RIPPONPETE | ವರಾನಹೊಂಡದ ಬಳಿಯಲ್ಲಿ ಭೀಕರ ಅಪಘಾತ – ಬೈಕ್ ಸವಾರ ಸಾವು
ರಿಪ್ಪನ್‌ಪೇಟೆ : ಇಲ್ಲಿನ ತೀರ್ಥಹಳ್ಳಿ ರಸ್ತೆಯ ವರಾನಹೊಂಡದ ಬಳಿಯಲ್ಲಿ ಭೀಕರ ಅಪಘಾತವಾಗಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ನಡೆದಿದೆ.
ತೀರ್ಥಹಳ್ಳಿ ತಾಲೂಕಿನ ಚಕ್ಕೊಡಬೈಲ್ ಸಮೀಪದ ಯಡಮನೆ ಗ್ರಾಮದ ಸುನೀಲ್ ಎಸ್ ವಿ ಮೃತಪಟ್ಟ ದುರ್ಧೈವಿಯಾಗಿದ್ದಾರೆ.
ನಡೆದಿದ್ದೇನು..!!??
ಸೋಮವಾರ ತಡರಾತ್ರಿ ಸುನೀಲ್ ತೀರ್ಥಹಳ್ಳಿ ಕಡೆಯಿಂದ ರಿಪ್ಪನ್‌ಪೇಟೆ ಕಡೆಗೆ ಪಲ್ಸರ್ NS 100 ಬೈಕ್ ನಲ್ಲಿ ತೆರಳುತಿದ್ದಾಗ ವರಾನಹೊಂಡದ ಬಳಿಯಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು ಘಟನೆಯಲ್ಲಿ ಬೈಕ್ ಸವಾರನಿಗೆ ತೀವ್ರ ರಕ್ತ ಸ್ರಾವವಾಗಿತ್ತು.ಈ ಸಂಧರ್ಭದಲ್ಲಿ ಸ್ಥಳದಲ್ಲಿದ್ದವರು ಆಂಬುಲೆನ್ಸ್ ಮೂಲಕ ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಗೆ ದಾಖಲಿಸಿದ್ದಾರೆ.
ಮಂಗಳವಾರ ಮೆಗ್ಗಾನ್ ನಿಂದ ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲು ಮಾಡಲು ಕರೆದೊಯ್ಯುವ ಸಂಧರ್ಭದಲ್ಲಿ ಮಾರ್ಗ ಮಧ್ಯೆ ಯುವಕ ಮೃತಪಟ್ಟಿದ್ದಾನೆ.
ತೀರ್ಥಹಳ್ಳಿಯಲ್ಲಿ ಎಸ್ ವಿ ಎಸ್ ಅಡುಗೆ ಕ್ಯಾಟರಿಂಗ್ ಸಂಸ್ಥೆ ನಿರ್ವಹಿಸುತಿದ್ದ ಸುನೀಲ್ ಕಾರ್ಯ ನಿಮಿತ್ತ ಸಾಗರಕ್ಕೆ ತೆರಳುತಿದ್ದರು ಎಂದು ಹೇಳಲಾಗುತ್ತಿದೆ.
ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.