Headlines

ಶಿವಮೊಗ್ಗದಲ್ಲಿ ರೌಡಿಗಳಿಂದ ಟ್ರಾಫಿಕ್ ಪೊಲೀಸರಿಗೇ ಕೊಲೆ ಬೆದರಿಕೆ – ಇಬ್ಬರ ಬಂಧನ | ವೀಡಿಯೋ ವೈರಲ್ SMG


ಸಾರ್ವಜನಿಕವಾಗಿ ರೌಡಿ ಪಟಾಲಂಗಳು ಶಿವಮೊಗ್ಗದಲ್ಲಿ ಮತ್ತೆ ಗರಿಬಿಚ್ಚಿದ್ದು, ಹಾಡಹಗಲೇ, ಅದರಲ್ಲೂ ಪೊಲೀಸ್ ಸಿಬ್ಭಂದಿ ಮೇಲೆ ಮರ್ಡರ್ ಬೆದರಿಕೆ, ಅವಾಚ್ಯವಾಗಿ ಬೈದು ಧಮ್ಕಿ ಹಾಕಿರುವ ಘಟನೆ ಸದ್ಯ ಮಲೆನಾಡಿನಲ್ಲಿ ಸಂಚಲನ ಮೂಡಿಸಿದೆ.


ಶಿವಮೊಗ್ಗದಲ್ಲಿ ಟ್ರಾಫಿಕ್ ಪೊಲೀಸರಿಗೇ ಅವಾಜ್ ಹಾಕಲಾಗಿದೆ. ನಟೋರಿಯಸ್ ಹಿನ್ನೆಲೆಯುಳ್ಳ ಪುಡಾರಿಗಳು, ಟ್ರಾಫಿಕ್ ಪೊಲೀಸರು ಹಿಡಿಯುತ್ತಾರೆ ಅಂತಾ ತಾವೇ ಬೈಕಿನಲ್ಲಿ ಬಿದ್ದು, ತಾವೇ ವಿಡಿಯೋ ಮಾಡಿ ತಗಲಾಕಿಕೊಂಡಿದ್ದಾರೆ. ಟ್ರಾಫಿಕ್ ಪೊಲೀಸ್ ಸಿಬ್ಭಂಧಿಗೆ ಪ್ರಾಣ ಬೆದರಿಕೆ ಒಡ್ಡಿರುವ ರೌಡಿ ಶೀಟರ್ ಗಳು, ತಮ್ಮ ಹುಡುಗರನ್ನು ಕರೆಸಿ, ಹಲ್ಲೆ ಮಾಡಲು ಕೂಡ ಮುಂದಾಗಿರುವುದು ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ.

ಶಿವಮೊಗ್ಗದ ಬಿ.ಹೆಚ್. ರಸ್ತೆಯಲ್ಲಿ, ರೌಡಿ ಶೀಟರ್ ಗಳು, ಬೈಕ್ ನಲ್ಲಿ ಬಂದು, ಎಲ್ಲಿ ಗಸ್ತಿನಲ್ಲಿದ್ದ ಪೊಲೀಸರಿಗೆ ಸಿಕ್ಕಿಹಾಕಿಕೊಳ್ಳುತ್ತೇವೆಯೋ ಎಂಬ ಭಯದಲ್ಲಿ/ ಭರದಲ್ಲಿ ಬೈಕ್ ನಿಂದ ಬಿದ್ದು, ಡ್ರಾಮ ಮಾಡಿ ತಗಲಾಕಿಕೊಂಡಿದ್ದಾರೆ. ಅಷ್ಟೇ ಅಲ್ಲ, ಪೊಲೀಸರ ಮೇಲೆ ಹಲ್ಲೆಗೆ ಯತ್ನ ನಡೆಸಿ, ಟ್ರಾಫಿಕ್ ಪೊಲೀಸ್ ಸಿಬ್ಭಂದಿಗೆ ಆವಾಜ್ ಹಾಕಿ ನಿನಗೆ ಮರ್ಡರ್ ಮಾಡುತ್ತೇವೆಂದು ಕೂಡ ಪ್ರಾಣ ಬೆದರಿಕೆ ಒಡ್ಡಿದ್ದಾರೆ.

ಟ್ರಾಫಿಕ್ ಪೊಲೀಸ್ ಪ್ರಭು ಎಂಬುವವರಿಗೆ ಅವಾಚ್ಯ ಶಬ್ಧಗಳಿಂದ ನಿಂದನೆ ಕೂಡ ಮಾಡಿದ್ದು, ಸ್ವತಃ ಅವರೇ ವಿಡಿಯೋ ಮಾಡಿ ವೈರಲ್ ಮಾಡಿ ಇದೀಗ ಅಂದರ್ ಆಗಿದ್ದಾರೆ. ಅಂದಹಾಗೆ, ಕಳೆದ ಜ. 30 ರಂದು ರಸ್ತೆಯಲ್ಲಿ ಗಸ್ತು ನಿಂತಿದ್ದ ಟ್ರಾಫಿಕ್ ಪೊಲೀಸರನ್ನ ನೋಡಿ ಬೈಕ್ ತಿರುಗಿಸುವ ವೇಳೆ ಬಿದ್ದ ರೌಡಿ ಶೀಟರ್, ಯಾಸೀನ್ ಖುರೇಶಿ ಎಂಬಾತ, ಬಿದ್ದು, ಬಳಿಕ ಪ್ರಜ್ಞೆ ತಪ್ಪಿದಂತೆ ನಾಟಕ ಮಾಡಿ, ಪೊಲೀಸರೇ ಹೊಡೆದು ಸಾಯಿಸಿದರೆಂದು, ಕೂಗಾಡಿದ್ದಾರೆ. ಅಲ್ಲದೇ, ಈ ವೇಳೆ ಸ್ಥಳಕ್ಕೆ ಬಂದ ಮತ್ತೊಬ್ಬ ರೌಡಿ ಶೀಟರ್ ವಾಸೀಂ ಎಂಬಾತ ಕೂಡ ಕೂಗಾಡಿದ್ದು, ನೀನೆ ಸಾಯಿಸಿದ್ದು ಎಂದು ಪೊಲೀಸರ ಮೇಲೆ ಹಲ್ಲೆಗೆ ಯತ್ನ ನಡೆಸಿದ್ದಾನೆ. ಸಮವಸ್ತ್ರದಲ್ಲಿದ್ದ ಟ್ರಾಫಿಕ್ ಪೊಲೀಸರಿಗೆ ಮರ್ಡರ್ ಮಾಡುವ ಜೀವ ಬೆದರಿಕೆ ಹಾಕಿದ ರೌಡಿ ಶೀಟರ್ ಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದು, ಇದೀಗ ಅಂದರ್ ಆಗಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರೌಡಿ ಶೀಟರ್ ಗಳಾದ ಕಡೆಕಲ್ ಹಬೀದ್ ಹಾಗೂ ವಾಸೀಂ ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಈ ಇಬ್ಬರ ಮೇಲೆ 504, 506, 189, 342, 353, 149 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸಂಚಾರಿ ಪೊಲೀಸ್ ಕಾನ್ಸಟೇಬಲ್ ಗಳು ಕರ್ತವ್ಯದಲ್ಲಿದ್ದಾಗ ರೌಡಿಸಂ ತೋರಿಸಿದ್ದರು. ಇಂತಹ ವರ್ತನೆ ತೋರಿರುವ ಇಬ್ಬರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿದ್ದ ಇನ್ನಿಬ್ಬರು ಎಸ್ಕೇಪ್ ಆಗಿದ್ದಾರೆ. ಸದ್ಯ ಅವರಿಬ್ಬರ ಬಲೆಗೆ ಪೊಲೀಸರು ಬಲೆ ಬೀಸಿದ್ದಾರೆ.

Leave a Reply

Your email address will not be published. Required fields are marked *