w
Headlines
Home » Ripponpete | ಉರಗ ತಜ್ಞ ಸ್ನೇಕ್ ಕಿರಣ್ ಕಳೆದುಕೊಂಡಿದ್ದ ಮೊಬೈಲ್ ನ್ನು ಹಿಂದಿರುಗಿಸಿದ ರಿಪ್ಪನ್‌ಪೇಟೆಯ ಯುವಕ

Ripponpete | ಉರಗ ತಜ್ಞ ಸ್ನೇಕ್ ಕಿರಣ್ ಕಳೆದುಕೊಂಡಿದ್ದ ಮೊಬೈಲ್ ನ್ನು ಹಿಂದಿರುಗಿಸಿದ ರಿಪ್ಪನ್‌ಪೇಟೆಯ ಯುವಕ

Ripponpete | ಉರಗ ತಜ್ಞ ಸ್ನೇಕ್ ಕಿರಣ್ ಕಳೆದುಕೊಂಡಿದ್ದ ಮೊಬೈಲ್ ನ್ನು ಹಿಂದಿರುಗಿಸಿದ ಯುವಕ


ರಿಪ್ಪನ್‌ಪೇಟೆ : ಜಿಲ್ಲೆಯ ಪ್ರಸಿದ್ದ ಉರಗ ತಜ್ಞ ಸ್ನೇಕ್ ಕಿರಣ್ ರವರು ಕಳೆದುಕೊಂಡಿದ್ದ ಮೊಬೈಲ್ ನ್ನು ಪಟ್ಟಣದ ತನ್ವಿ ಮೊಬೈಲ್ ಶಾಪ್ ನ ಮಾಲೀಕರು ಹಿಂದಿರುಗಿಸಿದ್ದಾರೆ.

ಶಿವಮೊಗ್ಗದಲ್ಲಿ ಸೈಬರ್ ಪೊಲೀಸ್ ಠಾಣೆಯ ಅಧಿಕಾರಿಗಳ ಸಮ್ಮುಖದಲ್ಲಿ ಮೊಬೈಲ್ ಶಾಪ್ ಮಾಲೀಕ ತನ್ನು ಅರಸಾಳು ಸ್ನೇಕ್ ಕಿರಣ್ ರವರಿಗೆ ಮೊಬೈಲ್ ನ್ನು ಹಿಂದಿರುಗಿಸಿದ್ದಾರೆ.


ಕೆಲವು ದಿನಗಳ ಹಿಂದೆ ಪಟ್ಟಣದ ತನ್ವಿ ಮೊಬೈಲ್ ಶಾಪ್ ಗೆ ಅಪ್ರಾಪ್ತ ವಯಸ್ಸಿನ ಯುವಕರು ಮೊಬೈಲ್ ಮಾರಾಟಕ್ಕೆ ಬಂದಾಗ ಅನುಮಾನಗೊಂಡ ಮಾಲೀಕ ತನ್ನು ಅರಸಾಳು ರವರು ತನ್ನದೇ ಸಿಮ್ ನ್ನು ರಿಜಿಸ್ಟರ್ ಮಾಡಿ ನಂತರ CEIR PORTAL ಮೂಲಕ ಪರಿಶೀಲಿಸಿದಾಗ ಕಳ್ಳತನದ ಮೊಬೈಲ್ ಎಂಬುವುದನ್ನು ಮನಗಂಡು ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

ಶುಕ್ರವಾರ ಶಿವಮೊಗ್ಗದ ಸೈಬರ್ ಪೊಲೀಸ್ ಠಾಣೆಯಲ್ಲಿ ಸ್ನೇಕ್ ಕಿರಣ್ ರವರಿಗೆ ಮೊಬೈಲ್ ಶಾಪ್ ಮಾಲೀಕ ತನ್ನು ಅರಸಾಳು ಮೊಬೈಲ್ ಪೋನ್ ನ್ನು ಹಿಂದಿರುಗಿಸಿದ್ದಾರೆ.

ಈಗಾಗಲೇ 10 ಕ್ಕೂ ಹೆಚ್ಚು ಕಳುವು ಮೊಬೈಲ್ ನ್ನು‌ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆಗೆ ಸಹಕರಿಸಿರುವ ತನ್ನು ಅರಸಾಳು ಕಾರ್ಯಕ್ಕೆ ಪೊಲೀಸರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.