Headlines

RIPPONPETE | ಹಿಂದೂಪರ ಸಂಘಟನೆಗಳಿಂದ ಕಾಶ್ಮೀರ ಘಟನೆ ಖಂಡಿಸಿ ಪ್ರತಿಭಟನೆ

RIPPONPETE | ಹಿಂದೂ ಸಂಘಟನೆಗಳಿಂದ ಕಾಶ್ಮೀರ ಘಟನೆ ಖಂಡಿಸಿ ಪ್ರತಿಭಟನೆ

ರಿಪ್ಪನ್ ಪೇಟೆ : ಕಾಶ್ಮೀರದ ಪಹಲ್ಗಾಮ್‌ನಲ್ಲಿ ಹಿಂದೂ ಪ್ರವಾಸಿಗರನ್ನು ಉಗ್ರಗಾಮಿಗಳು ಗುಂಡಿನ ಸುರಿಮಳೆಗೈದು ಹತ್ಯೆ ಮಾಡಿರುವುದನ್ನು ವಿರೋಧಿಸಿ ರಿಪ್ಪನ್‌ಪೇಟೆ ವಿನಾಯಕ ವೃತ್ತದಲ್ಲಿ ಸರ್ವಪಕ್ಷದವರು ಮೇಣದಬತ್ತಿ ಹಿಡಿದು ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸುವುದರೊಂದಿಗೆ ಇಂತಹ ನೀಚ ಕೃತ್ಯ ಎಸಗಿರುವುದು ಖಂಡನೀಯ ಎಂದರು.

ರಿಪ್ಪನ್‌ಪೇಟೆಯ ಹಿಂದೂ ಸಂಘಟನೆಗಳಿಂದ ಕಾಶ್ಮೀರ ಘಟನೆ ಖಂಡಿಸಿ ಪ್ರತಿಭಟನೆ ನಡೆಸುವುದರೊಂದಿಗೆ ಕರ್ನಾಟಕದ ಮೂವರು ಹತ್ಯೆಯಾಗಿರುವುದು ದುಃಖದ ಸಂಗತಿಯಾಗಿದೆ. ಇಂತಹ ಉಗ್ರದಾಳಿಗೆ ಭಾರತ ದೇಶ ಎಂದಿಗೂ ತಲೆಬಾಗುವುದಿಲ್ಲ ಕುಗ್ಗುವುದಿಲ್ಲ ಈಗಾಗಲೇ ದೇಶದ ಪ್ರಧಾನಿ ಮೋದಿಯವರು ಹಾಗೂ ಗೃಹ ಸಚಿವರು ಸಭೆಗಳನ್ನು ನಡೆಸುವುದರೊಂದಿಗೆ ಉಗ್ರರಿಗೆ ತಕ್ಕ ಪ್ರತಿ ಉತ್ತರ ನೀಡುವುದರ ಬಗ್ಗೆ ಚರ್ಚಿಸಿದ್ದು ದೇಶದ ಹಿಂದೂಗಳೆಲ್ಲ ಸಂಘಟಿತರಾಗಿ ಭಯೋತ್ಪಾದನೆಯನ್ನು ಮಟ್ಟಹಾಕಬೇಕು ಎಂದರು.

ಪ್ರತಿಭಟನೆಯಲ್ಲಿ ಹಿಂದೂ ಪರ ಸಂಘಟನೆಗಳ ಮತ್ತು ಸಿದ್ದಿವಿನಾಯಕ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಈಶ್ವರಶೆಟ್ಟಿ, ಎನ್.ಸತೀಶ್, ಎಂ.ಸುರೇಶಸಿಂಗ್, ಎಂ.ಬಿ.ಮಂಜುನಾಥ, ಎಂ.ಡಿ.ಇಂದ್ರಮ್ಮ, ಪದ್ಮಾ ಸುರೇಶ್, ರೇಖಾರವಿಕುಮಾರ್, ನಾಗರತ್ನ ದೇವರಾಜ್, ಕೆರೆಹಳ್ಳಿ ರವೀಂದ್ರ, ಹಾರೋಹಿತ್ತಲು ಈಶ್ವರಪ್ಪಗೌಡ, ಫ್ಯಾನ್ಸಿ ರಮೇಶ್, ಆಶಾ, ಸರಸ್ವತಿ ರಾಘವೇಂದ್ರ, ಕೋಮಲ ಕೇಶವ, ಲೀಲಾ ಉಮಾಶಂಕರ್, ಕೆ.ವಿ.ಲಿಂಗಪ್ಪ ಕಗ್ಗಲಿ, ನಾಗರಾಜ, ಮುರುಳಿ ಕೆರೆಹಳ್ಳಿ, ಆದರ್ಶ ಕಲ್ಲೂರು, ಜಿ.ಡಿ. ಮಲ್ಲಿಕಾರ್ಜುನ, ಪ್ರಕಾಶಶೆಟ್ಟಿ, ಇನ್ನಿತರ ಹಲವರು ಪಾಲ್ಗೊಂಡು ಮೇಣದಬತ್ತಿ ಹಿಡಿದು ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಉಗ್ರರಿಗೆ ತಕ್ಕೆ ಶಾಸ್ತಿ ಮಾಡುವವರೆಗೂ ನಮ್ಮ ಸೈನಿಕರು ಹಿಂಜರಿಯದಂತೆ ಭಗವಂತ ಹೆಚ್ಚಿನ ಶಕ್ತಿ ಶೌರ್ಯ ಕಲ್ಪಿಸಲೆಂದು ಪ್ರಾರ್ಥಿಸಿದರು.

Leave a Reply

Your email address will not be published. Required fields are marked *