ಬ್ಯಾಂಕ್ ದರೋಡೆಗೆ ಯುಪಿ ಗ್ಯಾಂಗ್ ಯತ್ನ – ನಾಲ್ವರ ಸೆರೆ ,  ಒಬ್ಬನ ಕಾಲಿಗೆ ಗುಂಡೇಟು.!

ಬ್ಯಾಂಕ್ ದರೋಡೆಗೆ ಯುಪಿ ಗ್ಯಾಂಗ್ ಯತ್ನ – ನಾಲ್ವರ ಸೆರೆ ,  ಒಬ್ಬನ ಕಾಲಿಗೆ ಗುಂಡೇಟು.!

ದಾವಣಗೆರೆ : ಜಿಲ್ಲೆಯ ನ್ಯಾಮತಿ ತಾಲೂಕಿನ ಎಸ್ ಬಿ ಐನಲ್ಲಿ  ಮೂರು ತಿಂಗಳ ಹಿಂದೆ 13 ಕೋಟಿ ಹಣ ಹಾಗೂ 17 ಕೆಜಿ ಚಿನ್ನವನ್ನು ಕದ್ದಿದ್ದ ಪ್ರಕರಣದ ಬೆನ್ನಲ್ಲೇ ಮತ್ತೆ ಅದೇ ಶಾಖೆಗೆ ದರೋಡೆಗೆ ತಂಡ ಆಗಮಿಸಿ ಸಿಕ್ಕಿಬಿದ್ದಿದೆ.

ಕಳೆದ ರಾತ್ರಿ  ಎರಡು ಕಾರಿನಲ್ಲಿ ಏಳು ಜನರ ತಂಡ  ಮತ್ತೆ ಬಂದಾಗ  ಪೊಲೀಸರು ಬೆನ್ನಟ್ಟಿದರು.ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಯತ್ನಿಸಿದಾಗ  ದರೋಡೆಕೋರತ್ತ  ಪೊಲೀಸರು ಗುಂಡು ಹಾರಿಸಿದ್ದು ‌ಓರ್ವ ಗಾಯಗೊಂಡು ಬಿದ್ದಿದ್ದನು.

ಏಳು ಜನ ಆರೋಪಿಗಳಲ್ಲಿ ಮೂವರು ತಪ್ಪಿಸಿಕೊಂಡಿದ್ದು ನಾಲ್ಕು ಜನ ಸಿಕ್ಕಿ ಬಿದ್ದಿದ್ದಾರೆ ಗಾಯಾಳುವನ್ನು ಹೊನ್ನಾಳಿ ಆಸ್ಪತ್ರೆಗೆ ಸೇರಿಸಲಾಗಿದೆ. ಈ ವೇಳೆ ದರೋಡೆಕೋರರು ಪೊಲೀಸರ ಮೇಲೆ ದಾಳಿ‌‌ ನಡೆಸಲೆತ್ನಿಸಿದಾಗ ಒಬ್ಬ ಸಿಬ್ಬಂದಿ ಗಾಯಗೊಂಡಿದ್ದಾರೆ. 

ಸ್ಥಳಕ್ಕೆ ದಾವಣಗೆರೆಯ ಎಸ್ಪಿ ಉಮಾ ಭೇಟಿ ನೀಡಿದ್ದಾರೆ.

About The Author

Leave a comment