HUMCHA | ಅಕ್ರಮ ಮರ ಕಡಿತಲೆ – ಪ್ರಕರಣ ದಾಖಲು
ಹೊಸನಗರ ತಾಲೂಕಿನ ಹುಂಚ ಗ್ರಾ ಪಂ ವ್ಯಾಪ್ತಿಯ ಹುತ್ತಳ್ಳಿ ಗ್ರಾಮದ ಸರ್ವೇ ನಂಬರ್ 31 ರ ಅರಸಾಳು ವಲಯ ಅರಣ್ಯ ವ್ಯಾಪ್ತಿಯಲ್ಲಿ ನೂರಾರು ಮರ ಗಿಡಗಳನ್ನು ಅಕ್ರಮವಾಗಿ ಕಡಿದಿರುವ ಘಟನೆಗೆ ಸಂಬಂಧಿಸಿ ಭಾನುವಾರ ಪ್ರಕರಣ ದಾಖಲಾಗಿದೆ.
ಹುತ್ತಳ್ಳಿ ಗ್ರಾಮದ ಸರ್ವೆ ನಂ. 31 ರಲ್ಲಿದ್ದ ನೈಸರ್ಗಿಕ ಅರಣ್ಯವನ್ನು ಕಡಿದು ನಾಶಪಡಿಸಿರುವ ಹಿನ್ನೆಲೆಯಲ್ಲಿ ಗ್ರಾಮದ ದೇವರಾಜ್ ಎಂಬುವರ ವಿರುದ್ಧ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸುಮಾರು 4 ಎಕರೆ ಪ್ರದೇಶದಲ್ಲಿದ್ದ ಬೆಲೆಬಾಳುವ ಮತ್ತಿ, ಹೊನ್ನೆ, ಹುಣಾಲು, ಜಂಬೆ ಹಾಗೂ ಇನ್ನಿತರ ಕಾಡುಜಾತಿ ಮರಗಳನ್ನು ಕಡಿಯಲಾಗಿತ್ತು.
ಮರದ ಬುಡಗಳಿಗೆ ಬೆಂಕಿಯಿಟ್ಟು ಸುಡಲಾದ ಮಾಹಿತಿ ಮೇರೆಗೆ ಸ್ಥಳಕ್ಕೆ ಪರಿಸರವಾದಿ ಗಿರೀಶ್ ಆಚಾರ್ ಹಾಗೂ ತಂಡ ಅರಣ್ಯ ಇಲಾಖೆಯ ಗಮನಕ್ಕೆ ತಂದರು ನಂತರ ಅರಣ್ಯ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಆರ್‌ಎಫ್‌ಓ ಶರಣಪ್ಪ, ಡಿಆರ್‌ಎಫ್‌ಓ ಮಂಜುನಾಥ, ಅರಣ್ಯ ರಕ್ಷಕ ಸಂತೋಷ್ ಇನ್ನಿತರರಿದ್ದರು.