ಬಿದ್ದು ಮಗು ಸಾವು ಶಿವಮೊಗ್ಗ: ಪಾರ್ಕ್‌ನಲ್ಲಿ ಸಿಮೆಂಟ್ ಜಿಂಕೆ ಮುರಿದು ಬಿದ್ದು ಮಗು ಮೃತಪಟ್ಟಿರುವ ಘಟನೆ ಶಿವಮೊಗ್ಗದ ಮುದ್ದಿನಕೊಪ್ಪದಲ್ಲಿರುವ ಟ್ರೀ ಪಾರ್ಕ್‌ನಲ್ಲಿ ನಡೆದಿದೆ. ಸಮೀಕ್ಷಾ (6) ಮೃತ ದುರ್ದೈವಿ. ಭಾನುವಾರವಾಗಿದ್ದರಿಂದ ಆಟವಾಡಲು ಪಾರ್ಕ್‌ಗೆ ಪೋಷಕರ ಜತೆ ಮಗು ತೆರಳಿತ್ತು. ಸಿಮೆಂಟ್ ಜಿಂಕೆ ಮೇಲೆ ಕುಳಿತಿದ್ದಾಗ, ಅದು ಮುರಿದು ಬಿದ್ದ ಹಿನ್ನೆಲೆಯಲ್ಲಿ ಗಂಭೀರವಾಗಿ ಗಾಯಗೊಂಡು ಮಗು ಮೃತಪಟ್ಟಿದೆ. ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.