Headlines

ವಿದ್ಯಾರ್ಥಿಗಳ ಸೇವಾ ಮನೋಭಾವನೆಗೆ ಎನ್‌ಎಸ್‌ಎಸ್‌ ಶಿಬಿರ ಸಹಕಾರಿ – ಶಾಸಕ ಬೇಳೂರು ಗೋಪಾಲಕೃಷ್ಣ

ವಿದ್ಯಾರ್ಥಿಗಳ ಸೇವಾ ಮನೋಭಾವನೆಗೆ ಎನ್‌ಎಸ್‌ಎಸ್‌ ಶಿಬಿರ ಸಹಕಾರಿ – ಶಾಸಕ ಬೇಳೂರು ಗೋಪಾಲಕೃಷ್ಣ

ರಿಪ್ಪನ್‌ಪೇಟೆ : ವಿದ್ಯಾರ್ಥಿಗಳ ದಿಸೆಯಲ್ಲಿ ನಾಯಕತ್ವ ಗುಣ ಮತ್ತು ಸೇವಾ ಮನೋಭಾವನೆಯನ್ನು ಕಲಿಯಲು ಎನ್.ಎಸ್. ಎಸ್ ಯೋಜನಾ ಶಿಬಿರಗಳು ಸಹಕಾರಿಯಾಗಲಿವೆ,ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವುದರಿಂದ ಶಿಸ್ತಿನ ಜತೆಗೆ ಜೀವನದ ಅನುಭವವನ್ನು ಪಡೆಯಬಹುದು ಎಂದು ಕರ್ನಾಟಕ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರು ಹಾಗೂ ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಬೇಳೂರು ಗೋಪಾಲಕೃಷ್ಣ ಹೇಳಿದರು.

ಪಟ್ಟಣದ ಸಮೀಪದ ಚಂದವಳ್ಳಿ ಗ್ರಾಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಶಿಬಿರಗಳಲ್ಲಿ ಭಾಗವಹಿಸಿದರೆ ಪ್ರಸುತ್ತ ಸಮಾಜದಲ್ಲಿ ವಿದ್ಯಾರ್ಥಿಗಳಲ್ಲಿ ಮೇಲು-ಕೀಳು ಎಂಬುದನ್ನು ದೂರಮಾಡಿ, ಗ್ರಾಮೀಣ ಭಾಗದ ಸಮಸ್ಯೆಗಳನ್ನು ‌ಅರಿತುಕೊಂಡು ಇಲ್ಲಿಯ ಸಂಸ್ಕೃತಿಯನ್ನು‌ ಅರ್ಥ ಮಾಡಿಕೊಳ್ಳಲು ಸಹಕಾರಿಯಾಗಲಿದೆ , ವಿದ್ಯಾರ್ಥಿಗಳು ಓದಿನ ಜತೆಗೆ ಇಂತಹ ಶಿಬಿರಗಳಲ್ಲಿ ಪಾಲ್ಗೊಳ್ಳುವುದರಿಂದ ಬೌದ್ಧಿಕ ವಿಕಾಸಕ್ಕೆ ಕಾರಣವಾಗಲಿದೆ ಎಂದರು.

ನಂಬಿಕೆ ಮತ್ತು ಮೂಢನಂಬಿಕೆ ಒಂದೇ ಏಳೆಯ ಮೇಲೆ ನಿಂತಿದ್ದು, ನಂಬಿಕೆ ಒಳ್ಳೆಯದಕ್ಕೆ ಪ್ರೇರಣೆಯಾದರೆ, ಮೂಢನಂಬಿಕೆ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತದೆ ಆದ್ದರಿಂದ ಶಿಬಿರಾರ್ಥಿಗಳು ಗ್ರಾಮೀಣ ಭಾಗದ ಜನರಿಗೆ ಮೂಡನಂಬಿಕೆಯ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿ ತಮ್ಮ ಬಾಲ್ಯದ ಜೀವನದಲ್ಲಿ ನಡೆದ ಘಟನೆಯೊಂದನ್ನು ನೆನಪಿಸಿಕೊಂಡರು.

ಕಾಲೇಜಿನ ಪ್ರಾಂಶುಪಾಲರಾದ ವಿರುಪಾಕ್ಷಪ್ಪ ಮಾತನಾಡಿ
ಕಾಲೇಜಿನ ವತಿಯಿಂದ ಏಳು ದಿನಗಳವರೆಗೆ ಗ್ರಾಮದಲ್ಲಿ ಎನ್‌ಎಸ್‌ಎಸ್ ಶಿಬಿರ ಹಮ್ಮಿಕೊಂಡಿದ್ದು, ಇಲ್ಲಿ ಭಾಗವಹಿಸಿರುವ ಪ್ರತಿಯೊಬ್ಬರಿಗೂ ಗ್ರಾಮೀಣ ಜನಜೀವನದ ಅನುಭವ ಆಗುವುದರ ಜತೆಗೆ ಅವರ ಸಂಕಷ್ಟವೂ ಅರ್ಥವಾಗಲಿದೆ. ಈ ಅನುಭವವನ್ನು ತಮ್ಮ ಜೀವನದಲ್ಲಿ ಅಳವಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೆಂಚನಾಲ ಗ್ರಾಪಂ ಅಧ್ಯಕ್ಷ ಉಬೇದುಲ್ಲಾ ಷರೀಫ್ ಮಾತನಾಡಿ ರಿಪ್ಪನ್‌ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಚಂದವಳ್ಳಿ ಗ್ರಾಮದಲ್ಲಿ ಎನ್‌ಎಸ್‌ಎಸ್ ಶಿಬಿರ ಆಯೋಜಿಸಿರುವುದು ಎಲ್ಲರಿಗೂ ಸಂತಸದ ವಿಚಾರವಾಗಿದೆ. ನಾವು ಶಿಬಿರ ನಡೆಯುವ ದಿನಗಳಲ್ಲಿ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಚ್ ಆರ್ ಕೃಷ್ಣಮೂರ್ತಿ ಮಾತನಾಡಿ, ಎನ್​ಎಸ್​ಎಸ್​ ವಿದ್ಯಾರ್ಥಿಗಳೆಂದರೆ ಊರಿನಲ್ಲಿ ಸ್ವಚ್ಛತೆ ಮಾಡಲು ಬರುವವರು ಎಂದು ತಿಳುವಳಿಗೆ ಇದೆ. ಆದರೆ, ಸ್ವಚ್ಚತೆಯೂ ಶ್ರಮದಾನದ ಭಾಗವಷ್ಟೇ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸುವುದು ವಿದ್ಯಾರ್ಥಿಗಳ ಕೆಲಸವಾಗಬೇಕು ಎಂದರು.

ಈ ಸಂಧರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ಹೂವಮ್ಮ , ಸದಸ್ಯರಾದ ಕೃಷ್ಣೋಜಿರಾವ್ , ರಮ್ಯಾ ಶಶಿಕುಮಾರ್ , ದಿವಾಕರ್ ,  ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹಾಲಸ್ವಾಮಿ ಗೌಡ , ಸಿಡಿಸಿ ಸದಸ್ಯರಾದ ಪಿಯೂಸ್ ರೊಡ್ರಿಗಸ್ , ರಮೇಶ್ ಫ್ಯಾನ್ಸಿ , ಶ್ರೀನಿವಾಸ್ ಆಚಾರ್ , ಮಂಜುನಾಥ್ ಕಾಮತ್ , ರಾಘವೇಂದ್ರ ಕೆ ಸಿ , ರಿಪ್ಪನ್‌ಪೇಟೆ ಗ್ರಾಪಂ ಸದಸ್ಯ ಗಣಪತಿ ಗವಟೂರು ಚಂದವಳ್ಳಿ ಶಾಲೆಯ ಮುಖ್ಯೋಪಾಧ್ಯಾಯ ಜಗದೀಶ್ ಕಾಗಿನೆಲೆ ಹಾಗೂ ಎಸ್ ಡಿಎಂ ಸಿ ಅಧ್ಯಕ್ಷರು, ಸದಸ್ಯರು NSS ಯೋಜನಾಧಿಕಾರಿ ಕುಮಾರ್ ಇದ್ದರು.

Leave a Reply

Your email address will not be published. Required fields are marked *