Headlines

RIPPONPETE | ಭಾರಿ ಮಳೆಗೆ ಕುಸಿದ ಕೊಟ್ಟಿಗೆ – ಬಡ ವೃದ್ದೆಯ ಸ್ಥಿತಿ ಗಂಭೀರ , ಮೆಗ್ಗಾನ್ ಗೆ ದಾಖಲು

ಭಾರಿ ಮಳೆಗೆ ಕುಸಿದ ಕೊಟ್ಟಿಗೆ – ಬಡ ವೃದ್ದೆಯ ಸ್ಥಿತಿ ಗಂಭೀರ , ಮೆಗ್ಗಾನ್ ಗೆ ದಾಖಲು

ಗುರುವಾರ ಸಂಜೆ ಮನೆ ಹಿಂಭಾಗದಲ್ಲಿದ್ದ ದನದ ಕೊಟ್ಟಿಗೆಯಲ್ಲಿ ಕೆಲಸ ಮಾಡುತಿದ್ದಾಗ ಏಕಾಏಕಿ ಕೊಟ್ಟಿಗೆ ಕುಸಿದು ಬಿದ್ದ ಹಿನ್ನಲೆಯಲ್ಲಿ ವೃದ್ದೆ ಇಂದಿರಾ ಗಂಭೀರ ಗಾಯಗೊಂಡಿದ್ದಾರೆ.ರಸ್ತೆ ಸಂಪರ್ಕ ಸರಿಯಿಲ್ಲದ ಕಾರಣ ಸ್ಥಳೀಯರು ವೃದ್ದೆಯನ್ನು ಟ್ರ್ಯಾಕ್ಟರ್ ಮೂಲಕ ಆಸ್ಪತ್ರೆಗೆ ಕರೆ ತಂದಿದ್ದಾರೆ,

ಶಿವಮೊಗ್ಗ ಜಿಲ್ಲಾದ್ಯಂತ ಭಾನುವಾರ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ಅಲ್ಲಲ್ಲಿ ಭಾರಿ ಅನಾಹುತಗಳಾಗಿವೆ.ಹೊಸನಗರ ತಾಲೂಕಿನ ನಂಜವಳ್ಳಿ ಗ್ರಾಮದಲ್ಲಿ ಭಾರಿ ಮಳೆಗೆ ಕೊಟ್ಟಿಗೆ ಕುಸಿದು ಬಡ ವೃದ್ದೆಯೊಬ್ಬರು ಗಂಭೀರ ಗಾಯಗೊಂಡು ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.

ನಂಜವಳ್ಳಿ ಗ್ರಾಮದ ಇಂದಿರಾ ಎಂಬ ವೃದ್ದೆಗೆ ಗಂಭೀರ ಗಾಯಗಳಾಗಿದ್ದು ಎದೆಯ ಪಕ್ಕೆಲುಬು ಮುರಿದಿದೆ ಇದರಿಂದ ಶ್ವಾಸಕೋಶದ ತೊಂದರೆಯಾಗಿ ಉಸಿರಾಟದ ಸಮಸ್ಯೆ ಉಂಟಾದ ಕಾರಣ ರಾತ್ರಿಯೇ ಮೆಗ್ಗಾನ್ ನ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ ಆದರೆ ಸ್ಥಿತಿ ಗಂಭೀರವಾಗಿದೆ ಎನ್ನಲಾಗುತ್ತಿದೆ.

ಗುರುವಾರ ಸಂಜೆ ಮನೆ ಹಿಂಭಾಗದಲ್ಲಿದ್ದ ದನದ ಕೊಟ್ಟಿಗೆಯಲ್ಲಿ ಕೆಲಸ ಮಾಡುತಿದ್ದಾಗ ಏಕಾಏಕಿ ಕೊಟ್ಟಿಗೆ ಕುಸಿದು ಬಿದ್ದ ಹಿನ್ನಲೆಯಲ್ಲಿ ವೃದ್ದೆ ಇಂದಿರಾ ಗಂಭೀರ ಗಾಯಗೊಂಡಿದ್ದಾರೆ.ರಸ್ತೆ ಸಂಪರ್ಕ ಸರಿಯಿಲ್ಲದ ಕಾರಣ ಸ್ಥಳೀಯರು ವೃದ್ದೆಯನ್ನು ಟ್ರ್ಯಾಕ್ಟರ್ ಮೂಲಕ ಆಸ್ಪತ್ರೆಗೆ ಕರೆ ತಂದಿದ್ದಾರೆ, ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗೆ ಮೆಗ್ಗಾನ್ ಗೆ ಕಳುಹಿಸಿಕೊಡಲಾಗಿದೆ ವೃದ್ದೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಇನ್ನೂ ಈ ಬಗ್ಗೆ ಪೋಸ್ಟ್ ಮ್ಯಾನ್ ನ್ಯೂಸ್ ನೊಂದಿಗೆ ಮಾತನಾಡಿದ ವೃದ್ದೆಯ ಪತಿ ಗಣಪತಿ ನಿನ್ನೆ ಸಂಜೆ ಸಮಯದಲ್ಲಿ ಮನೆ ಹಿಂಬಾಗದ ಕೊಟ್ಟಿಗೆಯಲ್ಲಿ ಇಂದಿರಮ್ಮ ಕೆಲಸ ಮಾಡುತಿದ್ದಾಗ ಏಕಾಏಕಿ ಕೊಟ್ಟಿಗೆ ಕುಸಿದು ಬಿದ್ದು ಗಾಯಗೊಂಡಿದ್ದಾರೆ ತಕ್ಷಣ ಅಕ್ಕಪಕ್ಕದ ಮನೆಯವರ ಸಹಕಾರದಿಂದ ರಸ್ತೆ ಕೆಸರು ತುಂಬಿ ಓಡಾಡಲು ಸಾಧ್ಯವಿಲ್ಲದ ಕಾರಣ ಟ್ರ್ಯಾಕ್ಟರ್ ನಲ್ಲಿ ಮುಖ್ಯ ರಸ್ತೆಯವರೆಗೆ ಕರೆತರಲಾಯಿತು. ರಾತ್ರಿ ಆಪರೇಷನ್ ಮಾಡಿದ್ದಾರೆ ಪರಿಸ್ಥಿತಿಯ ಬಗ್ಗೆ ವೈದ್ಯರು ಏನು ಹೇಳುತ್ತಿಲ್ಲ ,ಆಸ್ಪತ್ರೆಗೆ ಯಾವ ಅಧಿಕಾರಿಗಳು ಭೇಟಿ ನೀಡಿಲ್ಲ ಹಾಗೂ ಏನಾಯ್ತು ಎಂದು ಸಹ ವಿಚಾರಿಸಿಲ್ಲ ಎಂದರು.

ನಿನ್ನೆ ಘಟನೆ ನಡೆದ ಸ್ಥಳಕ್ಕೆ ಸ್ಥಳೀಯ ಕಂದಾಯ ಇಲಾಖೆಯ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿ , ನಂತರ ವೃದ್ದೆಯನ್ನು ಆಂಬುಲೆನ್ಸ್ ಮೂಲಕ ಶಿವಮೊಗ್ಗಕ್ಕೆ ಕಳುಹಿಸಿಕೊಟ್ಟಿದ್ದಾರೆ.