Headlines

RIPPONPETE | ಪಿಎಚ್ ಡಿ ಪದವಿ ಪಡೆದ ಯುವ ಪ್ರತಿಭೆಗೆ ಬ್ರಾಹ್ಮಣ ಸಂಘದಿಂದ ಸನ್ಮಾನ

ಪಿಎಚ್ ಡಿ ಪದವಿ ಪಡೆದ ಯುವ ಪ್ರತಿಭೆಗೆ ಬ್ರಾಹ್ಮಣ ಸಂಘದಿಂದ ಸನ್ಮಾನ

ರಿಪ್ಪನ್ ಪೇಟೆ : ಗಣಿತ ಶಾಸ್ತ್ರದಲ್ಲಿ ಪಿಎಚ್‌ಡಿ ಪದವಿಯನ್ನು ಪಡೆದ ರಿಪ್ಪನ್‌ಪೇಟೆ ಪಟ್ಟಣದ ವಿದ್ಯಾರ್ಥಿನಿ ಡಾ. ಹರ್ಷಿತ ಎ ರವರಿಗೆ ಪಟ್ಟಣದ ಬ್ರಾಹ್ಮಣ ಮಹಾಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಪಟ್ಟಣದ ಶ್ರೀ ರಾಮಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣಿತ ಶಾಸ್ತ್ರದಲ್ಲಿನ “ಎ ಸ್ಟಡಿ ಆನ್ ಡಾಮಿನೇಷನ್ ಸ್ಟ್ರೈಕಾಮ್ ಹ್ಯಾಮಿಂಗ್ ಅಂಡ್ ಟೋಪಾಲಾಜಿಕಲ್ ಇಂಡಿಸಸ್” ಎಂಬ ಸಂಶೋಧನ ಮಹಾ ಪ್ರಬಂಧಕ್ಕೆ ಮಣಿಪಾಲ್ ಆಕಾಡೆಮಿ ಆಫ್ ಹೈಯರ್ ಎಜುಕೇಷನ್ ಪಿಹೆಚ್‌ಡಿ ಪದವಿ ಪಡೆದ ಡಾ. ಹರ್ಷಿತಾ ಎ ರವರಿಗೆ ಬ್ರಾಹ್ಮಣ ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಹರ್ಷಿತಾ ಯಾವುದೇ ಕೆಲಸವಾದರೂ ಇಷ್ಟಪಟ್ಟು ಮಾಡಿದಲ್ಲಿ ಗುರಿ ಮುಟ್ಟಲು ಸಾಧ್ಯ , ಎಲ್ಲರೂ ಹೇಳುವಂತೆ ಗಣಿತ ಕಬ್ಬಿಣದ ಕಡಲೆ ಇದ್ದ ಹಾಗೇ ಆದರೆ ಆ ವಿಷಯವನ್ನು ಮನಸ್ಸಿನಿಂದ ಇಷ್ಟಪಟ್ಟು ಅಧ್ಯಯನ ನಡೆಸಿದರೆ ಗುರಿಮುಟ್ಟಲು ಸಾಧ್ಯ ಎಂಬುವುದನ್ನು ಈಗಿನ ಮಕ್ಕಳಲ್ಲಿ ಅರಿವು ಮೂಡಿಸಬೇಕು ಹಾಗೇಯೆ ನನ್ನ ಈ ಶೈಕ್ಷಣಿಕ ಸಾಧನೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.

ಬ್ರಾಹ್ಮಣ ಸಂಘದ ಅಧ್ಯಕ್ಷ ಸುರೇಶ್ ಮಾತನಾಡಿ ನಮ್ಮ ಸಮಾಜದ ಹಿರಿಯರಾಗಿದ್ದ ರಾಮಚಂದ್ರರಾವ್ ರವರ ಮೊಮ್ಮಗಳಾದ ಹರ್ಷಿತಾ ರವರು ಈ ಸಾಧನೆ ಮಾಡುವ ಮೂಲಕ ನಮ್ಮ ಸಮಾಜಕ್ಕೆ ಹಾಗೂ ಈ ಊರಿಗೆ ಕೀರ್ತಿ ತಂದಿದ್ದಾರೆ ,ನನ್ನ ಅಧ್ಯಕ್ಷತೆಯಲ್ಲಿ ಇವರಿಗೆ ಸನ್ಮಾನ ಮಾಡುತ್ತಿರುವುದಕ್ಕೆ ನನಗೆ ಹೆಮ್ಮೆಯಿದೆ ಎಂದರು.

ಈ ಸಂಧರ್ಭದಲ್ಲಿ ಹರ್ಷಿತಾ ರವರ ಪತಿ ರಾಹುಲ್ ಮತ್ತು ಪೋಷಕರಾದ ಅರುಣ್ ಮತ್ತು ಸೌಮ್ಯ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬ್ರಾಹ್ಮಣ ಸಂಘದ ವಾಸುದೇವ್ , ಪದ್ಮಾ ಸುರೇಶ್ , ಸವಿತಾ ರಾಧಕೃಷ್ಣ , ಅಮಿತಾ ಬಲ್ಲಾಳ್ , ಪ್ರಭಾಕರ್ , ಅಶ್ವಿನಿ ರವಿಶಂಕರ್ , ಕುಸುಮ ಬಾಲಚಂದ್ರ , ನಾಗರಾಜ್ ಹಾಗೂ ಇನ್ನಿತರರಿದ್ದರು.