Ripponpete | ತೋಟೋತ್ಪನ್ನ ಬೆಳೆಗಳ ಸಹಕಾರ ಸಂಘದ ಅಧ್ಯಕ್ಷರಾಗಿ ಹೆಚ್ ಎಸ್ ಗಣಪತಿ ಅವಿರೋಧ ಆಯ್ಕೆ
ರಿಪ್ಪನ್‌ಪೇಟೆ : ಇಲ್ಲಿನ ತೋಟೋತ್ಪನ್ನ ಬೆಳೆಗಳ ಅಭಿವೃದ್ಧಿ,ಸಂಸ್ಕರಣೆ ಮತ್ತು ಮಾರಾಟ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಗಣಪತಿ ಹೆಚ್ ಎಸ್ ಮತ್ತು ಉಪಾಧ್ಯಕ್ಷರಾಗಿ ದೇವೇಂದ್ರ ಕೆ ಎನ್ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಗುರುವಾರ ನಡೆದ ಸಭೆಯಲ್ಲಿ ತೋಟೋತ್ಪನ್ನ ಸಹಕಾರ ಸಂಘದ ಅಧ್ಯಕ್ಷರನ್ನಾಗಿ ಗ್ರಾಪಂ ಸದಸ್ಯರೂ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ ಎಸ್ ಗಣಪತಿಯವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಉಪಾಧ್ಯಕ್ಷರಾಗಿ ಕಲ್ಲೂರು ಗ್ರಾಮದ ದೇವೇಂದ್ರ ಕೆ ಎನ್ ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಈ ಸಂಧರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಂ ಎಂ ಪರಮೇಶ್ ,ಕಲ್ಲೂರು ತೇಜಮೂರ್ತಿ , ಪ್ರಕಾಶ್ , ಪ್ರದೀಪ್ ಹಾಗೂ ಇನ್ನಿತರರಿದ್ದರು.
		 
                         
                         
                         
                         
                         
                         
                         
                         
                         
                        
