ಅದ್ದೂರಿಯಾಗಿ ಜರುಗಿದ ರಿಪ್ಪನ್‌ಪೇಟೆಯ ಶ್ರೀಸಿದ್ದಿವಿನಾಯಕ ಸ್ವಾಮಿಯ ಶ್ರೀಮನ್ಮಹಾರಥೋತ್ಸವ ಸಂಭ್ರಮ | chariot festival
ಅಪಾರ ಭಕ್ತ ಜನಸ್ತೋಮದಲ್ಲಿ ರಿಪ್ಪನ್‌ಪೇಟೆಯ “ಶ್ರೀಸಿದ್ದಿವಿನಾಯಕಸ್ವಾಮಿಯ ಶ್ರೀಮನ್ಮಹಾರಥೋತ್ಸವ ಸಂಭ್ರಮ’’ ರಿಪ್ಪನ್‌ಪೇಟೆ;-ಇತಿಹಾಸ ಪ್ರಸಿದ್ದ ಶ್ರೀಸಿದ್ದಿವಿನಾಯಕ ಸ್ವಾಮಿಯ ಪ್ರಥಮ ವರ್ಷದ ಶ್ರೀಮನ್ಮಹಾರಥೋತ್ಸವ ಸಂಭ್ರಮ ಸಡಗರದೊಂದಿಗೆ ವಿಜೃಂಭಣೆಯಿಂದ ಇಂದು ಜರುಗಿತು. 12.30 ಕ್ಕೆ ಶ್ರೀಸಿದ್ದಿವಿನಾಯಕ ರಥವೇರುತ್ತಿದ್ದಂತೆ ಸಿದ್ದಿವಿನಾಯಕ ಸ್ವಾಮಿಗೆ, ಜಗನ್ಮಾತೆ ಆನ್ನಪೂರ್ಣೇಶ್ವರಿ ದೇವಿಗೆ, ಜಯಘೋಷಣೆ ಮುಗಿಲು ಮುಟ್ಟಿತು. ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಶ್ರೀ ಮ.ನಿ.ಪ್ರ.ಆಭಿನವ ಚನ್ನಬಸವ ಮಹಾಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿ ಈ ವರ್ಷದಲ್ಲಿ ಮಳೆ-ಬೆಳೆ ಸಂವೃದ್ದಿಯಾಗಿ ರೈತರ ಬದುಕು ಹಸನಾಗಲೆಂದು ಮತ್ತು ಜಗತ್ತಿನಲ್ಲೆಡೆ ಶಾಂತಿ ನೆಮ್ಮದಿಯನ್ನು ಕರುಣಿಸುವಂತಾಗಲೆಂದು ಸರ್ವರ ಪರವಾಗಿ…