ಅಡಿಕೆ ಬೆಳೆಗಾರರ ಸಮಸ್ಯೆಗೆ ಪರಿಹಾರಕಲ್ಪಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ: ಹರತಾಳು ಹಾಲಪ್ಪ
ಜನವರಿ 18ರಂದು ಸಾಗರದಲ್ಲಿ ಅಡಿಕೆ ಬೆಳೆಗಾರರ ಬೃಹತ್ ಸಮಾವೇಶ.
ರಿಪ್ಪನ್‌ಪೇಟೆ;- ಜನವರಿ 18ರಂದು ಸಾಗರ ಸಂತೆ ಮೈದಾನದಲ್ಲಿಏರ್ಪಡಿಸಲಾಗಿದ್ದು ಆಡಿಕೆ ಬೆಳೆಗಾರರ ಸಮಾವೇಶಕ್ಕೆ ಸಾಗರ-ಹೊಸನಗರತಾಲ್ಲೂಕಿನಅಡಿಕೆ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಡಿಕೆ ಬೆಳೆಗಾರ ಸಮಸ್ಯೆ ಪರಿಹಾರಕ್ಕೆ ಬೆಂಬಲಿಸುವಂತೆ ಮಾಜಿ ಮಂತ್ರಿ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ ತಿಳಿಸಿದರು.
ಪಟ್ಟಣದ ರಾಮಮಂದಿರದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಲೆನಾಡಿನ ವ್ಯಾಪ್ತಿಯಲ್ಲಿ ಹವಾಮಾನ ವೈಪರಿತ್ಯದಿಂದಾಗಿಆಡಿಕೆ ಬೆಳೆಯಲ್ಲಿ ಸಾಕಷ್ಟು ರೋಗಗಳು ಕಾಣಿಸಿಕೊಂಡು ಬೆಳೆಗಾರ ಪರಿಸ್ಥಿತಿ ಹೇಳದಂತಾಗಿದೆ.ಅಲ್ಲದೆ.ವಿದೇಶಿ ಆಡಿಕೆ ಅಮದಿನಿಂದಾಗಿ ನಮ್ಮ ಮಲೆನಾಡಿನಅಡಿಕೆ ಬೆಲೆ ಕಡಿಮೆಯಾಗುವಂತಾಗಿದ್ದುರೈತ ಸಮೂಹ ಹೈರಾಣಾಗಿದ್ದಾರೆ ಈ ಎಲ್ಲ ಸಮಸ್ಯಗೆಕೇಂದ್ರ ಸರ್ಕಾರ ಸ್ಪಂದಿಸಿ ಬೆಳೆಗಾರರ ಹಿತಕಾಯುವಂತೆ ಅಗ್ರಹಿಸಿ ಜನವರಿ ೧೮ ರಂದು ಸಾಗರದ ಸಂತೆ ಮೈದಾನದಲ್ಲಿ ಸಾಗರ-ಸೊರಬ-ಹೊಸನಗರತಾಲ್ಲೂಕಿನಅಡಿಕೆ ಬೆಳೆಗಾರರ ಬೃಹತ್ ಸಮಾವೇಶ’’ವನ್ನು ಆಯೋಜಿಸಲಾಗಿದ್ದು ಕೇಂದ್ರ ಕೃಷಿ ರೈತ ಕಲ್ಯಾಣ ಸಚಿವರು ಶಿವರಾಜ್‌ಸಿಂಗ್ ಚೌವ್ಹಾಣ್ಉದ್ಘಾಟಿಸುವರು. ರಾಜ್ಯತೋಟಗಾರಿಕಾ ಸಚಿವಎಸ್.ಎಸ್.ಮಲ್ಲಿಕಾರ್ಜುನ ಸ್ಮರಣಿಕೆ ಬಿಡುಗಡೆ ಮಾಡುವರು.ಸಂಸದ ಬಿ.ವೈ.ರಾಘವೇಂದ್ರ ವಸ್ತುಪ್ರದರ್ಶನವನ್ನು ಬಿ.ವೈ.ರಾಘವೇಂದ್ರಉದ್ಘಾಟಿಸುವರು,ರಾಜ್ಯ ಶಿಕ್ಷಣ ಸಾಕ್ಷರತಾ ಸಚಿವ ಮಧುಬಂಗಾರಪ್ಪ ಗೌರವ ಸಮರ್ಪಣೆ ಜರುಗಲಿದ್ದು ಈ ಸಮಾವೇಶದ ಅಧ್ಯಕ್ಷತೆಯನ್ನು ಕ್ಷೇತ್ರದ ಶಾಸಕ ಗೋಪಾಕೃಷ್ಣ ಬೇಳೂರು ವಹಿಸುವರು ಎಂದರು.
ಈ ಸಮಾವೇಶದಲ್ಲಿಅಡಿಕೆ ಬೆಳೆಗಾರರ ಸಮಾವೇಶ ಸಮಿತಿಗೌರವಾಧ್ಯಕ್ಷ ಹೆಚ್.ಎಸ್.ಮಂಜಪ್ಪ,ಸಾಗರ ಪ್ರಾಂತ್ಯಅಡಿಕೆ ಬೆಳೆಗಾರ ಸಂಘದಅಧ್ಯಕ್ಷ ವ. ಶಂ ರಾಮಚಂದ್ರಭಟ್ ಹಾಗೂ ಜಿಲ್ಲೆಯ ರಾಜಕೀಯ ಮುಖಂಡರು ಸಹಕಾರಿ ಸಂಘದ ಅಧ್ಯಕ್ಷರುಗಳು ಸದಸ್ಯರು ಭಾಗವಹಿಸುವರು ಎಂದರು
ಇದೇ ಸಮಾವೇಶದಲ್ಲಿ ಹಿರಿಯರು ಮಾಜಿ ವಿಧಾನಸಭಾಧ್ಯಕ್ಷ ಕಾಗೋಡುತಿಮ್ಮಪ್ಪಇವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದರು
ಸುದ್ದಿಗೋಷ್ಠಿಯಲ್ಲಿಜಿಲ್ಲಾ ಬಿಜೆಪಿ ಅಧ್ಯಕ್ಷಟಿ.ಡಿ.ಮೇಘರಾಜ್,ಅಡಿಕೆ ಬೆಳೆಗಾರ ಸಂಘದ ಸಹ ಸಂಚಾಲಕ ಹಕ್ರೆ ಮಲ್ಲಿಕಾರ್ಜುನ,ಬಿಜೆಪಿ ಮಹಾಶಕ್ತಿ ಕೇಂದ್ರದ ಆಧ್ಯಕ್ಷ ಎನ್.ಸತೀಶ್, ಮುಖಂಡ ರಾದ ಆರ್.ಟಿ.ಗೋಪಾಲ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುದೀಂದ್ರಪೂಜಾರಿ. ಎಂ ಸುರೇಶ್ ಸಿಂಗ್ ,ಸುಂದರೇಶ್ , ನಾಗಾರ್ಜುನಸ್ವಾಮಿ, ಮಂಜುಳಕೇತಾರ್ಜಿ, ಯೋಗೇಂದ್ರಗೌಡ,ದೀಪಾ ಸುಧೀರ್ , ಪಿ.ರಮೇಶ್, ಸುದೀರ್,ಮುರುಳಿಕೆರೆಹಳ್ಳಿ, ಸೇರಿದಂತೆ ಪಕ್ಷದ ಮುಖಂಡರು ಹಾಜರಿದ್ದರು.

