HOSANAGARA | ನಗರದ ಜುಮ್ಮಾ ಮಸೀದಿಯಲ್ಲಿ ರಕ್ತದಾನ ಶಿಬಿರ
ಶ್ರೇಷ್ಠ ವಾದ ಕಾರ್ಯಕ್ರಮವಾಗಿರುವ ರಕ್ತದಾನ ಶಿಬಿರಗಳು ಮುಂದಿನ ದಿನಗಳಲ್ಲಿ ಹೆಚ್ಚುಹೆಚ್ಚಾಗಿ ನಡೆಯಬೇಕು. ಜನ ಮೆಚ್ಚಿದ ಕಾರ್ಯಕ್ರಮಕ್ಕೆ ಎಲ್ಲರ ಪ್ರೋತ್ಸಾಹ ಅಗತ್ಯ.ಅದೇ ರೀತಿ ಶಿಕ್ಷಣಕ್ಕೂ ನಾವು ಹೆಚ್ಚು ಒತ್ತು ನೀಡಬೇಕಾಗಿದೆ ಎಂದು ಧರ್ಮಗುರುಗಳಾದ ಅಶ್ರಫ್ ಇಮಾಮಿ ಹೇಳುದರು.
ಹೊಸನಗರ ತಾಲೂಕು ಬಿದನೂರು ನಗರದ ಸುಲ್ತಾನ್ ಜುಮ್ಮಾ ಮಸೀದಿ ವತಿಯಿಂದ ಮೊಹಮ್ಮದ್ ಪೈಗಂಬರ್ ಹುಟ್ಟುಹಬ್ಬದ ಅಂಗವಾಗಿ ಸತತ 4ನೇ ವರ್ಷದ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ರಕ್ತದಾನ ಶಿಬಿರವನ್ನು ಆಯೋಜಿಸುವ ಮೂಲಕ ರಕ್ತದಾನದ ಮಹತ್ವವನ್ನು ತಿಳಿಸುವುದು ಮಾತ್ರವಲ್ಲದೇ, ಯುವಜನತೆಗೆ ರಕ್ತದಾನ ಮಾಡುವುದಕ್ಕೆ ಪ್ರೇರಣೆ ನೀಡುವುದು ಇದರ ಉದ್ದೇಶವಾಗಿದೆ. ಜಾತಿ, ಮತ ಧರ್ಮ ಭೇದವಿಲ್ಲದೇ ರಕ್ತದಾನ ಶಿಬಿರದಲ್ಲಿ ಪಾಲ್ಗೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಲ್ತಾನ್ ಜುಮ್ಮಾ ಮಸೀದಿ ಅಧ್ಯಕ್ಷರಾದ ಹಿದಾಯತ್ ವಹಿಸಿದ್ದರು.
ರಕ್ತದಾನ ಶಿಬಿರದಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡು ಒಟ್ಟು 84 ಜನರು ರಕ್ತದಾನ ಮಾಡಿದರು.
ಈ ಕಾರ್ಯಕ್ರಮದಲ್ಲಿ ಮುಖಂಡರಾದ ಅಬ್ಬಾಸ್ ನೂಲಿಗೆರೆ, ಸಮೀರ್ ಗದ್ದೆಮನೆ , ಅಲ್ಪಾಜ್ , ಸಮೀರ್ ದುಬಾರ್ ತಟ್ಟಿ,ಕರುಣಾಕರ ಶೆಟ್ಟಿ, ಗೋಪಾಲ ಶೆಟ್ಟಿ, ಡಾಕ್ಟರ್ ಸುರೇಖಾ ಚಂದ್ರಶೆಟ್ಟಿ ಹಾಗೂ ಇನ್ನಿತರರಿದ್ದರು