
ಅಡಿಕೆ ಕಳ್ಳತನವೆಸಗಿದ್ದ ಇಬ್ಬರ ಕಳ್ಳರ ಹೆಡೆಮುರಿ ಕಟ್ಟಿದ ಪೊಲೀಸರು
ಶಿವಮೊಗ್ಗ – ಮನೆಯಲ್ಲಿಟ್ಟಿದ್ದ ಅಡಿಕೆ ತುಂಬಿದ ಚೀಲಗಳನ್ನು ಕಳ್ಲತನ ಮಡಿಕೊಂಡು ಹೋಗಲಾಗಿದೆ ಎಂಬ ದೂರಿನನ್ವಯ ಕಾರ್ಯತತ್ಪರರಾದ ಹೊಳೆಹೊನ್ನೂರು ಪೊಲೀಸರು ಮೂವರನ್ನು ಬಂಧಿಸಿ ಒಟ್ಟು ೬,೯೩,೦೦೦/- ರೂಗಳ ಮಾಲನ್ನು ಅಮಾನತುಪಡಿಸಿಕೊಂಡಿದ್ದಾರೆ.
ಡಿ. ೧೯ರಂದು ಈ ಕಳ್ಳತನ ಸಂಭವಿಸಿದೆ ಎಂದು ಶ್ರೀನಿವಾಸಪುರದ ವಾಸಿ ರಮೇಶ್ ಎನ್ನುವವರು ದೂರು ನೀಡಿದ್ದರು. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ತನಿಖಾ ತಂಡವು ಜ. ೧೧ರಂದು ಆರೋಪಿತರಾದ ಭದ್ರಾವತಿಯ ಖಾಜಿ ಮೊಹಲ್ಲಾದ, ಪಾಲಿಶ್ ಕೆಲಸ ಮಾಡುವ ಸಾಜಿದ್ ಅಲಿಯಾಸ್ ಸಾದಿಕ್ (೨೫), ಕೂಡ್ಲಿಯ, ಪ್ಲೈವುಡ್ ಕೆಲಸದ ಜಮೀರ್ ಶೇಖ್ ಅಲಿಯಾಸ್ ಅಡ್ಡು (೨೪), ಮತ್ತು ಚನ್ನಗಿರಿಯ, ಪಾಲಿಶ್ ಕೆಲಸದ ಮಹಮದ್ ಮುಹೀಬುಲ್ಲಾ, (೨೩) ಇವರನ್ನು ದಸ್ತಗಿರಿ ಮಾಡಿ, ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ೨೦೨೩ನೇ ಸಾಲಿನ ಒಂದು ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣ, ೨೦೨೪ನೇ ಸಾಲಿನ ಎರಡು ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣ ಮತ್ತು ಒಂದು ಅಡಿಕೆ ಕಳ್ಳತನ ಪ್ರಕರಣ ಸೇರಿದಂತೆ ಒಟ್ಟು ೪ ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ.
ಇದಕ್ಕೆ ಸಂಬಂಧಿಸಿದ ಅಂದಾಜು ಮೌಲ್ಯ ೩ಲ. ರೂ. ಮೌಲ್ಯದ ೬ ಕ್ವಿಂಟಾಲ್ ಅಡಿಕೆ, ಅಂದಾಜು ಮೌಲ್ಯ ೧,೯೩ ಲ ರೂ. ನ ೩ ದ್ವಿ ಚಕ್ರ ವಾಹನ ಹಾಗೂ ಕೃತ್ಯಕ್ಕೆ ಬಳಸಿದ ಅಂದಾಜು ಮೌಲ್ಯ ೨ ಲಕ್ಷ ರೂ. ನ ಓಮಿನಿ ವಾಹನ ಸೇರಿದಂತೆ ಒಟ್ಟು ೬,೯೩ ಲ. ರೂ. ಮಾಲನ್ನು ಅಮಾನತು ಪಡಿಸಿಕೊಂಡಿದ್ದಾರೆ.
ಹೊಳೆಹೊನ್ನೂರು ಸಿಪಿಐ ಲಕ್ಷ್ಮಿಪತಿ ಆರ್. ನೇತೃತ್ವದಲ್ಲಿ ಪಿಎಸ್ಐಗಳಾದ ರಮೇಶ, ಮಂಜುನಾಥ ಎಸ್ ಕುರಿ, ಕೃಷ್ಣ ನಾಯ್ಕ ಹಾಗೂ ಸಿಬ್ಬಂದಿಗಳಾದ ಹೆಚ್ಸಿ ಅಣ್ಣಪ್ಪ, ಪ್ರಕಾಶ ನಾಯ್ಕ, ಮಂಜುನಾಥ, ಪ್ರಸನ್ನ ಮತ್ತು ಪಿಸಿ ವಿಶ್ವನಾಥ ತಂಡ ಈ ಕಳ್ಳರನ್ನು ಪತ್ತೆ ಮಾಡಿದೆ.

