ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾಗಿ ಶಾಸಕ ಬೇಳೂರು ಗೋಪಾಲಕೃಷ್ಣ ಅಧಿಕಾರ ಸ್ವೀಕಾರ
– ಆರ್ ಎಂಎಂ, ಕಿಮ್ಮನೆ, ಶ್ರೀಕಾಂತ್ ಸೇರಿ ಗಣ್ಯರ ಭೇಟಿ : ಶುಭಾಶಯ
ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾಗಿ ಸಾಗರ ಕ್ಷೇತ್ರದ ಜನಪ್ರಿಯ ಶಾಸಕರಾದ ಬೇಳೂರು ಗೋಪಾಲಕೃಷ್ಣ ಅವರು ಶುಕ್ರವಾರ ಬೆಂಗಳೂರಿನ ಮಲ್ಲೇಶ್ವರಂ ವನವಿಕಾಸ ಕಛೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
ಕಾಂಗ್ರೆಸ್ ಮುಖಂಡರಾದ ಬಿ.ಕೆ ಹರಿಪ್ರಸಾದ್, ಆಯನೂರು ಮಂಜುನಾಥ್, ಆರ್.ಎಂ.ಮಂಜುನಾಥ್ ಗೌಡರು, ನಟ ಶ್ರೀನಗರ ಕಿಟ್ಟಿ, ಕನ್ನಡ ರಕ್ಷಣಾ ವೇಧಿಕೆಯ ಪ್ರವಿಣ್ ಶೆಟ್ಟಿ ಸೇರಿದಂತೆ ಸಾಕಷ್ಟು ಗಣ್ಯರು ಉಪಸ್ಥಿತರಿದ್ದು ಗೋಪಾಲಕೃಷ್ಣ ಬೇಳೂರುರವರಿಗೆ ಶುಭ ಹಾರೈಸಿದರು.
ಶಿವಮೊಗ್ಗ ಜಿಲ್ಲೆಯ ಡೈನಾಮಿಕ್ ನಾಯಕರಲ್ಲಿ ಒಬ್ಬರಾದ ಬೇಳೂರು ಗೋಪಾಲಕೃಷ್ಣ ಅವರಿಗೆ ಸಿಎಂ, ಡಿಸಿಎಂ ಸೇರಿ ಅನೇಕ ರಾಜ್ಯ ನಾಯಕರು ಶುಭ ಕೋರಿದ್ದಾರೆ. ಎಂ ಶ್ರೀಕಾಂತ್, ಹಮೀದ್ ಪಾಳ್ಯ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಸಾಗರ ಹೊಸನಗರ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರು ಕಚೇರಿಗೆ ತೆರಳಿ ಶುಭಾಶಯಗಳು ಕೋರಿ ಗೌರವಿಸಿದರು.
ಮಲ್ಲೇಶ್ವರಂನ ವನವಿಕಾಸ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಬೇಳೂರು ರವರ ಪತ್ನಿ ರಂಜಿತ ರಾಧ ಬೇಳೂರು ,ಪುತ್ರ ವಿಹಾನ್ ಬೇಳೂರು ಹಾಗೂ ಅಶೋಕ್ ಬೇಳೂರು ಸೇರಿದಂತೆ ಅನೇಕರು ಇದ್ದರು.