ಗಾಂಜಾ ಮಾರಾಟ ಮಾಡಲು ಬೈಕ್ ಕಳ್ಳತನಗೈದಿದ್ದ ಮೂವರು ಆರೋಪಿಗಳ ಹೆಡೆಮುರಿ ಕಟ್ಟಿದ ಬಂಕಾಪುರ ಪೊಲೀಸರು
ಬಂಕಾಪುರ : ಮನೆ ಮುಂಭಾಗ ನಿಲ್ಲಿಸಿದ್ದ ಬೈಕ್ ನ್ನು ಕಳ್ಳತನಗೈದು ಗಾಂಜಾ ಮಾರಾಟ ಮಾಡುತಿದ್ದ ಮೂವರು ಆರೋಪಿಗಳನ್ನು ಒಂದೇ ದಿನದಲ್ಲಿ ಹೆಡೆಮುರಿ ಕಟ್ಟುವಲ್ಲಿ ಬಂಕಾಪುರ ಪಿಎಸ್‌ಐ ನಿಂಗರಾಜ್ ಕೆ ವೈ ನೇತೃತ್ವದ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಕಾಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ: 15-02-2025 ರಂದು ಮೊಹ್ಮದ್ ಅಕ್ಬರ್ ಎಂಬುವವರು ತಮ್ಮ ಮನೆಯ ಮುಂದೆ ನಿಲ್ಲಿಸಿದ ಬಜಾಜ್ ಪ್ಲಾಟಿನಾ ಬೈಕ್ ನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ದೂರು ದಾಖಲಾಗಿತ್ತು.
ಕಳ್ಳತನ ಮಾಡಿಕೊಂಡು ಹೋದ ಆರೋಪಿಗಳ ಪತ್ತೆ ಮಾಡಲು ಎಸ್ ಪಿ ಡಾ: ಅಂಶುಕುಮಾರ ಐ.ಪಿ.ಎಸ್ ಮಾರ್ಗದರ್ಶನದಲ್ಲಿ ನಿಂಗರಾಜ ಕರಕಣ್ಣನವರ, ಎಸ್ ಎಮ್ ವನಹಳ್ಳಿ ಪಿಐಎಸ್‌ಗಳ ನೇತೃತ್ವದಲ್ಲಿ ತಂಡವು ಮೊಟರ್ ಸೈಕಲ್ ಕಳ್ಳತನ ಮಾಡಿದ ಆರೋಪಿತರ ಪತ್ತೆಗಾಗಿ ತನಿಖೆ ಕೈಗೊಳ್ಳಲಾಗಿತ್ತು.
ದಿನಾಂಕ:16-02-2025 ರಂದು ಪ್ರಕರಣದ ತನಿಖೆ ಕೈಕೊಂಡು ಬಂಕಾಪೂರ ಟೋಲ್ ಗೇಟ್ ಹತ್ತಿರ ಹಾವೇರಿ ಕಡೆಯಿಂದ ಟಾಟಾ ಏಸ್ ವಾಹನದಲ್ಲಿ ಬೈಕ್ ಒಂದನ್ನು ಹೇರಿಕೊಂಡು ಹೊರಟಿದ್ದನ್ನು ತನಿಖೆ ಒಳಪಡಿಸಿದಾಗ ಬೈಕ್ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡ ಆರೋಪಿಗಳಾದ ಸಿದ್ದೇಶ್ , ಪವನಕುಮಾರ , ವಿರೇಶ್ , ಬಸಪ್ಪ ರವರನ್ನು ದಸ್ತಗೀರ ಮಾಡಿ ವಿಚಾರಣೆ ಮಾಡುವಾಗ ಕಳ್ಳತನ ಮಾಡಿದ ಮೋಟಾರ್ ಸೈಕಲ್ ನ್ನು ಅಕ್ರಮ ಗಾಂಜಾ ಮಾರಾಟ ಮಾಡಲು ತೆಗೆದುಕೊಂಡು ಹೊರಟ ಬಗ್ಗೆ ಬಾಯಿ ಬಿಟ್ಟಿದ್ದಾರೆ.
ಆರೋಪಿತರು ಕಳ್ಳತನಕ್ಕೆ ಉಪಯೋಗಿಸಿದ ಒಂದು ಟಾಟಾ ಏಸ್ ವಾಹನ ಕೆಎ27 ಸಿ 7439 , ಕಳ್ಳತನ ಮಾಡಿದ ಮೋಟರ್ ಸೈಕಲ್ , 02 ಮೊಬೈಲ್ ಪೋನಗಳು ,ನಗದು 1000/- ರೂಗಳು , ಒಟ್ಟು 353 ಗ್ರಾಂ ಅಕ್ರಮ ಗಾಂಜಾ ಒಟ್ಟು 446500/- ರೂಗಳ ವಸ್ತುಗಳನ್ನು ಜಪ್ತಿ ಮಾಡಿ ವಶಕ್ಕೆ ಪಡೆದುಕೊಂಡು ಆರೋಪಿತರಿಗೆ ನ್ಯಾಯಾಂಗದ ಬಂಧನಕ್ಕೆ ಹಾಜರು ಪಡಿಸಲಾಗಿದೆ.
ಈ ಪ್ರಕರಣದಲ್ಲಿ ವಿಶೇಷ ಕಾರ್ಯಾಚರಣೆ ಕೈಕೊಂಡ ಪತ್ತೆ ಮಾಡಿ ಒಂದೇ ದಿನದಲ್ಲಿ ಆರೋಪಿಗಳನ್ನು ಬಂಧಿಸಿದ ಪಿಎಸ್‌ಐ ನಿಂಗರಾಜ್ ಕೆ ವೈ ಪಿಎಸ್‌ಐ2 ಎಸ್ ಎಮ್ ವನಹಳ್ಳಿ ಹಾಗೂ ಪತ್ತೆ ಕಾರ್ಯದಲ್ಲಿ ತೊಡಗಿದ ತಂಡದ ರಜನಿ ಮಎಎಸ್‌ಐ, 2] ಎ ಕೆ ನದಾಪ, ಹೆಡ್ ಕಾನಸ್ಟೆಬಲ್, ಹಾಗೂ ಕಾನಸ್ಟೆಬಲ್‌ಗಳಾದ ವೆಂಕಟೇಶ ಲಮಾಣಿ, ಗೊವಿಂದ ಲಮಾಣಿ, ಕರಬಸಪ್ಪ ಹಾವಣಗಿ , ಜಬೀವುಲಾ ದೊಡ್ಡಮನಿ, ನೇದವರಿಗೆ ಮಾನ್ಯ ಪೊಲೀಸ ಅಧೀಕ್ಷಕರು ಹಾವೇರಿ ಜಿಲ್ಲೆ ರವರು ಪ್ರಕರಣದಲ್ಲಿ ಪತ್ತೆ ಮಾಡಿದ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.


