“ಸಮ ಸಮಾಜದ ಹರಿಕಾರ ಡಾ. ಬಿ ಆರ್ ಅಂಬೇಡ್ಕರ್” -ಡಾ ರಮೇಶ್ ಎನ್ ತೆವರಿ
ಸಕಾ೯ರಿ ಪ್ರಥಮ ದರ್ಜೆ ಕಾಲೇಜು, ಬಂಕಾಪುರದಲ್ಲಿ 134ನೇ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜಯಂತಿ ಹಾಗೂ ಡಾ.ಬಾಬು ಜಗಜೀವನ ರಾಮ್ ಅವರ ಜಯಂತಿಯನ್ನು ಆಚರಿಸಲಾಯಿತು.
“ಅಂಬೇಡ್ಕರ್ ಅವರ ಸಂವಿಧಾನದ ಆಶಯ” ವಿಷಯದ ಕುರಿತು ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ *ಮಂಜುನಾಥ ಬಿ ಅವರು* ಮಾತನಾಡಿ, ಸಂವಿಧಾನದಲ್ಲಿ ನಿರ್ದಿಷ್ಟ ಸಮುದಾಯದ ತುಷ್ಟಿಕರಣಕ್ಕಾಗಿ ಮೀಸಲಾತಿಯನ್ನು ಕಲ್ಪಿಸಿಲ್ಲ. ಸಮ ಸಮಾಜದ ನಿರ್ಮಾಣವೇ ಇದರ ಆಶಯವಾಗಿತ್ತು. ಸಮ ಸಮಾಜ ಎಂದು ನಿರ್ಮಾಣವಾಗುತ್ತದೆಯೋ, ಅಂದು ಮೀಸಲಾತಿ ತನಗೆ ತಾನೇ ಅರ್ಥ ಕಳೆದುಕೊಳ್ಳುತ್ತದೆ. ಆ ದಿನಗಳು 10 ವರ್ಷದ ಒಳಗಾಗಿ ಬರಬೇಕೆಂಬುದು ಅಂಬೇಡ್ಕರ್ ಅವರ ಆಶಯವಾಗಿತ್ತು. ಆದರೆ ಎಂಟು ದಶಕಗಳ ಆದರೂ ಅಂತಹ ಸಮಸಮಜ ನಿರ್ಮಾಣವಾಗಿಲ್ಲ ಎಂಬುದು ವಿಷಾದನೀಯ ಎಂದು ತಿಳಿಸಿದರು.
ಅಂಬೇಡ್ಕರ್ ಅವರ ಅಂತಿಮ ದಿನಗಳಲ್ಲಿ ಅವರ ಸಂಗಾತಿಯಾಗಿದ್ದ ಡಾ.ಸವಿತಾ ಅಂಬೇಡ್ಕರ್ ಅವರ ಕೊಡುಗೆಯನ್ನು ಸ್ಮರಿಸಿದರು.
“ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆ”* ವಿಷಯದ ಕುರಿತು ಕಾಲೇಜಿನ ಇತಿಹಾಸ ಸಹಾಯಕ ಪ್ರಾಧ್ಯಾಪಕರಾದ ಲೋಕೇಶ್ ನಾಯ್ಕ್ ಕೆ ಅವರು ಮಾತನಾಡಿ, 20ನೇ ಶತಮಾನಕ್ಕೂ ಪೂರ್ವದಲ್ಲಿ ತುಳಿತಕ್ಕೊಳ್ಳಗಾದ ಜನರ ಶ್ರೇಯೋಭಿವೃದ್ಧಿಗಾಗಿ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟರು. ಭಾರತ ಸಂವಿಧಾನವನ್ನು ರಚಿಸುವುದರ ಮೂಲಕ ಆ ಸಮುದಾಯಗಳನ್ನು ಮುಖ್ಯ ವಾಹಿನಿಗೆ ತರಲು ಪ್ರಯತ್ನಿಸಿದರು. ಈ ಮೂಲಕ ಎಲ್ಲಾ ವರ್ಗದ ಜನರನ್ನು ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಮೇಲಕ್ಕೆ ತರಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ರಮೇಶ್ ಎನ್ ತೆವರಿ ರವರು ಮಾತನಾಡಿ “ಬುದ್ಧ ಬಸವ ಮತ್ತು ಅಂಬೇಡ್ಕರ್ ರವರು ಚಿಂತಿಸಿದಂತೆ ಜಾತಿಗೆ ಸೀಮಿತವಾಗದೆ ಜಾತ್ಯತೀತವಾಗಿ ಮಾನವ ಸಮಾಜ ತನ್ನ ಬದುಕನ್ನು ಕಟ್ಟಿಕೊಂಡು ಸಮ ಸಮಾಜ ನಿರ್ಮಾಣ ಮಾಡಬೆಕೆಂದರು.
ಈ ಕಾರ್ಯಕ್ರಮವನ್ನು ವಿಜಯ್ ಕುಮಾರ್ ಗುಡಿಗೇರಿ ರವರು ನಿರೂಪಿಸಿದರು, ಸಂಸ್ಕೃತಿಕ ಸಂಚಾಲಕರಾದ ನಿಂಗಪ್ಪ ಕಲಕೊಟಿರವರು ಸ್ವಾಗತಿಸಿದರು, ಮಹೇಶ್ ಡಮನಾಳ ವಂದಿಸಿದರು. ಕಾಲೇಜಿನ ಹಿರಿಯ ಪ್ರಾಧ್ಯಾಪಕರಾದ ಡಾ. ದಿನೇಶಪ್ಪ ಸಿಂಗಾಪುರ್, ಐಕ್ಯೂಎಸ್‌ಸಿ ಸಂಚಾಲಕರಾದ ಲುಬ್ನ ನಾಜ್ , ವಿಜಯಲಕ್ಷ್ಮಿ ಸಿ, ನಾಜಿನಿನ್ ಹಿರಕುಂಬಿ, ಸುಭಾನಿ, ಉಮೇಶ್ ಕರ್ಜಗಿ, ಸಂದೀಪ್ ಗೌಡ ಪಾಟೀಲ್, ಮಹದೇವಪ್ಪ, ಮಲ್ಲಿಕಾರ್ಜುನ್ ಹೂಗಾರ್, ಗದಿಗಯ್ಯ ಹಳ್ಳಿಕೊಪ್ಪ, ಸವಿತಾ ಮಾಲಗಾವಿ, ಮಂಜು ಅಂಗಡಿ, ವಿಜಯಲಕ್ಷ್ಮಿ ಒಡಗಾವಿ, ಶಬಿನಾ ಮುಳುಗುಂದ್, ದಾದಾಪೀರ್, ಮಂಜಯ್ಯ, ಅಂಜಲಿ, ಮುರುಗಯ್ಯ, ಹಾಗೂ ಕಾಲೇಜಿನ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ವರದಿ : ನಿಂಗರಾಜ ಕುಡಲ್ ಹಾವೇರಿ ಜಿಲ್ಲೆ ಬಂಕಾಪುರ.