ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ:
ರಿಪ್ಪನ್ ಪೇಟೆ : ಇಲ್ಲಿಗೆ ಸಮೀಪದ ಗಾಜಿನಗೋಡು ಗ್ರಾಮದ ನಿವಾಸಿ, ಹೊಸನಗರ ತಾಲೂಕು ಗಂಗಾಮತಸ್ಥ ಸಂಘದ ಮಾಜಿ ನಿರ್ದೇಶಕ ಕೊಲ್ಲಪ್ಪ ಇವರು ಕೂಲಿ ಕೆಲಸಕ್ಕೆಂದು ಮೂರು ದಿನಗಳ ಹಿಂದೆ ಹೋದವರು ಇಂದು ಗಾಜಿನಗೋಡು ಸಮೀಪ ಕುಮದ್ವತಿ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕಳೆದ ಮೂರು ನಾಲ್ಕು ದಿನದಿಂದ ಬರುತ್ತಿರುವ ಅತಿಯಾದ ಮಳೆಗೆ ಕುಮದ್ವತಿ ನದಿ ಹರಿಯುತ್ತಿದ್ದು ಕಾಲುಜಾರಿ ಬಿದ್ದಿರಬಹುದೆಂದು ಊಹಿಸಲಾಗಿದೆ. ಗಾಜಿನ ಗೋಡು ಮತ್ತು ಹಾರಂಬಳ್ಳಿ ಮಧ್ಯೆ ಹರಿಯುತ್ತಿರುವ ನದಿ ಇದಾಗಿದ್ದು ಕೂಲಿಯೂ ಸೇರಿದಂತೆ ಬೇರೆ…