Headlines

ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ – ಆರೋಪಿಗೆ 20 ವರ್ಷ ಶಿಕ್ಷೆ ಪ್ರಕಟ

ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ – ಆರೋಪಿಗೆ 20 ವರ್ಷ ಶಿಕ್ಷೆ ಪ್ರಕಟ

ಶಿವಮೊಗ್ಗ: ೨೦೨೪ ನೇ ಸಾಲಿನಲ್ಲಿ ಭದ್ರಾವತಿ ತಾಲ್ಲೂಕಿನ ವ್ಯಕ್ತಿಯೊಬ್ಬನು ೧೫ ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯವನ್ನೆಸಗಿದ ಪ್ರಕರಣ ಸಾಬೀತಾದ ಹಿನ್ನಲೆಯಲ್ಲಿ ಆರೋಪಿತನಿಗೆ ೨೦ ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು ರೂ ೧,೬೧,೦೦೦/- ದಂಡ, ದಂಡ ಕಟ್ಟಲು ವಿಫಲನಾದಲ್ಲಿ ೦೨ ವರ್ಷ ಹೆಚ್ಚುವರಿ ಸಾದಾ ಕಾರಾವಾಸ ಶಿಕ್ಷೆ ವಿಧಿಸಲಾಗಿದೆ.

ನೊಂದ ಬಾಲಕಿ ಹೇಳಿದ ದೂರಿನ ಮೇರೆಗೆ ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಕಲಂ ೪೪೮ ೩೭೬(೨) (ಎನ್), ೩೭೬ (೨)(ಎಫ್) ಐಪಿಸಿ ಮತ್ತು ಕಲಂ ೫ (ಜೆ)(೨) ೫(ಎಲ್), ೬  ಪೋಕ್ಸೋ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣದ ತನಿಖಾಧಿಕಾರಿ ಭದ್ರಾವತಿ ನಗರ ಸಿಪಿಐ ಶ್ರೀಶೈಲಕುಮಾರ ಪ್ರಕರಣದ ತನಿಖೆ ಪೂರೈಸಿ, ಘನ ನ್ಯಾಯಾಲಯಕ್ಕೆ ಆರೋಪಿಯ ವಿರುದ್ಧ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.

ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ  ಸರ್ಕಾರಿ ಅಭಿಯೋಜಕ  ಶ್ರೀಧರ್ ಹೆಚ್. ಆರ್ ವಾದ ಮಂಡಿಸಿದ್ದರು. ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಈಖಿSಅ-೧ ಶಿವಮೊಗ್ಗದಲ್ಲಿ* ಪ್ರಕರಣದ ವಿಚಾರಣೆ ನಡೆದು, ಆರೋಪಿಯ ವಿರುದ್ಧ ಆರೋಪ ದೃಡ ಪಟ್ಟ ಹಿನ್ನೆಲೆಯಲ್ಲಿ, ನ್ಯಾಯಾಧೀಶ  ನಿಂಗನಗೌಡ ಭ ಪಾಟೀಲ್ ತೀರ್ಪು ಪ್ರಕಟಿಸಿದ್ದಾರೆ.