w
Headlines
Home » RIPPONPETE | ಗವಟೂರು ಬಳಿಯಲ್ಲಿ ಹಿಟ್ ಆಂಡ್ ರನ್ ಗೆ ಬೈಕ್ ಸವಾರ ಸಾವು

RIPPONPETE | ಗವಟೂರು ಬಳಿಯಲ್ಲಿ ಹಿಟ್ ಆಂಡ್ ರನ್ ಗೆ ಬೈಕ್ ಸವಾರ ಸಾವು

GridArt 20241228 084302896.jpg

RIPPONPETE | ಗವಟೂರು ಬಳಿಯಲ್ಲಿ ಹಿಟ್ ಆಂಡ್ ರನ್ ಗೆ ಬೈಕ್ ಸವಾರ ಸಾವು

ರಿಪ್ಪನ್‌ಪೇಟೆ : ಇಲ್ಲಿನ ಗವಟೂರು ಬಳಿಯಲ್ಲಿ ಬೆಳ್ಳಂಬೆಳ್ಳಗ್ಗೆ ಬೈಕ್ ಗೆ ಅಪರಿಚಿತ ವಾಹನವೊಂದು ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ.

ಗವಟೂರು ಸಮೀಪದ ಬಿಳಿಕಿ ನಿವಾಸಿ ಸಂಜೀವ್ ಪೂಜಾರಿ (65) ಮೃತ ದುರ್ಧೈವಿಯಾಗಿದ್ದಾರೆ.

ಟಿವಿಎಸ್ ಎಕ್ಸೆಲ್ ಬೈಕ್ ನಲ್ಲಿ ಇಂದು ಬೆಳಿಗ್ಗೆ ಮನೆಯಿಂದ ರಿಪ್ಪನ್‌ಪೇಟೆ ಹೊರಡುತಿದ್ದಾಗ ಗವಟೂರು ಸರ್ಕಾರಿ ಶಾಲೆಯ ಸಮೀಪದಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಬೈಕ್ ಸವಾರನಿಗೆ ತೀವ್ರ ಗಾಯಗಳಾಗಿತ್ತು.

ಈ ಸಂಧರ್ಭದಲ್ಲಿ ಬೆಳಿಗ್ಗಿನ ರೌಂಡ್ಸ್ ನಲ್ಲಿದ್ದ ಪಟ್ಟಣದ ಪಿಎಸ್‌ಐ ಅದೇ ಮಾರ್ಗವಾಗಿ ಬರುತಿದ್ದಾಗ ಗಾಯಾಳುವನ್ನು ಗಮನಿಸಿ ತನ್ನ ಖಾಸಗಿ ವಾಹನದಲ್ಲಿ ಗಾಯಾಳುವನ್ನು ರಿಪ್ಪನ್‌ಪೇಟೆ ಆಸ್ಪತ್ರೆಗೆ ದಾಖಲಿಸಿದ್ದಾರೆ ಆದರೆ ಗಾಯಾಳುವಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಆಂಬುಲೆನ್ಸ್ ಗೆ ಶಿಫ್ಟ್ ಮಾಡುವಾಗ ಗಾಯಾಳುವಿನ ಪ್ರಾಣಪಕ್ಷಿ ಹಾರಿ ಹೋಗಿದೆ.

ಮೃತ ಸಂಜೀವ್ ಪೂಜಾರಿ ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹಿಟ್ ಅಂಡ್ ರನ್ ಮಾಡಿರುವ ವಾಹನದ ಪತ್ತೆಗೆ ಮುಂದಾಗಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.