Headlines

ಶಾಸಕರ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳಿಂದ ನೆರೆ ಹಾವಳಿಗೆ ತುತ್ತಾಗಿದ್ದ ಬಡ ಕುಟುಂಬದ ಮನೆ ದುರಸ್ತಿ

ಶಾಸಕರ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳಿಂದ ನೆರೆ ಹಾವಳಿಗೆ ತುತ್ತಾಗಿದ್ದ ಬಡ ಕುಟುಂಬದ ಮನೆ ದುರಸ್ತಿ

ಸಾಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ಹಾಗೂ ಕರ್ನಾಟಕ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರಾದ ಬೇಳೂರು ಗೋಪಾಲಕೃಷ್ಣ ರವರ ಹುಟ್ಟುಹಬ್ಬ ಫೆಬ್ರವರಿ 22 ರಂದು ಆಚರಿಸುತಿದ್ದು ಈ ಹಿನ್ನಲೆಯಲ್ಲಿ ಅವರ ಅಭಿಮಾನಿಗಳು  ಮಾನವೀಯ ಕೆಲಸವೊಂದನ್ನು ಮಾಡಿ ಭೇಷ್ ಎನಿಸಿಕೊಂಡಿದ್ದಾರೆ.

ವೀಡಿಯೋ ಇಲ್ಲಿ ವೀಕ್ಷಿಸಿ👆

ಹೌದು ಹೊಸನಗರ ತಾಲೂಕಿನ ನಿಟ್ಟೂರು ಭಾಗದ ಬಡ ಬ್ರಾಹ್ಮಣ ಜನಾಂಗದ ದಂಪತಿಗಳಿಬ್ಬರು ನೆರೆ ಹಾವಳಿಯಿಂದ ತಮ್ಮ ಮನೆ ಶಿಥಿಲಾವಸ್ಥೆಗೆ ತಲುಪಿತ್ತು ಸರ್ಕಾರದ ಅನುದಾನ ತರಿಸಲು ಈ ಬಗ್ಗೆ ವಿಶೇಷ ಕಾಳಜಿ ವಹಿಸಿದರು ಕೆಲವು ತಾಂತ್ರಿಕ ಕಾರಣಗಳಿಂದ ಸಾಧ್ಯವಾಗಿರಲಿಲ್ಲ…ಕಳೆದ ವರ್ಷ ಇದೇ ತಂಡದವರು ಬಡ ದಲಿತ ಕುಟುಂಬದ ಮನೆ ದುರಸ್ತಿ ಕಾರ್ಯವನ್ನು ಕೈಗೊಂಡಿದ್ದನ್ನು ಸ್ಮರಿಸಿಕೊಳ್ಳಬಹುದು.

ಈ ಹಿನ್ನಲೆಯಲ್ಲಿ ನಿಟ್ಟೂರು ಕಾಂಗ್ರೆಸ್ ಘಟಕದ ವತಿಯಿಂದ ಮುಖಂಡ ಮಾಸ್ತಿಕಟ್ಟೆ ಸುಬ್ರಹ್ಮಣ್ಯ ಮಾರ್ಗದರ್ಶನದಲ್ಲಿ 2 ಲಕ್ಷ ರೂ ವೆಚ್ಚದಲ್ಲಿ ಇಂದು ನಿಟ್ಟೂರು ಗ್ರಾಮದ ಕಲ್ಸಂಕ ರಾಮಚಂದ್ರ ಭಟ್ ಹಾಗೂ ಗಾಯತ್ರಿ ದಂಪತಿಗಳ ಮನೆ ದುರಸ್ತಿ ಹಾಗೂ ಕಾರ್ಯಕರ್ತರಿಂದ ಶ್ರಮದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಸಂಧರ್ಭದಲ್ಲಿ ಮಾತನಾಡಿದ ಮಾಸ್ತಿಕಟ್ಟೆ ಸುಬ್ರಹ್ಮಣ್ಯ ಬಡವರ ಪಾಲಿನ ಆಶಾಕಿರಣರಾದ ಸಾಗರ ಕ್ಷೇತ್ರದ ಶಾಸಕರಾದ ಬೇಳೂರು ಗೋಪಾಲಕೃಷ್ಣ ರವರ ಹುಟ್ಟುಹಬ್ಬದ ಅಂಗವಾಗಿ ಬಡ ಕುಟುಂಬಕ್ಕೆ ಅವರ ಅಭಿಮಾನಿಗಳು ನೆರವಾಗುತ್ತಿರುವುದು  ಅರ್ಥಪೂರ್ಣವಾಗಿದೆ.ಕೆಲವು ತಾಂತ್ರಿಕ ಕಾರಣಗಳಿಂದ ಆ ಕುಟುಂಬಕ್ಕೆ ಸರ್ಕಾರದ ನೆರವು ಕೊಡಿಸಲು ಸಾಧ್ಯವಾಗಿರಲಿಲ್ಲ ಆ ಹಿನ್ನಲೆಯಲ್ಲಿ ನಿಟ್ಟೂರು ಕಾಂಗ್ರೆಸ್ ಘಟಕದ ವತಿಯಿಂದ ಇಂತಹ ಮಹತ್ಕಾರ್ಯಕ್ಕೆ ಕೈ ಹಾಕಿದ್ದೇವೆ ಎಂದರು.

ನಿಟ್ಟೂರು ಕಾಂಗ್ರೆಸ್ ಘಟಕ ಹಾಗೂ ಬೇಳೂರು ಗೋಪಾಲಕೃಷ್ಣ ಅಭಿಮಾನಿಗಳಿಂದ ಸತತ 2 ನೇ ವರ್ಷ ಮನೆ ದುರಸ್ತಿ ಹಾಗೂ ಕಾರ್ಯಕರ್ತರಿಂದ ಶ್ರಮದಾನ ಹಮ್ಮಿಕೊಳ್ಳಲಾಗಿದೆ.

ಈ ಸಂಧರ್ಭದಲ್ಲಿ ನಾಗೇಂದ್ರ ಜೋಗಿ , ವಿಶ್ವನಾಥ್ ನಾಗೋಡಿ , ಶೋಭಾ , ರವೀಂದ್ರ ಚನ್ನಪ್ಪ ,ಶಾಸಕರ ಆಪ್ತ ಕಾರ್ಯದರ್ಶಿ ಮಂಜು ಸಣ್ಣಕ್ಕಿ , ಅಶೋಕ್ ಕುಂಬ್ಳೆ , ಸಂತೋಷ್ ಹಾಗೂ ಇನ್ನಿತರರಿದ್ದರು.

Leave a Reply

Your email address will not be published. Required fields are marked *