ಅಕ್ರಮವಾಗಿ ಗೋ ಸಾಗಾಟಕ್ಕೆ ಯತ್ನ – ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು | Crime News
ತೀರ್ಥಹಳ್ಳಿ : ತಾಲೂಕಿನಾದ್ಯಂತ ಗೋಗಳ್ಳರ ಅಟ್ಟಹಾಸ ಮೀತಿ ಮೀರುತ್ತಿದ್ದು ಇತ್ತೀಚಿಗೆ ಸೀಬಿನಕೆರೆಯಲ್ಲಿರುವ ನ್ಯಾಯಾಲಯದ ಆವರಣದಲ್ಲಿ ಮಲಗಿದ್ದ ಹಸುಗಳನ್ನು ಐಷಾರಾಮಿ ಕಾರಿನಲ್ಲಿ ರಾತ್ರೋ ರಾತ್ರಿ ಕದ್ದೋಯ್ದ ಘಟನೆ  ನಡೆದು ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾರ್ವಜನಿಕರಿಂದ ತೀವ್ರ ಆಕ್ರೋಶಕ್ಕೆ ಒಳಗಾಗಿತ್ತು.
ಈ ವಿಷಯ ಮಾಸುವ ಮುನ್ನವೇ ಹೆದ್ದೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಹೊಸಳ್ಳಿಯಲ್ಲಿ ಬುಧವಾರ ಬೆಳಗಿನ ಜಾವ ಹಸುಗಳನ್ನು ಅಕ್ರಮವಾಗಿ ವಾಹನದಲ್ಲಿ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಸ್ಥಳೀಯರು ಜೀತೋ ವಾಹನ ಸಮೇತ ನಾಲ್ಕು ಹಸು ಕರುಗಳನ್ನು ಸೆರೆ ಹಿಡಿದು ವ್ಯಕ್ತಿಯೋರ್ವನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮಾಳೂರು ಪೊಲೀಸ್ ಠಾಣೆಗೆ ಆ ವ್ಯಕ್ತಿಯನ್ನು ಒಪ್ಪಿಸಿದ್ದು ತನಿಖೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
		 
                         
                         
                         
                         
                         
                         
                         
                         
                         
                        

