ಭೀಕರ ಬೈಕ್ ಅಪಘಾತ ; ಓರ್ವ ಯುವಕ ಸ್ಥಳದಲ್ಲೇ ಸಾವು…!!!

ಭೀಕರ ಬೈಕ್ ಅಪಘಾತ ; ಓರ್ವ ಯುವಕ ಸ್ಥಳದಲ್ಲೇ ಸಾವು…!!!

Horrific bike accident; A young man died on the spot…!!!

Horrific bike accident; A young man died on the spot…!!!

ಭೀಕರ ಬೈಕ್ ಅಪಘಾತ ; ಓರ್ವ ಯುವಕ ಸ್ಥಳದಲ್ಲೇ ಸಾವು…!!!

ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಯುವಕ ಸಾವನ್ನಪ್ಪಿರುವ ದುರ್ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಮೀಪದ ಎಡೆಹಳ್ಳಿಯಲ್ಲಿ ನಡೆದಿದೆ.

ಆಚಾಪುರ ಗ್ರಾಮದ ಅತಿಕ್ ( 21) ಸ್ಥಳದಲ್ಲಿಯೇ ಸಾವನ್ನಪ್ಪಿರುವ ದುರ್ದೈವಿಯಾಗಿದ್ದಾರೆ.

ಆನಂದಪುರದಿಂದ ಸಂತೆ ಮುಗಿಸಿ ಆಚಾಪುರ ಕಡೆ ತೆರಳುತ್ತಿದ್ದಾಗ ಅತಿಕ್ ರವರ ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿಯಾದ ಪರಿಣಾಮ ಅತಿಕ್ ರವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಬೈಕ್ ಹಿಂಬದಿ ಸವಾರ ಅರುಣ್ ಗೂ ತಲೆಗೆ ತೀವ್ರ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. 

ಸ್ಥಳೀಯರ ಹೇಳಿಕೆ ಪ್ರಕಾರ ಬುಲೆರೋ ಪಿಕಪ್ ವಾಹನ ಎದುರು ಭಾಗದಿಂದ ಡಿಕ್ಕಿ ಹೊಡೆದು ವಾಹನ ನಿಲ್ಲಿಸದೆ ಹೋಗಿರಬಹುದು ಎಂಬ ಮಾಹಿತಿ ಲಭ್ಯವಾಗಿದೆ.

ಸ್ಥಳಕ್ಕೆ ಆನಂದಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *