ರಿಪ್ಪನ್ ಪೇಟೆ ಪಟ್ಟಣದ ಸಮಗ್ರ ಅಭಿವೃದ್ದಿಗೆ ಪಣ – ಶಾಸಕ ಬೇಳೂರು ಗೋಪಾಲಕೃಷ್ಣ


ರಿಪ್ಪನ್ ಪೇಟೆ ಪಟ್ಟಣದ ಸಮಗ್ರ ಅಭಿವೃದ್ದಿಗೆ ಪಣ – ಶಾಸಕ ಬೇಳೂರು ಗೋಪಾಲಕೃಷ್ಣ

ರಿಪ್ಪನ್‌ಪೇಟೆ : ಪಟ್ಟಣದ ಸಮಗ್ರ ಅಭಿವೃದ್ಧಿಗೆ ಪಣ ತೊಟ್ಟಿದ್ದೇನೆ ಆ ನಿಟ್ಟಿನಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದು ಜನರು ಕೊಟ್ಟ ಅಧಿಕಾರದಿಂದ ಯಥೇಚ್ಛವಾಗಿ ಅನುದಾನ ತರಲು ಸಾಧ್ಯವಾಗಿದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ ಹೇಳಿದರು.

ಪಟ್ಟಣದ ಗ್ರಾಮ ಪಂಚಾಯತ್ ನಲ್ಲಿ ನಡೆಯುತಿದ್ದ ಸಾಮಾನ್ಯಸಭೆಗೆ ದಿಡೀರ್ ಭೇಟಿ ನೀಡಿದ ಅವರು ಜನಪ್ರತಿನಿಧಿಗಳ ಬಳಿ ಅಹವಾಲು ಕೇಳಿ ನಂತರ ಮಾತನಾಡಿ ರಿಪ್ಪನ್ ಪೇಟೆ ಪಟ್ಟಣದ ಅಭಿವೃದ್ದಿಗೆ ಹಲವಾರು ಉತ್ತಮ ಯೋಜನೆಗಳನ್ನು ಹಮ್ಮಿಕೊಂಡಿದ್ದು ಆ ನಿಟ್ಟಿನಲ್ಲಿ ಕಾಮಗಾರಿಗಳು ನಡೆಯುತ್ತಿದೆ ಹಾಗೇಯೆ ಮುಂದಿನ ದಿನಗಳಲ್ಲಿ ಹೊಸನಗರ-ಶಿವಮೊಗ್ಗ ರಸ್ತೆಯನ್ನು ಅಭಿವೃದ್ದಿ ಪಡಿಸಲು ಹೆಚ್ಚಿನ ಅನುದಾನ ತರುವುದಾಗಿ ಹೇಳಿದರು.

ಗ್ಯಾರಂಟಿ ಯೋಜನೆಗಳ ನಡುವೆಯೂ ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದಲ್ಲಿ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯ ಪ್ರಗತಿ ಕಂಡಿದ್ದು ಸಾಕಷ್ಟು ಅಭಿವೃದ್ದಿ ಕಾರ್ಯಗಳು ಪ್ರಗತಿಯಲ್ಲಿದ್ದು ಕೋಟ್ಯಂತರ ರೂಪಾಯಿಗಳ ಅನುದಾನವನ್ನು ಕಾಂಗ್ರೆಸ್ ಸರ್ಕಾರ ಕ್ಷೇತ್ರದ ಅಭಿವೃದ್ದಿಗೆ ನೀಡಿದೆ ಎಂದು ಹೇಳಿದ ಅವರು ಇನ್ನೂ ಕೆಲವೇ ದಿನಗಳಲ್ಲಿ ರಿಪ್ಪನ್ ಪೇಟೆ ಪಟ್ಟಣದಲ್ಲಿ ಸಮುದಾಯ ಆಸ್ಪತ್ರೆ ಹಾಗೂ ಗ್ರಾಮ ಪಂಚಾಯತ್ ಮೇಲ್ದರ್ಜೆಗೇರಿಸಿ ಪಟ್ಟಣ ಪಂಚಾಯತ್ ಮಾಡಲಾಗುವುದು ಎಂದರು.

ಇನ್ನೂ ವಿನಾಯಕ ವೃತ್ತ ಅಗಲೀಕರಣಗೊಳಿಸಿ ಸುಸಜ್ಜಿತ ಸರ್ಕಲ್ ಮಾಡುವುದರೊಂದಿಗೆ ಎರಡು ಕಡೆ ಮಿನಿ ಬಸ್ ಸ್ಟ್ಯಾಂಡ್ , ಸುಸಜ್ಜಿತ ಆಟೋ ಸ್ಟ್ಯಾಂಡ್ , ಫುಟ್ ಪಾತ್ ಗಳಿಗೆ ಇಂಟರ್ ಲಾಕ್ ಅಳವಡಿಸಿ ವಿನಾಯಕ ವೃತ್ತವನ್ನು ಸುಂದರಗೊಳಿಸಲಾಗುವುದು.

ಈ ಸಂಧರ್ಭದಲ್ಲಿ ಗ್ರಾಪಂ ಸದಸ್ಯರಾದ ಚಂದ್ರೇಶ್ , ಆಸೀಫ಼್ ಭಾಷಾ , ನಿರೂಪ್ ಕುಮಾರ್ , ಸುಂದರೇಶ್ , ಮಂಜುಳಾ ಕೆ ರಾವ್ ಶಾಸಕರ ಬಳಿ ಪಟ್ಟಣದ ಅಭಿವೃದ್ದಿಯ ಬಗ್ಗೆ ಹಲವು ಅಹವಾಲನ್ನು ಸಲ್ಲಿಸಿದರು.

ಈ ಸಂಧರ್ಭದಲ್ಲಿ ಗ್ರಾಪಂ ಅಧ್ಯಕ್ಷರು , ಉಪಾಧ್ಯಕ್ಷರು ಹಾಗೂ ಸದಸ್ಯರು ಮತ್ತು ಪಿಡಿಓ ನಾಗರಾಜ್,ಗ್ರಾಪಂ ಸಿಬ್ಬಂದಿಗಳಾದ ನಾಗೇಶ , ರಾಜೇಶ್, ಭೂದೇವಿ ಇದ್ದರು.

Leave a Reply

Your email address will not be published. Required fields are marked *