w
Headlines
Home » Hosanagara | ರೀಲ್ಸ್ ರಾಣಿ ಸನ್ನಿಧಿಯ ಲವ್ , ಮ್ಯಾರೇಜ್ ದೋಖಾ – ಮಲೆನಾಡಿನ ಯುವಕರು ನೋಡಲೇಬೇಕಾದ ಸ್ಟೋರಿ ಇದು

Hosanagara | ರೀಲ್ಸ್ ರಾಣಿ ಸನ್ನಿಧಿಯ ಲವ್ , ಮ್ಯಾರೇಜ್ ದೋಖಾ – ಮಲೆನಾಡಿನ ಯುವಕರು ನೋಡಲೇಬೇಕಾದ ಸ್ಟೋರಿ ಇದು

Hosanagara | ರೀಲ್ಸ್ ರಾಣಿ ಸನ್ನಿಧಿಯ ಲವ್ , ಮ್ಯಾರೇಜ್ ದೋಖಾ – ಮಲೆನಾಡಿನ ಯುವಕರು ನೋಡಲೇಬೇಕಾದ ಸ್ಟೋರಿ ಇದು


ಮಲೆನಾಡಿನಲ್ಲೊಂದು ಲವ್, ಮ್ಯಾರೇಜ್ ಮೋಸ ಪ್ರಕರಣವೊಂದು ಮತ್ತೆ ಮುನ್ನೆಲೆಗೆ ಬಂದಿದೆ. 

 ಆದರೆ ವಿಚಿತ್ರವೇನೆಂದರೇ ಹಲವಾರು ಪ್ರಕರಣಗಳಲ್ಲಿ ಯುವಕ ಯುವತಿಗೆ ಮೋಸ ಲವ್ ,ಮ್ಯಾರೇಜ್ ದೋಖಾ ಮಾಮೂಲಿ ಆದರೆ ಈ ಪ್ರಕರಣ ಸ್ವಲ್ಪ ತದ್ವಿರುದ್ದವಾಗಿದೆ. 

ಘಟನೆಯ ಹಿನ್ನಲೆ :

ಶಿವಮೊಗ್ಗದ ಬೊಮ್ಮನ್ ಕಟ್ಟೆಯ ನಿವಾಸಿ ಸಂಕೇತ್ ಎಂಬ ಯುವಕನಿಗೆ ಹೊಸನಗರ ತಾಲೂಕಿನ ಹೆಂಡೆಗದ್ದೆ ಗ್ರಾಮದ ನಿವಾಸಿ ಸನ್ನಿಧಿ ಎಂಬಾಕೆ ಮದುವೆಯಾಗಿ 20 ಲಕ್ಷ ಹಣವನ್ನು ಯುವತಿ ವಂಚಿಸಿರುವುದಾಗಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. 


ಪ್ರೀತಿಸಿ ಮೋಸ ಮಾಡಿ ಹಣ ಪೀಕುವುದು ಇವಲ್ಲ ಖಯ್ಯಾಲಿ ಎಂದು ಸಂಕೇತ್ ದೂರಿದ್ದಾನೆ. ಆದರೆ ಯುವತಿ ಸಹ ಹೊಸನಗರ ತಾಲೂಕಿನ ನಗರ‌ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಪ್ರಕರಣ ದಾಖಲಿಸಿದ್ದಾಳೆ. ಈ ಪ್ರಕರಣ ದಾಖಲಾದ ಬೆನ್ನಲ್ಲೇ‌ ಸಂಕೇತ್ ದೊಡ್ಡಪೆಟೆ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾನೆ.

ರೀಲ್ಸ್ ಸುಂದರಿಯ ಮ್ಯಾರೇಜ್ ದೋಖಾ

ಹಣಕ್ಕಾಗಿ ಮದುವೆಯಾಗೋದು ಇವಳ ಖಯಾಲಿಯಾಗಿದೆ. ಸೌಂದರ್ಯವತಿಯ ಹಿಂದೆ ಹೋಗುವ ಮಲೆನಾಡಿನ ಯುವಕರೇ ಎಚ್ಚರವಾಗಿರಿ ಎಂಬ ಸಂದೇಶವನ್ನು ಶಿವಮೊಗ್ಗ ನಗರದ ಸಂಕೇತ್ ನೀಡುತಿದ್ದಾರೆ. ಈತ ಯುವತಿಯಿಂದ ಲವ್, ಸೆಕ್ಸ್, ಮ್ಯಾರೇಜ್ ದೋಖಾಗೆ ಒಳಗಾಗಿ ಬರೋಬ್ಬರಿ 20 ಲಕ್ಷ ರೂ. ಕಳೆದುಕೊಂಡಿದ್ದಾನೆ.

ಇನ್ನು ಮೋಸ ಮಾಡಿದ ಯುವತಿ ಇಲ್ಲಿ ಕಾಣುತ್ತಿರುವ ಅಪ್ಪಟ ಸುಂದರಿ ಸನ್ನಿಧಿ ಎಚ್.ವೈ. ಈಕೆ ಮೂಲತಃ ಮಲೆನಾಡಿದ ಹೊಸನಗರ ತಾಲೂಕಿನ ನಗರ ಸಮೀಪದ ಹೆಂಡೆಗದ್ದೆ ಗ್ರಾಮದ ಯುವತಿಯಾಗಿದ್ದಾಳೆ ಎಂದು ತಿಳಿದುಬಂದಿದೆ.

ಸನ್ನಿಧಿಗೆ ಪ್ರೀತಿಸಿ ಮದುವೆಯಾಗುವುದಾಗಿ ನಾಟಕವಾಡಿ ಮೋಸ ಮಾಡುವುದು ಖಯಾಲಿಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮಾಡಿ ಹರಿಬಿಟ್ಟು ತನ್ನ ಸೌಂದರ್ಯಕ್ಕೆ ಮೋಹಗೊಂಡ ಯವಕರಿಗೆ ಪ್ರೀತಿಯ ಬಲೆ ಬೀಸುತ್ತಾಳೆ ಎನ್ನುವುದು ಸಂಕೇತ್ ಆರೋಪ.

ಪ್ರೀತಿಸಿ ಮದುವೆಯಾಗುವ ಟಿಕ್ ಟಾಕ್ ಸುಂದರಿ ಸನ್ನಿಧಿ, ಅದೇ ಕ್ಷಣಗಳಲ್ಲಿ ಮತ್ತೊಬ್ಬರೊಂದಿಗೂ ಸಂಬಂಧವನ್ನು ಹೊಂದಿರುತ್ತಾಳೆ. ಮದುವೆಯಾದ ಗಂಡನೊಂದಿಗೆ ಸ್ವಲ್ಪ ಹೊಂದಾಣಿಕೆ ತಪ್ಪಿದರೂ ಅಲ್ಲಿಂದ ಜೂಟ್ ಆಗುತ್ತಾಳೆ ಎನ್ನುವ ಸಂಕೇತ್ , ಈ ಸುಂದರಿ ಸನ್ನಿಧಿ ಕಳೆದ ವರ್ಷ ನನ್ನನ್ನು ಫೆಬ್ರವರಿಯಲ್ಲಿ ಮದುವೆಯಾಗಿದ್ದಳು. ಒಂದೆರಡು ತಿಂಗಳ ಸಂಸಾರ ಮಾಡಿ ಕೈಕೊಟ್ಟು ಹೋಗಿದ್ದಾಳೆ.

ಅಷ್ಟಕ್ಕೂ ಪ್ರೀತಿಸಿ ಮದುವೆಯಾಗಿ, ಕೆಲವು ತಿಂಗಳು ಒಟ್ಟಿಗೆ ಸಂಸಾರ ಸುಖವನ್ನೂ ಅನುಭವಿಸಿದ ಈಕೆಗೆ, ಈಗ ನಾನು ಕೀಳು ಜಾತಿಯವನಾಗಿ ಕಾಣಿಸಿದ್ದೇನೆ. ತನ್ನಿಂದ ಆಗಿಂದಾಗ್ಗೆ ಹಣ ಕಿತ್ತುಕೊಂಡ ಈಕೆಗೆ, ಈಗ ಹಣ ಕೊಡದ ಕಾರಣ ಹೀಯಾಳಿಸಿ ಮತ್ತೊಬ್ಬ ಯುವಕನೊಂದಿಗೆ ಓಡಾಟ ಆರಂಭಿಸಿದ್ದಾಳೆ. ಸನ್ನಿಧಿ ಈ ಹಿಂದೆಯೂ ಕಡೂರು ಮೂಲದ ಯುವಕನ ಜೊತೆ ಮದುವೆಯಾಗಿದ್ದು, ಆತನಿಗೂ ಕೈ ಕೊಟ್ಟು ನನ್ನನ್ನು ಪ್ರೀತಿಸುವ ನಾಟಕವಾಡಿ ಮದುವೆಯಾಗಿದ್ದಳು.

ತನ್ನ ಸೌಂದರ್ಯವನ್ನು ನೋಡಿ ಹಿಂದೆ ಬೀಳುವ ಹುಡುಗರನ್ನು ಲವ್‌ ಮಾಡಿ ಹಣ ಪೀಕಿಕೊಳ್ಳೋದು ಇವಳ ಚಾಳಿಯಾಗಿದೆ. ಈಕೆ ಮಲೆನಾಡಿನ ಭಾಗದ ಖತರ್ನಾಕ್ ಯುವತಿಯಾಗಿದ್ದಾಳೆ ಎಂದು ಸಂಕೇತ್ ಎಚ್ಚರಿಕೆ ನೀಡಿದ್ದಾನೆ.

ಇನ್ನು ಸಂಕೇತ್ ಕಳೆದ ನವಂಬರ್ ತಿಂಗಳಿನಲ್ಲಿ ಸನ್ನಿಧಿ ವಿರುದ್ಧ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. 

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.