ಜ್ಞಾನೇಂದ್ರರಿಗೆ ಸಚಿವ ಸ್ಥಾನ ಸಿಗಲೆಂದು ಬಿಜೆಪಿ ಯುವ ಮೋರ್ಚಾ ವತಿಯಿಂದ ವಿಶೇಷ ಪೂಜೆ:
ತೀರ್ಥಹಳ್ಳಿ : ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರ ಸಂಪುಟ ಸೇರ್ಪಡೆಯಾಗಲು ಬಿಜೆಪಿ ಪಾಳಯದಲ್ಲಿ ಶಾಸಕರ ಕಸರತ್ತು ಗರಿಗೆದರಿದೆ. ಜಾತಿ ಲಾಬಿ,ಹಿರಿತನ ಹಾಗೂ ಮಠಾಧಿಪತಿಗಳ ಒತ್ತಡ ಹೀಗೆ ಹತ್ತು ಹಲವಾರು ಪ್ರಯತ್ನಗಳಿಂದ ಹೈಕಮಾಂಡ್ ಮೇಲೆ ಪ್ರಭಾವ ಬೀರಿ ಸಚಿವಗಿರಿ ಗಿಟ್ಟಿಸಲು ಸರ್ಕಸ್ ಮಾಡುತ್ತಿದ್ದಾರೆ. ಆದರೆ ತೀರ್ಥಹಳ್ಳಿಯಲ್ಲಿ ಸ್ವಲ್ಪ ತಮ್ಮ ನೆಚ್ಚಿನ ನಾಯಕ ಆರಗ ಜ್ಞಾನೇಂದ್ರರಿಗೆ ಸಚಿವ ಸ್ಥಾನ ಸಿಗಲೆಂದು ತೀರ್ಥಹಳ್ಳಿಗರ ಆರಾಧ್ಯ ದೈವ ಶ್ರೀರಾಮೇಶ್ವರನ ಮೊರೆ ಹೋಗಲಾಗಿದೆ. ಮಲೆನಾಡಿನ ತವರೂರು ತೀರ್ಥಹಳ್ಳಿಯ ಯಶಸ್ವಿ ಶಾಸಕ ಎಂದೇ ಬಿಂಬಿತರಾಗಿರುವ…